ಜೀರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರು ಕೇಂದ್ರ ಬಜೆಟ್ 2024 ರ ಬಗ್ಗೆ ತಮ್ಮ ಪ್ರತಿಕ್ರಿಯೆ ಎನ್ನುವ ರೀತಿಯಲ್ಲಿ ಫೋಟೋವೊಂದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಬೆಂಗಳೂರು (ಜು.23): ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡನೆ ಮಾಡಿದ ಬಜೆಟ್‌ಗೆ ಪ್ರತಿಕ್ರಿಯೆ ಎನ್ನುವಂತೆ ಜೀರೋಧಾದ ಸಹ ಸಂಸ್ಥಾಪಕ ನಿಖಿಲ್‌ ಕಾಮತ್‌ ಫೋಟೋವೊಂದನ್ನು ಹಂಚಿಕೊಂಡಿದ್ದರ. ಆದರೆ, ಜನ ಬಜೆಟ್‌ ಕುರಿತಾಗಿ ಕಾಮೆಂಟ್‌ ಮಾಡುವ ಬದಲು ಅವರ ಕಣ್ಣುಗಳು ನಿಖಿಲ್‌ ಕಾಮತ್‌ ಅವರ ದೇಹದ ಮೇಲೆ ಬಿದ್ದಿದೆ. ಚರ್ಚೆಗೆ ಕಾರಣವಾಗಿರುವ ಚಿತ್ರದಲ್ಲಿ 37 ವರ್ಷದ ಕಾಮತ್ ಬೂದು ಬಣ್ಣದ ತೋಳಿಲ್ಲದ ಟಿ-ಶರ್ಟ್‌ ಧರಿಸಿದ್ದು, ಅವರ ಮುಖದಲ್ಲಿ ಬೆಚ್ಚಿಬಿದ್ದಿರುವ ಭಾವವನ್ನು ತೋರಿಸಿದೆ. "ಬಜೆಟ್ ಡೇ," ಎಂದು ಜೀರೋದಾ ಸಹ-ಸಂಸ್ಥಾಪಕರು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಬಜೆಟ್ ಮೇಲಿನ ಚರ್ಚೆಯನ್ನು ಪ್ರಾರಂಭಿಸುವುದು ಕಾಮತ್ ಅವರ ಉದ್ದೇಶವಾಗಿದ್ದರೆ, ಅವರು ಆ ವಿಷಯದಲ್ಲಿ ಸಂಪೂರ್ಣವಾಗಿ ವಿಫಲವಾದರು. ಕಾಮೆಂಟ್‌ಗಳ ವಿಭಾಗದಲ್ಲಿ ಹೆಚ್ಚಿನ ಜನರು ಅವರ ಬೈಸಿಪ್ಸ್‌ಗಳ ಬಗ್ಗೆ ಚರ್ಚೆ ಮಾಡಿದ್ದಾರೆ.

ನಿಮ್ಮ ಬೈಸಿಪ್ಸ್ ತೋರಿಸುವ ಮಾರ್ಗ ಬಹಳ ಸರಳವಾಯಿತು ಎಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ. ನೀವು ಸ್ಮಾರ್ಟ್‌ ಕೂಡ ಹೌದು, ಹಾಟ್‌ ಕೂಡ ಹೌದು ಎಂದು ಇನ್ನೊಬ್ಬರು ಬರೆದಿದ್ದಾರೆ. ಎಕ್ಸ್‌ಕ್ಯೂಸ್‌ ಮೀ, ನೀವ್ಯಾಕೆ ಇಷ್ಟು ಹಾಟ್‌ ಇದ್ದೀರಿ? ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನೊಬ್ಬ ವ್ಯಕ್ತಿ ನಿಖಿಲ್‌ ಕಾಮತ್‌ರನ್ನು ಬಾಲಿವುಡ್‌ ನಟ ತುಷಾರ್‌ ಕಪೂರ್‌ಗೆ ಕೆಲವರು ಹೋಲಿಕೆ ಮಾಡಿದ್ದಾರೆ. ನಿಖಿಲ್‌ ಕಾಮತ್‌ ಇಷ್ಟು ಹಾಟ್‌ ಆಗಿದ್ದಾರೆ ಎಂದು ನಿರೀಕ್ಷೆಯೇ ಮಾಡಿರಲಿಲ್ಲ ಎಂದಿದ್ದಾರೆ.

