Asianet Suvarna News Asianet Suvarna News

Aadhar card update: ಆನ್‌ಲೈನ್‌ನಲ್ಲಿ ಫೋಟೋ, ವಿಳಾಸ, ಮೊಬೈಲ್‌ ಸಂಖ್ಯೆ ಬದಲಾಯಿಸೋದು ಹೇಗೆ?

ಆಧಾರ್‌ ಕಾರ್ಡ್‌ನಲ್ಲಿ ಫೋಟೋ(Photo), ವಿಳಾಸ (Address) ಹಾಗೂ ಮೊಬೈಲ್‌ ಸಂಖ್ಯೆ (Mobile number)ಬದಲಾಯಿಸಲು ಆಧಾರ್‌ ನೋಂದಣಿ ಅಥವಾ ಸೇವಾ ಕೇಂದ್ರಗಳಿಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ತಿದ್ದುಪಡಿ ಮಾಡಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ.

Steps to change photo address phone number in Aadhaar card online anu
Author
Bangalore, First Published Nov 26, 2021, 5:20 PM IST

ಭಾರತದಲ್ಲಿಆಧಾರ್‌ ಕಾರ್ಡ್‌ ಅತ್ಯಂತ ಪ್ರಮುಖ ಗುರುತು ಹಾಗೂ ವಿಳಾಸ ದೃಢೀಕರಣ ದಾಖಲೆಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIಆಂI) 12 ಸಂಖ್ಯೆಗಳ ಆಧಾರ್‌ ಕಾರ್ಡ್‌ ವಿತರಣೆಯ ಜವಾಬ್ದಾರಿ ಹೊತ್ತಿದೆ. ಇನ್ಯುರೆನ್ಸ್‌ ಪಾಲಿಸಿಗಳು, ಬ್ಯಾಂಕ್‌ ಖಾತೆಗಳು, ವಾಹನಗಳು ಹಾಗೂ ಇತರ ಅನೇಕ ಸೇವೆಗಳಿಗೆ ಇಂದು ಆಧಾರ್‌ ಲಿಂಕ್‌ ಮಾಡೋದು ಕಡ್ಡಾಯ. ಹೀಗಾಗಿ ಸರ್ಕಾರಕ್ಕೆ ಸಂಬಂಧಿಸಿದ ಯೋಜನೆಗಳು ಹಾಗೂ ಹಣಕಾಸು ಸೇವೆಗಳಿಗೆ ಆಧಾರ್‌ ಬೇಕೇಬೇಕು. ಇದ್ರಲ್ಲಿ ವ್ಯಕ್ತಿಯ ಹೆಸರು, ಲಿಂಗ, ಜನ್ಮದಿನಾಂಕ, ಫೋಟೊ ಹಾಗೂ ವಿಳಾಸದ ಮಾಹಿತಿಯಿರುತ್ತದೆ. UIDAI ವೆಬ್‌ಸೈಟ್‌ಗೆ ಭೇಟಿ ನೀಡಿ ನೀವು ನಿಮ್ಮ ಆಧಾರ್‌ ಕಾರ್ಡ್‌ ಮಾಹಿತಿಗಳನ್ನು ಪರಿಶೀಲಿಸೋ ಜೊತೆ ತಿದ್ದುಪಡಿ ಕೂಡ ಮಾಡಬಹುದು. 

ತಿದ್ದುಪಡಿ ಮಾಡೋದು ಎಲ್ಲಿ?
uidai.gov.in ಹಾಗೂ  e-Aadhaar.uidai.gov.in. ವೆಬ್‌ಸೈಟ್‌ಗಳಲ್ಲಿನೀವು ಆಧಾರ್‌ ಮಾಹಿತಿಗಳನ್ನು ಪರಿಶೀಲಿಸಬಹುದು. ಕಚೇರಿ, ಹೋಟೆಲ್‌ ಹೀಗೆ ಪ್ರತಿ ಸ್ಥಳದಲ್ಲೂ ಇಂದು ಆಧಾರ್‌ ಕಾರ್ಡ್‌ ಕೇಳಿಯೇ ಕೇಳುತ್ತಾರೆ. ಹೀಗಾಗಿ ನಿಮ್ಮ ಅಧಾರ್‌ ಕಾರ್ಡ್‌ನಲ್ಲಿ ಎಲ್ಲ ಮಾಹಿತಿಗಳು ಸರಿಯಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸೋ ಜೊತೆ ಮಾಹಿತಿ ಸೇರಿಸೋ ಹಾಗೂ ತಿದ್ದುಪಡಿ ಮಾಡೋ ಕೆಲಸವನ್ನು ಕೂಡ ಮಾಡಬೇಕು. UIDAI ವೆಬ್‌ಸೈಟ್‌ನಲ್ಲಿ ಆಧಾರ್‌ ಕಾರ್ಡ್‌ನಲ್ಲಿ ಹೆಸರು, ಮೊಬೈಲ್‌ ಸಂಖ್ಯೆ ಹಾಗೂ ವಿಳಾಸ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ. ಇಂಟರ್ನೆಟ್‌ ಅಥವಾ ವೆಬ್‌ಸೈಟ್‌ ಬಳಕೆ ಗೊತ್ತಿಲ್ಲದವರು ಆಧಾರ್‌ ಕಾರ್ಡ್‌ ಹೊಂದಿರೋರು ಸಮೀಪದ ಆಧಾರ್‌ ನೋಂದಣಿ ಕೇಂದ್ರ ಅಥವಾ ಆಧಾರ್‌ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಕಾರ್ಡ್‌ನಲ್ಲಿರೋ ಮಾಹಿತಿಗಳನ್ನು ಬದಲಾಯಿಸಬಹುದು.

