Asianet Suvarna News Asianet Suvarna News

2 ಲಕ್ಷ ರು.ವರೆಗೆ ಚಿನ್ನಾಭರಣ ಖರೀದಿಗೆ ಕೆವೈಸಿ ಅಗತ್ಯವಿಲ್ಲ!

ಗ್ರಾಹಕರು ನಗದು ಮೂಲಕ ಖರೀದಿಸುವ ಚಿನ್ನ, ಬೆಳ್ಳಿ ಸೇರಿದಂತೆ ಇನ್ನಿತರ ಬೆಲೆಬಾಳುವ ಹವಳಗಳಿಗೆ ಸಂಬಂಧಿಸಿದಂತೆ ಕೆವೈಸಿ ಸಲ್ಲಿಕೆ| 2 ಲಕ್ಷ ರು.ವರೆಗೆ ಚಿನ್ನಾಭರಣ ಖರೀದಿಗೆ ಕೆವೈಸಿ ಅಗತ್ಯವಿಲ್ಲ: ನಿಯಮದ ಬಗ್ಗೆ ಕೇಂದ್ರದ ಸ್ಪಷ್ಟನೆ

No new KYC disclosure norm for jewellery purchase clarifies govt pod
Author
Bangalore, First Published Jan 9, 2021, 8:32 AM IST

ನವದೆಹಲಿ(ಜ.09): ಗ್ರಾಹಕರು ನಗದು ಮೂಲಕ ಖರೀದಿಸುವ ಚಿನ್ನ, ಬೆಳ್ಳಿ ಸೇರಿದಂತೆ ಇನ್ನಿತರ ಬೆಲೆಬಾಳುವ ಹವಳಗಳಿಗೆ ಸಂಬಂಧಿಸಿದಂತೆ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಸಲ್ಲಿಕೆ ಕಡ್ಡಾಯವಲ್ಲ ಎಂದು ಕೇಂದ್ರ ವಿತ್ತ ಇಲಾಖೆ ಮೂಲಗಳು ತಿಳಿಸಿವೆ. ಆದರೆ ಭಾರೀ ನಗದು ರೂಪದ ವ್ಯವಹಾರಗಳಿಗೆ ಪ್ಯಾನ್‌, ಆಧಾರ್‌ ರೀತಿಯ ದಾಖಲೆ ಸಲ್ಲಿಕೆ ಕಡ್ಡಾಯ ಎಂದು ಹೇಳಿದೆ.

ಕಳೆದ ವರ್ಷದ ಡಿಸೆಂಬರ್‌ 28ರಂದು 2 ಲಕ್ಷ ರು.ಗಿಂತ ಹೆಚ್ಚಿನ ಮೌಲ್ಯದ ಚಿನ್ನಾಭರಣ, ವಜ್ರ ಸೇರಿದಂತೆ ಇನ್ನಿತರ ಆಭರಣಗಳ ಖರೀದಿಗೆ ಕಳೆದ ಕೆಲ ವರ್ಷಗಳಿಂದ ಕೆವೈಸಿ ಕಡ್ಡಾಯಗೊಳಿಸಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿತ್ತು.

ಆದರೆ ಈ ಸಂಬಂಧ ಶುಕ್ರವಾರ ಸ್ಪಷ್ಟನೆ ನೀಡಿರುವ ಸರ್ಕಾರ, 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ನಗದು ರೂಪದಲ್ಲಿ ಚಿನ್ನಾಭರಣ ಖರೀದಿಸುವ ಗ್ರಾಹಕರು ಮಾತ್ರವೇ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕು. ಈ ಕುರಿತಾಗಿಯೇ 2020ರ ಡಿ.20ರಂದು ಪಿಎಂಎಲ್‌-2002ರ ಕಾಯ್ದೆಯಡಿ ಅಧಿಸೂಚನೆ ಹೊರಡಿಸಲಾಗಿತ್ತು ಎಂದಿದೆ ಕೇಂದ್ರ ಸರ್ಕಾರ.

Follow Us:
Download App:
  • android
  • ios