ತೈಲ ಮತ್ತು ಅನಿಲ ತಾಣ ಪತ್ತೆ; ಭಾರತಕ್ಕೆ ಹೊಸ ಬೆಳಕಾದ ಕೋಲ್ಕತಾ!
ಭಾರತ ಇದೀಗ ಮತ್ತೊಂದು ತೈಲ ತಾಣವನ್ನು ಪತ್ತೆ ಹೆಚ್ಚಿದೆ. ಇದೀಗ ವಿಶ್ವದ ತೈಲ ನಕ್ಷೆಯಲ್ಲಿ ಭಾರತದ ಹೊಸ ತೈಲ ತಾಣ ಸ್ಥಾನ ಪಡೆಯಲಿದೆ. ನೂತನ ತೈಲ ಮತ್ತು ಅನಿಲ ತಾಣದ ಕುರಿತ ವಿವರ ಇಲ್ಲಿವೆ.
ಕೋಲ್ಕತಾ(ನ.20): ಭಾರತದ ವಾಣಿಜ್ಯ ವ್ಯವಹಾರಕ್ಕೂ ನೆರವಾಗಬಲ್ಲ ತೈಲ ಮತ್ತು ನೈಸರ್ಗಿಕ ಅನಿಲ ತಾಣ ಪತ್ತೆಯಾಗಿರುವುದನ್ನು ಕೇಂದ್ರ ಸರ್ಕಾರ ಖಚಿತಪಡಿಸಿದೆ. 2018ರಲ್ಲಿ ಈ ತೈಲ ನಿಕ್ಷೇಪ ಪತ್ತೆ ಹೆಚ್ಚಿತ್ತು. ಈ ಕುರಿತು ಸಂಶೋಧನೆ ನಡೆಸಿದ ತೈಲ ಕಂಪನಿ ಇದೀಗ ವಾಣಿಜ್ಯ ವ್ಯವಹಾರಕ್ಕೂ ಬೇಕಾಗುವಷ್ಟು ತೈಲ ನಿಕ್ಷೇಪವಿದೆ ಅನ್ನೋದನ್ನು ಕೇಂದ್ರ ಸರ್ಕಾರ ಖಚಿತಪಡಿಸಿದೆ.
2 ತಿಂಗಳ ಬಳಿಕ ಮೊದಲ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ!.
ಕೋಲ್ಕತಾದಿಂದ ಕೇವಲ 47 ಕಿ.ಮೀ ದೂರದಲ್ಲಿರುವ ಅಶೋಕನಗರದಲ್ಲಿ ನೂತನ ತೈಲ ತಾಣವಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಶೀಘ್ರ ಅಶೋಕನಗರಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ ಉತ್ತರ 24 ಪರಗಣ ಜಿಲ್ಲೆಯ ಅಶೋಕ್‌ನಗರದಲ್ಲಿ ತೈಲ ಮತ್ತು ಅನಿಲ ಪತ್ತೆಯಾಗಿತ್ತು. ಇದೀಗ ವಾಣಿಜ್ಯ ಉದ್ದೇಶಕ್ಕೂ ಬಳಕೆಗೂ ಈ ತೈಲ ತಾಣ ಯೋಗ್ಯವಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ ಇಷ್ಟೇ ಅಲ್ಲ, ಇಲ್ಲಿ ತೈಲ ತೆಗೆಯಲು ಕೇಂದ್ರ ಎಲ್ಲಾ ತಯಾರಿ ಮಾಡಿಕೊಂಡಿದೆ.
ವಾಣಿಜ್ಯ ಉದ್ದೇಶಕ್ಕೆ ನೂತನವಾಗಿ ಪತ್ತೆ ಹೆಚ್ಚಿರುವ ತೈಲ ತಾಣದ ಕುರಿತು ONGCಗೆ ತಿಳಿಸಲಾಗಿದೆ. ತೈಲ ವಾಣಿಜ್ಯ ವ್ಯವಹಾರಕ್ಕೆ ಉತ್ತಮ ಸಾಮರ್ಥ್ಯ ಹೊಂದಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದರು. ಪ್ರಾಯೋಗಿಕ ಪರೀಕ್ಷೆಗಾಗಿ ತೈಲವನ್ನು ಹಲ್ಡಿಯಾ ರಿಫೈನರಿಗೆ ಕಳುಹಿಸಿ ಪರಿಶೀಲಿಸಲಾಗಿದೆ. ಉತ್ತಮ ಗುಣಮಟ್ಟದ ತೈಲ ಹಾಗೂ ಅನಿಲ ತಾಣ ಇದಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.