Asianet Suvarna News Asianet Suvarna News

SBI Report: 2029 ರ ವೇಳೆಗೆ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆ..!

ಎಸ್‌ಬಿಐ ವರದಿಯ ಪ್ರಕಾರ, ಡಿಸೆಂಬರ್ 2021 ರ ಹೊತ್ತಿಗೆ ಭಾರತವು ಯುಕೆಯನ್ನು ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಮೀರಿಸಿದೆ. ಇದೇ ರೀತಿ, 2029 ರ ವೇಳೆಗೆ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. 

india is likely to become third largest economy by 2029 says state bank of india report ash
Author
First Published Sep 4, 2022, 9:44 AM IST

2029 ರ ವೇಳೆಗೆ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ (3rd Largest Economy) ಸಾಧ್ಯತೆಯಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank of India) ವರದಿ ಹೇಳುತ್ತದೆ. 2014 ರಿಂದ ದೇಶವು 10 ನೇ ಸ್ಥಾನದಲ್ಲಿದ್ದ ನಂತರ 7 ಸ್ಥಾನಗಳ ಏರಿಕೆಯಾಗಲಿದೆ ಎಂದು ಶನಿವಾರ ತಿಳಿಸಿದೆ. ಭಾರತವು ಪ್ರಸ್ತುತ ಐದನೇ ಅತಿದೊಡ್ಡ ಆರ್ಥಿಕತೆಯ ಸ್ಥಾನದಲ್ಲಿದೆ. "2014 ರಿಂದ ಭಾರತವು ಅನುಸರಿಸುತ್ತಿರುವ ಹಾದಿಯು 2029 ರ ವೇಳೆಗೆ ದೇಶವು ಮೂರನೇ ಅತಿದೊಡ್ಡ ಆರ್ಥಿಕತೆಯ ಟ್ಯಾಗ್ ಪಡೆಯುವ ಸಾಧ್ಯತೆಯನ್ನು ಬಹಿರಂಗಪಡಿಸುತ್ತದೆ" ಎಂದು ವರದಿ ಹೇಳಿದೆ. SBI ನ ಆರ್ಥಿಕ ಸಂಶೋಧನಾ ಇಲಾಖೆಯ ಸಂಶೋಧನಾ ವರದಿಯು ಆರ್ಥಿಕ ವರ್ಷ 2023 ಗಾಗಿ ಒಟ್ಟು ದೇಶೀಯ ಉತ್ಪನ್ನ (Gross Domestic Product) (GDP) ಬೆಳವಣಿಗೆಯ ದರವು 6.7 - 7.7 ಶೇಕಡಾ ನಡುವೆ ಅಂದಾಜಿಸಲಾಗಿದೆ. ಆದರೂ, ಜಾಗತಿಕ ಅನಿಶ್ಚಿತತೆಗಳಿಂದಾಗಿ 6 - 6.5 ಶೇಕಡಾ ಬೆಳವಣಿಗೆ ಹೊಂದುವುದು ಸಹಜ ಎಂದೂ ಹೇಳಲಾಗಿದೆ.
 
ಶುಕ್ರವಾರದ ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಭಾರತವು ಬ್ರಿಟನ್ ಅನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮೊದಲ ತ್ರೈಮಾಸಿಕದಲ್ಲಿ ಭಾರತವು ತನ್ನ ಮುನ್ನಡೆಯನ್ನು ವಿಸ್ತರಿಸಿದೆ ಎಂದು  ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (International Monetary Fund) ಜಿಡಿಪಿ ಅಂಕಿಅಂಶಗಳನ್ನು ತೋರಿಸಿದೆ. ಆದರೆ, ಎಸ್‌ಬಿಐ ವರದಿಯ ಪ್ರಕಾರ, ಡಿಸೆಂಬರ್ 2021 ರ ಹೊತ್ತಿಗೆ ಭಾರತವು ಯುಕೆಯನ್ನು ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಮೀರಿಸಿದೆ. "ಭಾರತದ GDP ಯ ಪಾಲು 2014 ರಲ್ಲಿ 2.6 ಶೇಕಡಾಕ್ಕೆ ಹೋಲಿಸಿದರೆ ಈಗ ಶೇಕಡಾ 3.5 ರಷ್ಟಿದೆ ಮತ್ತು 2027 ರಲ್ಲಿ 4 ಶೇಕಡಾವನ್ನು ದಾಟುವ ಸಾಧ್ಯತೆಯಿದೆ. ಇದು ಜಾಗತಿಕ GDP ಯಲ್ಲಿ ಜರ್ಮನಿಯ ಪ್ರಸ್ತುತ ಪಾಲು" ಎಂದು ವರದಿ ಹೇಳುತ್ತದೆ.

