Asianet Suvarna News Asianet Suvarna News

ವಿಶ್ವದ ಟಾಪ್‌ 10 ಆರ್ಥಿಕತೆಯಲ್ಲಿ ನಾವೇ ಬೆಸ್ಟ್‌ : ಇತರ ರಾಷ್ಟ್ರಗಳೊಂದಿಗೆ ಹೋಲಿಸಿ ಗ್ರಾಫ್‌ ಬಿಡುಗಡೆ

ವಿಶ್ವದ ಅಗ್ರ 10 ಆರ್ಥಿಕತೆಗಳಲ್ಲಿ ಭಾರತದ ಸ್ಥಾನವೇ ಅತ್ಯುತ್ತಮವಾಗಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಫ್‌ ಬಿಡುಗಡೆ ಮಾಡಿರುವ ಸರ್ಕಾರ ಭಾರತ ಜಿಡಿಪಿ ಬೆಳವಣಿಗೆ ಶೇ.5.9ರಷ್ಟಿದೆ ಎಂದು ಹೇಳಿದೆ.

Indias position among the top 10 economies in the world is the best government has released a graph comparing other economy to us Indias GDP growth is 5.9 percent akb
Author
First Published Aug 28, 2023, 7:08 AM IST

ನವದೆಹಲಿ: ವಿಶ್ವದ ಅಗ್ರ 10 ಆರ್ಥಿಕತೆಗಳಲ್ಲಿ ಭಾರತದ ಸ್ಥಾನವೇ ಅತ್ಯುತ್ತಮವಾಗಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಫ್‌ ಬಿಡುಗಡೆ ಮಾಡಿರುವ ಸರ್ಕಾರ ಭಾರತ ಜಿಡಿಪಿ ಬೆಳವಣಿಗೆ ಶೇ.5.9ರಷ್ಟಿದೆ ಎಂದು ಹೇಳಿದೆ.

ಅಮೆರಿಕ, ಚೀನಾ, ಕೆನಡಾ (Canada) ದೇಶಗಳ ಆರ್ಥಿಕತೆಯನ್ನು ಇಲ್ಲಿ ಹೋಲಿಕೆ ಮಾಡಲಾಗಿದೆ. ಭಾರತದ ಆರ್ಥಿಕ (Indian Economy) ಪ್ರಗತಿ ದರ ಶೇ.5.9 ಇದ್ದು ಭಾರತ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಶೇ.5.2ರಷ್ಟುಆರ್ಥಿಕತೆ ಏರಿಕೆಯೊಂದಿಗೆ ಚೀನಾ 2ನೇ ಸ್ಥಾನದಲ್ಲಿ ಶೇ.1.6ರಷ್ಟುಜಿಡಿಪಿ ಪ್ರಗತಿ ದರ ಹೊಂದಿರುವ ಅಮೆರಿಕ 3ನೇ ಸ್ಥಾನದಲ್ಲಿವೆ. ಹಾಗೆಯೇ ಕೆನಡಾ ಶೇ.1.5, ಜಪಾನ್‌ ಶೇ.1.3, ಬ್ರೆಜಿಲ್‌ ಶೇ.0.9, ಫ್ರಾನ್ಸ್‌ ಶೇ.0.7, ಇಟಲಿ ಶೇ.0.7, ಜರ್ಮನಿ ಶೇ.-0.1 ಮತ್ತು ಬ್ರಿಟನ್‌ ಶೇ.-0.3ರಷ್ಟುಆರ್ಥಿಕ ಪ್ರಗತಿ ದರವನ್ನು ಹೊಂದಿವೆ.

 

ಇಂದು ಉದ್ಯೋಗ ಮೇಳ: ಮೋದಿಯಿಂದ 51000 ಜನರಿಗೆ ನೇಮಕ ಪತ್ರ

ನವದೆಹಲಿ: ರೋಜ್‌ಗಾರ್‌ ಮೇಳ ಯೋಜನೆಯಡಿ ನೂತನವಾಗಿ ಸರ್ಕಾರಿ ಉದ್ಯೋಗಕ್ಕೆ ನೇಮಕಗೊಂಡಿರುವ ಸುಮಾರು 51,000ಕ್ಕೂ ಹೆಚ್ಚು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಸೋಮವಾರ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಈ ಯೋಜನೆಯಡಿ ದೇಶಾದ್ಯಂತ 45 ಕಡೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ.

ಭಾರತದ ಆರ್ಥಿಕತೆಯಲ್ಲಿ ಜಗತ್ತಿಗೆ ಆಶಾವಾದ, ಆತ್ಮವಿಶ್ವಾಸ ಕಾಣಿಸುತ್ತಿದೆ: ಪ್ರಧಾನಿ ಮೋದಿ

ಮುಂಜಾನೆ 10.30 ಗಂಟೆಗೆ ವರ್ಚುವಲ್‌ ಆಗಿ ನೇಮಕಾತಿ ಪತ್ರ ವಿತರಣೆ ಮಾಡಲಿರುವ ಮೋದಿ, ಬಳಿಕ ನೂತನ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರೋಜ್‌ಗಾರ್‌ ಮೇಳ ಯೋಜನೆಯಡಿ ದೇಶಾದ್ಯಂತ ಗೃಹ ಸಚಿವಾಲಯ, ಕೇಂದ್ರೀಯ ಸಶಸ್ತ್ರ ಪಡೆ, ಕೇಂದ್ರೀಯ ಪೊಲೀಸ್‌ ಪಡೆ, ಗಡಿ ಭದ್ರತಾ ಪಡೆ, ಗಡಿ ಪೊಲೀಸ್‌ ಮತ್ತು ದೆಹಲಿ ಪೊಲೀಸ್‌ ಪಡೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸರ್ಕಾರವು ಸಿಬ್ಬಂದಿಗಳನ್ನು ನೇಮಿಸಿಕೊಳ್ಳುತ್ತದೆ. 10 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಪ್ರಧಾನಿ ಮೋದಿ 2022ರ ಅಕ್ಟೋಬರ್‌ನಲ್ಲಿ ರೋಜ್‌ಗಾರ್‌ ಮೇಳವನ್ನು ಉದ್ಘಾಟಿಸಿದ್ದರು.

ಕಳೆದ ಅಕ್ಟೋಬರ್‌ನಲ್ಲಿ 75,000, ನವೆಂಬರ್‌ನಲ್ಲಿ 71,000, ಜನವರಿಯಲ್ಲಿ 71,000, ಏಪ್ರೀಲ್‌ನಲ್ಲಿ 71,000, ಮೇನಲ್ಲಿ 71,000, ಜೂನ್‌ನಲ್ಲಿ 70,000 ಮತ್ತು ಜುಲೈನಲ್ಲಿ 70,000 ಸೇರಿ ಈವರೆಗೆ ಈ ಯೋಜನೆಯಡಿ 5ಲಕ್ಷ 70 ಸಾವಿರಕ್ಕೂ ಅಧಿಕ ಜನರಿಗೆ ಮೋದಿ ನೇಮಕಾತಿ ಪತ್ರ ವಿತರಿಸಿದ್ದಾರೆ.

ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆ: ಬ್ರಿಕ್ಸ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ

 

Follow Us:
Download App:
  • android
  • ios