ನವದೆಹಲಿ(ನ.20): ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ಚಿಲ್ಲರೆ ದರವನ್ನು ಏರಿಕೆ ಮಾಡಿದೆ. ಪೆಟ್ರೋಲ್ ಮೇಲೆ 17 ಪೈಸೆ ಹಾಗೂ ಡೀಸೆಲ್ ದರ 22 ಪೈಸೆ ಹೆಚ್ಚಾಗಿದೆ.  ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗುತ್ತಿದ್ದರೂ. ಕಳೆದೆರಡು ತಿಂಗಳಿನಿಂದ ತೈಲ ಉತ್ಪಾದನಾ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹಿಡಿದಿಟ್ಟಿತು. ಸೆಪ್ಟೆಂಬರ್ 22 ರಿಂದ ಪೆಟ್ರೋಲ್ ಬೆಲೆ ಬದಲಾಗಿರಲಿಲ್ಲ. ಇತ್ತ ಅಕ್ಟೋಬರ್ 2 ರಿಂದ ಡೀಸೆಲ್ ಬೆಲೆಯೂ ಸ್ಥಿರವಾಗಿತ್ತು.

2030 ರಿಂದ ಪೆಟ್ರೋಲ್, ಡೀಸೆಲ್ ವಾಹನ ಮಾರಾಟ ಸಂಪೂರ್ಣ ನಿಷೇಧಕ್ಕೆ ನಿರ್ಧಾರ!

ಕೊರೋನಾ ವೈರಸ್ ವಿರುದ್ಧ ಹೋರಾಡಬಲ್ಲ ಲಸಿಕೆ ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಇತ್ತ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲೂ ಏರಿಕೆ ಕಾಣುತ್ತಿದೆ. ತೈಲಕ್ಕೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ಚಿಲ್ಲರೆ ಬೆಲೆ ಏರಿಕೆಯಾಗುತ್ತಿದೆ. 

ಕೋವಿಡ್‌ ಪೂರ್ವ ಅವಧಿಗಿಂತ ಹೆಚ್ಚು ಪೆಟ್ರೋಲ್‌ ಮಾರಾಟ: ಆರ್ಥಿಕತೆ ಚೇತರಿಕೆ
 
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 17 ಪೈಸೆ ಹೆಚ್ಚಾಗಿದೆ. ದರ ಏರಿಕೆ ಬಳಿಕ ಸದ್ಯದ ಪೆಟ್ರೋಲ್ ದರ 81.23 ರೂಪಾಯಿ ಆಗಿದೆ. ಇನ್ನು ಡೀಸೆಲ್ ದರ 22 ಪೈಸೆ ಹೆಚ್ಚಿಸಿದೆ. ಈ ಮೂಲಕ ಲೀಟರ್‌ಗೆ 70. 68ಪೈಸೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 23 ಪೈಸೆ ಹೆಚ್ಚಾಗಿದೆ. ಈ ಮೂಲಕ ಸದ್ಯ ಪೆಟ್ರೋಲ್ ದರ 83.92 ರೂಪಾಯಿ ಆಗಿದೆ. ಇನ್ನು ಡೀಸೆಲ್ ಬೆಲೆ 28 ಪೈಸೆ ಹೆಚ್ಚಾಗಿದೆ. ಸದ್ಯ ಡೀಸೆಲ್ ಬೆಲೆ 74.91 ರೂಪಾಯಿ ಆಗಿದೆ.

ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 44 ಅಮೆರಿಕನ್ ಡಾಲರ್ ಆಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಕ್ರೂಡ್ ಆಯಿಲ್ ಬೆಲೆ 40 ಅಮೆರಿಕನ್ ಡಾಲರ್ ಆಗಿತ್ತು.