Asianet Suvarna News Asianet Suvarna News

ಪೊರಕೆ ಮೇಲೆ ಕೊಲೆಸ್ಟ್ರಾಲ್ ಚಾರ್ಟ್, ತೂಕ ಇಳಿಸಲು ಸರಿಯಾಗಿ ಗುಡಿಸಿ ಓರೆಸಿದ್ರೆ ಸಾಕಾ?

ಜನರನ್ನು ಆಕರ್ಷಿಸಲು ಕಂಪನಿಗಳು ನಾನಾ ಕಸರತ್ತು ಮಾಡ್ತವೆ. ಈಗಿನ ದಿನಗಳಲ್ಲಿ ಅನೇಕ ವಸ್ತುಗಳ ಮೇಲೆ ಇನ್ಮ್ಯೂನಿಟಿ ಬೂಸ್ಟರ್ ಲೇಬಲ್ ನೋಡ್ಬಹುದು. ಈಗ ಪೊರಕೆ ಸರದಿ. ಅದ್ರಲ್ಲಿರುವ ವಿಷ್ಯ ನೋಡಿದ್ರೆ ನೀವು ಅಚ್ಚರಿಗೊಳ್ತೀರಿ.
 

Nutritional Broomstick Packet With Calorie Chart Seen In ShopI mages Goes Viral roo
Author
First Published Aug 8, 2023, 5:03 PM IST

ಕೆಲವೊಂದು ವಸ್ತುಗಳನ್ನು ನಾವು ನಿತ್ಯ ಬಳಸ್ತೇವೆ. ಆಹಾರದ ವಸ್ತು ಇರ್ಬಹುದು ಇಲ್ಲ ಕ್ಲೀನಿಂಗ್ ವಸ್ತುಗಳಿರಬಹುದು. ಮನೆ ಅಕ್ಕಪಕ್ಕ ಸಿಗುವ ಅಂಗಡಿಗಳಲ್ಲಿ ಸಣ್ಣಪುಟ್ಟ ವಸ್ತುಗಳನ್ನು ಖರೀದಿ ಮಾಡಿದಾಗ ಅದ್ರ ದರ ನೋಡ್ತೇವೆಯೇ ವಿನಃ ಅದ್ರ ಲಾಸ್ಟ್ ಡೇಟ್ ನೋಡೋದಿಲ್ಲ. ಮನೆ ಕ್ಲೀನ್ ಮಾಡುವ ಪೊರಕೆ ಖರೀದಿ ವೇಳೆ ಪೊರಕೆ ಹೇಗಿದೆ, ರೇಟ್ ಏನು ಎಂಬುದನ್ನು ಗಮನಿಸುವ ನಾವು, ಪೊರಕೆ ಮೇಲೆ ಹಾಕಿರುವ ರ್ಯಾಪರ್, ಅದ್ರಲ್ಲಿ ಬರೆದಿರುವ ವಿಷ್ಯವನ್ನು ಗಮನಿಸೋದಿಲ್ಲ. ಮನೆಗೆ ತಂದ ತಕ್ಷಣ ಕವರ್ ಹರಿದು ಬಿಸಾಕಿ ನಮ್ಮ ಬಳಕೆಗೆ ಅದನ್ನು ಬಳಸಿಕೊಳ್ತೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ, ಪೊರಕೆ ಕವರ್ ಪೋಸ್ಟ್ ಮಾಡಿದ್ದಾನೆ. ಅದ್ರಲ್ಲಿ ಏನು ಬರೆಯಲಾಗಿದೆ ಎಂಬುದನ್ನು ಹೇಳಿದ್ದಾನೆ. 

