ಸೆ.15ರೊಳಗೆ IT ಪೋರ್ಟಲ್ ತಾಂತ್ರಿಕ ದೋಷ ನಿವಾರಿಸಿ, ಇನ್ಫೋಸಿಸ್‌ಗೆ ಅಂತಿಮ ಗಡುವು ನೀಡಿದ ನಿರ್ಮಲಾ ಸೀತಾರಾಮನ್!
- ಆದಾಯ ತೆರಿಗೆ ಇಲಾಖೆ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ
- ದೋಷ ನಿವಾರಿಸದ ಇನ್ಫೋಸಿಸ್ ಸಿಇಒ ವಿರುದ್ಧ ಸಚಿವೆ ಗರಂ
- ಸೆ.15ರೊಳಗೆ ದೋಷ ನಿವಾರಿಸಲು ಅಂತಿಮ ಗಡುವು
ನವದೆಹಲಿ(ಆ.23): ಹಣಕಾಸು ಸಚಿವಾಲಯ ಹಾಗೂ ಆದಾಯ ತೆರಿಗೆ ಇಲಾಖೆ ಹೊಸ ವೆಬ್‌ಸೈಟ್ ಲಾಂಚ್ ಮಾಡಿ ಇಕ್ಕಟ್ಟಿಗೆ ಸಿಲುಕಿದೆ. ಬಿಡುಗಡೆಯಾದ ಬಳಿಕ ಪೋರ್ಟಲ್‌ನಲ್ಲಿ ಸಮಸ್ಯೆಗಳೇ ತುಂಬಿ ಹೋಗಿದೆ. ಬಳಕೆದಾರರಿಗೆ ಪೋರ್ಟಲ್ ಬಳಸಲು ಸಾಧ್ಯವಾಗುತ್ತಿಲ್ಲ. ಇತ್ತ ಸಮಸ್ಯೆ ನಿವಾರಸಲು ವಿಳಂಬ ಧೋರಣೆ ತಾಳಿದ ಇನ್ಫೋಸಿಸ್ ವಿರುದ್ಧ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗರಂ ಆಗಿದ್ದಾರೆ.ಜೊತೆಗೆ ತ್ವರಿತವಾಗಿ ದೋಷ ನಿವಾರಿಸಲು ಅಂತಿಮ ಗಡುವು ನೀಡಿದ್ದಾರೆ.
ನೂತನ ಆದಾಯ ತೆರಿಗೆ ಪೋರ್ಟಲ್ ಸಮಸ್ಯೆ; ಪರಿಹಾರ ನೀಡದ ಇನ್ಫೋಸಿಸ್ ಸಿಇಒಗೆ ಸಮನ್ಸ್!
ತಾಂತ್ರಿಕ ದೋಷ ನಿವಾರಿಸದ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್‌ಗೆ ಹಣಕಾಸು ಸಚಿವಾಲಯ ಸಮನ್ಸ್ ನೀಡಿತ್ತು. ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾದರು. ಈ ವೇಳೆ ಸರ್ಕಾರವನ್ನು ತೀವ್ರ ಮುಜುಗರ ಹಾಗೂ ಸಂಕಷ್ಟಕ್ಕೆ ಸಿಲುಕಿಸಿದ ಇನ್ಫೋಸಿಸ್ ವಿರುದ್ಧ ಸೀತಾರಾಮನ್ ಅಸಮಾಧಾನ ಹೊರಹಾಕಿದ್ದಾರೆ. ಸೆಪ್ಟೆಂಬರ್ 15ರೊಳಗೆ ಎಲ್ಲಾ ದೋಷ ನಿವಾರಿಸಲು ಅಂತಿಮ ಗಡುವು ನೀಡಿದ್ದಾರೆ.