ಇದನ್ನು ಓದಿ: World Economy: ಬ್ರಿಟನ್‌ ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ ಭಾರತ
 
ಹೊಸ ಹೂಡಿಕೆಯ ಉದ್ದೇಶಗಳ ವಿಷಯದಲ್ಲಿ ಚೀನಾ ನಿಧಾನವಾಗುವುದರಿಂದ ಭಾರತೀಯ ಆರ್ಥಿಕತೆಯು ಹೇಗೆ ಫಲಾನುಭವಿಗಳಾಗಬಹುದು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. "ಗ್ಲೋಬಲ್ ಟೆಕ್ ಮೇಜರ್ ಆ್ಯಪಲ್ ತನ್ನ ಪ್ರಮುಖ ಐಫೋನ್ 14 ರ ಉತ್ಪಾದನೆಯ ಭಾಗವನ್ನು ಭಾರತದಿಂದ ವಿಶ್ವಾದ್ಯಂತ ಶಿಪ್ಪಿಂಗ್ ಮಾಡಲು ಬದಲಾಯಿಸುವ ನಿರ್ಧಾರ, ಸೆಪ್ಟೆಂಬರ್ 7 ರಂದು ಬಿಡುಗಡೆಯಾದ ನಂತರ ಕೆಲವು ವಾರಗಳ ನಗಣ್ಯ ಸಮಯದ ವಿಳಂಬದೊಂದಿಗೆ, ಅಂತಹ ಆಶಾವಾದಕ್ಕೆ ಸಾಕ್ಷಿಯಾಗಿದೆ" ಎಂದೂ ವರದಿ ಹೇಳುತ್ತದೆ. ಆದರೂ, GDP ತಲಾವಾರು ವಿಷಯದಲ್ಲಿ, ಭಾರತವು ಇನ್ನೂ ಪ್ರಪಂಚದ ಹೆಚ್ಚಿನ ಆರ್ಥಿಕತೆಗಳಿಗಿಂತ ಹಿಂದುಳಿದಿದೆ. ವಿಶ್ವಬ್ಯಾಂಕ್ ಮಾಹಿತಿಯ ಪ್ರಕಾರ 2021 ರಲ್ಲಿ ಭಾರತ $2,277 ನ ತಲಾವಾರು GDP ಹೊಂದಿತ್ತು, ಆದರೆ UK ತಲಾ ಆದಾಯ $47,334. ಇನ್ನು, ಚೀನಾದ ತಲಾ ಆದಾಯವು 2021 ರಲ್ಲಿ ಭಾರತಕ್ಕಿಂತ ಸುಮಾರು 6 ಪಟ್ಟು ಅಂದರೆ $12,556 ಆಗಿತ್ತು.

Anand Mahindra: ಭಾರತ ಆರ್ಥಿಕತೆಯಲ್ಲಿ ಬ್ರಿಟನ್‌ ಹಿಂದಿಕ್ಕಿದ್ದು ''ಕರ್ಮ ಸಿದ್ಧಾಂತದ ಫಲ'' ಎಂದ ಉದ್ಯಮಿ
 
ಆಗಸ್ಟ್ 31 ರಂದು, ಆರ್ಥಿಕ ವರ್ಷ 2023 ರ ಮೊದಲ ತ್ರೈಮಾಸಿಕಕ್ಕೆ ರಾಷ್ಟ್ರೀಯ ಅಂಕಿಅಂಶ ಕಚೇರಿ (National Statistical Office) ಬಿಡುಗಡೆ ಮಾಡಿದ GDP ಸಂಖ್ಯೆಗಳು ಭಾರತೀಯ ಆರ್ಥಿಕತೆಯು 13.5 ಶೇಕಡಾ ಬೆಳವಣಿಗೆಯನ್ನು ತೋರಿಸಿದೆ. ಜಿಡಿಪಿ ಬೆಳವಣಿಗೆ ದರವು ಭಾರತೀಯ ರಿಸರ್ವ್ ಬ್ಯಾಂಕ್‌ನ (Reserve Bank of India) ಹಣಕಾಸು ನೀತಿ ಸಮಿತಿಯ ಮುನ್ಸೂಚನೆಯ 16.2 ಶೇಕಡಕ್ಕಿಂತ ಕಡಿಮೆಯಾಗಿದೆ. ಇನ್ನು, ಭಾರತದ ಆರ್ಥಿಕತೆಯು ಕಡಿಮೆ ತಳಹದಿಯ ಕಾರಣದಿಂದಾಗಿ ಆರ್ಥಿಕ ವರ್ಷ 202ರ ಮೊದಲ ತ್ರೈಮಾಸಿಕ (Q1) ರಲ್ಲಿ 20.1 ಶೇಕಡಾ GDP ಬೆಳವಣಿಗೆಯನ್ನು ದಾಖಲಿಸಿದೆ.

Follow Us:
Download App:
  • android
  • ios