ತಾಮ್ರ ವ್ಯವಹಾರಕ್ಕೂ ಇಳಿದ ಅದಾನಿ, ಎಸ್‍ಬಿಐನಿಂದ 6071 ಕೋಟಿ ಸಾಲ!

ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಗೌತಮ್ ಅದಾನಿ ನಿರಂತರವಾಗಿ ತಮ್ಮ ವ್ಯವಹಾರವನ್ನು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಿದ್ದಾರೆ. ಇತ್ತಿಚೆಗೆ ಸಿಮೆಂಟ್ ಉದ್ಯಮಕ್ಕೆ ಇಳಿದಿದ್ದ ಅದಾನಿ, ಈಗ ತಾಮ್ರದ ವ್ಯವಹಾರಕ್ಕೂ ಇಳಿಯುವ ಸಿದ್ದತೆಯಲ್ಲಿದ್ದಾರೆ. ಅದಕ್ಕಾಗಿ ಎಸ್‌ಬಿಐ, ಪಿಎನ್‌ಬಿ ನೇತೃತ್ವದ ಬ್ಯಾಂಕ್‌ಗಳಿಂದ ಮೊದಲ ಹಂತವಾಗಿ ಸಾವಿರಾರು ಕೋಟಿ ರೂಪಾಯಿಗಳ ಸಾಲವನ್ನು ಅದಾನಿ ಗ್ರೂಪ್ ಪಡೆದುಕೊಂಡಿದೆ.
 

Now Adani Group Gautam Adani entry in copper business Rs 6071 crore loan taken from other banks including SBI and PNB san

ಮುಂಬೈ (ಜೂನ್ 27): ಭಾರತದ ಅಗ್ರ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾದ ಹಾಗೂ ಏಷ್ಯಾದ ಮೊದಲ ಮತ್ತು ವಿಶ್ವದ 6ನೇ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ (Gautam Adani) ಹೊಸ ಉದ್ಯಮ ಕ್ಷೇತ್ರಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ದೇಶದ ತಾಮ್ರ ಉತ್ಪಾದನೆಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ಅದಾನಿ ಗ್ರೂಪ್ (Adani Group) ಸಿದ್ದವಾಗಿದೆ. ಈ ಪ್ರಾಜೆಕ್ಟ್‌ನ ಸಲುವಾಗಿ ಕಂಪನಿ ಈಗಾಗಲೇ ಭಾರತೀಯ ಸ್ಟೇಟ್‌ ಬ್ಯಾಂಕ್ (State Bank Of India) ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಂಥ (Punjab National Bank) ಸಾರ್ವಜನಿಕ ವಲಯದ ಬ್ಯಾಂಕ್ ಗಳಿಂದ ಅಂದಾಜು 6 ಸಾವಿರಕ್ಕೂ ಅಧಿಕ ಮೊತ್ತವನ್ನು ಸಾಲವಾಗಿ ಪಡೆದುಕೊಂಡಿದೆ.

ಗುಜರಾತ್‌ನ ಮುಂದ್ರಾದಲ್ಲಿ (Mundra) ನಿರ್ಮಾಣವಾಗಲಿದೆ ಪ್ಲ್ಯಾಂಟ್: ವರದಿಗಳ ಪ್ರಕಾರ ಅದಾನಿ ಗ್ರೂಪ್‌ ತನ್ನ ತಾಮ್ರ ಸಂಸ್ಕರಣಾ ಘಟಕಕ್ಕೆ (copper refinery project) ಕಚ್ ಕಾಪರ್ ಲಿಮಿಟೆಡ್ (KCL) ಎನ್ನುವ ಹೆಸರನ್ನಿಟ್ಟಿದ್ದು,  ಇದು ಸಂಪೂರ್ಣವಾಗಿ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಅಂಗ ಸಂಸ್ಥೆಯಾಗಿ ಇರಲಿದೆ. ತಾಮ್ರದ ಸಂಸ್ಕರಣೆ ಮಾಡುವುದು ಈ ಕಂಪನಿಯ ಕೆಲಸವಾಗಿರಲಿದೆ.

