Asianet Suvarna News Asianet Suvarna News

Gold Rate: ಚಿನ್ನದ ಬೆಲೆ ಸ್ಥಿರ, ಬೆಳ್ಳಿ ದರದಲ್ಲಿ ಕುಸಿತ

ಇಂದು ಚಿನ್ನದ ದರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿಲ್ಲ.ಆದ್ರೆ ಬೆಳ್ಳಿ ದರದಲ್ಲಿ ಕೆ.ಜಿ.ಗೆ 900ರೂ. ಇಳಿಕೆ ಕಂಡುಬಂದಿದೆ. ಹೀಗಾಗಿ ಬೆಳ್ಳಿ ಖರೀದಿಸೋರಿಗೆ ಶನಿವಾರ ಶುಭದಿನ.

No changes in gold rate silver rate decreased 27 Nov  2021 anu
Author
Bangalore, First Published Nov 27, 2021, 12:32 PM IST
  • Facebook
  • Twitter
  • Whatsapp

ಬೆಂಗಳೂರು (ನ.27): ಬಹುತೇಕರು ವಾರಾಂತ್ಯದಲ್ಲಿ ಚಿನ್ನ(Gold), ಬೆಳ್ಳಿ(Silver) ಖರೀದಿಸೋ ಪ್ಲ್ಯಾನ್ (plan) ಮಾಡಿರುತ್ತಾರೆ. ರಜೆಯಿರೋ ಕಾರಣ ಆರಾಮವಾಗಿ ಇಷ್ಟದ ಆಭರಣವನ್ನುಆಯ್ಕೆ ಮಾಡಿಕೊಳ್ಳಬಹುದು ಎಂಬುದು ಅವರ ಯೋಚನೆಯಾಗಿರುತ್ತೆ. ಆದ್ರೆ ಈ ವಾರ ತುಸು ಏರಿಕೆಯ ಹಾದಿ ಹಿಡಿದಿದ್ದ ಚಿನ್ನದ ದರದಲ್ಲಿ ಇಂದು (ನ.27) ಗಮನಾರ್ಹ ಬದಲಾವಣೆಯಾಗಿಲ್ಲ. ಹೀಗಾಗಿ ಚಿನ್ನ ಖರೀದಿ ಬಗ್ಗೆ ಯೋಚಿಸಬಹುದು ಅಥವಾ ಇನ್ನೂ ಒಂದು ವಾರ ಕಾದು ನೋಡಬಹುದು. ಆದ್ರೆ ಬೆಳ್ಳಿ ದರದಲ್ಲಿ (rate) ಮಾತ್ರ ಇಂದು (ನ.27) ಗಮನಾರ್ಹ ಇಳಿಕೆ ಕಂಡುಬಂದಿದೆ. ಹೀಗಾಗಿ ಬೆಳ್ಳಿ ಖರೀದಿಸೋರಿಗೆ ಶನಿವಾರ ಶುಭದಿನವಾಗಿದೆ ಎಂದೇ ಹೇಳಬಹುದು. ನೀವು ಕೂಡ ಬೆಳ್ಳಿ ಖರೀದಿಸೋ ಪ್ಲ್ಯಾನ್ ಹೊಂದಿದ್ರೆ ಇಂದು ಮುಂದುವರಿಯೋದು ಉತ್ತಮ. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ? ನೋಡೋಣ ಬನ್ನಿ.

ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಇಂದು ನಿನ್ನಗಿಂತ ಸ್ವಲ್ಪ ಏರಿಕೆ ಕಂಡುಬಂದಿದೆ. 22 ಕ್ಯಾರಟ್ (Carrat) 10 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆಗಿಂತ ಇಂದು 10 ರೂ. ಏರಿಕೆಯಾಗಿದೆ. ಇಂದು 22 ಕ್ಯಾರಟ್ (carrat) 10 ಗ್ರಾಂ ಚಿನ್ನದ ಬೆಲೆ 44,860ರೂ.ಇದ್ರೆ ನಿನ್ನೆ 44,850ರೂ.ಇತ್ತು. 24 ಕ್ಯಾರಟ್(carrat) 10 ಗ್ರಾಂ ಚಿನ್ನಕ್ಕೆ ನಿನ್ನೆ 48,930 ರೂ.ಇದ್ದು,ಇಂದು 48,940 ರೂ.ಆಗಿದೆ. ಅಂದ್ರೆ 1೦ರೂ. ಏರಿಕೆಯಾಗಿದೆ. ಇನ್ನು ಬೆಳ್ಳಿ ದರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ನಿನ್ನೆಗಿಂತ ಇಂದು 900ರೂ. ಇಳಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 63,100ರೂ.ಇತ್ತು. ಆದ್ರೆ ಇಂದು 62,200ರೂ. ಆಗಿದೆ. 

Post Office Scheme:ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 2000ರೂ. ಪಕ್ಕಾ

"

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 47,010ರೂ. ಆಗಿದ್ದು, ನಿನ್ನೆ47,000ರೂ.ಇತ್ತು. ಅಂದ್ರೆ ನಿನ್ನೆಗಿಂತ ಇಂದು 10ರೂ.ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ.ಏರಿಕೆಯಾಗಿದೆ. ನಿನ್ನೆ 51,280 ರೂ. ಇತ್ತು,ಇಂದು 51,290-ರೂ. ಆಗಿದೆ. ಆದ್ರೆ ಬೆಳ್ಳಿ ದರದಲ್ಲಿ 900ರೂ.ಇಳಿಕೆಯಾಗಿದೆ. ನಿನ್ನೆ ಒಂದು ಕೆ.ಜಿ. ಬೆಳ್ಳಿಗೆ 63,000ರೂ.ಇತ್ತು. ಆದ್ರೆ ಇಂದು 62,2000ರೂ. ಆಗಿದೆ. 

ಮುಂಬೈನಲ್ಲಿ ಎಷ್ಟಿದೆ ದರ?
ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 46,940ರೂ.ಇದ್ದು,ಇಂದು 46,950ರೂ.ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ. ಏರಿಕೆಯಾಗಿದೆ. ನಿನ್ನೆ47, 940 ರೂ. ಇತ್ತು,ಇಂದು 47, 950 ರೂ.ಇದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 63,200 ರೂ. ಇತ್ತು.ಆದ್ರೆ ಇಂದು 62,200ರೂ. ಆಗಿದೆ. ಅಂದ್ರೆ ನಿನ್ನೆಗಿಂತ ಇಂದು 900 ರೂ. ಇಳಿಕೆಯಾಗಿದೆ.

Aadhar card update: ಆನ್‌ಲೈನ್‌ನಲ್ಲಿ ಫೋಟೋ, ವಿಳಾಸ, ಮೊಬೈಲ್‌ ಸಂಖ್ಯೆ ಬದಲಾಯಿಸೋದು ಹೇಗೆ?

ಚೆನ್ನೈಯಲ್ಲಿ ದರ ಹೀಗಿದೆ?
ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,240ರೂ. ಇದೆ. ನಿನ್ನೆ 45,420ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 180ರೂ.ಇಳಿಕೆಯಾಗಿದೆ.  24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 210ರೂ. ಇಳಿಕೆಯಾಗಿದೆ.. ನಿನ್ನೆ 49,560 ರೂ.ಇತ್ತು,ಇಂದು 49,350 ರೂ. ಆಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 67,900 ರೂ. ಇತ್ತು. ಆದ್ರೆ ಇಂದು 67,200ರೂ. ಆಗಿದೆ.ಅಂದ್ರೆ 700ರೂ.ಇಳಿಕೆಯಾಗಿದೆ.

Follow Us:
Download App:
  • android
  • ios