Personal Finance : ಒಂದು ಸ್ಕೂಟಿ ಮೇಲೆ ಶೋ ರೂಂ ಮಾಲೀಕರಿಗೆ ಲಾಭವಿರುತ್ತೆ, ಚೌಕಾಸಿ ಮಾಡ್ಬಹುದು!
ಮನೆಯ ಮುಂದೊಂದು ಸ್ಕೂಟಿ ಈಗ ಖಾಯಂ ಆಗಿದೆ. ಬಹುತೇಕ ಎಲ್ಲರ ಮನೆಯಲ್ಲೂ ನೀವು ಸ್ಕೂಟಿ ನೋಡ್ಬಹುದು. ಬೇಡಿಕೆಗೆ ತಕ್ಕಂತೆ ಕಂಪನಿಗಳು ಸ್ಕೂಟಿ ತಯಾರಿಸಿ ಶೋ ರೂಮ್ ಮೂಲಕ ಮಾರಾಟ ಮಾಡ್ತವೆ. ಅಲ್ಲಲ್ಲಿ ತಲೆ ಎತ್ತಿರುವ ಶೋ ರೂಮ್ ಗೆ ಇದ್ರಿಂದ ಲಾಭವಿದ್ಯಾ?
ಸ್ಕೂಟಿ ಮಹಿಳೆಯರ ಅಚ್ಚುಮೆಚ್ಚಿನ ವಾಹನ. ಬರೀ ಮಹಿಳೆಯರು ಮಾತ್ರವಲ್ಲ ಎಲ್ಲ ವಯೋಮಾನದವರೂ ಇದನ್ನು ಸಲೀಸಾಗಿ ಓಡಿಸಬಹುದು. ಬೈಕನ್ನು ಎಲ್ಲರೂ ಓಡಿಸಲು ಸಾಧ್ಯವಿಲ್ಲ, ಅದ್ರಲ್ಲಿ ಡಿಕ್ಕಿ ಸ್ಪೇಸ್ ಇರೋದಿಲ್ಲ ಹಾಗೆ ವೃದ್ಧರು ಸೇರಿದಂತೆ ಮಹಿಳೆಯರಿಗೆ ಹಿಂದಿನ ಸೀಟ್ ನಲ್ಲಿ ಕುಳಿತುಕೊಳ್ಳಲು ಆರಾಮವೆನ್ನಿಸೋದಿಲ್ಲ. ಅದೇ ಸ್ಕೂಟಿಯಲ್ಲಿ ನೀವು ಸಾಮಾನುಗಳನ್ನು ತೆಗೆದುಕೊಂಡು ಬರುವ ಜೊತೆಗೆ ಹಿಂದೆ ಒಂದು ಮಗು ಹಾಗೂ ಒಬ್ಬ ಹಿರಿಯರನ್ನು ಆರಾಮವಾಗಿ ಕುಳಿಸಿಕೊಂಡು ಪ್ರಯಾಣ ಬೆಳೆಸಬಹುದು. ಇದೇ ಕಾರಣಕ್ಕೆ ಈಗಿನ ದಿನಗಳಲ್ಲಿ ಸ್ಕೂಟಿ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ.
