ಕಾರ್ಡ್‌ಗಳ ಆಟೋ ಡೆಬಿಟ್‌ಗೆ ಇಂದಿನಿಂದ ಹೊಸ ನಿಯಮ
- 5 ಸಾವಿರ ರು. ಮೇಲ್ಪಟ್ಟವಿವಿಧ ಬಿಲ್/ಶುಲ್ಕಗಳು ಪ್ರತಿ ತಿಂಗಳ ನಿರ್ದಿಷ್ಟ ದಿನಾಂಕದಂದು ತನ್ನಿಂತಾನೆ ಪಾವತಿಯಾಗುವಂತಹ ಸೌಲಭ್ಯ
- ತನ್ನಿಂತಾನೆ ಪಾವತಿಯಾಗುವಂತಹ ಸೌಲಭ್ಯವನ್ನು ಇಂದಿನಿಂದ ಹೊಸ ನಿಯಮ
ನವದೆಹಲಿ (ಅ.01): 5 ಸಾವಿರ ರು. ಮೇಲ್ಪಟ್ಟವಿವಿಧ ಬಿಲ್/ಶುಲ್ಕಗಳು ಪ್ರತಿ ತಿಂಗಳ ನಿರ್ದಿಷ್ಟ ದಿನಾಂಕದಂದು ತನ್ನಿಂತಾನೆ ಪಾವತಿಯಾಗುವಂತಹ ಸೌಲಭ್ಯವನ್ನು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ (Debit Or Credit Card) ಮೂಲಕ ಬಳಸುತ್ತಿದ್ದೀರಾ? ಆ ದಿನಾಂಕಕ್ಕೂ ಮುನ್ನ ನಿಮ್ಮ ಮೊಬೈಲ್ ಅಥವಾ ಇ-ಮೇಲ್ (E Mail) ಅನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಅದು ಬಿಟ್ಟು, ‘ಆಟೋ ಪೇಮೆಂಟ್’ (Auto Payment) ಆಯ್ಕೆ ಮಾಡಿದ್ದೇನೆ ಎಂದು ನಿರಾಳರಾಗಿ ಕುಳಿತರೆ ವಿದ್ಯುತ್, ಬ್ರಾಡ್‌ಬ್ಯಾಂಡ್, ಪೋಸ್ಟ್‌ಪೇಡ್, ಗ್ಯಾಸ್ ಬಿಲ್‌ಗಳಿಗೆ ನೀವು ಪಾವತಿಸಬೇಕಿರುವ ಹಣ ಸಂದಾಯವಾಗದೆ ನೀವು ಸೇವಾ ವ್ಯತ್ಯಯ ಅನುಭವಿಸಬಹುದು.
ಹೌದು. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಅಸಂಖ್ಯಾತ ಗ್ರಾಹಕರು ಬಳಸುತ್ತಿರುವ ಆಟೋ ಡೆಬಿಟ್ (Auto Debit) ವಿಧಾನವನ್ನು ಮತ್ತಷ್ಟುಸುರಕ್ಷಿತಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಜಾರಿಗೆ ತಂದಿರುವ ‘ಅಡಿಷನಲ್ ಫ್ಯಾಕ್ಟರ್ ಅಥೆಂಟಿಕೇಷನ್’ (AFA) ಅ.1ರಿಂದ ಶುಕ್ರವಾರದಿಂದ ಜಾರಿಗೆ ಬರುತ್ತಿದೆ.
ಆನ್‌ಲೈನ್ ಶಾಪಿಂಗ್ ಮಾಡ್ತೀರಾ? ಇನ್ಮುಂದೆ ಈ ಸೌಲಭ್ಯಕ್ಕೆ ಬ್ರೇಕ್!
ಹೊಸ ನಿಯಮ ಏನು?
5000 ರು. ಮೇಲ್ಪಟ್ಟಯಾವುದೇ ಪಾವತಿಗೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನಲ್ಲಿ ಆಟೋ ಪೇಮೆಂಟ್ ವಿಧಾನ ಬಳಸುತ್ತಿದ್ದರೆ, ಹಣ ಕಡಿತಗೊಳ್ಳುವ 24 ತಾಸಿನ ಮೊದಲು ಗ್ರಾಹಕರ ಮೊಬೈಲ್ ಹಾಗೂ ಇ-ಮೇಲ್ ವಿಳಾಸಕ್ಕೆ ಸಂದೇಶವೊಂದು ಬರುತ್ತದೆ. ಆಟೋ ಪೇಮೆಂಟ್ ಆಗಲಿರುವ ಮೊತ್ತ, ಅದು ಸಂದಾಯವಾಗಲಿರುವ ಕಂಪನಿಗಳ ವಿವರ ಇರುತ್ತದೆ. ಗ್ರಾಹಕರು ಒಪ್ಪಿಗೆ ನೀಡಿದರೆ ಮಾತ್ರ ಆ ಹಣ ನಿರ್ದಿಷ್ಟದಿನಾಂಕದಂದು ಕಡಿತಗೊಳ್ಳುತ್ತದೆ. ಇಲ್ಲದೆ ಹೋದರೆ ಇಲ್ಲ. ಸಕಾಲಕ್ಕೆ ಹಣ ಪಾವತಿಯಾಗದಿದ್ದರೆ ಸೇವೆ ಕಡಿತಗೊಂಡು ಸಮಸ್ಯೆ ಅನುಭವಿಸಬೇಕಾಗುತ್ತದೆ.
