ಆನ್‌ಲೈನ್ ಶಾಪಿಂಗ್ ಮಾಡ್ತೀರಾ? ಇನ್ಮುಂದೆ ಈ ಸೌಲಭ್ಯಕ್ಕೆ ಬ್ರೇಕ್!
* ಪ್ರತಿ ಬಾರಿ ಎಲ್ಲಾ 16 ಅಂಕಿ ನಮೂದಿಸುವ ವ್ಯವಸ್ಥೆ ಜಾರಿ ಸಾಧ್ಯತೆ
* ಆನ್‌ಲೈನ್ ಪಾವತಿಗೆ ‘ಸೇವ್ಡ್ ಕಾರ್ಡ್’ ಆಯ್ಕೆ ರದ್ದು?
ಮುಂಬೈ(ಆ.24): ಅಮೆಜಾನ್, ಫ್ಲಿಪ್‌ಕಾರ್ಟ್, ನೆಟ್‌ಫ್ಲಿಕ್ಸ್ ಮುಂತಾದ ಮಾರಾಟ ತಾಣಗಳಲ್ಲಿ ವಸ್ತು ಖರೀದಿಸಿ ಆನ್‌ಲೈನ್ ಪಾವತಿ ಮಾಡುವಾಗ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್‌ನ ಮೂರಂಕಿಯ ಸಿವಿವಿ ಸಂಖ್ಯೆ ಮಾತ್ರ ನಮೂದಿಸಿ ಪಾವತಿ ಮಾಡುತ್ತಿದ್ದೀರಲ್ಲವೇ? ಈ ವ್ಯವಸ್ಥೆ 2022ರ ಜನವರಿಯಿಂದ ರದ್ದಾಗುವ ಸಾಧ್ಯತೆಯಿದೆ.
ಆನ್‌ಲೈನ್ ವ್ಯವಹಾರದ ಭದ್ರತೆ ಹೆಚ್ಚಿಸಲು ‘ಸೇವ್‌್ಡ ಕಾರ್ಡ್’ ಆಯ್ಕೆ ರದ್ದುಗೊಳಿಸಿ, ಪ್ರತಿ ಬಾರಿಯೂ ಕಾರ್ಡ್‌ನ 16 ಅಂಕಿಗಳ ಸಂಖ್ಯೆ, ಹೆಸರು, ಎಕ್ಸ್‌ಪೈರಿ ದಿನಾಂಕ ಮತ್ತು ಸಿವಿವಿ ಸಂಖ್ಯೆ ಇಷ್ಟನ್ನೂ ನಮೂದಿಸುವಂತೆ ಮಾಡಲು ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ) ಮುಂದಾಗಿದೆ ಎಂದು ಹೇಳಲಾಗಿದೆ.
ಸದ್ಯ ಕೆಲ ಆನ್‌ಲೈನ್ ವಾಣಿಜ್ಯ ಕಂಪನಿಗಳು ಮತ್ತು ಪೇಮೆಂಟ್ ಗೇಟ್‌ವೇ ಕಂಪನಿಗಳು ಬಳಕೆದಾರರ ಕಾರ್ಡ್ ಮಾಹಿತಿಯನ್ನು ತಮ್ಮ ಸರ್ವರ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳುತ್ತವೆ. ಹೀಗಾಗಿ ಪದೇಪದೇ ಆ ಸೇವೆ ಬಳಸುವವರು ಕಾರ್ಡ್‌ನ ಹಿಂಬದಿಗೆ ಇರುವ ಸಿವಿವಿ ಸಂಖ್ಯೆ ಮಾತ್ರ ನಮೂದಿಸಿ, ಒಟಿಪಿ ಪಡೆದು ಪಾವತಿ ಮಾಡಬಹುದು. ಆದರೆ, ಕಂಪನಿಗಳು ಜನರ ಕಾರ್ಡ್ ಮಾಹಿತಿಯನ್ನು ಸರ್ವರ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳುವುದು ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಕಾರ್ಡ್ ಬಳಸುವಾಗ ಪ್ರತಿ ಆನ್‌ಲೈನ್ ವ್ಯವಹಾರಕ್ಕೂ ಎಲ್ಲಾ ವಿವರಗಳನ್ನು ಬಳಕೆದಾರರೇ ನಮೂದಿಸುವ ವ್ಯವಸ್ಥೆ ತರಲು ಆರ್‌ಬಿಐ ಹೊರಟಿದೆ ಎಂದು ತಿಳಿದುಬಂದಿದೆ.