ಹಾಲಿನ ಪ್ಯಾಕೆಟ್ ಮೇಲೆ ಮಿಲ್ಕ್ ಮ್ಯಾನ್ ಆಫ್ ಇಂಡಿಯಾಗೆ ನಂದಿನಿ ನಮನ

ವೆಬ್‌ಸೈಟ್‌ನಲ್ಲಿ ಫೋಟೋ ಅಪ್ಡೇಟ್‌ ಮಾಡೋದು ಹೇಗೆ
UIDAI ವೆಬ್‌ಸೈಟ್‌ನಲ್ಲಿ ಆಧಾರ್‌ ಕಾರ್ಡ್‌ನಲ್ಲಿರೋ ಫೋಟೋ ಅಪ್ಡೇಟ್‌ ಮಾಡಲು ಅಥವಾ ಬದಲಾಯಿಸಲು ಕೆಲವು ಹಂತಗಳನ್ನು ಅನುಸರಿಸಬೇಕು. ಆ ಹಂತಗಳ ಮಾಹಿತಿ ಈ ಕೆಳಗಿನಂತಿದೆ.
ಹಂತ 1: ಮೊದಲಿಗೆ ನೀವು UIDAIಅಧಿಕೃತ ವೆಬ್‌ಸೈಟ್‌ನಿಂದ ಆಧಾರ್‌ ನೋಂದಣಿ (enrollment) ಅರ್ಜಿಯನ್ನು ಡೌನ್ಲೋಡ್‌ ಮಾಡಬೇಕು. 
ಹಂತ 2: ಅರ್ಜಿಯನ್ನು ಕೇಳಿರೋ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು.
ಹಂತ 3: ಈ ಅರ್ಜಿಯನ್ನು ನೀವು ಆಧಾರ್‌ ನೋಂದಣಿ ಕೇಂದ್ರ ಅಥವಾ ಆಧಾರ್‌ ಸೇವಾ ಕೇಂದ್ರದಲ್ಲಿರೋ ಸಿಬ್ಬಂದಿಗೆ ನೀಡಿದರೆ ಅವರು ಬಯೋಮೆಟ್ರಿಕ್‌ ಪರಿಶೀಲನೆ ಮೂಲಕ ಅರ್ಜಿಯಲ್ಲಿ ಭರ್ತಿ ಮಾಡಿರೋ ಮಾಹಿತಿಗಳನ್ನು ದೃಢೀಕರಿಸುತ್ತಾರೆ. 
ಹಂತ 4: ಆಧಾರ್‌ ಸೇವಾ ಕೇಂದ್ರ ಅಥವಾ ನೋಂದಣಿ ಕೇಂದ್ರದ ಸಿಬ್ಬಂದಿ ನಿಮ್ಮ ಫೋಟೋ ತೆಗೆಯುತ್ತಾರೆ. 
ಹಂತ 5: ಆ ಬಳಿಕ ನೀವು ಫೋಟೋ ಬದಲಾಯಿಸಿದ್ದಕ್ಕೆ 25ರೂ. + GST ಶುಲ್ಕ ಪಾವತಿಸಬೇಕು.
ಹಂತ 6: ಸೇವಾ ಕೇಂದ್ರದ ಸಿಬ್ಬಂದಿ ನಿಮಗೆ ಸ್ವೀಕೃತಿ ಚೀಟಿ ನೀಡುತ್ತಾರೆ. ಅದ್ರಲ್ಲಿ ಅಪ್ಡೇಟ್‌ ಮಾಡಲು ಕೋರಿದ ಮನವಿ ಸಂಖ್ಯೆಯೂ(URN) ಇರುತ್ತದೆ. 
ಹಂತ 7: ಕೊನೆಯಲ್ಲಿ ನೀವು URN ಬಳಸಿಕೊಂಡು UIDAI ವೆಬ್‌ಸೈಟ್‌ನಲ್ಲಿ ನೀವು ಆಧಾರ್‌ ಬದಲಾವಣೆಗೆ ನೀಡಿದ ಮನವಿ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಬಹುದು.

