ಮುಂಬೈ(ಡಿ.24): ಪ್ರಸಕ್ತ ವರ್ಷ ಬಹುತೇಕ ಉದ್ಯಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರೆ, 2019 ಏಷ್ಯಾದ ಅತ್ಯಂತ ಶ್ರೀಮಂತ  ಉದ್ಯಮಿ ಮುಖೇಶ್ ಅಂಬಾನಿ ಸಂತಸದ ವರ್ಷವಾಗಿದೆ.

 ಪ್ರಸಕ್ತ ಸಾಲಿನಲ್ಲಿ ಮುಖೇಶ್ ಅಂಬಾನಿ ಅವರ ಒಟ್ಟು ಆಸ್ತಿಯಲ್ಲಿ ಬರೋಬ್ಬರಿ 17 ಬಿಲಿಯನ್ ಡಾಲರ್ ಏರಿಕೆಯಾಗಿದ್ದು, ಒಟ್ಟು ಶೇ.40 ರಷ್ಟು ಆಸ್ತಿ ಹೆಚ್ಚಾಗಿದೆ.

ಸರ್ಕಾರಿ ಐಒಸಿ ಹಿಂದಿಕ್ಕಿದ ರಿಲಯನ್ಸ್ ಈಗ ಆದಾಯದಲ್ಲಿ ನಂ.1

ಮುಖೇಶ್ ಅಂಬಾನಿ ಸದ್ಯ ಒಟ್ಟು 61 ಬಿಲಿಯನ್ ಡಾಲರ್ ಆಸ್ತಿಯ ಒಡೆಯರಾಗಿದ್ದು, ಈ ಕುರಿತು ಬ್ಲೂಂಬರ್ಗ್ ಬಿಲಿಯನೇರ್ ಇಂಡೆಕ್ಸ್ ವರದಿ ಪ್ರಕಟಿಸಿದೆ.

ಅದರಂತೆ ಅಲಿಬಾಬಾ ಗ್ರೂಪ್ ಫೌಂಡರ್ ಜಾಕ್ ಮಾ ಆದಾಯದಲ್ಲಿ ಒಟ್ಟು11.3 ಬಿಲಿಯನ್ ಡಾಲರ್ ಏರಿಕೆಯಾಗಿದ್ದು, ಇದಕ್ಕೆ ತದ್ವಿರುದ್ಧವಾಗಿ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ 13.2 ಬಿಲಿಯನ್ ಆಸ್ತಿ ಕಳೆದುಕೊಂಡಿದ್ದಾರೆ.

ಬಿಗ್ ಬ್ರೇಕಿಂಗ್: ಅಂಬಾನಿ 3 ವರ್ಷಗಳ ‘ಪ್ಲ್ಯಾನ್’ ಬಹಿರಂಗ!

ರಿಲಯನ್ಸ್ ಇಂಡಸ್ತ್ರಿ ಷೇರಿನ ಮೌಲ್ಯದಲ್ಲಿ ಒಟ್ಟು ಶೇ.40ರಷ್ಟು ಏರಿಕೆ ಕಂಡುಬಂದಿದ್ದು, ಈ ವರ್ಷದಲ್ಲಿ ಅಂಬಾನಿ ವ್ಯಾಪಾರ ಅತ್ಯಂತ ಉನ್ನತ ಮಟ್ಟದಲ್ಲಿತ್ತು ಎಂದು ವರದಿ ತಿಳಿಸಿದೆ.

ಅಂಬಾನಿ ಭಾರತದ ವಾಣಿಜ್ಯ ಕ್ಷೇತ್ರವನ್ನು ಅಕ್ಷರಶ: ಆಳುತ್ತಿದ್ದು, ವ್ಯಾಪಾರ ಕ್ಷೇತ್ರದ ಗತಿಯನ್ನೇ ಬದಲಿಸಿದ್ದಾರೆ ಎಂದು ಬ್ಲೂಂಬರ್ಗ್ ಬಿಲಿಯನೇರ್ ಇಂಡೆಕ್ಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.