ಪ್ರಮುಖ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿರುವ ಮುತ್ತೂಟ್ಟು ಮಿನಿ ಫೈನಾನ್ಶಿಯರ್ಸ್, ವರಮಾನ ವೃದ್ಧಿ, ಲಾಭದ ಪ್ರಮಾಣ ಹೆಚ್ಚಳ ಮತ್ತು ಸಂಪತ್ತಿನ ಗುಣಮಟ್ಟ ಸೇರಿದಂತೆ ಹಣಕಾಸಿನ ಎಲ್ಲ ಪ್ರಮುಖ ಮಾನದಂಡಗಳಲ್ಲಿ ಸದೃಢ ಹಣಕಾಸು ಕಾರ್ಯಕ್ಷಮತೆ ಸಾಧಿಸಿದೆ.

ಕೊಚ್ಚಿ, ಜೂನ್ 17, 2023: ಭಾರತದ ಪ್ರಮುಖ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ (ಎನ್‌ಬಿಎಫ್‌ಸಿ) ಒಂದಾಗಿರುವ ಮುತ್ತೂಟ್ಟು ಮಿನಿ ಫೈನಾನ್ಶಿಯರ್ಸ್, ಹಣಕಾಸು ವರ್ಷ 2022–23ರ ತನ್ನ ಹಣಕಾಸು ಸಾಧನೆಯ ಫಲಿತಾಂಶಗಳನ್ನು ಪ್ರಕಟಿಸಿದ್ದು, ಕಂಪನಿಯು ವರಮಾನ ವೃದ್ಧಿ, ಲಾಭದ ಪ್ರಮಾಣ ಹೆಚ್ಚಳ ಮತ್ತು ಸಂಪತ್ತಿನ ಗುಣಮಟ್ಟ ಸೇರಿದಂತೆ ಎಲ್ಲ ಪ್ರಮುಖ ಮಾನದಂಡಗಳಲ್ಲಿ ಸದೃಢ ಹಣಕಾಸು ಕಾರ್ಯಕ್ಷಮತೆ ಸಾಧಿಸಿದೆ.

ಹಣಕಾಸು ವರ್ಷ 2022–23ರಲ್ಲಿ ಶೇ 30.58ರಷ್ಟು ಸದೃಢ ಎರಡಂಕಿಯಷ್ಟು ವರ್ಷದಿಂದ ವರ್ಷಕ್ಕೆ ಬೆಳವಣಿಗೆ ದಾಖಲಿಸಿರುವ ಕಂಪನಿಯು, ಇಂತಹ ಸಾಧನೆ ಮಾಡಿರುವ ದೇಶದ ಕೆಲವೇ ಕೆಲ ಬ್ಯಾಂಕೇತರ ಹಣಕಾಸು ಕಂಪನಿಗಳಲ್ಲಿ (ಎನ್‌ಬಿಎಫ್‌ಸಿ) ಒಂದಾಗಿದೆ. ಕಂಪನಿಯು ಹಣಕಾಸು ವರ್ಷ 2019–20 ರಿಂದ ಸುಸ್ಥಿರ ಹೆಚ್ಚಳದ ಬೆಳವಣಿಗೆ ದಾಖಲಿಸುತ್ತ ಬಂದಿದೆ. ಅಂದರೆ ಕಳೆದ ನಾಲ್ಕು ವರ್ಷಗಳಲ್ಲಿ ಕಂಪನಿಯು ಒಟ್ಟಾರೆ ಶೇ. 135ರಷ್ಟು ಬೆಳವಣಿಗೆ ದಾಖಲಿಸಿದೆ.

