Asianet Suvarna News Asianet Suvarna News

Gold Silver Price:ಆಭರಣ ಖರೀದಿಸೋರು ಕೊಂಚ ನಿರಾಳ; ರಾಜ್ಯದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ದರ

*ಇಂದು ಬೆಂಗಳೂರಿನಲ್ಲಿ  22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 44,990ರೂ.
*ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 10ರೂ. ಏರಿಕೆ
*ದೇಶದ ಪ್ರಮುಖ ನಗರಗಳಲ್ಲಿ ಇಂದು ಬೆಳ್ಳಿ ಬೆಲೆ ಸ್ಥಿರ
 

No changes in Gold silver price in Bangalore check gold silver price in major cities of India Jan 17 2022
Author
Bangalore, First Published Jan 17, 2022, 1:19 PM IST

ಬೆಂಗಳೂರು (ಜ.17): ಚಿನ್ನ (Gold) ಹಾಗೂ ಬೆಳ್ಳಿ (Silver) ದರದಲ್ಲಿ (Price) ನಿರಂತರ ಏರಿಳಿತ ಕಂಡುಬರುತ್ತಲೇ ಇರುತ್ತದೆ. ಚಿನ್ನ ಹಾಗೂ ಬೆಳ್ಳಿ ದರದ ಮೇಲೆ ಅನೇಕ ಅಂಶಗಳು ಪರಿಣಾಮ ಬೀರುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆಗಳು ಕೂಡ ಚಿನ್ನ (Gold) ಹಾಗೂ ಬೆಳ್ಳಿ (Silver) ಬೆಲೆ (Price) ಮೇಲೆ ಪರಿಣಾಮ ಬೀರುತ್ತವೆ.  ಸದ್ಯ ಜಗತ್ತಿನಾದ್ಯಂತ ಕೋವಿಡ್ -19 ಮೂರನೇ ಅಲೆ ಪ್ರಾರಂಭವಾಗಿದೆ. ಭಾರತದಲ್ಲಿ ಕೂಡ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂಗಳನ್ನು ಹೇರಲಾಗಿದೆ. ಹೀಗಾಗಿ ಜನರ ಓಡಾಟ ಸ್ವಲ್ಪ ಕಡಿಮೆಯಾಗಿದೆ. ಚಿನ್ನ ಹಾಗೂ ಬೆಳ್ಳಿ ಖರೀದಿಸೋರು ಕೂಡ ಸದ್ಯಕ್ಕೆ ಜ್ಯುವೆಲ್ಲರಿ (Jewelery) ಶಾಪ್ ಗಳಿಗೆ ಹೋಗಿ ರಿಸ್ಕ್ ತೆಗೆದುಕೊಳ್ಳೋದು ಬೇಡ. ಕೊರೋನಾ ಪ್ರಕರಣಗಳು ಇಳಿಮುಖವಾದ ಬಳಿಕ ಖರೀದಿಸೋ ನಿರ್ಧಾರ ತಳೆದಿರಬಹುದು. ಹೀಗಾಗಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾದಂತೆ ಚಿನ್ನ ಹಾಗೂ ಬೆಳ್ಳಿಗೆ ಬೇಡಿಕೆ ಕಡಿಮೆಯಾಗುತ್ತದೆ. ಇದು ಬೆಲೆ ಮೇಲೆ ಕೂಡ ಪರಿಣಾಮ ಬೀರೋ ಸಾಧ್ಯತೆಯಿದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಬೆಲೆ ಮೇಲೆ ಪರಿಣಾಮ ಬೀರುತ್ತದೆ. ಇನ್ನು ದೇಶದಲ್ಲಿನ ಚಿನ್ನದ ಸಂಗ್ರಹ ಕೂಡ ಬೆಲೆ ನಿರ್ಧರಣೆ ಮೇಲೆ ಪರಿಣಾಮ ಬೀರುತ್ತದೆ. ಚಿನ್ನ ಹಾಗೂ ಬೆಳ್ಳಿ ಮೇಲೆ ಖರೀದಿಸೋದು ಅಥವಾ ಹೂಡಿಕೆ ಮಾಡೋದು ಅಂದ್ರೆ ಲಕ್ಷಾಂತರ ರೂಪಾಯಿ ವ್ಯವಹಾರವಾಗಿರೋ ಕಾರಣ ಯಾವುದೇ ನಿರ್ಧಾರ ಕೈಗೊಳ್ಳೋ ಮುನ್ನ ಮಾರುಕಟ್ಟೆ ದರ ಪರಿಶೀಲನೆ ನಡೆಸೋದು ಅಗತ್ಯ. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿಇಂದು (ಜ.17) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?

ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru)ಚಿನ್ನದ ಬೆಲೆ ಇಂದು  ಸ್ಥಿರವಾಗಿದೆ.  22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 44,990ರೂ.ಇದ್ದು, ನಿನ್ನೆ ಕೂಡ ಅಷ್ಟೇ ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,090 ರೂ.ಇದ್ದು,ಇಂದು ಕೂಡ ಅಷ್ಟೇ ಇದೆ. ಇನ್ನು ಬೆಳ್ಳಿ ದರದಲ್ಲಿ ಕೂಡ ಇಂದು ಯಾವುದೇ ಬದಲಾವಣೆಯಾಗಿಲ್ಲ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 65,500ರೂ.ಇತ್ತು. ಇಂದು ಕೂಡ ಅಷ್ಟೇ ಇದೆ. 

Petrol Diesel Rate:ಕೊರೋನಾ ಭೀತಿ ನಡುವೆ ಇಂಧನ ದರ ಪರಿಶೀಲಿಸಲು ಮರೆತಿದ್ದೀರಾ? ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ ಕೂಡ ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು  47,130ರೂ. ಆಗಿದ್ದು, ನಿನ್ನೆ ಕೂಡ ಅಷ್ಟೇ ಇತ್ತು.  24 ಕ್ಯಾರಟ್ 10 ಗ್ರಾಂ ಚಿನ್ನದ ದರ 51,420 ರೂ. ಇತ್ತು, ಇಂದು ಕೂಡ ಅಷ್ಟೇ ಇದೆ. ಬೆಳ್ಳಿ ದರದಲ್ಲಿ ಕೂಡ ಯಾವುದೇ ಬದಲಾವಣೆಯಾಗಿಲ್ಲ. ಒಂದು ಕೆ.ಜಿ.ಬೆಳ್ಳಿಗೆ 61,700ರೂ.ಇದೆ.

ಮುಂಬೈನಲ್ಲಿಎಷ್ಟಿದೆ ದರ?
ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 47,090ರೂ.ಇದ್ದು,ಇಂದು 10ರೂ. ಏರಿಕೆ ಕಂಡು 47,110ರೂ.ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ49,090ರೂ.ಇತ್ತು,ಇಂದು 10ರೂ. ಏರಿಕೆಯಾಗಿ 49,100ರೂ. ಆಗಿದೆ. ಬೆಳ್ಳಿ ದರ ಇಂದು ನಿನ್ನೆಯಷ್ಟೇ ಇದೆ. ಒಂದು ಕೆ.ಜಿ.ಬೆಳ್ಳಿಗೆ 61,700ರೂ.ಇದೆ.

Digital Gold: ಚಿನ್ನಾಭರಣ ಖರೀದಿ ಬದಲು ಬಂಗಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ!

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು  45,340ರೂ.ಇದೆ. ನಿನ್ನೆ ಕೂಡ ಅಷ್ಟೇ ಇದ್ದು, ಯಾವುದೇ ಬದಲಾವಣೆಯಾಗಿಲ್ಲ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆ49,440ರೂ. ಇದ್ದು, ಇಂದು ಕೂಡ ಅಷ್ಟೇ ಇದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 65,500ರೂ. ಇದ್ದು, ಇಂದು ಕೂಡ ಅಷ್ಟೇ ಇದೆ. 

"

Follow Us:
Download App:
  • android
  • ios