ಮೋದಿ ಬೆಸ್ಟೋ, ಅಂಬಾನಿನೊ? ಏಕಾಏಕಿ ಎದುರಾದ ಪ್ರಶ್ನೆಗೆ ನೀತಾ ಅಂಬಾನಿ ಹೇಳಿದ್ದು ಕೇಳಿ ಎಲ್ಲರೂ ಶಾಕ್​!

 ಪ್ರಧಾನಿ ನರೇಂದ್ರ ಮೋದಿ ಮತ್ತು ಮುಕೇಶ್​  ಅಂಬಾನಿ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದಾದರೆ ಯಾರನ್ನು ಮಾಡುವಿರಿ ಎಂದಾಗ ನೀತಾ ಅಂಬಾನಿ ಹೇಳಿದ್ದೇನು? 
 

Nita Ambani spoke about PM Modi is good for the nation her husband Mukesh is good for home suc

ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಹಾಗೂ ಅಧ್ಯಕ್ಷೆಯೂ ಆದ ನೀತಾ ಅಂಬಾನಿ ಅವರು, ಆಗಾಗ್ಗೆ ತಮ್ಮ ಭಾಷಣಗಳಿಂದ ಹೈಲೈಟ್​ ಆಗುತ್ತಲೇ ಇರುತ್ತಾರೆ. ನಿನ್ನೆಯಷ್ಟೇ ನೀತಾ ಅವರಿಗೆ,  ಮ್ಯಾಸಚೂಸೆಟ್ಸ್ ಗವರ್ನರ್ ಮೌರಾ ಹೀಲಿ ಅವರು ವಿಶಿಷ್ಟ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.  ಇಂಡಿಯಾ ಬಿಸಿನೆಸ್ ಲೀಡರ್ ಅವಾರ್ಡ್‌ನ 20 ನೇ ಆವೃತ್ತಿಯಲ್ಲಿ ಪ್ರತಿಷ್ಠಿತ 'ಬ್ರಾಂಡ್ ಇಂಡಿಯಾಕ್ಕೆ ಅತ್ಯುತ್ತಮ ಕೊಡುಗೆ' ಪ್ರಶಸ್ತಿಯನ್ನು ನೀತಾ ಅಂಬಾನಿಯವರಿಗೆ ನೀಡಲಾಗಿದೆ. ಶಿಕ್ಷಣ, ಆರೋಗ್ಯ, ಕ್ರೀಡೆ, ಕಲೆ, ಸಂಸ್ಕೃತಿ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿ ನೀತಾ ಅಂಬಾನಿ ಅವರ ಕಾರ್ಯ ಹಾಗೂ ಕೊಡುಗೆಗಳನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಯ ಗೌರವವನ್ನು ನೀಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ,  ಗವರ್ನರ್ ಮೌರಾ ಹೀಲಿ, ಅವರು, ನೀತಾ ಅಂಬಾನಿ ಅವರು ದಾರ್ಶನಿಕ ನಾಯಕಿ, ಸಹಾನುಭೂತಿಯ ಲೋಕೋಪಕಾರಿ ಮತ್ತು ನಿಜವಾದ ಜಾಗತಿಕ ಬದಲಾವಣೆಯ ಹರಿಕಾರಿಣಿ ಎಂದು ಬಣ್ಣಿಸಿದ್ದರು.  

ಇದರ ನಡುವೆಯೇ ನೀತಾ ಅಂಬಾನಿಯವರ ಸಂದರ್ಶನದ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಅದರಲ್ಲಿ ಅವರಿಗೆ ಪ್ರಧಾನಿ ನರೇಂದ್ರ  ಮೋದಿ ಮತ್ತು ಮುಕೇಶ್​ ಅಂಬಾನಿ ಇಬ್ಬರ ನಡುವೆ ಒಬ್ಬರ ಹೆಸರನ್ನು ತೆಗೆದುಕೊಳ್ಳುವುದಾದರೆ ಯಾರ ಹೆಸರನ್ನು ತೆಗೆದುಕೊಳ್ಳುವಿರಿ ಎಂದು ಪ್ರಶ್ನಿಸಲಾಗಿದೆ. ಈ ಪ್ರಶ್ನೆಗೆ ಹಲವಾರು ಮಂದಿ ಟೀಕೆ ವ್ಯಕ್ತಪಡಿಸಿದ್ದಾರೆ. ಇಬ್ಬರಲ್ಲಿ ಒಬ್ಬರ ಆಯ್ಕೆ ಎಂದರೆ ಏನರ್ಥ? ಎಂಥ ಅಸಂಬಂಧ ಪ್ರಶ್ನೆ, ಪ್ರಶ್ನೆ ಕೇಳುವವರಿಗೆ ತಲೆ ಇಲ್ವಾ ಎಂದೆಲ್ಲಾ ಕಮೆಂಟ್​ಗಳ ಸುರಿಮಳೆಯಾಗಿದೆ. 

