ಜಿಯೋದಿಂದ ಅತೀ ಕಡಿಮೆ ಬೆಲೆಯ 4ಜಿ ಫೀಚರ್ ಫೋನ್‌ ಜಿಯೋಭಾರತ್ V3, V4 ಲಾಂಚ್!

4ಜಿ ಫೀಚರ್ ಫೋನ್ ಅತೀ ಕಡಿಮೆ ಬೆಲೆಯಲ್ಲಿ ಲಭ್ಯ. ಇದೀಗ ರಿಲಯನ್ಸ್ ಜಿಯೋ ಇದೀಗ ಜಿಯೋ ಭಾರತ್ V3 ಮತ್ತು V4 ಫೋನ್ ಬಿಡುಗಡೆ ಮಾಡಿದೆ. ಈ ಫೋನ್ ಫೀಚರ್, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

Reliance jio launch new jiobharat v3 and v4 4g feature phone at India Mobile Congress ckm

ನವದೆಹಲಿ(ಅ.15): ಇಂಡಿಯಾ ಮೊಬೈಲ್ ಕಾಂಗ್ರೆಸ್ 2024ರಲ್ಲಿ ರಿಲಯನ್ಸ್ ಜಿಯೋ ಎರಡು ಹೊಸ 4ಜಿ ಫೀಚರ್ ಫೋನ್‌ ಬಿಡುಗಡೆ ಮಾಡಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಮೆಘಾ ಈವೆಂಟ್‌ನಲ್ಲಿ ಜಿಯೋ, V3 ಮತ್ತು V4 ಎರಡೂ ಜಿಯೋಭಾರತ್ (JioBharat) ಸರಣಿ ಅಡಿಯಲ್ಲಿ ಬಿಡುಗಡೆಯಾದ 4ಜಿ ವೈಶಿಷ್ಟ್ಯದ ಫೋನ್ ಗಳಾಗಿವೆ. ಹೊಸ ಮಾಡೆಲ್‌ಗಳು 1099 ರೂಪಾಯಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ. ಜಿಯೋಭಾರತ್ V2 ಮಾದರಿಯನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿತ್ತು. ಇದು ಭಾರತೀಯ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದು, ಕಂಪನಿಯ ಪ್ರಕಾರ, ಲಕ್ಷಾಂತರ 2ಜಿ ಗ್ರಾಹಕರು ಜಿಯೋಭಾರತ್ ಫೀಚರ್ ಫೋನ್‌ಗಳ ಮೂಲಕ 4ಜಿಗೆ ಬದಲಾಗಿದ್ದಾರೆ.

ಮುಂದಿನ ಪೀಳಿಗೆಯ ಈ ಹೊಸ 4ಜಿ ಫೀಚರ್ ಫೋನ್‌ಗಳು ಆಧುನಿಕ ವಿನ್ಯಾಸ, ಶಕ್ತಿಯುತ 1000 mAh ಬ್ಯಾಟರಿ, 128 ಜಿಬಿವರೆಗೆ ವಿಸ್ತರಿಸಬಹುದಾದ ಸಂಗ್ರಹ ಹಾಗೂ 23 ಭಾರತೀಯ ಭಾಷೆಗಳಿಗೆ ಬೆಂಬಲದೊಂದಿಗೆ ಬರುತ್ತವೆ. ಜಿಯೋಭಾರತ್ ಫೋನ್ ಅನ್ನು ಕೇವಲ 123 ರೂಪಾಯಿಗಳಲ್ಲಿ ಮಾಸಿಕ ರೀಚಾರ್ಜ್ ಮಾಡಬಹುದು. ಇದರಲ್ಲಿ ಅನಿಯಮಿತ ಧ್ವನಿ ಕರೆಗಳು ಮತ್ತು 14 ಜಿಬಿ ಡೇಟಾ ಸಹ ಲಭ್ಯವಿರುತ್ತದೆ.

V3 ಮತ್ತು V4 ಎರಡೂ ಮಾದರಿಗಳು ಜಿಯೋ-ಟಿವಿ, ಜಿಯೋ- ಸಿನಿಮಾ, ಜಿಯೋ- ಪೇ ಮತ್ತು ಜಿಯೋ-ಚಾಟ್ ನಂತಹ ಕೆಲವು ಉತ್ತಮವಾದ ಪ್ರೀ- ಲೋಡ್ ಮಾಡಿದ ಅಪ್ಲಿಕೇಷನ್‌ಗಳೊಂದಿಗೆ ಬರುತ್ತವೆ. 455 ಲೈವ್ ಟಿವಿ ಚಾನೆಲ್‌ಗಳ ಜೊತೆಗೆ ಚಲನಚಿತ್ರಗಳು, ವಿಡಿಯೋಗಳು ಮತ್ತು ಕ್ರೀಡಾ ಕಂಟೆಂಟ್ ಗಳು ಸಹ ಗ್ರಾಹಕರಿಗೆ ಒಂದು ಕ್ಲಿಕ್‌ನಲ್ಲಿ ಲಭ್ಯವಿರುತ್ತವೆ. ಮತ್ತೊಂದೆಡೆ, ಜಿಯೋಪೇ ತಡೆರಹಿತ ಪಾವತಿಗಳನ್ನು ನೀಡುತ್ತದೆ ಹಾಗೂ ಜಿಯೋಚಾಟ್ ಅನಿಯಮಿತ ಧ್ವನಿ ಸಂದೇಶ, ಫೋಟೋ ಹಂಚಿಕೆ ಮತ್ತು ಗುಂಪು ಚಾಟ್ ಆಯ್ಕೆಗಳನ್ನು ನೀಡುತ್ತವೆ.

ಜಿಯೋ ಭಾರತ್ V3 ಮತ್ತು V4 ಶೀಘ್ರದಲ್ಲೇ ಎಲ್ಲ ಮೊಬೈಲ್ ಸ್ಟೋರ್‌ಗಳಲ್ಲಿ ಹಾಗೂ ಜಿಯೋಮಾರ್ಟ್ ಮತ್ತು ಅಮೆಜಾನ್ ನಲ್ಲಿ ಲಭ್ಯವಿರುತ್ತದೆ.

Latest Videos
Follow Us:
Download App:
  • android
  • ios