ಡೆಬಿಟ್ ಕಾರ್ಡ್ ಕಿಸೆಯಲ್ಲಿದ್ದರೂ ಹಣ ಡ್ರಾ ಆಗುತ್ತೆ ಹುಷಾರ್..!
2021ರ ಮಾ.31ರಿಂದಲೇ ಈ ಹೊಸ ನಿಯಮ ಜಾರಿಗೆ ಬರಬೇಕಿತ್ತು. ಕಾರ್ಡ್ ಬಳಕೆದಾರರ ಸುರಕ್ಷತೆ ಹಾಗೂ ಭದ್ರತೆಯನ್ನು ಮತ್ತಷ್ಟುಬಲಗೊಳಿಸುವ ಈ ಸೌಲಭ್ಯವನ್ನು ಜಾರಿಗೊಳಿಸಲು ಹಲವು ಹಣಕಾಸು ಸಂಸ್ಥೆಗಳು ಸನ್ನದ್ಧವಾಗಿರಲಿಲ್ಲ. ಹೀಗಾಗಿ ಅನುಷ್ಠಾನ ಸಮಯವನ್ನು ಸೆ.30ರವರೆಗೆ ರಿಸವ್‌ರ್ ಬ್ಯಾಂಕ್ ವಿಸ್ತರಿಸಿತ್ತು.
ಗೃಹ, ವಾಹನ ಸಾಲ ಪಾವತಿಯೂ ನಿಲ್ಲುತ್ತಾ?
ಇಲ್ಲ. ಗೃಹ, ವಾಹನ ಸಾಲ, ವಿಮಾ ಕಂತು ಬ್ಯಾಂಕ್ ಖಾತೆಯಿಂದಲೇ (Bank Account) ಇಸಿಎಸ್ (ECS) ರೂಪದಲ್ಲಿ ನೇರವಾಗಿ ಕಡಿತವಾಗುತ್ತದೆ. ಹೀಗಾಗಿ ಅದರಿಂದ ಸಮಸ್ಯೆ ಇಲ್ಲ. ಆದರೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಮಾಡಲಾಗುವ 5000 ಸಾವಿರ ರು. ಮೇಲ್ಪಟ್ಟಆಟೋ ಡೆಬಿಟ್‌ಗೆ ಮಾತ್ರ ಇದು ಅನ್ವಯ.
ಪರ್ಯಾಯ ಮಾರ್ಗ ಏನು?
‘ವಿವಿಧ ಶುಲ್ಕ, ಬಿಲ್ ಪಾವತಿಸುವ ದಿನ ಬಂದಾಗ ಮರೆತು ಹೋಗುತ್ತದೆ. ಆದ ಕಾರಣ ಕಾರ್ಡುಗಳಲ್ಲಿ ಆಟೋ ಡೆಬಿಟ್ ವಿಧಾನ ಆರಿಸಿಕೊಂಡಿದ್ದೇವೆ. ರಿಸರ್ವ್ ಬ್ಯಾಂಕ್ ನಿಯಮದಿಂದ ನೆಟ್‌ವರ್ಕ್ ಇಲ್ಲದ ಊರಿಗೆ ಹೋದಾಗ ಸಮಸ್ಯೆಯಾಗುತ್ತದೆ’ ಎನ್ನುವವರು ನೀವಾಗಿದ್ದರೆ, ಅದಕ್ಕೆ ಪರ್ಯಾಯ ದಾರಿ ಇದೆ. ಪ್ರತಿ ಬ್ಯಾಂಕಿನ ನೆಟ್ ಬ್ಯಾಂಕಿಂಗ್‌ನ ಬಿಲ್‌ಪೇ ಸೌಲಭ್ಯ ಬಳಸಿ ಎಲ್ಲ ಪಾವತಿಗಳ ಆಟೋ ಪೇ ಸೌಲಭ್ಯ ಬಳಸಿಕೊಳ್ಳಬಹುದು.