ಇಂಗ್ಲೆಂಡ್‌, ಕೆನಡಾ, ಬ್ರೆಜಿಲ್ ದಾಖಲೆಗಳಿಗೆ ಬ್ರೇಕ್‌ ಹಾಕಿದ ಜಿಯೋ: ಕುತೂಹಲದ ಮಾಹಿತಿ ಇಲ್ಲಿದೆ...

ಪ್ರಶ್ನೆ ಏನೇ ಇರಲಿ, ನೀತಾ ಅಂಬಾನಿ ಮಾತ್ರ ಸ್ವಲ್ಪವೂ ವಿಚಲಿತರಾಗದೇ ಕೊಟ್ಟ ಉತ್ತರ ಮಾತ್ರ ಎಲ್ಲರ ಹೃದಯ ಗೆದ್ದಿದೆ. ಅಷ್ಟಕ್ಕೂ ನೀತಾ ಅವರು ಹೇಳಿದ್ದೇನೆಂದರೆ, ಮೋದಿಜಿ ಅವರು ಇಡೀ ದೇಶಕ್ಕೆ ಉತ್ತಮರು, ನನ್ನ ಗಂಡ ಮುಕೇಶ್​ ನನ್ನ ಕುಟುಂಬಕ್ಕೆ ಉತ್ತಮರು ಎಂದು ಉತ್ತರಿಸಿದ್ದಾರೆ. ಇವರ ಈ ಉತ್ತರಕ್ಕೆ ಹಲವಾರು ಮಂದಿ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಶ್ನೆಯೇ ಸರಿಯಿಲ್ಲ ಎಂದು ಹೇಳುವವರು ಒಂದೆಡೆಯಾದರೆ, ಇಂಥ ಪ್ರಶ್ನೆಗೂ ನೀತಾ ಅವರು ಕೊಟ್ಟ ಉತ್ತರ ಶ್ಲಾಘನಾರ್ಹ ಎಂದು ಹಾಡಿ ಹೊಗಳುತ್ತಿದ್ದಾರೆ. 

ಇನ್ನು ನೀತಾ ಅಂಬಾನಿ ಅವರ ಪರಿಚಯವೇ ಬೇಡ.  1964ರಲ್ಲಿ ಹುಟ್ಟಿರುವ ನೀತಾ ಅವರು,  ರಿಲಯನ್ಸ್ ಫೌಂಡೇಶನ್ , ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷೆ ಮತ್ತು ಸ್ಥಾಪಕಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನ ನಿರ್ದೇಶಕಿ .   117.8 ಬಿಲಿಯನ್ ಡಾಲರ್​ಗಿಂತ ಹೆಚ್ಚಿನ ಕುಟುಂಬದ ಸಂಪತ್ತನ್ನು ಹೊಂದಿರುವ ಅಂಬಾನಿಗಳು ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು. ಅವರು ಕಲಾ ಸಂಗ್ರಾಹಕಿಯೂ ಹೌದು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡ ಮುಂಬೈ ಇಂಡಿಯನ್ಸ್‌ನ ಮಾಲೀಕರು ಕೂಡ. 2016ರಲ್ಲಿ ಅವರು ಇಂಡಿಯಾ ಟುಡೇ ಇದರ 'ಐವತ್ತು ಉನ್ನತ ಮತ್ತು ಬಲಿಷ್ಠ ಭಾರತೀಯರಲ್ಲಿ' ಒಬ್ಬರಾಗಿ ಮತ್ತು ಫೋರ್ಬ್ಸ್ ನ 'ಏಷ್ಯಾದ ಅತ್ಯಂತ ಪ್ರಭಾವಶಾಲಿ ಮಹಿಳಾ ವ್ಯವಹಾರ ನಾಯಕಿಯರ' ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ಸಾಲನಲ್ಲಿ  ಅವರು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರಾದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
 

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ: ಎನ್​ವಿಡಿಯಾ ಜತೆ ಒಪ್ಪಂದ- ಅಂಬಾನಿ ಮಾತಿಗೆ ಸಿಇಒ ಭಾವುಕ

Latest Videos
Follow Us:
Download App:
  • android
  • ios