Asianet Suvarna News Asianet Suvarna News

ತಿಂಗಳಿಗೆ 1ಲಕ್ಷ ರೂ. ಪಿಂಚಣಿ ಪಡೆಯಬೇಕೇ? ಮ್ಯೂಚ್ಯುವಲ್ ಫಂಡ್ ಎಸ್ ಐಪಿಯಲ್ಲಿ ಎಷ್ಟು ಹೂಡಿಕೆ ಮಾಡಬೇಕು?

ನಿವೃತ್ತಿ ನಂತರ ಪಿಂಚಣಿ ಪಡೆಯಲು ಮ್ಯೂಚ್ಯುವಲ್ ಫಂಡ್ ಎಸ್ ಐಪಿಯಲ್ಲಿ ಹೂಡಿಕೆ ಮಾಡಲು ನೀವು ಬಯಸಿದ್ರೆ ತಿಂಗಳಿಗೆ ಎಷ್ಟು ಹೂಡಿಕೆ ಮಾಡಬೇಕು? ಒಟ್ಟು ಎಷ್ಟು ಹಣ ಹೂಡಿಕೆ ಮಾಡಬೇಕು? ಎಷ್ಟು ಅವಧಿಗೆ? ಈ ಎಲ್ಲ ಮಾಹಿತಿಗಳನ್ನು ಹೊಂದಿರೋದು ಅಗತ್ಯ. ಹಾಗಾದ್ರೆ ಒಬ್ಬ ವ್ಯಕ್ತಿ ತಿಂಗಳಿಗೆ 1ಲಕ್ಷ ರೂ. ಪಿಂಚಣಿ ಪಡೆಯಲು 30 ವರ್ಷಗಳ ಅವಧಿಗೆ ಮ್ಯೂಚ್ಯುವಲ್ ಫಂಡ್ ಎಸ್ ಐಪಿಯಲ್ಲಿ ಎಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ಮಾಹಿತಿ.
 

Mutual fund calculator Monthly SIP you need to get Rs 1 lakh pension per month
Author
First Published Sep 4, 2022, 7:19 PM IST

Business Desk:ನಿವೃತ್ತಿ ನಂತರದ ಬದುಕಿನ ಬಗ್ಗೆ ಉದ್ಯೋಗ ಸಿಕ್ಕ ತಕ್ಷಣವೇ ಯೋಚಿಸಿ ಯೋಜನೆ ರೂಪಿಸೋದು ಅಗತ್ಯ. ಇಂದು ಅನೇಕರು ಈ  ಕೆಲಸವನ್ನು ಮಾಡುತ್ತಿದ್ದಾರೆ ಕೂಡ. ಆದರೆ, ಎಲ್ಲಿ ಹೂಡಿಕೆ ಮಾಡಬೇಕು? ಎಷ್ಟು ಹೂಡಿಕೆ ಮಾಡಿದ್ರೆ ಎಷ್ಟು ಪಿಂಚಣಿ ಸಿಗಬಹುದು? ಇಂಥ ಕೆಲವು ಲೆಕ್ಕಾಚಾರಗಳು ತಿಳಿಯದೆ ಕೆಲವರಿಗೆ ಗೊಂದಲ ಮೂಡಿದ್ರೆ, ಇನ್ನೂ ಕೆಲವರು ಇದನ್ನೆಲ್ಲ ಯೋಚಿಸದೆ ಹೂಡಿಕೆ ಮಾಡಿ ಕೈ ಸುಟ್ಟುಕೊಳ್ಳುತ್ತಾರೆ ಕೂಡ. ಈಗ ಮ್ಯೂಚ್ಯುವಲ್ ಫಂಡ್ ಮಾಸಿಕ ಎಸ್ ಐಪಿಯಲ್ಲಿ ಎಷ್ಟು ಹೂಡಿಕೆ ಮಾಡಿದ್ರೆ ತಿಂಗಳಿಗೆ 1ಲಕ್ಷ ರೂ. ಪಿಂಚಣಿ ಪಡೆಯಬಹುದು? ಇಂಥದೊಂದು ಲೆಕ್ಕಾಚಾರ ಮಾಡೋದು ಹೇಗೆ ಎಂಬುದನ್ನು ಉದಾಹರಣೆಸಹಿತ ನೋಡೋಣ. ಪ್ರಕಾಶ್ ಎನ್ನುವ 30 ವರ್ಷ ವಯಸ್ಸಿನ ಉದ್ಯೋಗಿ ತನಗೆ 60 ವರ್ಷ ವಯಸ್ಸಾದಾಗ ಮಾಸಿಕ 1ಲಕ್ಷ ರೂ. ಪಿಂಚಣಿ ಗಳಿಸಲು ನೆರವಾಗುವ ಹೂಡಿಕೆ ಸಾಧನಕ್ಕೆ ಹುಡುಕುತ್ತಿದ್ದಾರೆ. ಈ ಉದ್ಯೋಗದ ಹಂತದಲ್ಲಿ ಹೂಡಿಕೆ ಮಾಡಲು ಪ್ರಕಾಶ್ ಬಳಿ ದೊಡ್ಡ ಮೊತ್ತದ ಹಣವಿಲ್ಲ. ಇಂಥ ಸಂದರ್ಭದಲ್ಲಿ ಪ್ರಕಾಶ್ ಅವರಂತಹ ಹೂಡಿಕೆದಾರರಿಗೆ ಮ್ಯೂಚ್ಯುವಲ್ ಫಂಡ್ ಅತ್ಯುತ್ತಮ ಆಯ್ಕೆ ಎನ್ನುತ್ತಾರೆ ತೆರಿಗೆ ಹಾಗೂ ಹೂಡಿಕೆ ತಜ್ಞರು. ಪ್ರಕಾಶ್ ಅವರ ಬಳಿ ಹೂಡಿಕೆಗೆ 30 ವರ್ಷಗಳ ಸುದೀರ್ಘ ಸಮಯಾವಕಾಶವಿರುವ ಕಾರಣ ಮ್ಯೂಚ್ಯುವಲ್ ಫಂಡ್ ಉತ್ತಮ ಆಯ್ಕೆಯಾಗಬಲ್ಲದು. ಮ್ಯೂಚ್ಯುವಲ್ ಫಂಡ್ಸ್ ಎಸ್ ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಮಾಸಿಕ ಪಾವತಿ ವಿಧಾನ ಪ್ರಕಾಶ್ ಅಥವಾ ಇತರ ಯಾವುದೇ ಹೂಡಿಕೆದಾರರಿಗೆ  ಅವರ ಬಳಿ ಯಾವುದೇ ದೊಡ್ಡ ಉಳಿತಾಯವಿಲ್ಲದಿದ್ದರೂ ಹೂಡಿಕೆ ಗುರಿ ಮುಟ್ಟಲು ನೆರವು ನೀಡುತ್ತದೆ. 

