ಷೇರು ಮಾರುಕಟ್ಟೆ ಗೂಳಿ ಭರ್ಜರಿ ಓಟ; ಕೈಕೊಟ್ಟ Groww, Zerodha, ಲಾಭ ತಪ್ಪಿಸಿಕೊಂಡ ಹೂಡಿಕೆದಾರ!

ಎಕ್ಸಿಟ್‌ ಪೋಲ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಭಾರೀ ಮಹುಮತ ಬರುವ ಸೂಚನೆ ಸಿಕ್ಕ ಬೆನ್ನಲ್ಲಿಯೇ ಸೋಮವಾರ ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿ ಜಿಗಿತ ಕಂಡಿದೆ. ಆದರೆ, ಹೆಚ್ಚಿನವರಿಗೆ ಇದರ ಲಾಭ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.
 

CDSL Website Down market record high Trading Platforms Groww Zerodha Crash san

ಬೆಂಗಳೂರು (ಜೂ.3): ಲೋಕಸಭೆ ಚುನಾವಣೆಯ ಎಕ್ಸಿಟ್‌ ಪೋಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಏರುವ ಸೂಚನೆ ಸಿಕ್ಕ ಬೆನ್ನಲ್ಲಿಯೇ ಅದರ ಪರಿಣಾಮ ಷೇರುಪೇಟೆಯ ಮೇಲೂ ಆಗಿದೆ. ಸೋಮವಾರ ಆರಂಭದಲ್ಲಿಯೇ ಸೆನ್ಸೆಕ್ಸ್‌ನಲ್ಲಿ 2 ಸಾವಿರ ಅಂಕಗಳ ಏರಿಕೆ ಕಂಡಿದ್ದರೆ, ನಿಫ್ಟಿ 50 ಕೂಡ ಮಿಂಚಿನ ಓಟ ನಡೆಸಿದೆ. ಆದರೆ, ಹೆಚ್ಚಿನ ಗ್ರಾಹಕರಿಗೆ ಇದರ ಲಾಭ ಸಿಕ್ಕಿಲ್ಲ. ಷೇರುಮಾರುಕಟ್ಟೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ ಬೆನ್ನಲ್ಲಿಯೇ ಸೆಂಟ್ರಲ್‌ ಡೆಪಾಸಿಟರಿ ಸರ್ವೀಸ್‌ ಲಿಮಿಟೆಡ್‌ (ಸಿಡಿಎಸ್‌ಎಲ್‌) ವೈಬ್‌ಸೈಟ್‌ ಬೆಳಗ್ಗೆ ಮಾರುಕಟ್ಟೆ ಅವಧಿ ಆರಂಭದ ಟೈಮ್‌ನಲ್ಲಿಯೇ ಡೌನ್‌ ಆಗಿದೆ. ಇದರ ಬೆನ್ನಲ್ಲಿಯೇ ಗ್ರಾಹಕರಿಗೆ ಸೇವೆ ನೀಡುವ ದೇಶದ ಪ್ರಮುಖ ಟ್ರೇಡಿಂಗ್‌ ಫ್ಲಾಟ್‌ಫಾರ್ಮ್‌ಗಳಾದ ಗ್ರೂವ್‌ ಹಾಗೂ ಜೀರೋಧಾ ಕೂಡ ಡೌನ್‌ ಆಗಿದೆ. ಎಕ್ಸಿಟ್‌ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮೂರನೇ ಅವಧಿಗೆ ಅಧಿಕಾರ ಹಿಡಿಯುವುದು ಖಚಿತ ಎಂದಿದೆ. ಕೆಲವು ಎಕ್ಸಿಟ್‌ ಪೋಲ್‌ಗಳು ಹೆಚ್ಚೂ ಕಡಿಮೆ ಬಿಜೆಪಿ ಈ ಬಾರಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವ ಸಾಧ್ಯತೆ ಇದೆ ಎಂದೂ ತಿಳಿಸಿದೆ. ಇದರ ಪ್ರಭಾವ ಷೇರು ಮಾರುಕಟ್ಟೆ ಮೇಲೂ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿನ ಬರೆದುಕೊಂಡಿರುವ ಇನ್ವೆಸ್ಟರ್‌ ಒಬ್ಬರು, ಸಿಡಿಎಸ್ಎಲ್ ವೆಬ್‌ಸೈಟ್ ಡೌನ್ ಆದ ನಂತರ ಝೆರೋಧಾ, ಗ್ರೋವ್ ಮತ್ತು ಅಪ್‌ಸ್ಟಾಕ್ಸ್ ಸೇರಿದಂತೆ ಜನಪ್ರಿಯ ಟ್ರೇಡಿಂಗ್‌ ಫ್ಲಾಟ್‌ಫಾರ್ಮ್‌ಗಳೂ ಡೌನ್‌ ಆಗಿದೆ ಎಂದಿದ್ದಾರೆ.

ಸಿಡಿಎಸ್ಎಲ್‌ ವೆಬ್‌ಸೈಟ್ ಡೌನ್ ಆಗಿದೆ. ಇಂದಿನ ದಿನದಲ್ಲಿ ನಡೆಯುತ್ತಿರುವ ಬೃಹತ್ ಪ್ರಮಾಣದ ವ್ಯಾಪಾರವೇ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.ಇಲ್ಲಿ ಸಿಡಿಎಸ್‌ಎಲ್‌ ಅಥವಾ ಸೆಂಟ್ರಲ್ ಡೆಪಾಸಿಟರಿ ಸರ್ವೀಸಸ್ ಲಿಮಿಟೆಡ್ (CDSL), ಜೊತೆಗೆ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (NSDL) ಭಾರತದಲ್ಲಿ ಕೇಂದ್ರ ಭದ್ರತಾ ಠೇವಣಿಗಳಾಗಿವೆ. ಈ ಸೇವೆಗಳು ವ್ಯಾಪಾರ ಮತ್ತು ಹೂಡಿಕೆ ಸೇವೆಗಳನ್ನು ಒದಗಿಸುತ್ತವೆ. ಎರಡನ್ನೂ ಸೆಕ್ಯೂರಿಟಿ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ಅಥವಾ ಸೆಬಿ ನಿಯಂತ್ರಿಸುತ್ತದೆ.

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯ ಎಕ್ಸಿಟ್‌ ಪೋಲ್‌ ಜೂನ್‌ 1 ರಂದು ಪ್ರಕಟವಾಗಿತ್ತು. ಸೆನ್ಸೆಕ್ಸ್‌ ಹಾಗೂ ನಿಫ್ಟಿ ಜೂನ್‌ 3 ರಂದು ಟ್ರೇಡಿಂಗ್‌ ಆರಂಭವಾದ ಹೊತ್ತಿನಲ್ಲಿಯೇ ಶೇ. 3ರಷ್ಟು ಏರಿಕೆ ಕಂಡಿದ್ದವು.

37 ಆದರೂ ಮಕ್ಕಳೇಕ್ಕಿಲ್ಲ... ಜೀವನದ ಸತ್ಯ ಬಿಚ್ಚಿಟ್ಟ ಜೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್

ಜೂನ್‌ 1 ರಂದು ಎಕ್ಸಿಟ್‌ ಪೋಲ್‌ನಲ್ಲಿ ಬಿಜೆಪಿ ಭರ್ಜರಿ ಗೆಲುವಿನ ನಿರೀಕ್ಷೆಯ ಬೆನ್ನಲ್ಲಿಯೇ ಸೋಮವಾರ ಭಾರತದ ಮಾರುಕಟ್ಟೆಗಳು ಗ್ರೀನ್‌ನಲ್ಲಿ ಆರಂಭವಾದವು. ಸೆನ್ಸೆಕ್ಸ್‌ 76,529.50 ಪಾಯಿಂಟ್‌ನಿಂದ ಶುರುವಾಯಿತು. ಶುಕ್ರವಾರದ ಮಾರುಕಟ್ಟೆಗೆ ಹೋಲಿಸಿದರೆ, ಸೋಮವಾರ ಸೆನ್ಸೆಕ್ಸ್‌ 2568.19 ಅಂಕ ಏರಿಕೆ ಕಂಡಿದ್ದವು. ಇನ್ನು ನಿಫ್ಟಿ 578.70 ಏರಿಕೆಯೊಂದಿಗೆ 23,109.40 ಅಂಕ ತಲುಪಿತ್ತು. ಬೆಳಗಿನ ಅವಧಿಯಲ್ಲಿ ನಿಫ್ಟಿ ಬ್ಯಾಂಕ್ 1,398.10 ಪಾಯಿಂಟ್‌ಗಳ ಏರಿಕೆಯೊಂದಿಗೆ 50,382.05 ನಲ್ಲಿ ವಹಿವಾಟು ನಡೆಸಿತು. ಬೆಳಗ್ಗೆ 11 ಗಂಟೆಯ ವೇಳೆಗೆ ಹಲವು ಅಪ್ಲಿಕೇಶನ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಾಗಿದೆ, ತಮ್ಮ ದಿನನಿತ್ಯದ ಕಾರ್ಯವನ್ನು ಪುನರಾರಂಭ ಮಾಡಿವೆ.

ಕರ್ಮ ಬೆನ್ನು ಬಿಡಲ್ಲ; ಜೆರೋಧ ಸಹಸಂಸ್ಥಾಪಕ ನಿತಿನ್ ಕಾಮತ್ ಹೀಗ್ಯಾಕೆ ಹೇಳಿದ್ರು?

Latest Videos
Follow Us:
Download App:
  • android
  • ios