ವಾರ್ಷಿಕವಾಗಿ ಮಿಲಿಯನ್‌ಗಟ್ಟಲೆ ತಾಮ್ರವನ್ನು ಉತ್ಪಾದನೆ ಮಾಡುವುದು ಈ ಕಂಪನಿಯ ಉದ್ದೇಶವಾಗಿರಲಿದೆ. ಒಟ್ಟಾರೆ ಕೆಸಿಎಲ್‌ನ ಎರಡು ಘಟಕಗಳು ಇರಲಿದ್ದು, ಎರಡೂ ಘಟಕಗಳು ಮುಂದ್ರಾದಲ್ಲಿಯೇ ಇರಲಿದೆ. ಕಂಪನಿಯ ಮೂಲಗಳ ಪ್ರಕಾರ, ಕೆಸಿಎಲ್ ಪ್ರಾಜೆಕ್ಟ್‌ನ ಮೊದಲ ಹಂತಕ್ಕೆ ಈಗಾಗಲೇ 6071 ಕೋಟಿ ರೂಪಾಯಿ ಸಾಲವನ್ನು ಬ್ಯಾಂಕ್‌ಗಳು ನೀಡಿವೆ. ಅಂದಾಜು 5 ಲಕ್ಷ ಟನ್ ತಾಮ್ರ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಕೆಸಿಎಲ್‌ನ ಮೊದಲ ಹಂತ ಹೊಂದಿರಲಿದೆ. ಈ ಕುರಿತಾಗಿ ಪ್ರಕಟಣೆಯನ್ನು ನೀಡುವ ಮೂಲಕ ಅದಾನಿ ಎಂಟರ್‌ಪ್ರೈಸಸ್ ಮಾಹಿತಿಯನ್ನು ನೀಡಿದೆ.

ಭಾರತೀಯ ಸ್ಟೇಟ್‌ ಬ್ಯಾಂಕ್ (SBI) ಅಲ್ಲದೆ, ಬ್ಯಾಂಕ್ ಆಫ್ ಬರೋಡ (BOB), ಕೆನರಾ ಬ್ಯಾಂಕ್, ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್(PNB) ಸಾಲ ನೀಡಿದ ಬ್ಯಾಂಕ್‌ಗಳ ಪಟ್ಟಿಯಲ್ಲಿದೆ. ಇದರಲ್ಲಿ ಎಸ್‌ಬಿಐ, ಪಿಎನ್‌ಬಿ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ ಪಾಲು ಅಧಿಕವಾಗಿದೆ ಎಂದು ಹೇಳಲಾಗಿದೆ.  ಗ್ರೀನ್‌ಫೀಲ್ಡ್ ಸ್ಥಾವರದ ಮೊದಲ ಹಂತದಲ್ಲಿ ವಾರ್ಷಿಕ 0.5 ಮಿಲಿಯನ್ ಟನ್‌ಗಳಷ್ಟು ತಾಮ್ರ ಸಂಸ್ಕರಣಾ ಸಾಮರ್ಥ್ಯಕ್ಕಾಗಿ (ಎಂಟಿಪಿಎ) ಸಾವಿರಾರು ಕೋಟಿ ರೂ. ವ್ಯಯ ಮಾಡಲಾಗುತ್ತದೆ. ಆದರೆ, ಎರಡು ಹಂತಗಳಲ್ಲಿ ಒಂದು MTPA ಯ ಒಟ್ಟು ಸಾಮರ್ಥ್ಯವನ್ನು ಸಾಧಿಸಲು ಗುರಿಯನ್ನು ನಿಗದಿಪಡಿಸಲಾಗಿದೆ.

60ನೇ ಜನ್ಮದಿನಕ್ಕೆ ಒಂದು ದಿನ ಮುನ್ನ ಅದಾನಿಯಿಂದ 60 ಸಾವಿರ ಕೋಟಿ ದಾನ!

ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ನಿರ್ದೇಶಕ ವಿನಯ್ ಪ್ರಕಾಶ್ ಪ್ರಕಾರ 2024 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದಿದ್ದಾರೆ. ಈ ಯೋಜನೆಯ ಕಾರ್ಯಾಚರಣೆಯು 2024 ರ ಮೊದಲಾರ್ಧದಲ್ಲಿ ಪ್ರಾರಂಭವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದಲ್ಲದೆ, ಇದು ಸ್ವಾವಲಂಬಿ ಭಾರತದತ್ತ ಒಂದು ಹೆಜ್ಜೆ ಎಂದು ಅವರು ಹೇಳಿದ್ದಾರೆ ಮತ್ತು ಈ ಯೋಜನೆಯು ದೇಶದ ಎಲೆಕ್ಟ್ರಿಕ್ ವಾಹನದಲ್ಲಿ ಹಾಗೂ ನವೀಕರಿಸಬಹುದಾದ ಇಂಧನ ವಲಯದಲ್ಲಿ ಪ್ರಮುಖ ಪಾತ್ರವನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದರು. ಇದು ವಿಶ್ವದ ಅತಿದೊಡ್ಡ ತಾಮ್ರ ಸಂಸ್ಕರಣಾ ಘಟಕಗಳಲ್ಲಿ ಒಂದಾಗಲಿದೆ ಎಂದು ವಿನಯ್ ಪ್ರಕಾಶ್ ಹೇಳಿದರು.

Health Sector:ಆರೋಗ್ಯ ಕ್ಷೇತ್ರಕ್ಕೂ ಅದಾನಿ ಎಂಟ್ರಿ; ಮೆಟ್ರೋಪಾಲಿಸ್ ಖರೀದಿಗೆ ಅದಾನಿ, ಅಪೋಲೋ ಸಜ್ಜು

ಕಚ್ ಕಾಪರ್ ಲಿಮಿಟೆಡ್ (ಕೆಸಿಎಲ್), ಭಾರತೀಯ ತಾಮ್ರ ಮಾರುಕಟ್ಟೆಯಲ್ಲಿ ಮೂರನೇ ಅತಿದೊಡ್ಡ ಕಂಪನಿಯಾಗಿದ್ದು, ಅದಾನಿ ಎಂಟರ್‌ಪ್ರೈಸಸ್‌ನ ಅಂಗಸಂಸ್ಥೆಯಾಗಿ ಮಾರ್ಚ್ 2021 ರಲ್ಲಿ ಅಸ್ತಿತ್ವಕ್ಕೆ ಬಂದಿದೆ.. ಈಗ ಈ ವಲಯದಲ್ಲಿ ರೂ 6,071 ಕೋಟಿ ಹೂಡಿಕೆಯೊಂದಿಗೆ, ಇದು ಭಾರತೀಯ ತಾಮ್ರ ಮಾರುಕಟ್ಟೆಯಲ್ಲಿ ಮೂರನೇ ಅತಿದೊಡ್ಡ ಖಾಸಗಿ ವಲಯದ ಆಟಗಾರನಾಗಲಿದೆ. ಗಮನಾರ್ಹವಾಗಿ, ಆದಿತ್ಯ ಬಿರ್ಲಾ ಗ್ರೂಪ್‌ನ ಹಿಂಡಾಲ್ಕೊ ಮತ್ತು ವೇದಾಂತ ಗ್ರೂಪ್‌ನ ಸ್ಟೆರ್ಲೈಟ್ ಕಾಪರ್ ಈ ವಲಯದಲ್ಲಿ ಹೆಚ್ಚು ಸಕ್ರಿಯವಾಗಿವೆ. ಇದಲ್ಲದೆ, ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಈ ವಲಯದ ಪ್ರಮುಖ ಸಾರ್ವಜನಿಕ ವಲಯದ ಕಂಪನಿಯಾಗಿದೆ.

Latest Videos
Follow Us:
Download App:
  • android
  • ios