ಇದನ್ನು ಓದಿ: ನೀವು ಪೋಕೆಮಾನ್‌ ಪ್ರಿಯರೇ? ಹಾಗಾದ್ರೆ, ಈ ವಿಮಾನದಲ್ಲೇ ಅನುಭವಿಸಿ 'ಪೋಕೆಮಾನ್ ಏರ್ ಅಡ್ವೆಂಚರ್'

ಮುತ್ತೂಟ್ಟು ಮಿನಿ ಫೈನಾನ್ಶಿಯರ್ಸ್ ₹ 544.44 ಕೋಟಿ ಮೊತ್ತದ ಒಟ್ಟು ವರಮಾನ ಗಳಿಸಿದೆ. ಕಂಪನಿಯ ತೆರಿಗೆಯ ನಂತರದ ಲಾಭ (ಪಿಎಟಿ) ಸಹ ಶೇ 52ರಷ್ಟು ಹೆಚ್ಚಾಗಿದೆ. ಆದರೆ, ತೆರಿಗೆ ಮುಂಚಿನ ಲಾಭವು (ಪಿಬಿಟಿ) ₹ 81.77 ಕೋಟಿಗಳಷ್ಟಿದೆ.

ಕಂಪನಿಯ ಒಟ್ಟಾರೆ ಸಂಪತ್ತು ನಿರ್ವಹಣಾ ಮೊತ್ತವು (ಎಯುಎಂ) ಹಿಂದಿನ ಹಣಕಾಸು ವರ್ಷದಲ್ಲಿನ (2021–22) ₹ 2,498.60 ಕೋಟಿಗೆ ಹೋಲಿಸಿದರೆ, ಹಣಕಾಸು ವರ್ಷ 2022–23ರಲ್ಲಿ ₹ 3,262.78 ಕೋಟಿಗಳಿಗೆ ತಲುಪಿದೆ. ಶೇ 0.37ರಷ್ಟು ಇರುವ ನಿವ್ವಳ ವಸೂಲಾಗದ ಸಾಲದ ಪ್ರಮಾಣದ (ಎನ್‌ಪಿಎ) ಕಾರಣಕ್ಕೆ ಕಂಪನಿಯ ಸಂಪತ್ತಿನ ಗುಣಮಟ್ಟವು ಸದೃಢವಾಗಿಯೇ ಉಳಿದಿದೆ. ಇದು ಉದ್ಯಮದಲ್ಲಿಯೇ ಅತ್ಯುತ್ತಮ ಮಟ್ಟವಾಗಿದೆ.

ಇದನ್ನೂ ಓದಿ: 10 ವರ್ಷದ ಹಿಂದೆ ಟಾಟಾ ಸಮೂಹದ ಈ ಷೇರಿನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 6 ಲಕ್ಷ ಇರುತ್ತಿತ್ತು!

ಈ ವಾರ್ಷಿಕ ಹಣಕಾಸು ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಮುತ್ತೂಟ್ಟು ಮಿನಿ ಫೈನಾನ್ಶಿಯರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮ್ಯಾಥ್ಯೂ ಮುತ್ತೂಟ್ಟು ಅವರು , ‘ನಮ್ಮ ಅಚಲ ದೃಷ್ಟಿಕೋನ ಮತ್ತು ಧ್ಯೇಯಕ್ಕೆ ಅನುಗುಣವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಮುತ್ತೂಟ್ಟು ಮಿನಿ ಶೇ. 135 ರಷ್ಟು ಗಮನಾರ್ಹವಾದ ಬೆಳವಣಿಗೆ ಸಾಧಿಸಿರುವುದನ್ನು ನೋಡಲು ನಮಗೆ ಸಂತೋಷವಾಗುತ್ತದೆ. ಈ ಅವಧಿಯಲ್ಲಿ, ಮುತ್ತೂಟ್ಟು ಮಿನಿಯ ಕ್ರೆಡಿಟ್ ರೇಟಿಂಗ್‌ಗಳು ಪ್ರತಿ ವರ್ಷವೂ ಸುಸ್ಥಿರವಾಗಿ ಮೇಲ್ದರ್ಜೆಗೆ ಏರಿಕೆ ಆಗುತ್ತಿದೆ.

