Asianet Suvarna News Asianet Suvarna News

nita ambani : ಬಿಲ್‌ ಕ್ಲಿಂಟನ್ ಜೊತೆ ಡೇಟ್‌ ಗೆ ಹೋಗ್ತೇನೆ ಎಂದ ನೀತಾ ಅಂಬಾನಿ…!

ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಸದಾ ಸುದ್ದಿಯಲ್ಲಿರ್ತಾರೆ. ಅವರ ಸ್ಟೈಲ್, ಕೆಲಸ, ಬ್ಯುಸಿನೆಸ್ ಎಲ್ಲದರ ಮೇಲೆ ಜನರ ಕಣ್ಣಿರುತ್ತೆ. ಈಗ ನೀತಾ ಅಂಬಾನಿ ಡೇಟ್ ವಿಷ್ಯ ಮತ್ತೆ ಚರ್ಚೆಗೆ ಬಂದಿದೆ.
 

nita ambani wanted to date bill clinton roo
Author
First Published Aug 21, 2024, 11:34 AM IST | Last Updated Aug 21, 2024, 11:34 AM IST

ಭಾರತದ ಅತ್ಯಂತ ಶ್ರೀಮಂತ ಬ್ಯುಸಿನೆಸ್ ಮೆನ್ ಮುಖೇಶ್ ಅಂಬಾನಿ (India richest business men Mukhesh Ambani ) ಗಿಂತ ಪತ್ನಿ ನೀತಾ ಅಂಬಾನಿ (Nita Ambani) ಹೆಚ್ಚು ಸುದ್ದಿಯಲ್ಲಿರ್ತಾರೆ. ನೀತಾ ಅಂಬಾನಿ ಹೋದಲ್ಲೆಲ್ಲ ಪಾಪರಾಜಿಗಳು ಹಿಂದೆ ಬರ್ತಾರೆ. ನೀತಾ, ಎಲ್ಲ ಕ್ಷೇತ್ರದಲ್ಲೂ ಮುಂದಿದ್ದಾರೆ. ಕೆಲವೇ ದಿನಗಳ ಹಿಂದೆ ಕಿರಿ ಮಗನ ಮದುವೆ ಮುಗಿಸಿರುವ ನೀತಾ ಅಂಬಾನಿ, ಪ್ಯಾರಿಸ್ ಒಲಂಪಿಕ್ಸ್ (Paris Olympics) ನಲ್ಲಿ ಮಿಂಚಿದ್ದರು. ಈಗ ನೀತಾ ಅಂಬಾನಿ ಹಾಗೂ ಮುಖೇಶ್ ಅಂಬಾನಿ ಹಳೆ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ನೀತಾ ಅಂಬಾನಿ ಮುಖೇಶ್ ಬಿಟ್ರೆ ಮತ್ತ್ಯಾರ ಜೊತೆ ಡೇಟ್ ಗೆ ಹೋಗಲು ಇಷ್ಟಪಡ್ತೇನೆ ಎಂಬುದನ್ನು ಹೇಳಿದ್ದಾರೆ. 

ಯಾರ ಜೊತೆ ಡೇಟ್ ಗೆ ಹೋಗಲು ಇಷ್ಟಪಡ್ತಾರೆ ನೀತಾ? : ಸಿಮಿ ಗರೆವಾಲ್ ಅವರ ಟಾಕ್ ಶೋ ರೆಂಡೆಜ್ವಸ್ ವಿತ್ ಸಿಮಿ ಗರೆವಾಲ್ದಲ್ಲಿ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಪಾಲ್ಗೊಂಡಿದ್ದರು. ಈ ವೇಳೆ, ಮುಖೇಶ್ ಬಿಟ್ರೆ ನೀವು ಯಾರ ಜೊತೆ ಡೇಟ್ ಗೆ ಹೋಗಲು ಇಷ್ಟಪಡ್ತೀರಿ ಎಂದು ಸಿಮಿ ಗರೆವಾಲ್, ನೀತಾ ಅಂಬಾನಿಯವರನ್ನು ಕೇಳಿದ್ದರು. ಅದಕ್ಕೆ ನೀತಾ ಅಂಬಾನಿ, ಬಿಲ್ ಕ್ಲಿಂಟನ್ ಹೆಸರನ್ನು ಹೇಳಿದ್ದರು. 

Mukesh Ambani Sister : ಬ್ಲಡ್ ನಲ್ಲೇ ಇದೆ ಬ್ಯುಸಿನೆಸ್ - ಮುಖೇಶ್ ಅಂಬಾನಿ ಸಹೋದರಿ ನೀನಾ ಕೊಠಾರಿ ಯಾರಿಗೂ ಕಮ್ಮಿ

ನಿಮಗೆಲ್ಲ ತಿಳಿದಿರುವಂತೆ ಬಿಲ್ ಕ್ಲಿಂಟನ್ ಅಮೆರಿಕಾದ 42ನೇ ರಾಷ್ಟ್ರಪತಿಯಾಗಿದ್ದರು. ನೀತಾ ಬಾಯಿಂದ ಬಿಲ್ ಕ್ಲಿಂಟನ್ ಹೆಸರು ಬರ್ತಿದ್ದಂತೆ ಮುಖೇಶ್ ಅಂಬಾನಿ ರಿಯಾಕ್ಷನ್ ಭಿನ್ನವಾಗಿತ್ತು. ಅವರು ನೀತಾ, ಕ್ಲಿಂಟನ್ ಜೊತೆ ಡೇಟ್ ಗೆ ಹೋದ್ರೆ ನಾನು ನಿಮ್ಮ ಜೊತೆ ಬರ್ತೇನೆ ಎಂದು ಸಿಮಿ ಗರೆವಾಲ್ ಗೆ ಮುಖೇಶ್ ಅಂಬಾನಿ ಹೇಳಿದ್ದರು. ಅದಕ್ಕೆ ಸಿಮಿ ಗರೆವಾಲ್, ನಾನು ಇದಕ್ಕೆ ಓಕೆ ಎನ್ನುತ್ತೇನೆ ಎಂದಿದ್ದರು. 

