ಸುಳ್ಳಾದ ರಘುರಾಮ್‌ ರಾಜನ್‌ ಭವಿಷ್ಯ, ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.7.8 ಏರಿಕೆ!

ಕಳೆದ ವರ್ಷ ರಾಹುಲ್‌ ಗಾಂಧಿ ಜೊತೆ ಭಾರತ್‌ ಜೋಡೀ ಯಾತ್ರೆಯಲ್ಲಿ ಭಾಗವಹಿಸಿದ್ದ ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌, ಭಾರತದ ಜಿಡಿಪಿ ಮುಂದಿನ ವರ್ಷ ಶೇ.5ರಷ್ಟು ಮುಟ್ಟಿದರೆ, ಅದೇ ಅದೃಷ್ಟ ಎಂದು ಹೇಳಿದ್ದರು. ಆದರೆ, ತ್ರೈಮಾಸಿಕದ ಡೇಟಾ ಅವರ ಭವಿಷ್ಯವನ್ನು ಸುಳ್ಳಾಗಿಸಿದೆ.

National Statistical Office NSO Data Indias April June quarter GDP growth at 7 point 8 san

ನವದೆಹಲಿ (ಆ.31): ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಗುರುವಾರ ದೇಶದ ಜಿಡಿಪಿ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ, 2023-24 ರ ಆರ್ಥಿಕ ವರ್ಷದ ಆರಂಭಿಕ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ. 7.8 ರಷ್ಟು ಏರಿಕೆ ಕಂಡಿದ್ದಾಗಿ ಮಾಹಿತಿ ನೀಡಿದೆ. 2022ರಲ್ಲಿ ರಾಹುಲ್‌ ಗಾಂಧಿ ಜೊತೆ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌, ಮುಂದಿನ ವರ್ಷದಲ್ಲಿ ಭಾರತದ ಜಿಡಿಪಿ ಶೇ.5ಕ್ಕೆ ಏರಿಕೆ ಕಂಡರೆ ಅದೇ ಅದೃಷ್ಟ ಎಂದು ಹೇಳಿದ್ದರು. ಈಗ ಅವರ ಭವಿಷ್ಯವನ್ನು ಸುಳ್ಳಾಗಿಸಿದ್ದು, ಭಾರತದ ಜಿಡಪಿ ಶೇ7.8ಕ್ಕೆ ಏರಿಕೆಯಾಗಿದೆ.  ಈ ಬೆಳವಣಿಗೆ ದರವು ಹಿಂದಿನ ತ್ರೈಮಾಸಿಕದ ಶೇ.6.1 ಹೆಚ್ಚಳವನ್ನು ಮೀರಿಸಿದೆ. ಹಾಗಿದ್ದರೂ 2022-23ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ದಾಖಲಾದ 13.1 ಶೇಕಡಾ ಬೆಳವಣಿಗೆಗಿಂತ ವೇಗವು ದೊಡ್ಡ ಪ್ರಮಾಣದಲ್ಲಿ ನಿಧಾನವಾಗಿದೆ. ಇದರೊಂದಿಗೆ, ಭಾರತವು ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ವಿಶ್ವದ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ ಬೆಳವಣಿಗೆಯು ಶೇಕಡಾ 6.3 ರಷ್ಟಿತ್ತು.

"ಜಿಡಿಪಿಯ ತ್ರೈಮಾಸಿಕ ಅಂದಾಜುಗಳು ಸೂಚಕ ಆಧಾರಿತವಾಗಿವೆ ಮತ್ತು ಬೆಂಚ್‌ಮಾರ್ಕ್-ಇಂಡಿಕೇಟರ್ ವಿಧಾನವನ್ನು ಬಳಸಿಕೊಂಡು ಸಂಕಲಿಸಲಾಗಿದೆ, ಅಂದರೆ, ಬೆಂಚ್‌ಮಾರ್ಕ್ ವರ್ಷ ಎಂದು ಉಲ್ಲೇಖಿಸಲಾದ ಹಿಂದಿನ ವರ್ಷಕ್ಕೆ ಲಭ್ಯವಿರುವ ತ್ರೈಮಾಸಿಕ ಅಂದಾಜುಗಳನ್ನು ವಲಯಗಳ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುವ ಸಂಬಂಧಿತ ಸೂಚಕಗಳನ್ನು ಬಳಸಿಕೊಂಡು ಹೊರತೆಗೆಯಲಾಗುತ್ತದೆ" ಎಂದು ಸರ್ಕಾರ ಹೇಳಿದೆ. 

