ನಮ್ಮ ಖಾತೆಯಲ್ಲಿ ಹಣವಿಲ್ಲವೆಂದ್ರೆ ಎಟಿಎಂನಿಂದ ಹಣ ತೆಗೆಯೋಕೆ ಬರೋದಿಲ್ಲ. ಆದ್ರೆ ಆಸ್ಟ್ರೇಲಿಯಾ ವ್ಯಕ್ತಿ ಲೈಫ್ ನಲ್ಲಿ ಮ್ಯಾಜಿಕ್ ನಡೆದಿದೆ. ಖಾತೆಯಲ್ಲಿ ಹಣವಿಲ್ಲದೆ ಹೋದ್ರೂ ಕೋಟ್ಯಾಂತರ ರೂಪಾಯಿ ವಿತ್ ಡ್ರಾ ಮಾಡಿದ ಭೂಪ ಕೊನೆಯಲ್ಲಿ ಮಾಡಿದ ಕೆಲಸ ಮೆಚ್ಚುವಂತಿದೆ.
ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಆರಂಭವಾದಾಗಿನಿಂದ ಒಬ್ಬರ ಖಾತೆಯಿಂದ ಇನ್ನೊಬ್ಬರ ಖಾತೆಗೆ ಹಣವನ್ನು ವರ್ಗಾಯಿಸುವುದು ಅತ್ಯಂತ ಸುಲಭವಾಗಿದೆ. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಖಾತೆಗೆ ಹಣ ಸೇರುತ್ತದೆ. ಇಂತಹ ಬ್ಯಾಂಕಿಂಗ್ ವ್ಯವಸ್ಥೆಗಳು ಗ್ರಾಹಕರಿಗೆ ಅನೇಕ ರೀತಿಯ ಹಣಕಾಸಿನ ವಹಿವಾಟುಗಳನ್ನು ನಡೆಸಲು ಅನುಕೂಲ ಮಾಡಿಕೊಡುತ್ತದೆ.
ಅನುಕೂಲಗಳು ಇದ್ದ ಕಡೆ ಅನಾನುಕೂಲಗಳೂ ಇರ್ತವೆ ಅನ್ನೋ ಹಾಗೆ ಇಂಟರ್ನೆಟ್ (Internet) ಬ್ಯಾಕಿಂಗ್ ನಲ್ಲೂ ಕೂಡ ಕೆಲವೊಮ್ಮೆ ಮೋಸ ವಂಚನೆಗಳು ನಡೆಯುತ್ತವೆ. ಸೈಬರ್ (Cyber) ಕಳ್ಳರು ಅನೇಕ ರೀತಿಯ ಸ್ಕೀಮ್ ಗಳನ್ನು ಮಾಡುವ ಮೂಲಕ ಆನ್ ಲೈನ್ ದರೋಡೆ (Robbery) ಗೆ ಇಳಿದಿದ್ದಾರೆ. ರಾತ್ರೋ ರಾತ್ರಿ ಒಬ್ಬ ವ್ಯಕ್ತಿಯ ಖಾತೆಯಲ್ಲಿರುವ ಹಣ ಬೇರೆಯವರ ಖಾತೆಯನ್ನು ಸೇರಬಹುದು. ಅಂತಹ ಎಷ್ಟೋ ಪ್ರಕರಣಗಳು ಪ್ರಪಂಚದಾದ್ಯಂತ ನಡೆಯುತ್ತಲೇ ಇದೆ. ಹಣ ವರ್ಗಾವಣೆಯ ಸಮಯದಲ್ಲಿ ಅಥವಾ ಕೆಲವು ತಾಂತ್ರಿಕ ಸಮಸ್ಯೆಗಳಿಂದಲೂ ಕೂಡ ಹಣ ಬೇರೆಯವರ ಖಾತೆಯನ್ನು ಸೇರುತ್ತದೆ. ಕೆಲವೊಮ್ಮೆ ಸರಿಯಾದ ಸಮಯಕ್ಕೆ ವಿಚಾರಣೆ ಮಾಡಿದ ನಂತರ ಹಣ ಮತ್ತೆ ನಮ್ಮ ಕೈಗೆ ಸಿಗಬಹುದು ಅಥವಾ ಹಣ ನಮ್ಮ ಕೈ ತಪ್ಪಿ ಹೋಗಲೂಬಹುದು. ಅಂತಹುದೇ ಒಂದು ಪ್ರಕರಣ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ ಪೋರ್ಟ್ ಹೊಂದಿರುವ ರಾಷ್ಟ್ರ ಸಿಂಗಾಪುರ; ಭಾರತದ ಸ್ಥಾನವೆಷ್ಟು?
ಖಾತೆಯಲ್ಲಿ ಹಣ ಇಲ್ಲದೇ ಇದ್ರೂ ಕೋಟಿ ಕೋಟಿ ಬಾಚಿದ : ಆಸ್ಟ್ರೇಲಿಯಾದ ನಿವಾಸಿಯೊಬ್ಬ ತನ್ನ ಖಾತೆಯಲ್ಲಿ ಬಹಳ ಕಡಿಮೆ ಹಣವಿದ್ದರೂ ಎಟಿಎಮ್ ನಿಂದ ಹಣ ತೆಗೆಯುತ್ತಲೇ ಇದ್ದ. ತನ್ನ ಖಾತೆಯಲ್ಲಿ 10000ಕ್ಕಿಂತಲೂ ಕಡಿಮೆ ಹಣವನ್ನು ಹೊಂದಿದ್ದ ಆತ ಐದು ತಿಂಗಳಲ್ಲಿ ಸುಮಾರು 9 ಕೋಟಿ ರೂಪಾಯಿಗಳನ್ನು ತೆಗೆದು ಮೋಜು ಮಾಡಿರುವುದು ಬೆಳಕಿಗೆ ಬಂದಿದೆ. ಆಸ್ಟ್ರೇಲಿಯಾ ವಂಗರಟ್ಟಾ ನಿವಾಸಿಯಾಗಿರುವ ಡ್ಯಾನ್ ಎಂಬ ಆರೋಪಿ ಈಗ ಪೋಲೀಸರ ಅತಿಥಿಯಾಗಿದ್ದಾನೆ. ಪೋಲೀಸರಿಂದ ಬಂಧಿಯಾದ ನಂತರ ಈತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅವನು, ತಾನು 2011 ರಲ್ಲಿ ಒಂದು ಪಾರ್ಟಿಗೆ ಹೋಗಿದ್ದೆ. ನನ್ನ ಎಟಿಎಂ ನಿಂದ 10 ಸಾವಿರ ಆಸ್ಟ್ರೇಲಿಯನ್ ಡಾಲರ್ ತೆಗೆಯಲು ಪ್ರಯತ್ನಿಸಿದೆ. ಆದರೆ ನನ್ನ ಖಾತೆಯಲ್ಲಿ ಬ್ಯಾಲೆನ್ಸ್ ಕಡಿಮೆ ಇರುವ ಕಾರಣ ಹಣ ಸಿಗಲಿಲ್ಲ. ನಂತರ ನಾನು ಕ್ರೆಡಿಟ್ ಅಕೌಂಟ್ ನಿಂದ ಹಣವನ್ನು ವರ್ಗಾಯಿಸಲು ಪ್ರಯತ್ನಿಸಿದರೂ ಹಣ ಸಿಗಲಿಲ್ಲ. ಮೂರ್ನಾಲ್ಕು ಬಾರಿ ಪ್ರಯತ್ನಮಾಡಿದ ನಂತರ ಅಕೌಂಟ್ ನಿಂದ ಹಣ ಬಂತು ಎಂದು ಹೇಳುತ್ತಾನೆ.
ಡ್ಯಾನ ಎನ್ನುವ ಈತ ಎಷ್ಟು ಬಾರಿ ಹಣ ತೆಗೆದರೂ ಅವನ ಖಾತೆಯಿಂದ ಒಂದು ಪೈಸೆಯೂ ಕಡಿತವಾಗದೇ ಇರುವುದು ಆಶ್ಚರ್ಯದ ಸಂಗತಿಯಾಗಿದೆ. ಈತ ಹಣ ಪಡೆದರೂ ವಹಿವಾಟು ರದ್ದಾಗಿ ತೋರಿಸುತ್ತಿತ್ತು. ಹಾಗಾಗಿ ಡ್ಯಾನ್ ಖಾತೆಯಿಂದ ಹಣ ಬರುತ್ತಲೇ ಇತ್ತು, ಇವನು ಹಣವನ್ನು ತೆಗೆಯುತ್ತಲೇ ಇದ್ದ. ಐದಾರು ತಿಂಗಳಲ್ಲಿ ಈತ ನೂರಾರು ಬಾರಿ ಎಟಿಎಂ ನಿಂದ ಹಣ ಪಡೆದರೂ ಎಟಿಎಂ ತಾಂತ್ರಿಕ ದೋಷದ ಕಾರಣ ಅದು ಯಾರ ಗಮನಕ್ಕೂ ಬರಲೇ ಇಲ್ಲ. ಡ್ಯಾಮ್ ರಾತ್ರಿ 12 ಗಂಟೆಯಿಂದ 2 ಗಂಟೆಯ ಸಮಯದಲ್ಲಿ ಹಣವನ್ನು ಪಡೆಯುತ್ತಿದ್ದ.
ಜಾರಿಯಲ್ಲಿರದ ಪ್ಯಾನ್ ನಿಷ್ಕ್ರಿಯಗೊಂಡಿಲ್ಲ, ಐಟಿಆರ್ ಸಲ್ಲಿಕೆ ಮಾಡ್ಬಹುದು:ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ
ಬ್ಯಾಂಕ್ ನಲ್ಲಿ ವಿಚಾರಿಸಿದಾಗ್ಲೂ ಸಿಕ್ತು ಇಂಥ ಉತ್ತರ : ಡ್ಯಾಮ್ ಒಮ್ಮೆ ತನ್ನ ಮೇಲೆ ಆರೋಪ ಬರಬಹುದೆಂಬ ಭಯದಿಂದ ಬ್ಯಾಂಕಿಗೆ ಕೂಡ ಕರೆ ಮಾಡಿದ. ಆದರೆ ಬ್ಯಾಂಕ್ ನವರು ಕೂಡ ಈತನಿಗೆ ಖಾತೆಯಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರು. ಆನಂತರ ಡ್ಯಾಮ್ ಹಣವನ್ನು ತನ್ನ ಪರ್ಸನಲ್ ಕೆಲಸಗಳಿಗೆ ಬಳಸಿಕೊಳ್ಳಲು ಆರಂಭಿಸಿದ. ಕೊನೆಗೆ ಡ್ಯಾಮ್ ನಿಗೆ ತಪ್ಪಿತಸ್ಥ ಭಾವನೆ ಬಂದು ಆತನೇ ಪೋಲೀಸರ ಎದುರು ತಪ್ಪು ಒಪ್ಪಿಕೊಂಡು ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.
