ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್, ವೆನಿಜುವೆಲಾದಿಂದ ನೇರವಾಗಿ ಕಚ್ಚಾ ತೈಲವನ್ನು ಖರೀದಿಸಲು ಅಮೆರಿಕಾದಿಂದ ಪರವಾನಿಗೆ ಪಡೆದುಕೊಂಡಿದೆ. ಇದಕ್ಕೂ ಮೊದಲು ಹಲವು ತೈಲ ಕಂಪನಿಗಳು ವೆನೆಜುವೆಲಾದಿಂದ ಕಚ್ಚಾತೈಲ ಖರೀದಿಗೆ ಅಮೆರಿಕಾದ ಪರವಾನಿಗೆಯನ್ನು ಕೇಳಿದ್ದವು.

ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ವೆನೆಜುವೆಲಾದ ಕಚ್ಚಾ ತೈಲವನ್ನು (Venezuela crude oil) ಖರೀದಿಸಲು ಅಮೆರಿಕಾದಿಂದ ಪರವಾನಿಗೆಯನ್ನು ಪಡೆದುಕೊಂಡಿದೆ. ವರದಿಗಳ ಪ್ರಕಾರ, ದೇಶದ ಅತಿದೊಡ್ಡ ಖಾಸಗಿ ಸಂಸ್ಕರಣಾಗಾರ (Private Refiner Company) ಯಾವುದೇ ಮಧ್ಯವರ್ತಿಯಿಲ್ಲದೇ ವೆನೆಜುವೆಲಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಬಹುದಾಗಿದೆ. ಈವರೆಗೆ ರಿಲಯನ್ಸ್ ಸಂಸ್ಥೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.

ಅಮೆರಿಕೆ ಜೊತೆಗಿನ ಒಪ್ಪಂದದ ಬಳಿಕ ರಿಲಯನ್ಸ್ ಪರವಾನಿಗೆ ಪಡೆದುಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವ್ಯಾಪಾರ ಒಪ್ಪಂದ ಘೋಷಿಸುವ ಸಂದರ್ಭದಲ್ಲಿ ರಷ್ಯಾದೊಂದಿಗೆ ತೈಲ ಖರೀದಿಯನ್ನು ಭಾರತ ಸಂಪೂರ್ಣವಾಗಿ ನಿಲ್ಲಿಸಲಿದೆ ಎಂದು ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ರಿಲಯನ್ಸ್‌ಗೆ ಈ ಪರವಾನಿಗೆ ದೊರಕಿದೆ ಎಂದು ಹೇಳಲಾಗುತ್ತಿದೆ.

ರಿಲಯನ್ಸ್ ಕೆಲವು ಕಂಪನಿಗಳಿಗೆ ಸಿಕ್ಕಿದೆ ಪರವಾನಿಗೆ

ಉದ್ಯಮಿ ಮುಕೇಶ್ ಅಂಬಾನಿ (Mukesh Amabni) ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಗುಜರಾತಿನ ಜಾಮ್‌ನಗರದಲ್ಲಿ ವಿಶ್ವದ ಅತಿದೊಡ್ಡ ಸಂಸ್ಕರಣಾ ಸಂಕೀರ್ಣವನ್ನು (World's largest processing complex) ನಿರ್ವಹಿಸುತ್ತದೆ. ಕೆಲ ಮಾಧ್ಯಮಗಳ ವರದಿ ಪ್ರಕಾರ, ಜನವರಿ ತಿಂಗಳಾಂತ್ಯದಲ್ಲಿ ವೆನೆಜುವೆಲಾದಿಂದ ನೇರವಾಗಿ ತೈಲ ಖರೀದಿಸುವ ಅವಕಾಶವನ್ನು ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಸೇರಿದಂತೆ ಕೆಲವೇ ಕೆಲವು ಅಂತರರಾಷ್ಟ್ರೀಯ ಕಂಪನಿಗಳಿಗೆ ಅಮೆರಿಕಾ ಪರವಾನಿಗೆ ನೀಡಿದೆ.

ಹೆಚ್ಚಾಗಲಿದೆ ರಿಲಯನ್ಸ್ ಲಾಭದ ಪ್ರಮಾಣ

ವೆನೆಜುವೆಲಾ ಅಪಾರ ಪ್ರಮಾಣದ ಕಚ್ಚಾತೈಲವನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಜಾಮ್‌ನಗರದಲ್ಲಿರುವ ಸಂಸ್ಕರಣಾ ಸಂಕೀರ್ಣ ಘಟಕ ಇಂತಹ ಕಚ್ಚಾತೈಲವನ್ನು ಸುಲಭವಾಗಿ ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ರಿಲಯನ್ಸ್ ಸಂಸ್ಥೆಯ ಲಾಭದ ಪ್ರಮಾಣ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸುತ್ತಾರೆ. ಇದಕ್ಕೂ ಮೊದಲು ಹಲವು ತೈಲ ಕಂಪನಿಗಳು ವೆನೆಜುವೆಲಾದಿಂದ ಕಚ್ಚಾತೈಲ ಖರೀದಿಗೆ ಅಮೆರಿಕಾದ ಪರವಾನಿಗೆಯನ್ನು ಕೇಳಿದ್ದವು.

