ಬಿಗ್ ಬ್ರೇಕಿಂಗ್: ಅಂಬಾನಿ 3 ವರ್ಷಗಳ ‘ಪ್ಲ್ಯಾನ್’ ಬಹಿರಂಗ!

ಮೂರು ವರ್ಷಗಳಲ್ಲಿ ಮುಖೇಶ್ ಅಂಬಾನಿ ಪ್ಲ್ಯಾನ್| ವ್ಯಾಪಾರ ಕ್ಷೇತ್ರದ ಅಧಿಪತಿ ಮಾಡಲಿರುವುದೇನು ಗೊತ್ತಾ?| ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಖೇಶ್ ಅಂಬಾನಿ| ಮೂರು ವರ್ಷಗಳಲ್ಲಿ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಲಿರುವ ಅಂಬಾನಿ| ಹುರುನ್ ಸಂಶೋಧನಾ ಸಂಸ್ಥೆಯ ವರದಿಯಲ್ಲಿ ಉಲ್ಲೇಖ|

Mukesh Ambani May Reach 5th Place In Richest People In the world

ಮುಂಬೈ(ಡಿ.12): 10 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಗಳಿಸುವ ಮೂಲಕ ವ್ಯಾಪಾರ ಕ್ಷೇತ್ರದ ಅಧಿಪತಿಯಾಗಿರುವ ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಖೇಶ್ ಅಂಬಾನಿ, ಇಷ್ಟಕ್ಕೆ ತೃಪ್ತಿಪಟ್ಟುಕೊಳ್ಳಲಿದ್ದಾರೆ ಎಂದರೆ ಅದು ನಿಮ್ಮ ತಪ್ಪು ಕಲ್ಪನೆ ಆದೀತು.

ಸೌದಿ ಅರೇಬಿಯಾದ ಅರ್ಮಾಕೋ ಕಂಪನಿ ಜೊತೆ 15 ಬಿಲಿಯನ್ ಯುಎಸ್ ಡಾಲರ್ ಒಪ್ಪಂದ ಮಾಡಿಕೊಂಡಿರುವ ಮುಖೇಶ್ ಅಂಬಾನಿ ಇದೀಗ ಮತ್ತೊಂದು ಮೈಲಿಗಲ್ಲು ತಲುಪಲು ಸಜ್ಜಾಗಿದ್ದಾರೆ.

ರಿಲಯನ್ಸ್ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ ಏರಿಕೆ

ಈಗಾಗಲೇ ವಿಶ್ವದ 9ನೇ ಆಗರ್ಭ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮುಖೇಶ್ ಅಂಬಾನಿ, ಮುಂದಿನ ಮೂರು ವರ್ಷಗಳಲ್ಲಿ ವಿಶ್ವದ ಆಗರ್ಭ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಲಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಹುರುನ್ ಸಂಶೋಧನಾ ಸಂಸ್ಥೆ, ರಿಟೇಲ್, ಟೆಲಿಕಾಂ ಕ್ಷೇತ್ರಗಳಲ್ಲಿ ಅಭೂತಪೂರ್ವ ಯಶಸ್ಸುಗಳಿಸಿರುವ ಮುಖೇಶ್ ಅಂಬಾನಿ, ಭವಿಷ್ಯದ ಯೋಜನೆಗಳ ಮೂಲಕ ಮತ್ತಷ್ಟು ಶ್ರೀಮಂತಿಕೆಯನ್ನು ಗಳಿಸಲಿದ್ದಾರೆ ಎಂದು ಹೇಳಿದೆ.

ಜಿಯೋ' ಅಂಬಾನಿ: ಅದ್ದೂರಿ ಆಫರ್‌ಗಳಿಂದ ಭರ್ಜರಿ ಪಾಯಿಂಟ್!

ಶ್ರೀಮಂತಿಕೆಯಲ್ಲಿ ಈಗಾಗಲೇ ಗೂಗಲ್ ಸಂಸ್ಥಾಪಕರಾದ ಲ್ಯಾರಿ ಪೇಜ್ ಹಾಗೂ ಮೈಕೆಲ್ ಬ್ಲೂಂಬರ್ಗ್ ಅವರನ್ನು ಹಿಂದಿಕ್ಕಿರುವ ಮುಖೇಶ್, ಕೇವಲ ಮೂರು ವರ್ಷಗಳಲ್ಲಿ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಲಿದ್ದಾರೆ ಎಂದು ಹುರುನ್ ಸ್ಪಷ್ಟಪಡಿಸಿದೆ.

ಭಾರತದ ನಂ.1 ಶ್ರೀಮಂತ ಎಂದು ಖ್ಯಾತಿ ಗಳಿಸಿರುವ ಮುಖೇಶ್ ಅಂಬಾನಿ, ಈ ಪಟ್ಟಿಯಲ್ಲಿ  2 ಮತ್ತು 3ನೇ ಸ್ಥಾನದಲ್ಲಿರುವ ಹಿಂದುಜಾ ಹಾಗೂ ಅಜೀಂ ಪ್ರೇಮ್’ಜೀ ಅವರ ಒಟ್ಟು ಆಸ್ತಿಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ.

ಮುಕೇಶ್‌ ಅಂಬಾನಿಯಿಂದ ಮತ್ತೊಂದು ದೈತ್ಯ ಇ-ಕಾಮರ್ಸ್ ಕಂಪನಿ

ಪೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಷ್ಯಾದ ಏಕೈಕ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೂ  ಮುಖೇಶ್ ಅಂಬಾನಿ ಪಾತ್ರರಾಗಿದ್ದಾರೆ.

ಡಿಸೆಂಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios