ಆದಾಯ ತೆರಿಗೆ ಇಲಾಖೆ ಪೋರ್ಟಲ್ ಸಮಸ್ಯೆಕ್ಕೆ ಪರಿಹಾರ ನೀಡದ ಇನ್ಫೋಸಿಸ್ ಪೋರ್ಟಲ್ ಅಭಿವೃದ್ಧಿಪಡಿಸಿದ ಇನ್ಫೋಸಿಸ್ ಸಿಇಒಗೆ ಸಮನ್ಸ್ ಸಮನ್ಸ್ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  

ನವದೆಹಲಿ(ಆ.22): ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಹೊಸ ವೆಬ್‌ಸೈಟ್ ಪರಿಚಯಿಸಿದೆ. ಸರಳ ಹಾಗೂ ಸಲಭ ಪೋರ್ಟಲ್ ಲಾಂಚ್ ಮಾಡಿತ್ತು. ಆದರೆ 2.5 ತಿಂಗಳಾದರೂ ಇದುವರೆಗೆ ಪೋರ್ಟಲ್‌ನಲ್ಲಿನ ಸಮಸ್ಯೆ ಪರಿಹಾರವಾಗಿಲ್ಲ. ಬಳಕೆದಾರರು ಈ ಕುರಿತು ಹಲವು ದೂರು ದಾಖಲಿಸಿದ್ದಾರೆ. ನಿಗದಿತ ಸಮಯ ಮುಗಿದರೂ ಪೋರ್ಟಲ್ ಅಭಿವೃದ್ಧಿಪಡಿಸಿದ ಇನ್ಫೋಸಿಸ್ ಪರಿಹಾರ ನೀಡಿಲ್ಲ. ಹೀಗಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇನ್ಫೋಸಿಸ್ ಸಿಇಒಗೆ ಸಮನ್ಸ್ ನೀಡಿದ್ದಾರೆ.

ನೂತನ ಐಟಿ ಪೋರ್ಟಲ್‌ ಅಭಿವೃದ್ಧಿಗೆ ಇಸ್ಫೋಸಿಸ್‌ಗೆ 165 ಕೋಟಿ ರೂ.!

ಜೂನ್ ತಿಂಗಳಲ್ಲಿ ಆದಾಯ ತೆರಿಗೆ ಇಲಾಖೆ ಹೊಸ ವೆಬ್‌ಸೈಟ್ ಲಾಂಚ್ ಮಾಡಿತ್ತು. ಇನ್ಫೋಸಿಸ್ ಅಭಿವೃದ್ಧಿಪಡಿಸಿದ ಈ ವೆಬ್‌ಸೈಟ್ ಬಿಡುಗಡೆಯಾದ ದಿನದಿಂದ ತಾಂತ್ರಿಕ ಸಮಸ್ಯೆಗಳನ್ನೇ ನೀಡುತ್ತಿದೆ. ಬಳಕೆದಾರರಿಗೆ ವೆಬ್‌ಸೈಟ್ ಬಳಸಲು ಸಾಧ್ಯವಾಗುತ್ತಿಲ್ಲ. ಆಗಸ್ಟ್ 21ರಂದು ವೆಬ್‌ಸೈಟ್ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ನಿಗದಿತ ಸಮಯದಲ್ಲಿ ಇನ್ಪೋಸಿಸ್ ನೂತನ ಪೋರ್ಟಲ್ ಸಮಸ್ಯೆ ಸರಿಪಡಿಸದಿರುವ ಕಾರಣ ಇದೀಗ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್‌ಗೆ ಸಮನ್ಸ್ ನೀಡಿದೆ.

Scroll to load tweet…

ಜೂನ್ 7 ರಂದು ಆದಾಯ ತೆರಿಗೆ ಇಲಾಖೆ ಪೋರ್ಟಲ್ ಲಾಂಚ್ ಮಾಡಿತ್ತು. ಪೋರ್ಟಲ್ ಕಾರ್ಯನಿರ್ವಹಣೆಯಲ್ಲಿನ ದೋಷಗಳು ದಿನದಿಂದ ದಿನಕ್ಕೆ ಹೆಚ್ಚಾಗಿತ್ತು. ಬಳಕೆದಾರರು ಹಲವು ದೂರುಗಳನ್ನು ದಾಖಲಿಸಿದ್ದರು. ಹೀಗಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇನ್ಫೋಸಿಸ್‌ಗೆ ಸೂಚನೆ ನೀಡಿದ್ದರು. ತಾಂತ್ರಿಕ ದೋಷ ಸರಿಪಡಿಸಲು ಸೂಚಿಸಿದ್ದರು.

ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ ಜನಸ್ನೇಹಿ ಅವತಾರದಲ್ಲಿ, ಹೊಸತೇನಿದೆ?

ಆದಾಯ ತೆರಿಗೆ ಇಲಾಖೆ ಪೋರ್ಟಲ್ ಬಳಕೆ ಸ್ನೇಹಿಯಾಗಿ ಹಾಗೂ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಲು ಹೇಳಲಾಗಿತ್ತು. ಆದರೆ ನಿಗದಿತ ಸಮಯದಲ್ಲಿ ಇನ್ಫೋಸಿಸ್ ತಾಂತ್ರಿಕ ಸಮಸ್ಯೆ ಸರಿಪಡಿಸಿರಲಿಲ್ಲ. 

ನಿರ್ಮಲಾ ಸೀತಾರಾಮನ್ ಸಮನ್ಸ್ ನೀಡಿದ ಬೆನ್ನಲ್ಲೇ ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಸರ್ಕಾರಿ ಪೋರ್ಟಲ್ ತಾಂತ್ರಿಕ ದೋಷ ನಿವಾರಣೆಗೆ ಕೆಲಸ ಮಾಡುತ್ತಿರುವ ಭಾರತದ ಟೆಕ್ ಸಂಸ್ಥೆ. ವಿಶೇಷ ಜವಾಬ್ದಾರಿಯಾಗಿ ಪರಿಗಣಿಸಿ ಕೆಲಸ ಮಾಡಬೇಕು. ಸಂಸ್ಥೆಯ ಅತ್ಯುತ್ತಮ ತಂಡವನ್ನು ನಿಯೋಜಿಸಿ ಪರಿಹಾರ ನೀಡಬೇಕು. ಕಾರಣ ಈ ಯೋಜನೆಗಳು ಭಾರತೀಯರ ಮೇಲೆ ಪ್ರಭಾವ ಬೀರಲಿದೆ ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

Scroll to load tweet…

2019ರಲ್ಲಿ ಆದಾಯ ತೆರಿಗೆ ಇಲಾಖೆ, ಇನ್ಫೋಸಿಸ್ ಸಂಸ್ಥೆಗೆ ಹೊಸ ಹಾಗೂ ಮುಂದಿನ ಪೀಳಿಗೆಯ ಪೋರ್ಟಲ್ ಅಭಿವೃದ್ಧಿ ಪಡಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಹಲವು ಕಾರಣಗಳಿಂದ ವೆಬ್‌ಸೈಟ್ ಲಾಂಚ್ ಡೇಟ್ ಮುಂದೂಡಲಾಗಿತ್ತು. ಕೊನೆಯದಾಗಿ ಜೂನ್ 7, 2021ರಲ್ಲಿ ನೂತನ ಪೋರ್ಟಲ್ ಬಿಡುಗಡೆ ಮಾಡಿತ್ತು.