ಪಿಂಚಣಿ ಕ್ಯಾಲ್ಕುಲೇಟರ್ ಹೀಗಿದೆ
ಹೂಡಿಕೆ ತಜ್ಞರೊಬ್ಬರ ಪ್ರಕಾರ ಮಾಸಿಕ 1ಲಕ್ಷ ರೂ. ಪಿಂಚಣಿ ಗುರಿ ತಲುಪಲು ನಿವೃತ್ತಿ ನಿಧಿ ಅಭಿವೃದ್ಧಿಪಡಿಸಬೇಕು ಹಾಗೂ ಅದನ್ನು  SWP (ವ್ಯವಸ್ಥಿತ ವಿತ್ ಡ್ರಾವಲ್ ಪ್ಲ್ಯಾನ್) ಮೇಲೆ ಹೂಡಿಕೆ ಮಾಡಬೇಕು. ಹೂಡಿಕೆದಾರ ಹೈಬ್ರೀಡ್ ಅಥವಾ ಕನ್ಸರ್ವಟಿವ್ ಹೈಬ್ರೀಡ್ ಎಸ್ ಡಬ್ಲ್ಯುಪಿ ನಿಧಿ ಆಯ್ಕೆ ಮಾಡಬಹುದು. ಇದು ವಾರ್ಷಿಕ ಶೇ.7-8 ರಿಟರ್ನ್ ಪಡೆಯಲು ನೆರವು ನೀಡಲಿದೆ. ನಿವೃತ್ತಿ ಬಳಿಕದ ಹಣದುಬ್ಬರವನ್ನು ವಾರ್ಷಿಕ ಶೇ.6ರಷ್ಟಿಟ್ಟುಕೊಂಡು ಗಮನಿಸಿದ್ರೆ ಒಬ್ಬ ಹೂಡಿಕೆದಾರನಿಗೆ ಮುಂದಿನ 30 ವರ್ಷಗಳ ಬಳಿಕ ಮಾಸಿಕ 1ಲಕ್ಷ ರೂ. ಪಿಂಚಣಿ ಪಡೆಯಲು ಎಸ್ ಡಬ್ಲ್ಯುಪಿ ಗೆ 2.76 ಕೋಟಿ ರೂ. ನಿಧಿಯ ಅಗತ್ಯವಿದೆ. ಹೀಗಾಗಿ ಶಂಕರ್ ತನ್ನ ಮಾಸಿಕ 1ಲಕ್ಷ ರೂ. ಪಿಂಚಣಿ ಪಡೆಯುವ ಗುರಿ ತಲುಪಲು ಮುಂದಿನ 30 ವರ್ಷಗಳಲ್ಲಿ 2.76 ಕೋಟಿ ರೂ. ಸಂಗ್ರಹಿಸಬೇಕಾದ ಅಗತ್ಯವಿದೆ. ಈತ ಶೇ.10ರಷ್ಟು ವಾರ್ಷಿಕ ಆದಾಯವನ್ನು ಮ್ಯೂಚ್ಯುವಲ್ ಫಂಡ್ ನಲ್ಲಿ ಹೂಡಿಕೆ ಮಾಡಬೇಕು. 

