10 ವರ್ಷಗಳ ಹಿಂದೆ ಈ ಕಂಪನಿಗೆ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 27 ಲಕ್ಷ ರೂ ಇರ್ತಿತ್ತು!
ನೀವು ಈ ಕಂಪನಿಗೆ 10 ವರ್ಷಗಳ ಹಿಂದೆ 10 ಸಾವಿರ ರೂ. ಹೂಡಿಕೆ ಮಾಡಿದ್ರೆ ಸಾಕಿತ್ತು. ಅದರ ಮೌಲ್ಯ ಈಗ ಸುಮಾರು 27 ಲಕ್ಷ ಆಗುತ್ತಿತ್ತು.
ಮುಂಬೈ (ಮೇ 4, 2023): ನೀವು ಲಕ್ಷಾಧಿಪತಿ ಅಥವಾ ಕೋಟ್ಯಧಿಪತಿಯಾಗುವ ಕನಸು ಕಾನುತ್ತಿದ್ದೀರಾ..? ಇದಕ್ಕೆ ನೀವು ಈ ಕಂಪನಿಗೆ 10 ವರ್ಷಗಳ ಹಿಂದೆ ನಿಮ್ಮ 10 ಸಾವಿರ ರೂ. ಹೂಡಿಕೆ ಮಾಡಿದ್ರೆ ಸಾಕಿತ್ತು. ಅದರ ಮೌಲ್ಯ ಈಗ ಸುಮಾರು 27 ಲಕ್ಷ ಆಗುತ್ತಿತ್ತು. ಹೌದು, ಕಳೆದ 10 ವರ್ಷಗಳ ಅವಧಿಯಲ್ಲಿ ಈ ಕಂಪನಿಯ ಷೇರಿನ ಮೌಲ್ಯ ಸುಮಾರು 27,000% ಏರಿಕೆಯಾಗಿದೆ.
ಸಾಧನಾ ನೈಟ್ರೋ ಕೆಮಿಕಲ್ಸ್‌ನ (Sadhana Nitro Chem Ltd) ಷೇರುಗಳು ಕಳೆದ 10 ವರ್ಷಗಳ ಅವಧಿಯಲ್ಲಿ ಹೂಡಿಕೆದಾರರಿಗೆ ಬೃಹತ್ ಆದಾಯವನ್ನು ನೀಡಿದ್ದು, ಸುಮಾರು 27,000% ಏರಿಕೆಯಾಗಿದೆ. ಅದರಂತೆ, ಹೂಡಿಕೆದಾರರು 10 ವರ್ಷಗಳ ಹಿಂದೆ 10,000 ರೂ.ಗಳನ್ನು ಷೇರುಗಳಲ್ಲಿ ಹೂಡಿಕೆ ಮಾಡಿದ್ದರೆ, ಆ ಹೂಡಿಕೆಯ ಮೌಲ್ಯ ಈಗ 27 ಲಕ್ಷ ರೂ. ಆಗುತ್ತಿತ್ತು. ಅಲ್ಲದೆ, ಕಳೆದ 5 ವರ್ಷಗಳಲ್ಲಿ, ಷೇರುಗಳು 1098% ಏರಿಕೆ ಕಂಡಿವೆ ಮತ್ತು ಕಳೆದ 3 ವರ್ಷಗಳಲ್ಲಿ ಅದೇ ಸುಮಾರು 2289% ಜಿಗಿದಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಇನ್ಫೋಸಿಸ್‌ನ 1 ಲಕ್ಷ ರೂ. ಬೆಲೆಯ ಈ ಷೇರಿನ ಮೌಲ್ಯ ಈಗ 9.58 ಕೋಟಿ.!
ಸಾಧನಾ ನೈಟ್ರೋಕೆಮಿಕಲ್ಸ್ ಮೂಲಭೂತ ಭಾರಿ ಸಾವಯವ ರಾಸಾಯನಿಕಗಳು, ಡೈ ಇಂಟರ್‌ಮೀಡಿಯೇಟ್ಸ್ ಮತ್ತು ಸಾವಯವ ರಾಸಾಯನಿಕಗಳನ್ನು ತಯಾರಿಸುತ್ತದೆ. ಈ ಕಂಪನಿಯು ನೈಟ್ರೋಬೆಂಜೀನ್ ಮತ್ತು ಮೆಟಾ ಅಮಿನೊ ಫಿನಾಲ್ ಅನ್ನು ಉತ್ಪಾದಿಸುತ್ತದೆ.