ಕಂಪನಿಯ ಬೆಳವಣಿಗೆಯು ಪರಿಮಾಣಾತ್ಮಕವಾಗಿರುವುದರ ಜೊತೆಗೆ ಗುಣಾತ್ಮಕವಾಗಿಯೂ ಇರುವುದನ್ನು ಇದು ದೃಢಪಡಿಸುತ್ತದೆ. ಮುಖ್ಯವಾಗಿ ಕಂಪನಿ ಹಾಕಿದ ಭದ್ರ ಬುನಾದಿಯಿಂದಾಗಿ ಈ ಬೆಳವಣಿಗೆ ಸಾಧ್ಯವಾಗಿದೆ. ದೇಶಾದ್ಯಂತ ಗ್ರಾಹಕರ ವಿಶ್ವಾಸವನ್ನು ಗೆಲ್ಲುವಲ್ಲಿ ಮುತ್ತೂಟ್ಟು ಮಿನಿ ಕಂಡಿರುವ ಯಶಸ್ಸು ನಮ್ಮ ತಂಡದ ಸಮರ್ಪಣಾಭಾವ ಮತ್ತು ಗ್ರಾಹಕ ಕೇಂದ್ರಿತ ಧೋರಣೆಗೆ ಗಮನಹರಿಸಿರುವುದಕ್ಕೆ ಸಾಕ್ಷಿಯಾಗಿದೆ. ನಾವು ಭವಿಷ್ಯದತ್ತ ಗಮನ ಹರಿಸಿದಾಗ, ಹೊಸ ಮಾರುಕಟ್ಟೆ ಅವಕಾಶಗಳನ್ನು ಬಾಚಿಕೊಳ್ಳುವ, ನಮ್ಮ ವರಮಾನದ ಮೂಲಗಳನ್ನು ವೈವಿಧ್ಯಮಯಗೊಳಿಸುವ ನಮ್ಮ ಸಾಮರ್ಥ್ಯದಲ್ಲಿ ನಾವು ದೃಢ ವಿಶ್ವಾಸ ಹೊಂದಿದ್ದೇವೆ. ನಮ್ಮ ಮೌಲ್ಯಯುತ ಗ್ರಾಹಕರಿಗೆ ಅತ್ಯುತ್ತಮ ಹಣಕಾಸು ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸಲಿದ್ದೇವೆ. ಮುಂಬರುವ ತಿಂಗಳುಗಳಲ್ಲಿ, ಕಂಪನಿಗೆ ಹಾಕಿರುವ ಭದ್ರ ಬುನಾದಿಯನ್ನು ಇನ್ನಷ್ಟು ಬಲಪಡಿಸುವ ಭಾರಿ ಪ್ರಮಾಣದ ಬೆಳವಣಿಗೆ ಕಾಣುವುದನ್ನು ನಾವು ಬಹುವಾಗಿ ನಿರೀಕ್ಷಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: 10 ವರ್ಷಗಳ ಹಿಂದೆ ಈ ಕಂಪನಿಗೆ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 27 ಲಕ್ಷ ರೂ ಇರ್ತಿತ್ತು!