ಜನರಿಗೆ ಕೊಲೆಸ್ಟ್ರಾಲ್ (Cholesterol) ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಈಗಿನ ದಿನಗಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ನಾನಾ ಸಮಸ್ಯೆ ಆಗ್ತಿದೆ. ಇದ್ರ ಬಗ್ಗೆ ಮಾಹಿತಿ ನೀಡಲು ಪೊರಕೆ ಕಂಪನಿ ನಿರ್ಧರಿಸಿದಂತಿದೆ. ಜನರಿಗೆ ಕೊಲೆಸ್ಟ್ರಾಲ್ ಬಗ್ಗೆ ಮಾಹಿತಿ ನೀಡಲು ಪೊರಕೆ ಕವರ್ ಬಳಸಿಕೊಂಡಿದೆ. ಕವರ್ ಮೇಲೆ ಕೊಲೆಸ್ಟ್ರಾಲ್, ಸೋಡಿಯಂ, ಕೊಬ್ಬಿನ ಪ್ರಮಾಣ ಸೇರಿದಂತೆ ಕೆಲ ಮಾಹಿತಿಯನ್ನು ಬರೆಯಲಾಗಿದೆ. ಸಾಮಾಜಿಕ ಜಾಲತಾಣ ಬಳಕೆದಾರರು ಇದನ್ನು ತಮಾಷೆಯಾಗಿ ತೆಗೆದುಕೊಂಡು ಸಾಕಷ್ಟು ಮಜವಾದ ಕಮೆಂಟ್ ಮಾಡಿದ್ದಾರೆ. 

Zomato ಪ್ರಿಯರಿಗೆ ಶಾಕಿಂಗ್ ನ್ಯೂಸ್‌: ಪ್ರತಿ ಆಹಾರದ ಆರ್ಡರ್‌ಗೆ ಹೆಚ್ಚುವರಿ ಶುಲ್ಕ ವಿಧಿಸಲು ನಿರ್ಧಾರ
 
(@baldwhiner) ಹೆಸರಿನ ಟ್ವಿಟರ್‌ (Twitter) ಖಾತೆಯಲ್ಲಿ ಈ ಪೋಸ್ಟ್ ಮಾಡಲಾಗಿದೆ. ಪೋಸ್ಟ್ (Post) ನಲ್ಲಿ ನೀವು ಪೊರಕೆ ಕವರ್ ನೋಡ್ಬಹುದು. ಅದ್ರಲ್ಲಿ ಸಂಪೂರ್ಣ ಕ್ಯಾಲೋರಿ ಚಾರ್ಟ್ ಇದೆ. ಕೊಲೆಸ್ಟ್ರಾಲ್, ಸೋಡಿಯಂ (Sodium), ಕೊಬ್ಬಿನ (Fat) ಪ್ರಮಾಣವನ್ನು ಬರೆಯಲಾಗಿದೆ. ಈ ಪೊರಕೆಯಲ್ಲಿ ಕ್ಯಾಲೋರಿ ಚಾರ್ಟ್ ಇದೆ. ಯಾರಾದರೂ ತಿನ್ನಲು ಬಯಸಿದರೆ ಎಂದು ವ್ಯಕ್ತಿ ಫೋಟೋ ಜೊತೆ ಶೀರ್ಷಿಕೆ ಹಾಕಿದ್ದಾನೆ.
ನಾಲ್ಕೈದು ದಿನಗಳ ಹಿಂದೆ ಪೋಸ್ಟ್ ಆದ ಈ ಫೋಟೋವನ್ನು ಈವರೆಗೆ 31 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 491 ಲೈಕ್ಸ್ ಬಂದಿದ್ದು, 85ಕ್ಕೂ ಹೆಚ್ಚು ಬಾರಿ ರೀ ಟ್ವೀಟ್ ಮಾಡಲಾಗಿದೆ. ಇದು ಯುಎಸ್ ಎ ಮೆಕ್ಸಿಕನ್ ಕಂಪನಿ ತಯಾರಿಸಿದ ಪೊರಕೆ ಎಂಬುದು ತಿಳಿದು ಬಂದಿದೆ. 