Mobile ಸಂಖ್ಯೆ ಅಪ್ಡೇಟ್‌ ಮಾಡೋದು ಹೇಗೆ
ಹಂತ 1: Ask.uidai.gov.in ಎಂಬ UIDAIಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. 
ಹಂತ 2: ನೀವು ಅಪ್ಡೇಟ್‌ ಮಾಡಲು ಬಯಸಿದ ಮೊಬೈಲ್‌ ಸಂಖ್ಯೆ ಹಾಕಿ.
ಹಂತ 3:  ಆ ಬಳಿಕ captcha code ಹಾಕಿ.
ಹಂತ 4:  ನಂತರ Send OTP ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ಆ ಬಳಿಕ ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನು ನೋಂದಾಯಿಸಿ.
ಹಂತ 5: submit ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.
ಹಂತ 6: ಈಗ ನಿಮಗೆ ‘Online Aadhaar Services’ಎಂಬ ಮೆನು ಕಾಣಿಸುತ್ತದೆ. ಅದ್ರಲ್ಲಿ ಮೊಬೈಲ್‌ ಸಂಖ್ಯೆ ಸೇರಿದಂತೆ ಹೆಸರು, ವಿಳಾಸ, ಲಿಂಗ, ಇ-ಮೇಲ್‌ ಐಡಿ ಮೊದಲಾದ ಆಯ್ಕೆಗಳು ಕಾಣಿಸುತ್ತವೆ.
ಹಂತ 7: ಮೊಬೈಲ್‌ ಸಂಖ್ಯೆ ಆಯ್ಕೆ ಮಾಡಿ .
ಹಂತ 8: ಎಲ್ಲ ಪೂರಕ ಮಾಹಿತಿಗಳನ್ನು ಭರ್ತಿ ಮಾಡಿ. 
ಹಂತ 9: ಈಗ ‘What do you want to update’ಎಂಬ ಆಯ್ಕೆಯನ್ನು ಆರಿಸಿ.
ಹಂತ 10: ಹೊಸ ಪುಟ ಕಾಣಿಸುತ್ತದೆ. ಅದ್ರಲ್ಲಿ ನೀವು ಕ್ಯಾಪ್ಚಾ (captcha) ಹಾಕಬೇಕು.
ಹಂತ  11: ನಿಮ್ಮ ಮೊಬೈಲ್‌ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ. ಆ ಒಟಿಪಿಯನ್ನು ದಾಖಲಿಸಿ ‘Save and Proceed’ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

ಎಲ್‌ ಸಾಲ್ವಡೋರ್‌, ಇದು ಜಗತ್ತಿನ ಮೊದಲ ಬಿಟ್‌ ಕಾಯಿನ್‌ ಸಿಟಿ!

ವಿಳಾಸ ಅಪ್ಡೇಟ್‌ ಮಾಡೋದು ಹೇಗೆ
ಹಂತ 1:https://uidai.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2:‘Update Aadhaar’ಸೆಕ್ಷನ್‌ ಆಯ್ಕೆ ಮಾಡಿ.
ಹಂತ 3: ನಿಮಗೆ ವಿಳಾಸ ಬದಲಾಯಿಸಬೇಕಿದ್ರೆ ‘Update Address in Your Aadhaar’ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.
ಹಂತ 4: ಆ ಬಳಿಕ ಹೊಸ ಪುಟವೊಂದು ತೆರೆದುಕೊಳ್ಳುತ್ತದೆ.
ಹಂತ 5:ಕೆಳಭಾಗದಲ್ಲಿರೋ ಮೆನುವಿನಿಂದ ‘Proceed to Update Aadhaar’ಆಯ್ಕೆ ಮಾಡಿ.
ಹಂತ 6: ಇಲ್ಲಿ ನೀವು ವಿಳಾಸವನ್ನು ತಕ್ಷಣ ಬದಲಾಯಿಸಬಹುದು. 

Follow Us:
Download App:
  • android
  • ios