ನಿಖಿಲ್ ಕಾಮತ್ ಅವರ ಹಿರಿಯ ಸಹೋದರ ನಿತಿನ್ ಕಾಮತ್ ಅವರು ಇಂದು ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸೆಕ್ಯುರಿಟೀಸ್ ವಹಿವಾಟು ತೆರಿಗೆ ಮತ್ತು ದೀರ್ಘಾವಧಿಯ ಬಂಡವಾಳ ಲಾಭದ ತೆರಿಗೆಯ ಹೆಚ್ಚಳವನ್ನು ಉದ್ದೇಶಿಸಿ ಅವರು ಬರೆದಿದ್ದಾರೆ. "ಮಾರುಕಟ್ಟೆಗಳಲ್ಲಿನ ಚಟುವಟಿಕೆಯನ್ನು ತಣ್ಣಗಾಗಿಸುವುದು ಕಲ್ಪನೆಯಾಗಿದ್ದರೆ, ಇದು ಟ್ರಿಕ್ ಮಾಡಬಹುದು' ಎಂದು ತಿಳಿಸಿದ್ದಾರೆ.

ಷೇರು ಮಾರುಕಟ್ಟೆ ಗೂಳಿ ಭರ್ಜರಿ ಓಟ; ಕೈಕೊಟ್ಟ Groww, Zerodha, ಲಾಭ ತಪ್ಪಿಸಿಕೊಂಡ ಹೂಡಿಕೆದಾರ!

ಕಾಮತ್ ಸಹೋದರರಿಬ್ಬರೂ ಫಿಟ್‌ನೆಸ್ ಉತ್ಸಾಹಿಗಳಾಗಿದ್ದು, ಈ ಹಿಂದೆ ತಮ್ಮ ವರ್ಕೌಟ್ ನಿಯಮಗಳು ಮತ್ತು ಆಹಾರ ಕ್ರಮಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಕೆಲವು ತಿಂಗಳ ಹಿಂದೆ, ಮಿಂಟ್‌ಗೆ ನೀಡಿದ ಸಂದರ್ಶನದಲ್ಲಿ, ನಿಖಿಲ್ ಕಾಮತ್ ಅವರು ಮಧ್ಯಂತರ ಉಪವಾಸವನ್ನು ಅಭ್ಯಾಸ ಮಾಡುತ್ತಿದ್ದೇನೆ ಎಂದು ಹೇಳಿದ್ದರು. “ನಾನು ಮಧ್ಯಂತರ ಉಪವಾಸ ಮಾಡುತ್ತಿದ್ದೇನೆ. ನಾನು ಈಗ ಒಂದು ವರ್ಷ ಅಥವಾ 2 ವರ್ಷಗಳಿಂದ ಇದೇ ರೀತಿ ಮಾಡುತ್ತಿದ್ದೇನೆ. ಹಾಗಾಗಿ ನಾನು 16 ಗಂಟೆಗಳಂತೆ ಮಾಡಲು ಸಾಧ್ಯವಾಗುತ್ತದೆ. ನಾನು ಮಧ್ಯಾಹ್ನ 2 ಗಂಟೆಯವರೆಗೆ ಏನನ್ನೂ ತಿನ್ನುವುದಿಲ್ಲ ಮತ್ತು ಕಾಫಿ ಹೇಗಾದರೂ ನನ್ನ ಹಸಿವನ್ನು ನಿಗ್ರಹಿಸುತ್ತದೆ ಹಾಗಾಗಿ ಮಾರುಕಟ್ಟೆಗಳು ಸುಮಾರು 9 ಗಂಟೆಗೆ ಪ್ರಾರಂಭವಾದಾಗ ನಾನು ಒಂದು ಕಾಫಿಯನ್ನು ಸೇವಿಸುತ್ತೇನೆ ಮತ್ತು ನಂತರ ಮಧ್ಯಾಹ್ನ 12ಕ್ಕೆ ಇನ್ನೊಂದು ಕಾಫಿ ಕುಡಿಯುತ್ತೇನೆ ಮತ್ತು ಅದು ನನ್ನನ್ನು ಮಧ್ಯಾಹ್ನ 2 ಗಂಟೆಯವರೆಗೆ ಹಸಿವಿಲ್ಲದೆ ಇರುವಂತೆ ಮಾಡುತ್ತದೆ ಎಂದು ತಿಳಿಸಿದ್ದರು.

37 ಆದರೂ ಮಕ್ಕಳೇಕ್ಕಿಲ್ಲ... ಜೀವನದ ಸತ್ಯ ಬಿಚ್ಚಿಟ್ಟ ಜೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್

View post on Instagram