ಮುತ್ತೂಟ್ಟು ಮಿನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಪಿ. ಇ. ಮಥಾಯ್ ಅವರು ಪ್ರತಿಕ್ರಿಯಿಸಿ, ’ಈ ಹಣಕಾಸು ವರ್ಷದ ಬೆಳವಣಿಗೆಯ ಅಂಕಿ ಅಂಶಗಳು ಮುಂಬರುವ ದಿನಗಳಲ್ಲಿ ಕಂಪನಿಯು ಗಣನೀಯ ಬೆಳವಣಿಗೆ ದಾಖಲಿಸುವ ನಮ್ಮ ಯೋಜನೆಗಳ ಜೊತೆಗೆ ಸಮರ್ಪಕವಾಗಿ ಹೊಂದಾಣಿಕೆಯಾಗುತ್ತಿವೆ. ಹಣಕಾಸು ವರ್ಷ 2023–24ರ ಅವಧಿಯಲ್ಲಿ, ನಾವು ದೇಶಾದ್ಯಂತ 130ಕ್ಕೂ ಹೊಸ ಶಾಖೆಗಳನ್ನು ತೆರೆಯಲು ಮತ್ತು ಒಟ್ಟಾರೆ 1,000ಕ್ಕೂ ಹೆಚ್ಚು ಶಾಖೆಯ ಮೈಲುಗಲ್ಲು ತಲುಪಲು ನಾವು ಗುರಿ ನಿಗದಿಪಡಿಸಿದ್ದೇವೆ. ಒಟ್ಟಾರೆ ಸಂಪತ್ತು ನಿರ್ವಹಣೆ (ಎಯುಎಂ) ಮೊತ್ತವನ್ನು ₹ 5,000 ಕೋಟಿಗಳಿಗೆ ಹೆಚ್ಚಿಸುವ ನಮ್ಮ ಗುರಿ ತಲುಪಲು ನಾವು ಪ್ರತಿ ಶಾಖೆಗೆ ₹ 5 ಕೋಟಿ ಮೊತ್ತದ ಸರಾಸರಿ ‘ಎಯುಎಂ’ ಗುರಿ ನಿಗದಿಪಡಿಸಿದ್ದೇವೆ. ಈ ಹಣಕಾಸು ವರ್ಷದಲ್ಲಿ, ಕಂಪನಿಯು ತನ್ನ ಗ್ರಾಹಕರಿಗೆ ತನ್ನ ಡಿಜಿಟಲ್ ಕೊಡುಗೆಗಳನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಕಂಪನಿಯ
‘ಮೈಮುತ್ತೂಟ್ಟು ಆ್ಯಪ್‌’ (MyMuthoottu ‌App) ಬಿಡುಗಡೆ ಸೇರಿದಂತೆ, ಒಂದು ಬಟನ್ ಸ್ಪರ್ಶದಲ್ಲಿ ಸಾಲಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಅಡೆತಡೆರಹಿತ ಅನುಭವ ಒದಗಿಸುತ್ತಿದೆ’ ಎಂದು ಹೇಳಿದ್ದಾರೆ.

ಕಳೆದ ಹಣಕಾಸು ವರ್ಷದಲ್ಲಿ, ಮುತ್ತೂಟ್ಟು ಮಿನಿ ಫೈನಾನ್ಶಿಯರ್ಸ್ 53 ಹೊಸ ಶಾಖೆಗಳನ್ನು ತೆರೆಯುವ ಮೂಲಕ ಮತ್ತು 2 ಲಕ್ಷ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡುವ ಮೂಲಕ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ. ಇದರ ಪರಿಣಾಮವಾಗಿ, ಕಂಪನಿಯ ಜಾಲವು ಈಗ ಒಟ್ಟು 871 ಶಾಖೆಗಳೊಂದಿಗೆ ವ್ಯಾಪಕವಾದ ಹೆಜ್ಜೆಗುರುತನ್ನು ದಾಖಲಿಸಿದೆ. ಇದರಿಂದಾಗಿ ವಿವಿಧ ಪ್ರದೇಶಗಳ ಗ್ರಾಹಕರಿಗೆ ಕಂಪನಿಯ ಹಣಕಾಸು ಸೇವೆಗಳನ್ನು ವಿಸ್ತರಿಸಲು ಸಾಧ್ಯವಾಗಿದೆ.

ಇದನ್ನೂ ಓದಿ: ಇನ್ಫೋಸಿಸ್‌ನ 1 ಲಕ್ಷ ರೂ. ಬೆಲೆಯ ಈ ಷೇರಿನ ಮೌಲ್ಯ ಈಗ 9.58 ಕೋಟಿ.!