ಅನಂತ್ ಅಂಬಾನಿ ಮದ್ವೇಲಿ ಸಿಕ್ಕಿತ್ತು ಸೂಚನೆ, ರಕ್ಷಾಬಂಧನಕ್ಕೆ ಇಶಾ ಭರ್ಜರಿ ಡೀಲ್!
ರಿಲಯನ್ಸ್ ರೀಟೇಲ್ ಮುಖ್ಯಸ್ಥೆ ಈಶಾ ಅಂಬಾನಿ ರಕ್ಷಾಬಂಧನದಂದು ಇಟಲಿಯ ಕಾಸ್ಮೆಟಿಕ್ ಬ್ರ್ಯಾಂಡ್ ಕಂಪನಿ ಕಿಕೊ ಮಿಲಾನೊ ಜೊತೆ 100 ಕೋಟಿ ರೂ. ಗೂ ಅಧಿಕ ಮೌಲ್ಯದ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದದ ನಂತರ ಕಿಕೊ ಮಿಲಾನೊ ಉತ್ಪನ್ನಗಳು ಭಾರತದಲ್ಲಿ ಅನೇಕ ದೇಶಿ ಮತ್ತು ವಿದೇಶಿ ಉತ್ಪನ್ನಗಳಿಗೆ ಪೈಪೋಟಿ ನೀಡಲಿವೆ.
ರಕ್ಷಾಬಂಧನದಂದು ಈಶಾ ಅಂಬಾನಿ ಡೀಲ್
ರಕ್ಷಾಬಂಧನದ ವೇಳೆ ಸಹೋದರ-ಸಹೋದರಿಯರಿಗೆ ಸಂಬಂಧಿಸಿದ ಸುದ್ದಿಗಳೇ ಹೆಚ್ಚು ಚರ್ಚೆಯಾಗುತ್ತವೆ. ಆದರೆ ಈಗ ಇಂದು ರಾಜಸ್ಥಾನದಲ್ಲಿ ಶೇಖಾವತಿ ಸೊಸೆ ಈಶಾ ಅಂಬಾನಿ ಬಗ್ಗೆಯೇ ಚರ್ಚೆ ನಡೆಯುತ್ತಿದೆ.
ಮುಕೇಶ್ ಅಂಬಾನಿ ಪುತ್ರಿ ಈಶಾ ಅಂಬಾನಿ
ಈಶಾ ಅಂಬಾನಿ ದೇಶದಲ್ಲಿ ಮಾತ್ರವಲ್ಲದೆ ವಿಶ್ವದ ಉನ್ನತ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಅವರ ಪುತ್ರಿ. ಅವರು ರಾಜಸ್ಥಾನದ ಜುಂಜುನು ಜಿಲ್ಲೆಯ ಪಿರಾಮಲ್ ಕುಟುಂಬದ ಸೊಸೆ.
ಇಟಲಿ ಕಾಸ್ಮೆಟಿಕ್ ಬ್ರ್ಯಾಂಡ್ ಕಂಪನಿ ಕಿಕೊ ಮಿಲಾನೊ ಜೊತೆ ಒಪ್ಪಂದ
ಈಶಾ ಅಂಬಾನಿ ರಿಲಯನ್ಸ್ ರೀಟೇಲ್ ಮುಖ್ಯಸ್ಥೆಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇದೀಗ ಈಶಾ ಇಟಲಿಯ ಕಾಸ್ಮೆಟಿಕ್ ಬ್ರ್ಯಾಂಡ್ ಕಿಕೊ ಮಿಲಾನೊ ಜೊತೆ ಹೊಸ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.
ಏನಿದು ಒಪ್ಪಂದ?
ಇಟಲಿಯ ಕಾಸ್ಮೆಟಿಕ್ ಬ್ರ್ಯಾಂಡ್ ಕಂಪನಿಯೊಂದಿಗೆ 100 ಕೋಟಿ ರೂ. ಗೂ ಅಧಿಕ ಮೌಲ್ಯದ ಒಪ್ಪಂದ ಮಾಡಿಕೊಂಡಿದ್ದು, ಈ ಫೇಮಸ್ ಕಾಸ್ಮೆಟಿಕ್ ಬ್ರ್ಯಾಂಡ್ ಭಾರತಕ್ಕೆ ಕಾಲಿಟ್ಟರೆ ಅನೇಕ ಸ್ವದೇಶಿ ಕಂಪನಿಗಳೊಂದಿಗೆ ಪ್ರಬಲ ಪೈಪೋಟಿ ನೀಡುವುದರಲ್ಲಿ ಅನುಮಾನವೇ ಇಲ್ಲ.