ಆಟೋಮೊಬೈಲ್ (Automobile) ಕಂಪನಿಗಳು ಹೆಚ್ಚಿ ಆಕರ್ಷಕವಾಗಿರುವ, ಮೈಲೇಜ್ ನೀಡುವ ಹಾಗೂ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಕೂಟಿಗಳನ್ನು ಮಾರುಕಟ್ಟೆ (Market)ಗೆ ತರ್ತಿವೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟಿಗೂ ಬೇಡಿಕೆ ಹೆಚ್ಚಾಗಿದೆ. ಮನೆಯಲ್ಲಿ ಒಂದು ಬೈಕ್, ಒಂದು ಕಾರ್ ಹಾಗೂ ಒಂದು ಸ್ಕೂಟಿ ಹೊಂದಿರುವವರ ಸಂಖ್ಯೆ ಹೆಚ್ಚಿದೆ. ಹೊಸ ಸ್ಕೂಟಿ (Scooty)ಯನ್ನು ನಾವು ಶೋ ರೂಮ್ ನಿಂದ ಖರೀದಿ ಮಾಡ್ತೇವೆ. ಕೆಲವರು ಸೆಕೆಂಡ್ ಹ್ಯಾಂಡ್ ಸ್ಕೂಟಿಯನ್ನು ಕೂಡ ಶೋರೂಮಿನಿಂದಲೇ ಖರೀದಿ ಮಾಡ್ತಾರೆ. ನಾವು ಶೋ ರೂಮಿನಿಂದ ಸ್ಕೂಟಿ ಖರೀದಿ ಮಾಡಿದ್ರೆ ಶೋ ರೂಮ್ ಮಾಲೀಕರಿಗೆ ಎಷ್ಟು ಲಾಭವಾಗುತ್ತೆ, ಅವರಿಗೆ ಸಿಗುವ ಕಮಿಶನ್ ಎಷ್ಟು ಎನ್ನುವುದರ ಬಗ್ಗೆ ನೀವು ಎಂದೂ ಯೋಚಿಸಿರಲಿಕ್ಕಿಲ್ಲ.
ZOMATO ಪ್ರಿಯರಿಗೆ ಶಾಕಿಂಗ್ ನ್ಯೂಸ್: ಪ್ರತಿ ಆಹಾರದ ಆರ್ಡರ್‌ಗೆ ಹೆಚ್ಚುವರಿ ಶುಲ್ಕ ವಿಧಿಸಲು ನಿರ್ಧಾರ
ಎಲ್ಲ ವ್ಯಾಪಾರ, ವ್ಯವಹಾರಗಳಲ್ಲಿ ಕಮಿಶನ್ ಇದ್ದೇ ಇರುತ್ತೆ. ಕಮಿಶನ್ ಇಲ್ಲದೆ ಜನರು ವ್ಯಾಪಾರ ಮಾಡೋದಿಲ್ಲ. ಆದ್ರೆ ಒಂದೊಂದು ಬ್ಯುಸಿನೆಸ್ ಗೆ ಸಿಗುವ ಕಮಿಷನ್ ಒಂದೊಂದು ರೀತಿಯಲ್ಲಿರುತ್ತದೆ. ಎಲ್ಲ ಬ್ಯುಸಿನೆಸ್ ನಂತೆಯೇ ಸ್ಕೂಟಿ ಮಾರಾಟದಲ್ಲಿ ಕೂಡ ಶೋ ರೂಮ್ ಮಾಲೀಕರು ಅನೇಕ ರೀತಿಯಲ್ಲಿ ಕಮಿಶನ್ ಪಡೆಯುತ್ತಾರೆ. ಗ್ರಾಹಕರು ಒಂದು ಸ್ಕೂಟಿ ಖರೀದಿಸಿದರೆ ಶೋರೂಮ್ ಮಾಲೀಕನಿಗೆ ಎಷ್ಟು ಕಮಿಶನ್ ಸಿಗುತ್ತೆ ಎನ್ನವುದರ ಕುರಿತು ಮಾಹಿತಿ ಇಲ್ಲಿದೆ.
ಒಂದು ಸ್ಕೂಟಿಯ ಮೇಲೆ ಸಿಗುತ್ತೆ ಇಷ್ಟು ಕಮಿಶನ್ : ಶೋರೂಮ್ ಕಮಿಶನ್ ಅನೇಕ ವಿಷಯಗಳನ್ನು ಅವಲಂಬಿಸಿರುತ್ತದೆ. ಪ್ರತಿಯೊಂದು ಕಂಪನಿಗಳೂ ವಿಭಿನ್ನ ರೀತಿಯಲ್ಲಿ ವ್ಯವಹಾರ ನಡೆಸಿ ಹಣ ಗಳಿಸುತ್ತವೆ. ಶೋ ರೂಮ್ ಮಾಲಿಕರ ಕಮಿಶನ್, ಶೋ ರೂಮ್ ಎಲ್ಲಿದೆ ಎಂಬುದು ಹಾಗೂ ವಾಹನದ ಮಾದರಿಯನ್ನು ಕೂಡ ಅವಲಂಬಿಸಿರುತ್ತದೆ. ಅನೇಕ ವರದಿಗಳ ಪ್ರಕಾರ, ಸ್ಕೂಟಿ ವಿತರಕರು ಪ್ರತಿ ಸ್ಕೂಟಿಯ ಮೇಲೆ ಪ್ರತಿಶತ 3 ರಷ್ಟು ಕಮಿಶನ್ ಪಡೆಯುತ್ತಾರೆ. ಸ್ಕೂಟಿಯ ದರವು 1 ಲಕ್ಷಕ್ಕಿಂತಲೂ ಹೆಚ್ಚಿಗೆ ಇದ್ದರೆ, ಪ್ರತಿಶತ 6 ರಷ್ಟು ಕಮಿಶನ್ ಸಿಗುತ್ತದೆ.
ಎಫ್ ಡಿ ಬ್ರೇಕ್ ಮಾಡೋದಾ ಅಥವಾ ಸಾಲ ತೆಗೆಯೋದಾ? ಆರ್ಥಿಕ ಸಂಕಷ್ಟದಲ್ಲಿ ಯಾವ ಆಯ್ಕೆ ಬೆಸ್ಟ್?
ಶೋರೂಮ್ ಮಾಲೀಕರು ಹೀಗೂ ಹಣ ಗಳಿಸುತ್ತಾರೆ? : ಶೋ ರೂಮ್ ಮಾಲೀಕರಿಗೆ ಒಂದು ಸ್ಕೂಟಿ ಮಾರಾಟ ಮಾಡಿದ್ರೆ ಕೇವಲ ಶೇಕಡಾ 3ರಿಂದ 6 ರಷ್ಟು ಕಮಿಶನ್ ಮಾತ್ರ ಸಿಗುತ್ತದೆ ಎಂದಾದ್ರೆ ಸ್ಕೂಟಿ ಮಾರಾಟ ಮಾಡುವ ಕೆಲಸ ಉತ್ತಮವಲ್ಲ ಎಂದು ನೀವು ಭಾವಿಸಬಹುದು. ಆದ್ರೆ ಈ ಕಮಿಶನ್ ಹೊರತಾಗಿ ಶೋ ರೂಮ್ ಮಾಲೀಕರು ಬೇರೆ ಬೇರೆ ವಿಧಾನಗಳ ಮೂಲಕವೂ ಲಾಭ ಗಳಿಸುತ್ತಾರೆ. ವಿತರಕರು ನಿಜವಾದ ಬೆಲೆಗಿಂತ ಹೆಚ್ಚಿನ ಬೆಲೆಗೆ ಗಾಡಿಯನ್ನು ಮಾರುತ್ತಾರೆ. ಶೋ ರೂಮ್ ನಲ್ಲಿ ಒಂದು ಗಾಡಿ ಮಾರಾಟವಾದರೆ ಅದರ ಇನ್ಶುರೆನ್ಸ್ ಮತ್ತು ಇತರ ಕಾಗದ ಪತ್ರಗಳಿಂದಲೂ ಶೋ ರೂಮ್ ಮಾಲೀಕರಿಗೆ ಹಣ ಸಿಗುತ್ತೆ. ಗಾಡಿಯ ಬಿಡಿ ಭಾಗಗಳು, ಗಾಡಿಯ ಸರ್ವೀಸ್, ಸಗಟು ಬೆಲೆ, ದಾಸ್ತಾನು ವೆಚ್ಚಗಳು ಮುಂತಾದವುಗಳಿಂದ ಡೀಲರ್ ಗಳಿಗೆ ಉತ್ತಮ ಲಾಭವಾಗುತ್ತದೆ.