Asianet Suvarna News Asianet Suvarna News

Mother Teresa’s Missionaries of Charity:ಖಾತೆ ಸ್ಥಗಿತಗೊಳಿಸಲು ಚಾರಿಟಿಯಿಂದಲೇ ಬ್ಯಾಂಕ್ ಗೆ ಮನವಿ: ಗೃಹ ಸಚಿವಾಲಯ

*SBIಗೆ ಲಿಖಿತ ಮನವಿ ಮೂಲಕ ಖಾತೆಗಳನ್ನು ರದ್ದುಗೊಳಿಸುವಂತೆ ಚಾರಿಟಿಯೇ ಕೋರಿತ್ತು
*ಚಾರಿಟಿ ಖಾತೆಗಳನ್ನು ಸರ್ಕಾರ ಸ್ಥಗಿತಗೊಳಿಸಿದ ಸುದ್ದಿ ಸಾಕಷ್ಟು ಗೊಂದಲ ಸೃಷ್ಟಿಸಿತ್ತು
*ಸಂಸ್ಥೆಗೆ FCRA ಪರವಾನಗಿಯನ್ನು ಡಿ.25ರಂದು ಕೇಂದ್ರ ಸರ್ಕಾರ ನಿರಾಕರಿಸಿತ್ತು.

Mother Teresas Charity Itself Sent Request to frozen accounts says home ministry anu
Author
Bangalore, First Published Dec 27, 2021, 8:40 PM IST

ನವದೆಹಲಿ (ಡಿ.27): ಮದರ್ ತೆರೇಸಾ ಮಿಷನರೀಸ್ ಆಫ್ ಚಾರಿಟಿಗೆ (Mother Teresa’s Missionaries of Charity) ಸೇರಿದ ಬ್ಯಾಂಕ್ ಖಾತೆಗಳನ್ನು ಕೇಂದ್ರ ಸರ್ಕಾರ(Central Government) ಸ್ಥಗಿತಗೊಳಿಸಿಲ್ಲ (freeze) ಎಂದು ಗೃಹ ಸಚಿವಾಲಯ(Home Ministry) ಸೋಮವಾರ (ಡಿ.27) ಸಂಜೆ ದೃಢಪಡಿಸಿದೆ. ಕೋಲ್ಕತ್ತ ಮೂಲದ ಈ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ (SBI) ಲಿಖಿತ ಮನವಿ ಮೂಲಕ ಖಾತೆಗಳನ್ನು ರದ್ದುಗೊಳಿಸುವಂತೆ ಕೋರಿತ್ತು ಎಂದು ಸಚಿವಾಲಯ ತಿಳಿಸಿದೆ. ಮದರ್ ತೆರೇಸಾ ಮಿಷನರೀಸ್ ಆಫ್ ಚಾರಿಟಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ ಎಂಬ ಬಗ್ಗೆ ಸಾಕಷ್ಟು ವರದಿಗಳು ಹರಿದಾಡಿದ್ದವು. ಈ ಸುದ್ದಿಯನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಟ್ವೀಟ್ ಮೂಲಕ ದೃಢಪಡಿಸಿದ್ದರು. 

ಡಿಸೆಂಬರ್ 25ರಂದು ಈ ಸಂಸ್ಥೆಗೆ ವಿದೇಶಿ ಅನುದಾನಗಳನ್ನು ಪಡೆಯಲು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ( FCRA) ಪರವಾನಗಿ (licence) ನಿರಾಕರಿಸಲಾಗಿತ್ತು ಎಂಬ ವಿಷಯವನ್ನು ಗೃಹ ಸಚಿವಾಲಯ ಈ ಸಂದರ್ಭದಲ್ಲಿ ದೃಢಪಡಿಸಿದೆ. ಪರವಾನಗಿ ನೀಡೋದ್ರಿಂದ ವ್ಯತಿರಿಕ್ತ ಪರಿಣಾಮಗಳುಂಟಾಗುತ್ತವೆ ಎಂಬುದನ್ನು ಪರಿಶೀಲಿಸಿದ ಬಳಿಕವೇ ನಿರಾಕರಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

Bank Account:ಮೃತ ವ್ಯಕ್ತಿ ಬ್ಯಾಂಕ್ ಖಾತೆಯಲ್ಲಿರೋ ಹಣ ಯಾರಿಗೆ ಸೇರುತ್ತೆ? ಇಲ್ಲಿದೆ ಮಾಹಿತಿ

'ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅದ್ರಲ್ಲಿರೋ ವ್ಯತಿರಿಕ್ತ ಅಂಶಗಳನ್ನು ಪರಿಗಣಿಸಿ ಮಿಷನರಿ ಆಫ್ ಚಾರಿಟಿಯ ಪರವಾನಗಿ ನವೀಕರಣ ಮನವಿಯನ್ನು ತಿರಸ್ಕರಿಸಲಾಗಿದೆ. ಮಿಷನರಿ ಆಫ್ ಚಾರಿಟಿಯ FCRA ನೋಂದಣಿ 2021ರ ಡಿಸೆಂಬರ್ 31ರ ತನಕ ಊರ್ಜಿತದಲ್ಲಿರುತ್ತೆ' ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಬಗ್ಗೆ ಮಿಷನರೀಸ್ ಆಫ್ ಚಾರಿಟಿ  ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. 