ಕಿಕೊ ಮಿಲಾನೊ ಉತ್ಪನ್ನ
ಈಶಾ ಅಂಬಾನಿ ಒಪ್ಪಂದ ಮಾಡಿಕೊಂಡಿರುವ ಇಟಲಿ ಕಂಪನಿ ಕಿಕೊ ಮಿಲಾನೊ 12 ಕ್ಕೂ ಹೆಚ್ಚು ಚರ್ಮದ ಆರೈಕೆ ಮತ್ತು ಇತರ ಸೌಂದರ್ಯ ಉತ್ಪನ್ನಗಳನ್ನು ತಯಾರಿಸುತ್ತದೆ.
ಮತ್ತೊಂದು ಡೀಲ್
ಈಶಾ ಅಂಬಾನಿ ಇಂಥಒಪ್ಪಂದ ಮಾಡಿಕೊಂಡಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅವರು ಅಂತಾರಾಷ್ಟ್ರೀಯ ಸೌಂದರ್ಯ ಬ್ರ್ಯಾಂಡ್ ಟಿಯೆರಾ ಜೊತೆಗೂ ಒಪ್ಪಂದವಿರಿಸಿಕೊಂಡಿದ್ದರು.
6 ನಗರಗಳಲ್ಲಿ ಬ್ರ್ಯಾಂಡ್ ಸ್ಟೋರಿ
ಮಾಧ್ಯಮ ವರದಿಗಳ ಪ್ರಕಾರ, ಈಶಾ ಅಂಬಾನಿ ವಿದೇಶಿ ಕಂಪನಿ ಕಿಕೊದ ಸುಮಾರು 6 ನಗರಗಳಲ್ಲಿ ಬ್ರ್ಯಾಂಡ್ ಸ್ಟೋರ್ಸ್ ಪ್ರಾರಂಭಿಸಲು ಯೋಚಿಸುತ್ತಿದ್ದಾರೆ.
ದೇಶದ ಹಲವು ನಗರಗಳಲ್ಲಿ ತೆರೆಯಲಿವೆ ಕಿಕೊ ಮಳಿಗೆಗಳು
ಈಶಾ ಅಂಬಾನಿ ಜೊತೆ ಒಪ್ಪಂದ ಮಾಡಿಕೊಂಡಿರುವ ಕಿಕೊ ಮಳಿಗೆಗಳು ದೇಶದ ಪ್ರಮುಖ ಮಹಾನಗರಗಳಾದ ದೆಹಲಿ, ಮುಂಬೈ, ಪುಣೆ, ಲಕ್ನೋ ಮುಂತಾದ ದೊಡ್ಡ ನಗರಗಳಲ್ಲಿ ತೆರೆಯಲಾಗುವುದು. ಇದರ ಅಗತ್ಯಕ್ಕೆ ತಕ್ಕಂತೆ ಕೆಲಸಗಳು ನಡೆಯುತ್ತಿವೆ.
ಅನಂತ್ ಮದ್ವೆಯಲ್ಲೇ ಸಿಕ್ಕಿತ್ತು ಸೂಚನೆ
ಇತ್ತೀಚೆಗೆ ಮುಕೇಶ್ ಅಂಬಾನಿ ಎರಡನೇ ಮಗ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮದುವೆ ಪೂರ್ವ ಹಾಗೂ ನಂತರದ ಸಮಾರಂಭಗಳಲ್ಲಿ ವಿಶ್ವದ ದಿಗ್ಗಜ ಉದ್ಯಮಿಗಳನ್ನೂ ಆಹ್ವಾನಿಸಲಾಗಿತ್ತು. ಆಗಲೇ ಇದು ಭವಿಷ್ಯದ ಬ್ಯುಸಿನೆಸ್ ವಿಸ್ತರಣೆ ಮುನ್ಸೂಚನೆ ಎಂದೇ ವಿಶ್ಲೇಷಿಸಲಾಗಿತ್ತು.