ಮದುವೆ ಆಯಿತಾ? ಕೂಡಲೇ ಈ ಕೆಲಸ ಮಾಡಿ!

15 X 15 X 15 ನಿಯಮ
30 ವರ್ಷಗಳ ಅವಧಿಗೆ ಮ್ಯೂಚ್ಯುವಲ್ ಫಂಡ್ಸ್  ಎಸ್ಐಪಿಯಲ್ಲಿ ಹೂಡಿಕೆ ಮಾಡಿದ್ರೆ 15 X 15 X 15 ನಿಯಮದ ಪ್ರಕಾರ ಹೂಡಿಕೆದಾರ ಶೇ.15ರಷ್ಟು ರಿಟರ್ನ್ ನಿರೀಕ್ಷೆ ಮಾಡಬಹುದು. ಹೀಗಾಗಿ 30 ವರ್ಷಗಳ ಬಳಿಕ ಹೂಡಿಕೆಗೆ ಹೂಡಿಕೆದಾರ ಶೇ.15ರಷ್ಟು ರಿಟರ್ನ್ ನಿರೀಕ್ಷಿಸಬಹುದು. 

SBI Report: 2029 ರ ವೇಳೆಗೆ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆ..!

ಎಸ್ ಐಪಿ ಕ್ಯಾಲ್ಕುಲೇಟರ್
30 ವರ್ಷಗಳ ಅವಧಿಯ ಮ್ಯೂಚ್ಯುವಲ್ ಫಂಡ್ ಎಸ್ಐಪಿಯಿಂದ ಶೇ.15ರಷ್ಟು ವಾರ್ಷಿಕ  ರಿಟರ್ನ್ ಪಡೆಯಲು ಹೂಡಿಕೆದಾರ ಎಸ್ಐಪಿಯನ್ನು ಸುಮಾರು 2,200ರೂ.ನಿಂದ ಪ್ರಾರಂಭಿಸಬೇಕು. ಇದು ಹೂಡಿಕೆದಾರನಿಗೆ 2.79 ಕೋಟಿ ರೂ. ಸಂಗ್ರಹಿಸಲು ನೆರವು ನೀಡುತ್ತದೆ. ಹೂಡಿಕೆದಾರ 2.79 ಕೋಟಿ ರೂ. ಸಂಗ್ರಹಿಸಲು 30 ವರ್ಷಗಳ ಅವಧಿಗೆ 43,42,642 ಹೂಡಿಕೆ ಮಾಡಬೇಕು. ಇದರಿಂದ ಹೂಡಿಕೆದಾರನಿಗೆ ಸುಮಾರು 2,35,94,709ರೂ. ರಿಟರ್ನ್ ಸಿಗಲಿದೆ. 30 ವರ್ಷಗಳ ಬಳಿಕ 1ಲಕ್ಷ ರೂ. ಪಿಂಚಣಿ ನಿರೀಕ್ಷೆ ಮಾಡುವವರು ಎಸ್ ಬಿಐ ಕನ್ಸರ್ವೇಟಿವ್ ಹೈಬ್ರೀಡ್ ಫಂಡ್, ಐಸಿಐಸಿಐ ಪ್ರೊಡೆನ್ಸಿಯಲ್ ಈಕ್ವಿಟಿ ಹಾಗೂ ಡೆಟ್ ಫಂಡ್ ಹಾಗೂ ಕೋಟಕ್ ಡೆಟ್ ಹೈಬ್ರೀಡ್ ಫಂಡ್ ನಲ್ಲಿ ಹೂಡಿಕೆ ಮಾಡಲು ಯೋಚಿಸಬಹುದು. 

Follow Us:
Download App:
  • android
  • ios