ಎನ್‌ಎಸ್‌ಓ ದತ್ತಾಂಶದ ಪ್ರಕಾರ, ಕೃಷಿ ವಲಯವು 3.5 ಶೇಕಡಾ ಬೆಳವಣಿಗೆಯನ್ನು ಕಂಡಿದೆ, 2022-23 ರ ಆರ್ಥಿಕ ವರ್ಷದ ಅದೇ ಅವಧಿಯಲ್ಲಿ ದಾಖಲಾದ 2.4 ಶೇಕಡಾದಿಂದ ಸುಧಾರಣೆಯನ್ನು ಕಂಡಿದೆ. ಹಾಗಿದ್ದರೂ, ಪ್ರಸಕ್ತ ಹಣಕಾಸು ವರ್ಷದ ಆರಂಭಿಕ ತ್ರೈಮಾಸಿಕದಲ್ಲಿ ಉತ್ಪಾದನಾ ವಲಯದ ಬೆಳವಣಿಗೆಯ ವೇಗವು ಶೇಕಡಾ 4.7 ಕ್ಕೆ ಇಳಿದಿದೆ, ಇದು ಹಿಂದಿನ ವರ್ಷದ ಅನುಗುಣವಾದ ಅವಧಿಯಲ್ಲಿ ಕಂಡುಬಂದ ಶೇಕಡಾ 6.1 ಕ್ಕಿಂತ ಕಡಿಮೆಯಾಗಿದೆ.

ಆಗಸ್ಟ್‌ನಲ್ಲಿ ನಡೆದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯ ನಂತರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇಡೀ ಹಣಕಾಸು ವರ್ಷದಲ್ಲಿ ಶೇ 6.5 ರ ಬೆಳವಣಿಗೆ ದರವನ್ನು ನಿರೀಕ್ಷಿಸಿತ್ತು. ತ್ರೈಮಾಸಿಕ ಆಧಾರದ ಮೇಲೆ ಇದನ್ನು ಮುರಿದರೆ, ಅಂಕಿಅಂಶಗಳು Q1 ಗೆ 8 ಪ್ರತಿಶತದಷ್ಟಿದೆ ಎಂದು ವರದಿಯಾಗಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿ (IMF) 2023 ರಲ್ಲಿ ಭಾರತದ ಜಿಡಿಪಿ ಬೆಳವಣಿಗೆಗೆ ತನ್ನ ದೃಷ್ಟಿಕೋನವನ್ನು ಸರಿಹೊಂದಿಸಿದೆ, ಅದನ್ನು 6.1 ಶೇಕಡಾಕ್ಕೆ ಅಪ್ಗ್ರೇಡ್ ಮಾಡಿದೆ.

ವಿಶ್ವದ ಟಾಪ್‌ 10 ಆರ್ಥಿಕತೆಯಲ್ಲಿ ನಾವೇ ಬೆಸ್ಟ್‌ : ಇತರ ರಾಷ್ಟ್ರಗಳೊಂದಿಗೆ ಹೋಲಿಸಿ ಗ್ರಾಫ್‌ ಬಿಡುಗಡೆ

ಜೂನ್‌ನಲ್ಲಿ, ಫಿಚ್ ರೇಟಿಂಗ್ಸ್ 2023-24 (ಎಫ್‌ವೈ 24) ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಪರಿಷ್ಕರಿಸಿತು, ಇದನ್ನು ಹಿಂದಿನ ಮುನ್ಸೂಚನೆಯ 6 ಪ್ರತಿಶತದಿಂದ 6.3 ಪ್ರತಿಶತಕ್ಕೆ ಏರಿಸಿದೆ.

ಜಿಡಿಪಿ ಪ್ರಗತಿ: ಭಾರತ ವಿಶ್ವಕ್ಕೆ ನಂ.1: 2023ರಲ್ಲಿ ಶೇ.7.2ರಷ್ಟು ಪ್ರಗತಿ

Latest Videos
Follow Us:
Download App:
  • android
  • ios