ಹೊಸ ಆದಾಯ ತೆರಿಗೆ ಇಲಾಖೆ ಪೋರ್ಟಲ್ ತೆರಿಗೆ ಪಾವತಿದಾರರಿಗೆ ತೀವ್ರ ನಿರಾಸೆ ಮಾಡಿದೆ. ತಿಂಗಳು ಕಳೆದರೂ ಸಮಸ್ಯೆ ಯಾಕೆ ನಿವಾರಣೆಯಾಗಿಲ್ಲ ಎಂದು ಸಲೀಲ್ ಪರೇಖ್‌ಗೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ. ಆದಾಯ ತೆರಿಗೆ ಪೋರ್ಟಲ್ ದೋಷ ಕಾರಣ ಆದಾಯ ತೆರಿಗೆ ಪಾವತಿ ಹಾಗೂ ಐಟಿ ರಿಟರ್ನ್ ಸಲ್ಲಿಕೆ ಗಡುವನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ನಿರ್ಮಲಾ ಸೀತಾರಾಮನ್ ಸೆಪ್ಟೆಂಬರ್ 15ರೊಳಗೆ ತಾಂತ್ರಿಕ ದೋಷ ನಿವಾರಿಸಿ ತೆರಿಗೆದಾರರಿಗೆ ಬಳಕೆ ಮಾಡುವಂತೆ ಮಾಡಲು ನಿರ್ಮಲಾ ಸೀತಾರಾಮನ್ ಖಡಕ್ ಸೂಚನೆ ನೀಡಿದ್ದಾರೆ.
ಗುಡ್ ನ್ಯೂಸ್; ಇನ್ಮುಂದೆ ಪಿಎಫ್ ಎರಡೂ ಮೊತ್ತವನ್ನು ಕೇಂದ್ರವೇ ಭರಿಸಲಿದೆ!
ಸಮನ್ಸ್‌ಗೆ ಉತ್ತರಿಸಿದ ಸಲೀಲ್ ಪರೇಖ್, ಪೋರ್ಟಲ್‌ನಲ್ಲಿರುವ ತಾಂತ್ರಿಕ ದೋಷದ ಮಾಹಿತಿ ನೀಡಿದ್ದಾರೆ. ಬಳಿಕ ಈ ಸಮಸ್ಯೆ ಪರಿಹಾರಕ್ಕೆ ಇನ್ಫೋಸಿಸ್ ಕಾರ್ಯವನ್ನು ತಿಳಿಸಿದ್ದಾರೆ. ಇಷ್ಟೇ ಪೋರ್ಟಲ್‌ನಲ್ಲಿನ ಎಲ್ಲಾ ಸಮಸ್ಯೆ ನಿವಾರಿಸುವ ಕುರಿತು ರೋಡ್ ಮ್ಯಾಪ್ ನೀಡಿದ್ದಾರೆ.
ತೆರಿಗೆದಾರರಿಗೆ ಸುಲಭವಾಗಿ ತೆರಿಗೆ ಕಟ್ಟಲು, ಆದಾಯ ತೆರಿಗೆ ಹಿಂಪಡೆಯಲು ಜೂನ್ 7 ರಂದು ಹೊಸ ಪೋರ್ಟಲ್ ಬಿಡುಗಡೆ ಮಾಡಲಾಗಿದೆ. ಎರಡೂವರೆ ತಿಂಗಳಿನಿಂದ ಪೋರ್ಟಲ್‌ನಲ್ಲಿ ಸಮಸ್ಯೆ ಹೆಚ್ಚಾಗಿತ್ತು. ಹೀಗಾಗಿ ತಾಂತ್ರಿಕ ದೋಷ ನಿವಾರಿಸಲು ಪೋರ್ಟಲ್ ಅಭಿವೃದ್ಧಿಪಡಿಸಿದ ಇನ್ಫೋಸಿಸ್‌ಗೆ ಸೂಚಿಸಲಾಗಿತ್ತು. ಆದರೆ ಸಮಸ್ಯೆ ನಿವಾರಣೆಯಾಗದ ಕಾರಣ ನಿನ್ನೆ(ಆ.22) ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್‌ಗೆ ಸಮನ್ಸ್ ನೀಡಲಾಗಿತ್ತು.