ಹಾರ್ವರ್ಡ್ ಇಂಡಿಯಾ ಸಮ್ಮೇಳನದಲ್ಲಿ ನೀತಾ ಅಂಬಾನಿ, ಬಾಲಿವುಡ್ ಪ್ರೀತಿ, ಅಮಿತಾಬ್ ಬಚ್ಚನ್ ಮೆಚ್ಚುಗೆ ಹಾಗೂ ರಣಬೀರ್ ಕಪೂರ್ ಜೊತೆ ಊಟದ ಆಸೆ ವ್ಯಕ್ತಪಡಿಸಿದರು. ಮಗ ಆಕಾಶ್, ರಣಬೀರ್ ಆತ್ಮೀಯತೆ ಉಲ್ಲೇಖಿಸಿದರು. ಉಪಾಸನಾ ಕೊನಿಡೇಲಾ ಭಾರತೀಯ ಆರೋಗ್ಯ ವ್ಯವಸ್ಥೆ ಕುರಿತು ಮಾತನಾಡಿದರು.
ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ ನೀತಾ ಅಂಬಾನಿ ಇತ್ತೀಚೆಗೆ ಹಾರ್ವರ್ಡ್ ಇಂಡಿಯಾ ಸಮ್ಮೇಳನ 2025 ರಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಸಂದರ್ಶನದಲ್ಲಿ ಭಾಗವಹಿಸಿದ್ದರು. ಪರೋಪಕಾರ, ಮಗ ಅನಂತ್ ಅಂಬಾನಿ ಅದ್ಧೂರಿ ವಿವಾಹ, ಅನಂತ್ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡುವುದರ ಜೊತೆಗೆ ಬಾಲಿವುಡ್‌ನ ಮೇಲಿನ ತಮ್ಮ ಆಳವಾದ ಪ್ರೀತಿಯನ್ನು ಸಹ ಬಹಿರಂಗಪಡಿಸಿದರು.
ರ್ಯಾಪಿಡ್ ಫೈರ್ ರೌಂಡ್ ನಲ್ಲಿ ನೀತಾ ಅವರನ್ನು ಹಾಲಿವುಡ್ ಅಥವಾ ಬಾಲಿವುಡ್ ನಡುವೆ ಯಾವುದನ್ನು ಆಯ್ಕೆ ಮಾಡುತ್ತೀರಿ ಎಂದು ಕೇಳಿದಾಗ ತಕ್ಷಣ ಬಾಲಿವುಡ್ ಅನ್ನು ಆರಿಸಿಕೊಂಡರು, ಜೊತೆಗೆ ಅಮಿತಾಬ್ ಬಚ್ಚನ್ ಅವರನ್ನು ತಮ್ಮ ಸಾರ್ವಕಾಲಿಕ ನೆಚ್ಚಿನ ನಟ ಎಂದು ಹೇಳಿದರು.
ನೀತಾ ಅಂಬಾನಿ ಹಾರ್ವಡ್ ಸಮ್ಮೇಳನ ಪ್ರಶಸ್ತಿ ಪಡೆದದ್ದಕ್ಕಿಂತ ಆಕೆ ಸೀರೆ ಬಗ್ಗೆ ಹೆಚ್ಚಾಯ್ತು ಚರ್ಚೆ!
ಆದರೆ ಯಾರೊಂದಿಗೆ ಊಟ ಮಾಡಲು ನೀವು ಇಷ್ಟಪಡುತ್ತೀರಿ - ರಣಬೀರ್ ಕಪೂರ್ ಅಥವಾ ಬಿಲ್ ಗೇಟ್ಸ್? ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ನಿಜಕ್ಕೂ ಆಶ್ಚರ್ಯಗೊಳಿಸಿತು. ಸ್ವಲ್ಪ ಹೊತ್ತು ಯೋಚಿಸಿ, ರಣಬೀರ್ ಕಪೂರ್ ಅವರನ್ನು ಆರಿಸಿಕೊಂಡರು. ರೆ ನನ್ನ ಮಗ ಆಕಾಶ್ ತುಂಬಾ ಸಂತೋಷಪಡುತ್ತಾನೆ. ಏಕೆಂದರೆ ಅವರಿಬ್ಬರೂ ಆತ್ಮೀಯ ಗೆಳೆಯರು ಎಂದು ಬಹಿರಂಗಪಡಿಸಿದರು. ರಣಬೀರ್ ಕಪೂರ್ ಮತ್ತು ರಣವೀರ್ ಸಿಂಗ್ ನಡುವೆ ಆಯ್ಕೆ ಮಾಡಲು ಕೇಳಿದಾಗ ರಣಬೀರ್ ಕಪೂರ್ ನನ್ನೇ ಆಯ್ಕೆ ಮಾಡಿಕೊಂಡರು.
ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದೆ. ವಿಶೇಷವಾಗಿ ರೆಡ್ಡಿಟ್‌ನಲ್ಲಿ ಬಳಕೆದಾರರು ಮಿಶ್ರ ಪ್ರತಿಕ್ರಿಯರ ನೀಡಿದ್ದಾರೆ. ಬಾಲಿವುಡ್‌ನ ಬಗ್ಗೆ ಭಾರತದ ಆಳವಾದ ಬೇರೂರಿರುವ ನೀತಾ ಅಂಬಾನಿಯ ಮೋಹವನ್ನು ಪ್ರತಿಬಿಂಬಿಸುತ್ತದೆ ಎಂದು ಕೆಲವರು ಬರೆದಿದ್ದಾರೆ. ಮತ್ತೆ ಕೆಲವರು ಬಾಲಿವುಡ್ ಎಂದರೆ ಆಕೆಗೆ ಗೀಳು ಎಂದಿದ್ದಾರೆ. ಭಾರತೀಯರು ಎಲ್ಲಕ್ಕಿಂತ ಹೆಚ್ಚಾಗಿ ಚಲನಚಿತ್ರ ತಾರೆಯರಿಗೆ ಎಷ್ಟು ಆದ್ಯತೆ ನೀಡುತ್ತಾರೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಮೋದಿ ಬೆಸ್ಟೋ, ಅಂಬಾನಿನೊ? ಏಕಾಏಕಿ ಎದುರಾದ ಪ್ರಶ್ನೆಗೆ ನೀತಾ ಅಂಬಾನಿ ಹೇಳಿದ್ದು ಕೇಳಿ ಎಲ್ಲರೂ ಶಾಕ್!
ಗೊತ್ತಿಲ್ಲದವರಿಗೆ ರಣಬೀರ್ ಕಪೂರ್ ಮತ್ತು ಆಕಾಶ್ ಅಂಬಾನಿ ಆತ್ಮೀಯ ಸ್ನೇಹಿತರು. ಆಲಿಯಾ ಭಟ್ ಜೊತೆ ರಣಬೀರ್ ಅವರ ವಿವಾಹದಲ್ಲಿ ಆಕಾಶ್ ವಿಶೇಷ ಅತಿಥಿಗಳಲ್ಲಿ ಒಬ್ಬರಾಗಿದ್ದರು. ಮತ್ತು ದಂಪತಿಗಳು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಉತ್ಸವಗಳಲ್ಲಿಯೂ ಪ್ರದರ್ಶನ ನೀಡಿದ್ದರು. ವಿಶೇಷ ಸಂದರ್ಭಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಇಬ್ಬರೂ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ.
ಇನ್ನು ನೀತಾ ಅಂಬಾನಿ ಮಾತ್ರವಲ್ಲದೆ, ಆರೋಗ್ಯ ಕ್ಷೇತ್ರದಲ್ಲಿ ಉದ್ಯಮಿಯಾಗಿರುವ, ಪರೋಪಕಾರಿ ಮತ್ತು ನಟ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೇಲಾ ಕೂಡ ಹಾರ್ವರ್ಡ್ ಇಂಡಿಯಾ ಬಿಸಿನೆಸ್ ಫೋರಂನಲ್ಲಿ ಭಾಗವಹಿಸಿ ಭಾರತೀಯ ಆರೋಗ್ಯ ವ್ಯವಸ್ಥೆಯಲ್ಲಿನ ಪ್ರಸ್ತುತ ಅಭ್ಯಾಸಗಳು ಮತ್ತು ಬೆಳವಣಿಗೆಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
