67ನೇ ವಯಸ್ಸಿನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಮುಕೇಶ್ ಅಂಬಾನಿ: ಈ ಬಾರಿಯಾದ್ರೂ ಸಿಗುತ್ತಾ ಸಕ್ಸಸ್?
ಭಾರತೀಯ ಮಾರುಕಟ್ಟೆಯಲ್ಲಿ Nike, H&M, ಮತ್ತು Zara ನಂತಹ ದೈತ್ಯ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಈ ಪಾಲುದಾರಿಕೆಯು ಟಾಟಾ ಝೂಡಿಯೋ ಮತ್ತು ಫ್ಲಿಪ್‌ಕಾರ್ಟ್‌ನ ಮಿಂತ್ರಾಗೆ ಸಹ ಸ್ಪರ್ಧೆಯನ್ನು ಒಡ್ಡಲಿದೆ.
ಮುಂಬೈ: ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ, ನಾಲ್ಕು ವರ್ಷಗಳ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಮುಕೇಶ್ ಅಂಬಾನಿಯವರ ಈ ಎರಡನೇ ಇನ್ನಿಂಗ್ಸ್‌ಗೆ ಚೀನಾದ ಕಂಪನಿ ಸಾಥ್ ನೀಡುತ್ತಿದೆ. ಅಸಲಿಗೆ ಇದು ಸಿಂಗಾಪುರದ ಮೂಲದ ಕಂಪನಿಯಾಗಿದೆ. ಈಗಾಗಲೇ ಭಾರತದಲ್ಲಿ ಜನಪ್ರಿಯವಾಗಿರುವ ನಾಲ್ಕೈದು ದೈತ್ಯ ಕಂಪನಿಗಳ ಜೊತೆ ಮುಕೇಶ್ ಅಂಬಾನಿ ಸ್ಪರ್ಧೆಗೆ ಇಳಿಯುತ್ತಿದ್ದಾರೆ. ಕೈಗೆಟುಕುವ ಫ್ಯಾಶನ್ ಬ್ರ್ಯಾಂಡ್ ಆಗಿರುವ ಚೀನಾದ 'ಶೇನ್' (Shein) ಭಾರತಕ್ಕೆ ಹಿಂದಿರುಗುತ್ತಿದೆ.
ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಮುಕೇಶ್ ಅಂಬಾನಿಯವರ ರಿಲಯನ್ಸ್ ರಿಟೇಲ್ ಜೊತೆಗಿನ ಪಾಲುದಾರಿಕೆಯೊಂದಿಗೆ ಶೇನ್ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಭಾರತದಲ್ಲಿರುವ Nike, H&M, and Zara ಬ್ರ್ಯಾಂಡ್ ರೀತಿಯಲ್ಲಿ ತನ್ನ ಉತ್ಪನ್ನಗಳನ್ನು ಶೇನ್ ಮಾರಾಟ ಮಾಡುತ್ತಿದೆ. ರಿಲಯನ್ಸ್ ಆಜಿಯೋ ವೆಬ್ ಸೈಟ್‌ನಲ್ಲಿ ಶೇನ್ ಕಂಪನಿಯ ವೆಸ್ಟರ್ನ್ ಕ್ಯಾಸೂಲ್ ವಿಯರ್ಸ್ಉತ್ಪನ್ನಗಳು ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಶೇನ್ ಮತ್ತು ರಿಲಯನ್ಸ್ ಪಾಲುದಾರಿಕೆ ನೇರವಾಗಿ ಟಾಟಾ ಅವರ ಝೂಡಿಯೋ ಮತ್ತು ಫ್ಲಿಪ್‌ಕಾರ್ಟ್‌ನ ಮಿಂತ್ರಾಗೆ ತೀವ್ರ ಸ್ಪರ್ಧೆಯನ್ನು ನೀಡಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ಮತ್ತು ರೋಡ್‌ಗೆಟ್ ಬಿಸಿನೆಸ್ ಪ್ರೈವೇಟ್ ಲಿಮಿಟೆಡ್ ನಡುವಿನ ಪಾಲುದಾರಿಕೆಯು ಶೇನ್ ಬ್ರಾಂಡ್‌ನ ಅಡಿಯಲ್ಲಿ ಉತ್ಪನ್ನ ತಯಾರಿಸಿ ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ನಂತರ ಭಾರತೀಯ ತಯಾರಕರ ಮೂಲಕ ಶೇನ್ ಬ್ರಾಂಡ್ ಉತ್ಪನ್ನಗಳನ್ನು ತಯಾರಿಸಿ ಪೂರೈಕೆದಾರರ ಜಾಲವನ್ನು ವಿಸ್ತರಿಸಿಕೊಳ್ಳುವ ಗುರಿಯನ್ನು ಹೊಂದಲಾಗಿದೆ.
ಇದನ್ನೂ ಓದಿ: ದೇಶದ 12 ಬ್ಯಾಂಕ್‌ಗಳಿಂದ 25,500 ಕೋಟಿ ಸಾಲ ಕೇಳಿದ ರಿಲಯನ್ಸ್ ಇಂಡಸ್ಟ್ರೀಸ್!
ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ಕಂಪನಿ ಶೇನ್
ಸಿಮಿಲರ್ ವೆಬ್ ಡೇಟಾ (Similarweb data) ಪ್ರಕಾರ, 2024ರ ಸೆಪ್ಟೆಂಬರ್‌ನಲ್ಲಿ ಎಲ್ಲಾ ಇತರ ಫ್ಯಾಷನ್ ಮತ್ತು ಬಟ್ಟೆ ವೆಬ್‌ಸೈಟ್‌ಗಳನ್ನು ಶೇನ್ ಹಿಂದಿಕ್ಕಿದೆ. Nike, H&M ಮತ್ತು Zara ಹಿಂದಿಕ್ಕಿರುವ ಶೇನ್, ಮೂರನೇ ತ್ರೈಮಾಸಿಕದಲ್ಲಿ ಗ್ಲೋಬಲ್ ಮಾರುಕಟ್ಟೆಯ ಶೇ.2.68ರಷ್ಟು ಟ್ರಾಫಿಕ್ ಶೇರ್ ಹೊಂದಿದೆ. ಅರ್ನೆಸ್ಟ್ ಡೇಟಾದ ಪ್ರಕಾರ, ಶೇನ್ ವೆಬ್‌ಸೈಟ್ ಮೂಲಕ ವ್ಯಾಪಾರ ಮಾಡುವ ಗ್ರಾಹಕರ ಸಂಖ್ಯೆ ಶೇ.40ರಷ್ಟು ಏರಿಕೆಯಾಗಿದೆ. ಆನ್‌ಲೈನ್ ಜಗತ್ತಿನ ದೈತ್ಯ ಕಂಪನಿಯಾಗಿರುವ ಅಮೆಜಾನ್‌ಗೂ ಶೇನ್ ಅಮೆರಿಕ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ.
Shein ವೆಬ್‌ಸೈಟ್ ಅನ್ನು 2019 ರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) 200 ಇತರ ಚೀನೀ ಅಪ್ಲಿಕೇಶನ್‌ಗಳೊಂದಿಗೆ ನಿರ್ಬಂಧ ವಿಧಿಸಿತ್ತು.
ಇದನ್ನೂ ಓದಿ: ಅಂಬಾನಿಯನ್ನು ದಿಗ್ಬ್ರಮೆಗೊಳಿಸಿದ ಸುನಿಲ್ ಮಿತ್ತಲ್; ಜಿಯೋವನ್ನು ಹಿಂದಿಕ್ಕಿದ ಏರ್‌ಟೆಲ್