ಎಕ್ಸ್‌ಚೇಂಜ್ ಕೇಂದ್ರಗಳಲ್ಲಿ ಲಭ್ಯವಿರುವ ಷೇರುದಾರರ ಮಾದರಿಯ ಪ್ರಕಾರ, ಕಂಪನಿಯ 71.63% ರಷ್ಟು ಷೇರುಗಳು ಪ್ರೊಮೋಟರ್‌ಗಳ ಒಡೆತನದಲ್ಲಿದೆ. ಇನ್ನು ಉಳಿದ 28.37% ಷೇರುಗಳನ್ನು ಸಾರ್ವಜನಿಕರು ಹೊಂದಿದ್ದಾರೆ. ಸಾರ್ವಜನಿಕ ಷೇರುದಾರರಲ್ಲಿ, ಮ್ಯೂಚುವಲ್ ಫಂಡ್‌ಗಳು ಅತ್ಯಲ್ಪ ಪಾಲನ್ನು ಹೊಂದಿವೆ, ಹಾಗೂ ವಿದೇಶಿ ಹೂಡಿಕೆದಾರರು ಯಾವುದೇ ಹಿಡುವಳಿ ಹೊಂದಿಲ್ಲ. ರೀಟೇಲ್ ಕಂಪನಿಗಳು ಸುಮಾರು 26% ಪಾಲನ್ನು ಹೊಂದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ದುಬೈನಲ್ಲಿ ಅತ್ಯಂತ ದುಬಾರಿ ಮನೆ ಖರೀದಿಸಿದ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ
ಸ್ಮಾಲ್‌ಕ್ಯಾಪ್ ಕಂಪನಿಯಾದ ಸಾಧನಾ ನೈಟ್ರೋಕೆಮಿಕಲ್ಸ್ 2,400 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ ಮತ್ತು ಹನ್ನೆರಡು ತಿಂಗಳ (ಟಿಟಿಎಂ) ಆಧಾರದ ಮೇಲೆ 0.16 ಇಪಿಎಸ್ ಹೊಂದಿದೆ. ಈ ಸ್ಟಾಕ್ ಪ್ರಸ್ತುತ 745.54 PE ನಲ್ಲಿ ವಹಿವಾಟು ನಡೆಸುತ್ತಿದೆ. ಸಾಧನಾ ನೈಟ್ರೋಕೆಮ್ ಕಂಪನಿಯ ಮಾರಾಟವು FY13 ರಲ್ಲಿ 71.53 ಕೋಟಿಯಿಂದ FY22 ರಲ್ಲಿ 131.72 ಕೋಟಿಗೆ ಬೆಳೆದಿದೆ. ಆದರೆ, ತೆರಿಗೆಯ ನಂತರದ ಲಾಭ (PAT) FY13 ರಲ್ಲಿ 4.22 ಕೋಟಿಯಿಂದ FY22 ರಲ್ಲಿ ಸುಮಾರು 75 ಲಕ್ಷಕ್ಕೆ ಕುಸಿತ ಕಂಡಿದೆ.
ಇತ್ತೀಚಿನ ಡಿಸೆಂಬರ್ ತ್ರೈಮಾಸಿಕದಲ್ಲಿ, ಸಾಧನಾ ನೈಟ್ರೋಕೆಮ್ ಆದಾಯವು ವರ್ಷದಿಂದ ವರ್ಷಕ್ಕೆ 31 ಕೋಟಿ ರೂ.ಗಳಷ್ಟಿದ್ದರೆ, ತೆರಿಗೆಯ ನಂತರದ ಲಾಭ (ಪಿಎಟಿ) 75 ಲಕ್ಷ ರೂ. ಆಗಿದೆ. ಹಿಂದಿನ ವರ್ಷದ ಅವಧಿಯಲ್ಲಿ ವರದಿಯಾದ 1.6 ಕೋಟಿ ರೂಪಾಯಿಗಳಿಂದ ಲಾಭವು ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗಿದೆ ಎಂಬುದು ಆತಂಕಕಾರಿ ಸಂಗತಿ.
ಇದನ್ನೂ ಓದಿ: ಮಾಲೀಕರು ಇನ್ನಿಲ್ಲ ಎಂದು ತಿಳಿಸಲು ಹರ್ಷಿಸುತ್ತೇವೆ: ಸೆಬಿಗೆ ಕಂಪನಿ ಮಾಹಿತಿ..!
ಅದೇ ರೀತಿ, ಮುಂದಿನ ದಿನಗಳಲ್ಲಿ ಕಂಪನಿಯ ಲಾಭವು ಮತ್ತಷ್ಟು ಇಳಿಮುಖವಾಗಲಿದೆ ಎಂದು ತಾಂತ್ರಿಕ ವಿಶ್ಲೇಷಕರು ಸಾಧನಾ ನೈಟ್ರೋಕೆಮ್ ಷೇರಿನ ಬಗ್ಗೆ ಸೂಚಿಸಿದ್ದು, ಇದರಿಂದ ಷೇರು ಮೌಲ್ಯದ ಮೇಲೂ ಪ್ರಭಾವ ಬೀರಬಹುದು.
ಇದನ್ನೂ ಓದಿ: ನಮ್ಮ ಕರೆನ್ಸಿ ನೋಟುಗಳಿಗೆ ಸ್ಪೂರ್ತಿ ಈ ಐತಿಹಾಸಿಕ ಸ್ಮಾರಕಗಳು: ಫೋಟೋಗಳಲ್ಲಿ ನೋಡಿ..