ಈರುಳ್ಳಿ ತಿನ್ನೋ ಮನೆತನದವಳಲ್ಲ: ನಿರ್ಮಲಾ ಸೀತಾರಾಮನ್ ಸೊಕ್ಕು ಕರಗ್ತಿಲ್ಲ!

ನಿರ್ಮಲಾ ಸೀತಾರಾಮನ್ ಮನೆಯಲ್ಲಿ ಈರುಳ್ಳಿ ತಿನ್ನಲ್ವಂತೆ| ಈರುಳ್ಳಿ ತಿನ್ನುವ ಮನೆತನದವರಲ್ಲವಂತೆ ನಿರ್ಮಲಾ ಸೀತಾರಾಮನ್| ಈರಳ್ಳಿ ಬೆಲೆ ಏರಿಕೆ ಕುರಿತು ಹಣಕಾಸು ಸಚಿವೆ ತಲೆ ಕೆಡಿಸಿಕೊಂಡಿಲ್ವಂತೆ| ಗಂಭೀರ ಚರ್ಚೆ ವೇಳೆ ಸೊಕ್ಕಿನ ಮಾತುಗಳನ್ನಾಡಿದ ನಿರ್ಮಾಲಾ ಸೀತಾರಾಮನ್| ಈರುಳ್ಳಿ ಬೆಲೆ ಏರಿಕೆ ನನಗೆ ಯಾವುದೇ ಪರಿಣಾಮ ಬೀರಲ್ಲ ಎಂದ ನಿರ್ಮಲಾ| ಈರಳ್ಳಿ ಬೆಲೆ ಏರಿಕೆಯಿಂದ ತತ್ತರಿಸಿರುವ ದೇಶದ ಜನಸಾಮಾನ್ಯ| ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಪ್ರತಿಪಕ್ಷಗಳ ತೀವ್ರ ವಿರೋಧ|

Nirmala Sitharaman Controversial Statement Over Onion Price

ನವದೆಹಲಿ(ಡಿ.05): ಈರಳ್ಳಿ ಬೆಲೆ ಹೆಚ್ಚಳದಿಂದ ದೇಶದ ಜನತೆ ಕಂಗಾಲಾಗಿದ್ದಾರೆ. ಕೆಜಿಗೆ 180 ರೂ. ಗಡಿ ದಾಟಿರುವ ಈರುಳ್ಳಿ ಬೆಲೆ ಕಂಡು ಗ್ರಾಹಕನ ಕಣ್ಣಲ್ಲಿ ನೀರು ಬರುತ್ತಿದೆ.

ಆದರೆ ಈರುಳ್ಳಿ ಬೆಲೆ ತಗ್ಗಿಸಿ ಜನಸಾಮಾನ್ಯರಿಗೆ ನೆರವು ಒದಗಿಸಬೇಕಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತ್ರ ತಮ್ಮ ಸೊಕ್ಕಿನ ನುಡಿಗಳಿಗೆ ವಿರಾಮ ಹಾಕಿಲ್ಲ.

ಕೇಜಿ ಈರುಳ್ಳಿಗೆ 180 ರು.: ಸಾರ್ವಕಾಲಿಕ ದಾಖಲೆ!

ಲೋಕಸಭೆಯಲ್ಲಿ ಈರುಳ್ಳಿ ಬೆಲೆ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ವೇಳೆ, ನಾನು ಈರುಳ್ಳಿ ತಿನ್ನದ ಮನೆತನದಿಂದ ಬಂದವಳಾಗಿದ್ದರಿಂದ ಬೆಲೆ ಏರಿಕೆ ನನಗೇನು ಪರಿಣಾಮ ಬೀರುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಮ್ಮ ಮನೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸುವುದಿಲ್ಲ ಹೀಗಾಗಿ ಬೆಲೆ ಏರಿಕೆ ನನ್ನನ್ನು ಆತಂಕಕ್ಕೀಡು ಮಾಡಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷ ಸದಸ್ಯರು, ನೀವು ಯಾವ ಮನೆತನದಿಂದಾರೂ ಬನ್ನಿ, ಮೊದಲು ದೇಶದ ಜನರ ಸಂಕಷ್ಟ ಬಗೆಹರಿಸುವತ್ತ ಗಮನಹರಿಸಿ ಎಂದು ಕಿಡಿಕಾರಿದರು.

ಈರುಳ್ಳಿ 100 ರೂ. ಅಲ್ಲ 500 ರೂ. ಆಗಲಿ ನಮಗೆ ಡೊಂಟ್ ಕೇರ್!

ಇನ್ನು ಈರುಳ್ಳಿ ಬೆಲೆ ಏರಿಕೆ ತಗ್ಗಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಅಡುಗೆ ಪದಾರ್ಥಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡುವ ತಂತ್ರಜ್ಞಾನ ಅಭಿವೃದ್ಧಿಗೆ ಮುಂದಡಿ ಇಟ್ಟಿದೆ. 

2014ರಿಂದ ಈರುಳ್ಳಿ ಬೆಲೆಯಲ್ಲಿ ಏರಿಳಿತವಾಗುತ್ತಲೇ ಇದೆ. ಹೆಚ್ಚುವರಿ ಬೆಳೆಯಾದಾಗ ರಫ್ತಿಗೆ ಶೇ.5ರಿಂದ 7ರಷ್ಟು ಬೆಂಬಲ ಬೆಲೆ ನಿಗದಿ ಮಾಡಲಾಗಿದೆ ಎಂದು ಹಣಕಾಸು ಸಚಿವೆ ಸದನಕ್ಕೆ ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios