Asianet Suvarna News Asianet Suvarna News

ಶೀಘ್ರದಲ್ಲೇ ಜಿಯೋ ಸಿನಿಮಾ ಸ್ಥಗಿತ? ಮುಕೇಶ್ ಅಂಬಾನಿ ಕಂಪನಿಯಲ್ಲಿ ಮಹತ್ವದ ಬೆಳವಣಿಗೆ!

ಐಪಿಎಲ್ ಸೇರಿದಂತೆ ಕ್ರೀಡೆಗಳ ನೇರ ಪ್ರಸಾರ ಸೇರಿದಂತೆ ಹಲವು ಕಾರ್ಯಕ್ರಮ, ಸಿನಿಮಾಗಳ ಮೂಲಕ ಒಟಿಟಿ ಪ್ಲಾಟ್‌ಫಾರ್ಮ್ ಆಗಿ ಬೆಳೆದಿರುಲ ಜಿಯೋ ಸಿನಿಮಾ ಶೀಘ್ರದಲ್ಲೇ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಮುಕೇಶ್ ಅಂಬಾನಿ ಕಂಪನಿಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
 

Mukesh Ambani set to stop jio cinema due to likely merger deal with disney hotstar ckm
Author
First Published Oct 19, 2024, 6:59 PM IST | Last Updated Oct 19, 2024, 6:59 PM IST

ಮುಂಬೈ(ಅ.19) ಜಿಯೋ ಸಿನಿಮಾ ಒಟಿಟಿ ಪ್ಲಾಟ್‌ಫಾರ್ಮ್ ಭಾರತದ ಅತೀ ದೊಡ್ಡ ಎಂಟರ್ನ್ಮೆಂಟ್ ವೇದಿಕೆಯಾಗಿ ಬೆಳೆದು ನಿಂತಿದೆ. ಐಪಿಎಲ್ ಲೈವ್ ಸ್ಟ್ರೀಮಿಂಗ್, ಲೈವ್ ಶೋ ಕಾರ್ಯಕ್ರಮ, ಕಾಮಿಡಿ, ಸಿನಿಮಾ, ಕ್ರೀಡೆ ಸೇರಿದಂತೆ ಎಲ್ಲವೂ ಜಿಯೋ ಸಿನಿಮಾದಲ್ಲಿ ಲಭ್ಯವಿದೆ. ಅತೀ ಕಡಿಮೆ ದರದಲ್ಲಿ ಈ ಸೇವೆಗಳು ಬಳಕೆದಾರರಿಗೆ ಲಭ್ಯವಿದೆ. ಆದರೆ ಈ ಜಿಯೋ ಸಿನಿಮಾ ಶೀಘ್ರದಲ್ಲೇ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಮುಖ್ಯ ಕಾರಣ ಅಮೆರಿಕ ಮೂಲದ ಡಿಸ್ನಿ ಕಂಪನಿ ಜೊತೆಗಿನ ಪ್ರಮುಖ ಒಪ್ಪಂದ. 

ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಡಿಸ್ನಿ ಪ್ರಮುಖ ಪಾಲುದಾರಿಕೆ ಹೊಂದಿದೆ. ಮೂಲಗಳ ಪ್ರಕಾರ ಈಗಾಗಲೇ ರಿಲಯನ್ಸ್ ಡಿಸ್ನಿ ಪಾಲನ್ನು ಖರೀದಿಸಿದೆ. ಇದೀಗ ಸ್ಟಾರ್ ಸ್ಪೋರ್ಟ್ಸ್ ಹಾಗೂ ರಿಲಯನ್ಸ್ ಜಿಯೋ ಪಾಲುದಾರಿಕೆಯಲ್ಲಿ ಸಾಗಲಿದೆ. ರಿಲಯನ್ಸ್ ಮಾಲೀಕತ್ವದ 18 ಸ್ಪೋರ್ಟ್ಸ್ ಹಾಗೂ ಸ್ಟಾರ್ ಸ್ಪೋರ್ಟ್ಸ್ ಮರ್ಜ್ ಆಗುತ್ತಿದೆ. ಇತ್ತ ರಿಲಯನ್ಸ್ ಜಿಯೋ ಅಡಿಯಲ್ಲಿ ಜಿಯೋ ಸಿನಿಮಾ ಒಟಿಟಿ ಪ್ಲಾಟ್‌ಫಾರ್ಮ್ ಬೆಳೆದು ನಿಂತಿದೆ. ಸ್ಟಾರ್ ಹಾಗೂ ಡಿಸ್ನಿ ಅಡಿಯಲ್ಲಿ ಡಿಸ್ನಿ ಹಾಟ್‌ಸ್ಟಾರ್ ಲೈವ್ ಸ್ಟ್ರೀಮ್ ಪ್ಲಾಟ್‌ಫಾರ್ಮ್ ಅತೀ ದೊಡ್ಡ ಒಟಿಟಿ ಪ್ಲಾಟ್‌ಫಾರ್ಮ್ ಆಗಿದೆ. ಇದೀಗ ಸ್ಟಾರ್ ಜೊತೆ ಜಿಯೋ ಮರ್ಜ್ ಆಗುತ್ತಿರುವ ಕಾರಣ ರಿಲಯನ್ಸ್ ಎರಡೆರಡು ಒಟಿಟಿ ಪ್ಲಾಟ್‌ಫಾರ್ಮ್ ಮುಂದುವರಿಸುವ ಸಾಧ್ಯತೆ ಕಡಿಮೆ. ಹೀಗಾಗಿ ಜಿಯೋ ಸಿನಿಮಾವನ್ನು ಹಾಟ್‌ಸ್ಟಾರ್ ಜೊತೆ ಮರ್ಜ್ ಮಾಡುವ ಸಾಧ್ಯತೆ ಹೆಚ್ಚಿದೆ.

ಜಿಯೋದಿಂದ ಅತೀ ಕಡಿಮೆ ಬೆಲೆಯ 4ಜಿ ಫೀಚರ್ ಫೋನ್‌ ಜಿಯೋಭಾರತ್ V3, V4 ಲಾಂಚ್!

ಜಿಯೋ ಹಾಟ್‌ಸ್ಟಾರ್ ಹೆಸರಿನಲ್ಲಿ ಜಂಟಿಯಾಗಿ ಸೇವೆ ನೀಡುವ ಸಾಧ್ಯತೆ ಇದೆ. ಮುಕೇಶ್ ಅಂಬಾನಿ ಈ ರೀತಿ ಒಟಿಟಿ ಪ್ಲಾಟ್‌ಫಾರ್ಮ್ ಸ್ಥಗಿತಗೊಳಿಸಿ ಒಂದೇ ವೇದಿಕೆಯಲ್ಲಿ ಎಲ್ಲಾ ಸೇವೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ವಯಾಕಾಮ್ 18 ತನ್ನದೇ ಆದ ಒಟಿಟಿ ಪ್ಲಾಟ್‌ಫಾರ್ಮ್ ವೂಟ್ ಕಾರ್ಯನಿರ್ವಹಿಸುತ್ತಿತ್ತು. ಆದರೆ ಮುಕೇಶ್ ಅಂಬಾನಿ ವೂಟ್ ಒಟಿಟಿ ಪ್ಲಾಟ್‌ಫಾರ್ಮ್‌ನ್ನು ಜಿಯೋ ಸಿನಿಮಾ ಜೊತೆ ಮರ್ಜ್ ಮಾಡಲಾಗಿತ್ತು. ಬಳಿಕ ಜಿಯೋ ಸಿನಿಮಾ ಆಗಿ ದೊಡ್ಡ ಒಟಿಟಿ ಪ್ಲಾಟ್‌ಫಾರ್ಮ್ ಸೇವೆ ನೀಡಿತ್ತು.

ಜಿಯೋ ಸಿನಿಮಾ ಸ್ಥಗಿತಗೊಳಿಸಿ, ಡಿಸ್ನಿ ಹಾಟ್‌ಸ್ಟಾರ್ ಮುಂದುವರಿಸಲು ಒಂದು ಪ್ರಮುಖ ಕಾರಣವಿದೆ. ಡಿಸ್ನಿ ಹಾಟ್‌ಸ್ಟಾರ್ ಬರೋಬ್ಬರಿ 500 ಮಿಲಿಯನ್ ಡೌನ್ಲೋಡ್ ಕಂಡಿದೆ. ಇತ್ತ ಜಿಯೋ ಸಿನಿಮಾ 100 ಮಿಲಿಯನ್ ಡೌನ್ಲೋಡ್ ಆಗಿದೆ. ಈ ಪೈಕಿ ಡಿಸ್ನಿ ಹಾಟ್‌ಸ್ಟಾರ್ 35.3 ಮಿಲಿಯನ್ ಪಾವತಿ ಚಂದಾದಾರರಿದ್ದಾರೆ. ಹೀಗಾಗಿ ಒಟಿಟಿ ಪ್ಲಾಟ್‌ಫಾರ್ಮ್ ವ್ಯಾಪ್ತಿ, ವಿಸ್ತರಣೆ, ಬಳಕೆಯಲ್ಲಿ ಡಿಸ್ನಿ ಹಾಟ್‌ಸ್ಟಾರ್ ಅತೀ ದೊಡ್ಡ ಪ್ಲಾಟ್‌ಫಾರ್ಮ್ ಆಗಿದೆ. ಹೀಗಾಗಿ ಜಿಯೋ ಸಿನಿಮಾ ಸ್ಥಗಿತಗೊಳಿಸಿ ಹಾಟ್‌ಸ್ಟಾರ್ ಮುುಂದುವರಿಸುವ ಸಾಧ್ಯತೆ ಇದೆ.

ಕೇವಲ 39 ರೂಪಾಯಿ ISD ರೀಚಾರ್ಜ್ ಪ್ಲಾನ್ ಘೋಷಿಸಿದ ಜಿಯೋ, ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ!
 

Latest Videos
Follow Us:
Download App:
  • android
  • ios