ಗುಡ್ ನ್ಯೂಸ್; ಇನ್ಮುಂದೆ ಪಿಎಫ್ ಎರಡೂ ಮೊತ್ತವನ್ನು ಕೇಂದ್ರವೇ ಭರಿಸಲಿದೆ!
* ಕಾರ್ಮಿಕ ವಲಯಕ್ಕೆ ಶುಭ ಸುದ್ದಿ ನೀಡಿದ ಕೇಂದ್ರ ಸರ್ಕಾರ
* ಸಣ್ಣ ಮತ್ತು ಮಧ್ಯಮ ವಲಯದ ಸಂಸ್ಥೆಗಳಲ್ಲಿ ದುಡಿಯುವ ನೌಕರರಿಗೆ ಲಾಭ
* ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಘೋಷಣೆ
ನವದೆಹಲಿ(ಆ. 21) ಕೊರೋನಾ ಕಾಲಕ್ಕೆ ಕೆಲಸ ಕಳೆದುಕೊಂಡು ಮತ್ತೆ ಕೆಲಸಕ್ಕೆ ಕರೆಸಿಕೊಂಡಿರುವ ಅಥವಾ ಸೇರಿಕೊಂಡಿರುವ ಉದ್ಯೋಗಿಗಳ ಪಿಎಫ್ ಪಾಲಿನ ಎರಡು ಮೊತ್ತವನ್ನು ಮುಂದಿನ ವರ್ಷದವರೆಗೆ ಕೇಂದ್ರ ಸರ್ಕಾರವೇ ಭರಿಸಲಿದೆ. ಉದ್ಯೋಗದಾತರು ಮತ್ತು ಉದ್ಯೋಗಿಯ ಪಾಲಿನ ಹಣದ ಮೊತ್ತವನ್ನು 2022ರ ತನಕ ಕೇಂದ್ರ ಸರಕಾರವೇ ಭರಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಕೆಲಸ ಕಳೆದುಕೊಂಡಿರುವ ಉದ್ಯೋಗಿಯನ್ನು ಸಂಸ್ಥೆ ಅಥವಾ ಕಂಪನಿಯು ಮರಳಿ ಸೇರಿಸಿದರೆ ಮಾತ್ರ ಕೇಂದ್ರ ಸರಕಾರ ಈ ನೆರವು ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಂಚೆ ಇಲಾಖೆಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ
ನೋಂದಾಯಿತ ಸಂಘಟಿತ ವಲಯದ ಸಂಸ್ಥೆಗಳು, ಅದರಲ್ಲೂ ಸಣ್ಣ ಮತ್ತು ಮಧ್ಯಮ ವಲಯದ ಸಂಸ್ಥೆಗಳಲ್ಲಿ ದುಡಿಯುವ ನೌಕರರಿಗೆ ಮತ್ತು ಅಂಥ ಸಂಸ್ಥೆಗಳಿಗೆ ಈ ನೆರವು ಸಿಗಲಿದೆ ಎಂದು ಹಣಕಾಸು ಸಚಿವೆ ತಿಳಿಸಿದ್ದಾರೆ.
ಯಾವುದಾರೂ ಜಿಲ್ಲೆಯೊಂದರಲ್ಲಿ ಅಸಂಘಟಿತ ವಲಯದ 25,000ಕ್ಕೂ ಹೆಚ್ಚು ವಲಸಿಗ ಕಾರ್ಮಿಕರು ಕೆಲಸ ಮಾಡುತ್ತಿದ್ದು ಅವರು ಕೊರೋನಾ ಕಾರಣಕ್ಕೆ ಸ್ವಂತ ಊರಿಗೆ ಹಿಂದಿರುಗಿದ್ದರೆ ಅವರಿಗೆ ಕೇಂದ್ರದ 16 ಯೋಜನೆಗಳ ಪ್ರಯೋಜನ ಸಿಗಲಿದೆ ಎಂದು ತಿಳಿಸಿದ್ದಾರೆ.
ಸ್ಯಾಂಡ್ ಅಪ್ ಇಂಡಿಯಾ, ಮುದ್ರಾ ಯೋಜನೆ, ಜನ್ ಧನ್ ಯೋಜನೆ, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣದ ವಿಚಾರದ ಬಗ್ಗೆಯೂ ನಿರ್ಮಲಾ ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆಗೆ ನೀಡುತ್ತಿದ್ದ ಅನುದಾನ ಹೆಚ್ಚಳ ಮಾಡಲಾಗಿದೆ. ಒಂದು ಜಿಲ್ಲೆ ಒಂದು ಕಾರ್ಯಕ್ರಮ ಎಂಬ ಧ್ಯೇಯದೊಂದಿಗೆ ಕೇಂದ್ರ ಸರ್ಕಾರ ಹೆಜ್ಜೆ ಇಡಲಿದೆ ಎಂದು ತಿಳಿಸಿದರು.