Asianet Suvarna News Asianet Suvarna News

ಕೊಳ್ಳುವ ಶಕ್ತಿ ಹೆಚ್ಚಳಕ್ಕೆ ನಿರ್ಮಲಾ 73 000 ಕೋಟಿ ಪ್ಯಾಕೇಜ್, ಕೇಂದ್ರ ನೌಕರರಿಗೆ ಬಂಪರ್!

ಕೇಂದ್ರದಿಂದ ಮತ್ತೊಂದು ಭರ್ಜರಿ ಕೊಡುಗೆ/  73,000 ಕೋಟಿ ರೂ. ಪ್ಯಾಕೇಜ್  ರಾಜ್ಯಗಳಿಗೆ ಹಂಚಿಕೆ/ ಆತ್ಮ ನಿರ್ಭರ ಭಾರತ್ ಯೋಜನೆಗೆ ಆದ್ಯತೆ/ ಬಡ್ಡಿ ರಹಿತ ಸಾಲ ನೀಡಿಕೆ/ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್/ ಕೊಳ್ಳುವ ಶಕ್ತಿ ಉತ್ತೇಜನಕ್ಕೆ ಆದ್ಯತೆ

Nirmala Sitharaman  Announces 73 000 Crore Measures to boost consumer demand mah
Author
Bengaluru, First Published Oct 13, 2020, 12:17 AM IST

ನವದೆಹಲಿ(ಅ. 12)  ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮಸ್ಯೆಗಳಿಂದ ಹೊರಬರುವ ಅನೇಕ ಪರಿಹಾರೋಪಾಯಗಳನ್ನು ತಿಳಿಸಿಕೊಟ್ಟಿದ್ದಾರೆ. ಸುದ್ದಿಗೋಷ್ಠೀಯಲ್ಲಿ ಮಾತನಾಡಿ  ಒಂದಿಷ್ಟು ಕೊಡುಗೆಗಳ ಘೋಷಣೆ ಮಾಡಿದ್ದಾರೆ. 

ಆರ್ಥಿಕತೆಯಲ್ಲಿ ಉತ್ತೇಜಿಸಲು 73,000 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಆದರೆ ಇದು ಹಲವು ಕಂಡಿಶನ್ ಗಳನ್ನು ಒಳಗೊಂಡಿದೆ. ಗ್ರಾಹಕರ ಕೊಳ್ಳುವ ಶಕ್ತಿ ಹೆಚ್ಚಳ ಮಾಡುವುದೇ ಪ್ರಮುಖ ಉದ್ದೇಶ.

ಹಬ್ಬದ ವೇಳೆ ಸರ್ಕಾರಿ ನೌಕರರಿಗೆ ನಿರ್ಮಲಾ ಅಭಯ

ನಿರ್ಮಲಾ ಭಾಷಣದ ಹೈಲೈಟ್ಸ್
* ಪೂರೈಕೆ ಇದ್ದರೂ ಬೇಡಿಕೆ ಕಡಿಮೆಯಾಗಿತ್ತು
* ಕೊರೋನಾ ಅರ್ಥವ್ಯವಸ್ಥೆ ಮೇಲೆ ಪರಿಣಾಮ ಬೀರಿದ್ದು ಆತ್ಮ ನಿರ್ಭರ ಭಾರತವೊಂದೆ ಪರಿಹಾರ
* ಎಲ್‌ಟಿಸಿ ನಗದು ಚೀಟಿ ಯೋಜನೆ ಜಾರಿ
*ಕೇಂದ್ರ ಸರ್ಕಾರಿ ನೌಕರರು ಸೇರಿದಂತೆ ವಿವಿಧ ಉದ್ಯೋಗಿಗಳು ಇದರ ಲಾಭ ಪಡೆದುಕೊಂಡು ಓಚರ್ ಮೂಲಕ ವಸ್ತು ಖರೀದಿ ಮಾಡಿ ನಿಧಾನವಾಗಿ ತೀರಿಸಬಹುದು.
* ರಜಾ ಕಾಲದ ಪೂರ್ತಿ ವೇತನ, ಮನೆ ಬಾಡಿಗೆ ವಿಚಾರದಲ್ಲಿ ಬದಲಾವಣೆ, ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡಿದರೆ ತೆರಿಗೆ ಇಲ್ಲ ಇಂಥ ಅಂಶಗಳು ಸೇರಿಕೊಂಡಿವೆ.
* ಜಿಎಸ್‌ಟಿ ಮೇಲೆ ಹಣ ಕಡಿತವಾಗಿದ್ದರೆ ಅದು ಡಿಜಿಟಲ್ ಮಾದರಿಯಲ್ಲೇ ಇದ್ದರೆ ಕೆಲ ಲಾಭಗಳು ಸಿಗಲಿದೆ.
* ಹಬ್ಬದ ಕೊಡುಗೆ:  ಗೆಜೆಟೆಡ್ ಮತ್ತು ನಾಕ್ ಗೆಜೆಟೆಡ್ ಸಿಬ್ಬಂದಿಗೆ ಇದರ ಲಾಭ ಸಿಗಲಿದೆ. ಹತ್ತು ಸಾವಿರ ರೂ. ಗಳ ಅಡ್ವಾನ್ಸ್ ಸಿಗಲಿದೆ. 
* ಹಬ್ಬದ ಮಾದರಿಯಲ್ಲಿ 8 ಸಾವಿರ ಕೋಟಿ ರೂ. ಹಂಚಿಕೆ ಗುರಿ ಇಟ್ಟುಕೊಳ್ಳಲಾಗಿದೆ.
* ರಾಜ್ಯಗಳಿಗೆ 50 ವರ್ಷದ ಅವಧಿಗೆ 12000 ಕೋಟಿ ರೂ. ಸಾಲವನ್ನು ಬಡ್ಡಿ ರಹಿತವಾಗಿ ಕೇಂದ್ರ ನೀಡಲಿದೆ.  ಇದರಲ್ಲಿ ಮೂರು ವಿಧ ಮಾಡಿಕೊಳ್ಳಲಾಗಿದ್ದು ಈಶಾನ್ಯದ  8 ರಾಜ್ಯಗಳಿಗೆ  ತಲಾ 200  ಕೋಟಿ ಸಾಲ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಕ್ಕೆ ತಲಾ 450  ಕೋಟಿ ರೂ ಸಿಗಲಿದೆ. 
* ಉಳಿದ ರಾಜ್ಯಗಳಿಗೆ 7,500   ಕೋಟಿ ರೂ. ನಲ್ಲಿ ಹಂಚಿಕೆಯಾಗಲಿದೆ. 
* ಆತ್ಮ ನಿರ್ಭರ ಭಾರತ ಯೋಜನೆ ಅನುಗುಣವಾಗಿ ಕೆಲಸ ಮಾಡುತ್ತಿರುವ ರಾಜ್ಯಗಳಿಗೆ  2  ಸಾವಿರ ಕೋಟಿ ರೂ. ದೊರೆಯಲಿದೆ.
* ರಸ್ತೆ, ರಕ್ಷಣಾ ವೆಚ್ಚ, ನೀರು ಸರಬರಾಜು, ನಗರ ಅಭಿವೃದ್ಧಿಗೂ ಹಣ ಮೀಸಲಿಡಲಾಗಿದೆ.
* ಈ ಯೋಜನೆಗಳು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯೊಂದಿಗೆ ಹೆಜ್ಜೆ ಹಾಕಲಿವೆ. 

Follow Us:
Download App:
  • android
  • ios