ನೀತಾ – ಮುಖೇಶ್ ಅಂಬಾನಿ ಲವ್ ಸ್ಟೋರಿ : ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಪರಿಚಯವಾಗಿದ್ದು ಮುಖೇಶ್ ತಂದೆ ಧೀರೂಬಾಭಾಯಿ ಅಂಬಾನಿ ಮೂಲಕ. ನೀತಾ ಡಾನ್ಸ್ ನೋಡಿ ಇಂಪ್ರೆಸ್ ಆಗಿದ್ದ ಧೀರೂಬಾಯಿ ಅಂಬಾನಿ, ನೀತಾಗೆ ಕರೆ ಮಾಡಿದ್ದರು. ಆದ್ರೆ ಇದು ಫ್ರ್ಯಾಂಕ್ ಕಾಲ್ ಅಂದ್ಕೊಂಡಿದ್ದ ನೀತಾ ಅದನ್ನು ಕಟ್ ಮಾಡಿದ್ದರು. ನಂತ್ರ ನೀತಾ ಪತಿ ಕಾಲ್ ತೆಗೆದುಕೊಂಡಿದ್ದಲ್ಲದೆ ಮಾತನಾಡ್ತಿರೋದು ಧೀರೂಭಾಯಿ ಅಂಬಾನಿ ಎಂದಿದ್ದರು. ಧೀರೂಭಾಯಿ ತಮ್ಮ ಆಫೀಸ್ ಗೆ ನೀತಾ ಅವರನ್ನು ಕರೆದಿದ್ದರು. ಜಾಬ್ ನೀಡ್ತಾರೆ ಅಂದ್ಕೊಂಡೆ ನೀತಾ ಆಫೀಸ್ ಗೆ ಹೋಗಿದ್ದರು. ಅಲ್ಲಿ ಮುಖೇಶ್ ಅಂಬಾನಿ ಭೇಟಿ ಮಾಡಿದ್ದ ನೀತಾ ಮಾತುಕತೆ ನಡೆಸಿದ್ದರು. ಮುಖೇಶ್ ಮಾತ್ರ, ಮೊದಲ ಭೇಟಿಯಲ್ಲಿಯೇ ನೀತಾ ತಮ್ಮ ಜೀವನಸಂಗಾತಿ ಅಂತ ಫಿಕ್ಸ್ ಆಗಿದ್ದರು. ಸಂದರ್ಶನವೊಂದರಲ್ಲಿ ಮುಖೇಶ್ ಅಂಬಾನಿ ಈ ವಿಷ್ಯವನ್ನು ಹೇಳಿದ್ದಾರೆ. ನೀತಾ ನೋಡ್ತಿದ್ದಂತೆ ಇವರೇ ನನ್ನ ಜೀವನಸಂಗಾತಿ ಎಂದು ನಾನು ನಿರ್ಧರಿಸಿದ್ದೆ. ಅವರ ಸ್ವಭಾವ ನನ್ನನ್ನು ಸೆಳೆದಿತ್ತು ಎಂದು ಮುಖೇಶ್ ಹೇಳಿದ್ದರು. 

ಅನಂತ್ ಅಂಬಾನಿ ಮದ್ವೇಲಿ ಸಿಕ್ಕಿತ್ತು ಸೂಚನೆ, ರಕ್ಷಾಬಂಧನಕ್ಕೆ ಇಶಾ ಭರ್ಜರಿ ಡೀಲ್!

ಮದುವೆ ನಂತ್ರವೂ ಕೆಲಸ ಮಾಡ್ತೇನೆ ಎನ್ನುವ ಷರತ್ತಿನೊಂದಿಗೆ ನೀತಾ ಅಂಬಾನಿ 1985ರಲ್ಲಿ ಮುಖೇಶ್ ಅಂಬಾನಿ ಕೈ ಹಿಡಿದಿದ್ದರು. ನೀತಾ ಅಂಬಾನಿ ಹಾಗೂ ಮುಖೇಶ್ ಯಶಸ್ಸಿನ ತುತ್ತತುದಿಯಲ್ಲಿದ್ದಾರೆ. 2010ರಲ್ಲಿ ರಿಲಯನ್ಸ್ ಫೌಂಡೇಶನ್ ಶುರು ಮಾಡಿದರು. ನೀತಾ ಅಂಬಾನಿ, ಬೆಳಿಗ್ಗೆ ಕುಡಿಯುವ ನೀರಿನಿಂದ ಧರಿಸುವ ಬಟ್ಟೆ, ಆಭರಣಗಳ ಬೆಲೆ ಕೋಟಿಯಲ್ಲಿರುತ್ತದೆ. ತಿಂಗಳ ಹಿಂದಷ್ಟೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆಯನ್ನು ಕುಟುಂಬ ಅದ್ಧೂರಿಯಾಗಿ ಮಾಡಿದೆ. ಇಡೀ ಜಗತ್ತೇ ಅಂಬಾನಿ ಮಗನ ಮದುವೆಯ ಬಗ್ಗೆ ಈಗ್ಲೂ ಚರ್ಚೆ ನಡೆಸುತ್ತಿದೆ. 

Latest Videos
Follow Us:
Download App:
  • android
  • ios