ಭಾರತ ಸರ್ಕಾರ ದೇಶದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳನ್ನು ವೆನೆಜುವೆಲಾದಿಂದ ಹೆಚ್ಚಿನ ಕಚ್ಚಾ ತೈಲವನ್ನು ಖರೀದಿಸಲು ಪರಿಗಣಿಸುವಂತೆ ಅಮೆರಿಕಾಗೆ ಹೇಳಿತ್ತು ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಇತ್ತೀಚೆಗೆ ಅಮೆರಿಕ ಜೊತೆ ನಡೆದ ಒಪ್ಪಂದದ ಬಳಿಕ ಈ ಮಾಹಿತಿಗಳು ಹೊರ ಬಂದಿವೆ. ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳೋದನ್ನು ಸಂಪೂರ್ಣವಾಗಿ ಸ್ಥಗಿತ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆಯ ಮಾತುಗಳನ್ನಾಡಿದ್ದಾರೆ.

ಭಾರತ ಅಮೆರಿಕಾದಿಂದ ದಿನಕ್ಕೆ ಸುಮಾರು 400,000 ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಳ್ಳಬಹುದು. ಕಳೆದ ವರ್ಷಕ್ಕಿಂತ ಆಮದು ಪ್ರಮಾಣ ದಿನಕ್ಕೆ 225,000 ಬ್ಯಾರೆಲ್‌ ಹೆಚ್ಚಾಗಿದೆ. ಈ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಕುರಿತು ಚಿಂತನೆಗಳು ನಡೆದಿವೆ. ಇನ್ನು ಎಂದಿನಂತೆ ರಿಲಯನ್ಸ್‌ಗೆ ಸಿಕ್ಕ ಪರವಾನಿಗೆ ಕುರಿತು ಪ್ರತಿಕ್ರಿಯಿಸಲು ಪೆಟ್ರೋಲಿಯಂ ಸಚಿವಾಲಯ ಮತ್ತು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಈ ವಿಷಯದ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಲು ನಿರಾಕರಿಸಿವೆ.

ಇದನ್ನೂ ಓದಿ: ಪ್ರೇಮಿಗಳ ದಿನಕ್ಕಾಗಿ ಫ್ಲಿಪ್‌ಕಾರ್ಟ್‌ನಿಂದ ಬಿಗ್‌ ಗಿಫ್ಟ್! ಐಫೋನ್‌ ಬೆಲೆಯಲ್ಲಿ 13 ಸಾವಿರ ರೂ. ಮೆಗಾ ಡಿಸ್ಕೌಂಟ್

2019ರಲ್ಲಿ ನಿರ್ಬಂಧ ವಿಧಿಸಿತ್ತು ಅಮೆರಿಕಾ

ವೆನೆಜುವೆಲಾ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯ (OPEC) ಸದಸ್ಯ ರಾಷ್ಟ್ರವಾಗಿದೆ. ಇದು ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿದೆ, ಆದರೆ ಇದು ಜಾಗತಿಕ ಪೂರೈಕೆಯಲ್ಲಿ ಕೇವಲ 1% ರಷ್ಟು ಮಾತ್ರ ಪೂರೈಕೆಯನ್ನು ಮಾಡುತ್ತದೆ 2019ರಲ್ಲಿ ವೆನೆಜುವೆಲಾ ತೈಲ ಖರೀದಿ ಮೇಲೆ ಅಮೆರಿಕೆ ನಿರ್ಬಂಧ ವಿಧಿಸಿತ್ತು. ಹಾಗಾಗಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ವೆನೆಜುವೆಲಾದಿಂದ ತೈಲ ಖರೀದಿಯನ್ನು ನಿಲ್ಲಿಸಿದ್ದವು.

ಇದನ್ನೂ ಓದಿ: ದ್ರಾಕ್ಷಿ ಕೃಷಿಯಲ್ಲಿ ವಿಜಯಪುರ ರೈತನ ಕ್ರಾಂತಿ; 4 ಎಕರೆ ಜಮೀನಿನಲ್ಲಿ 40-45 ಲಕ್ಷ ಆದಾಯ

ವಿಶ್ವದ ಪ್ರಮುಖ ತೈಲ ನಿಕ್ಷೇಪ ಹೊಂದಿರುವ 10 ರಾಷ್ಟ್ರಗಳು

ಸ್ಥಾನದೇಶಸಾಮರ್ಥ್ಯ (ಬ್ಯಾರೆಲ್)OPEC ಸದಸ್ಯತ್ವ
1ವೆನೆಜುವೆಲಾ303ಇದೆ
2ಸೌದಿ ಅರೇಬಿಯಾ267ಇದೆ
3ಇರಾನ್ 209ಇದೆ
4ಕೆನಡಾ163ಇಲ್ಲ
5ಇರಾಕ್ 145ಇದೆ
6UAE113ಇದೆ
7ಕುವೈತ್102ಇದೆ
8ರಷ್ಯಾ80OPEC+
9ಅಮೆರಿಕಾ 74ಇಲ್ಲ
10ಲಿಬಿಯಾ48ಇದೆ