Personal Finance : ಒಂದು ಸ್ಕೂಟಿ ಮೇಲೆ ಶೋ ರೂಂ ಮಾಲೀಕರಿಗೆ ಲಾಭವಿರುತ್ತೆ, ಚೌಕಾಸಿ ಮಾಡ್ಬಹುದು!

ಸಾಮಾಜಿಕ ಜಾಲತಾಣ (Social Media) ಬಳಕೆದಾರರಿಂದ ಕಮೆಂಟ್ : ಟ್ವಿಟರ್ ಬಳಕೆದಾರರು, ಪೊರಕೆ ಕವರ್ ಮೇಲಿರುವ ಕ್ಯಾಲೋರಿ ಲೀಸ್ಟ್ ನೋಡಿ ತಮಾಷೆ ಮಾಡಿದ್ದಾರೆ.  ಒಬ್ಬ ವ್ಯಕ್ತಿ 30 ನಿಮಿಷ ಈ ಪೊರಕೆ ಬಳಸಿದ್ರೆ 300 ಕ್ಯಾಲೋರಿ ಬರ್ನ್ ಮಾಡಬಹುದು ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಆಶ್ಚರ್ಯಕರ ವಿಷಯ, ಪೊರಕೆಯ ಪೌಷ್ಟಿಕತೆಯ ಬಗ್ಗೆ ನಮಗೆ ತಿಳಿದಿರಲಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ರೆ,  ಈ ಕಾರಣಕ್ಕೆ ಹೆಂಡತಿ ತನ್ನ ಗಂಡನನ್ನು ಪೊರಕೆಯಿಂದ  ಹೊಡೆಯುತ್ತಾಳೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಸಾಸ್ನೊಂದಿಗೆ ತಿನ್ನಲು ಉತ್ತಮವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.  ಅದ್ರಲ್ಲಿ ತಪ್ಪು ಹುಡುಕುವ ಪ್ರಯತ್ನವನ್ನೂ ಬಳಕೆದಾರರೊಬ್ಬರು ಮಾಡಿದ್ದಾರೆ. ಅದ್ರಲ್ಲಿರುವ ಫೈಬರ್ ತಪ್ಪಾಗಿದೆ ಎಂದು ಅವರು ಹೇಳಿದ್ದಾರೆ. ನೀವು ರೂಮ್ ಕ್ಲೀನ್ ಮಾಡಿದ್ರೆ, ಮನೆ ಕ್ಲೀನ್ ಮಾಡಿದ್ರೆ, ಪಕ್ಕದ ಮನೆ ಕ್ಲೀನ್ ಮಾಡಿದ್ರೆ ಹೆಚ್ಚೆಚ್ಚು ಕ್ಯಾಲೋರಿ ಬರ್ನ್ ಮಾಡ್ತೀರಿ. ಆದ್ರೆ ಪತ್ನಿಯಿಂದ ಮಾತ್ರ ಇದನ್ನು ಅಡಗಿಸಿಡಿ ಎಂದು ಬಳಕೆದಾರ ಸಲಹೆ ನೀಡಿದ್ದಾನೆ. 

ಅನಿವಾರ್ಯ ಪರಿಸ್ಥಿತಿಯಲ್ಲಿ ಇದನ್ನೇ ತಿನ್ಮೇಕಾಗ್ಬಹುದು, ಭಾರತದಲ್ಲಿ ಏನಾದ್ರೂ ಆಗ್ಬಹುದು, ಇದನ್ನು ತಿಂದ್ರೆ ಕ್ಯಾಲೋರಿ ಕಡಿಮೆ ಆಗುತ್ತಾ? ಹೀಗೆ ನಾನಾ ಕಮೆಂಟ್ ಗಳನ್ನು ಜನರು ಇಲ್ಲಿ ನೀಡಿರೋದನ್ನು ನೀವು ನೋಡ್ಬಹುದು.  
 

Follow Us:
Download App:
  • android
  • ios