ಇಂದು ಬೆಳಗ್ಗೆ ಮಿಷನರೀಸ್ ಆಫ್ ಚಾರಿಟಿ ಬ್ಯಾಂಕ್ ಖಾತೆಗಳನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ ಎಂಬ ವರದಿಗಳ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಘಾತ ವ್ಯಕ್ತಪಡಿಸಿದ್ದರು. ಆ ಬಳಿಕ ಈ ವಿಚಾರ ಸಾಕಷ್ಟು ವಿವಾದ ಹಾಗೂ ಗೊಂದಲಕ್ಕೆ ಕಾರಣವಾಗಿತ್ತು. ' ಮದರ್ ತೆರೇಸಾ ಮಿಷನರೀಸ್ ಆಫ್ ಚಾರಿಟಿಗೆ ಸೇರಿದ ಎಲ್ಲ ಬ್ಯಾಂಕ್ ಖಾತೆಗಳನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿರೋ ಸುದ್ದಿಯನ್ನು ಕ್ರಿಸ್ಮಸ್ ಸಂದರ್ಭದಲ್ಲೇ ಕೇಳಿ ನನಗೆ ಆಘಾತವಾಗಿದೆ.  ಇದ್ರಿಂದ 22,000 ರೋಗಿಗಳು ಹಾಗೂ ನೌಕರರಿಗೆ ಆಹಾರ ಮತ್ತು ಔಷಧವಿಲ್ಲದಂತಾಗಿದೆ. ಕಾನೂನು ಎಲ್ಲಕ್ಕಿಂತ ಮೇಲಾದರೂ ಮಾನವೀಯ ಕಾರ್ಯಗಳ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬಾರದು' ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದರು. 

Multiple Bank Accounts: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇವೆಯಾ? ಈಗಲೇ ಎಚ್ಚೆತ್ತುಕೊಳ್ಳಿ

ಖಾತೆಗಳನ್ನು ಯಾವಾಗ ಸ್ಥಗಿತಗೊಳಿಸಬಹುದು?
ಬ್ಯಾಂಕ್ ಖಾತೆದಾರನ ಅನುಮತಿಯಿಲ್ಲದೆ ಮೂರು ಸಂದರ್ಭಗಳಲ್ಲಿ ಖಾತೆಯನ್ನು ಸ್ಥಗಿತಗೊಳಿಸಲು ಅವಕಾಶವಿದೆ. ಮೊದಲನೆಯದಾಗಿ ಖಾತೆದಾರ ಸಾಲ ತೆಗೆದುಕೊಂಡಿದ್ದು ಅನೇಕ ಬಾರಿ ನೋಟಿಸ್ ನೀಡಿದ್ದರೂ ಸಾಲ ಮರುಪಾವತಿಸದ ಸಂದರ್ಭದಲ್ಲಿ ಆತನ ಖಾತೆಯನ್ನು ಬ್ಯಾಂಕ್ ಸ್ಥಗಿತಗೊಳಿಸಬಹುದು.  ಎರಡನೇಯದಾಗಿ ಸರ್ಕಾರಕ್ಕೆ ತೆರಿಗೆಗಳನ್ನು ಪಾವತಿಸಿದಿದ್ದರೂ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಲು ಅವಕಾಶವಿದೆ. ಈ ಹಿಂದೆ  ಕಿಂಗ್ ಫಿಶರ್ ಏರ್ ಲೈನ್ಸ್ ಹಾಗೂ ಸಹರಾ ಪ್ರಕರಣಗಳಲ್ಲಿ ಹೀಗೆ ಮಾಡಲಾಗಿತ್ತು ಕೂಡ. ನಿಮ್ಮ ಖಾತೆಯಿಂದ ಯಾವುದಾದ್ರೂ ಅನುಮಾನಸ್ಪದ ವ್ಯವಹಾರ ನಡೆದಿದ್ರೆ ಆಗ ಕೂಡ ಅದನ್ನು ಸ್ಥಗಿತಗೊಳಿಸಲು ಅವಕಾಶವಿದೆ. ಉದಾಹರಣೆಗೆ ಅಕ್ರಮ ಹಣ ವರ್ಗಾವಣೆ ಅಥವಾ ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ನೀಡಿರೋದು ಮುಂತಾದ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದ ಸಂದರ್ಭದಲ್ಲಿ ಖಾತೆಯನ್ನು ಬ್ಯಾಂಕ್ ಸ್ಥಗಿತಗೊಳಿಸಬಹುದಾಗಿದೆ. 
 

Follow Us:
Download App:
  • android
  • ios