Asianet Suvarna News Asianet Suvarna News

Bank Account:ಮೃತ ವ್ಯಕ್ತಿ ಬ್ಯಾಂಕ್ ಖಾತೆಯಲ್ಲಿರೋ ಹಣ ಯಾರಿಗೆ ಸೇರುತ್ತೆ? ಇಲ್ಲಿದೆ ಮಾಹಿತಿ

ಕುಟುಂಬ ಸದಸ್ಯರಲ್ಲೊಬ್ಬರು ಮೃತಪಟ್ಟಾಗ ಅವರ ಬ್ಯಾಂಕ್ ಖಾತೆಯಲ್ಲಿರೋ ಹಣ ಹೇಗೆ ಪಡೆಯೋದು ಎಂಬ ಬಗ್ಗೆ ಅನೇಕರಿಗೆ ಗೊಂದಲವಿರುತ್ತದೆ. ಮೃತ ವ್ಯಕ್ತಿ ಬ್ಯಾಂಕ್ ಖಾತೆಯಿಂದ ಹಣ ಪಡೆಯಲು ಯಾವೆಲ್ಲ ಮಾರ್ಗಗಳಿವೆ ಎಂಬ ಮಾಹಿತಿ ಇಲ್ಲಿದೆ.

How to claim money after death of bank account holder anu
Author
Bangalore, First Published Dec 25, 2021, 8:50 PM IST

Business Desk: ಸಾವು ಹೇಗೆ ಬೇಕಾದರೂ, ಯಾವಾಗ ಬೇಕಾದರೂ ಎದುರಾಗಬಹುದು. ಹೀಗಾಗಿ ನಮ್ಮ ಬಳಿಯಿರೋ ಹಣ(Money), ಆಸ್ತಿ(Asset) ನಮ್ಮ ಬಳಿಕ ಯಾರಿಗೆ ಸೇರಬೇಕು ಎಂಬ ಬಗ್ಗೆ ಮೊದಲೇ ಸೂಕ್ತ ಕ್ರಮ ಕೈಗೊಳ್ಳೋದು ಅಗತ್ಯ. ಬ್ಯಾಂಕ್(Bank) ಖಾತೆ (Account)ವಿಚಾರಕ್ಕೂ ಇದು ಅನ್ವಯಿಸುತ್ತದೆ. ವ್ಯಕ್ತಿಯೊಬ್ಬ ಮೃತಪಟ್ಟ ಬಳಿಕ ಆತನ ಬ್ಯಾಂಕ್ ಉಳಿತಾಯ ಖಾತೆಯಲ್ಲಿರೋ(Saving account) ಹಣವನ್ನು ಹೇಗೆ ಹಿಂಪಡೆಯೋದು ಎಂಬ ಪ್ರಶ್ನೆ ಆತನ ಕುಟುಂಬದವರಿಗೆ ಕಾಡೋದು ಸಹಜ. ಕೆಲವರಿಗೆ ಕುಟುಂಬದ ಯಾವುದೇ ಒಬ್ಬ ಸದಸ್ಯ ಮರಣ ಹೊಂದಿದಾಗ ಆತನ ಖಾತೆಯಿಂದ ಹಣ ಪಡೆಯೋದು ಹೇಗೆ ಎಂಬುದು ತಿಳಿದಿರೋದಿಲ್ಲ. ಹಾಗಾದ್ರೆ ಮೃತ ವ್ಯಕ್ತಿಯ ಖಾತೆಯಿಂದ ಆತನ ಕುಟುಂಬ ಸದಸ್ಯರು ಹೇಗೆ ಹಣ ಪಡೆಯಬಹುದು? ಅದು ಯಾರಿಗೆ ಸೇರುತ್ತದೆ?

ಜಂಟಿ ಖಾತೆದಾರನಿಗೆ(Joint account holder)
ಒಂದು ವೇಳೆ ಮೃತ ವ್ಯಕ್ತಿ ಜಂಟಿ ಖಾತೆ ಹೊಂದಿದ್ರೆ, ಆತನ ಜಂಟಿ ಖಾತೆದಾರನಿಗೆ(Joint account holder) ಹಣ ಪಡೆಯೋ ಹಕ್ಕಿರುತ್ತದೆ. ಆದ್ರೆ ಆ ಖಾತೆಯಲ್ಲಿನ ಹಣ ಪಡೆಯಲು ಆತ ಕೆಲವೊಂದು ದಾಖಲೆಗಳನ್ನು(Documents) ಬ್ಯಾಂಕಿಗೆ ನೀಡಬೇಕಾಗುತ್ತದೆ, ಮೃತ ವ್ಯಕ್ತಿಯ ಮರಣಪತ್ರ(Death certificate), ಆತನ ಗುರುತು ದೃಢೀಕರಣ (Identity proof)ದಾಖಲೆಯ ಜೊತೆಗೆ ಆತನ ಮರಣದ ಬಗ್ಗೆ ಪ್ರಸ್ತಾಪಿಸಿ ಬ್ಯಾಂಕಿಗೆ ಅರ್ಜಿ ಸಲ್ಲಿಸಬೇಕು. ಬ್ಯಾಂಕ್ ದಾಖಲೆಗಳನ್ನು ಪರಿಶೀಲಿಸಿ ಜಂಟಿ ಖಾತೆದಾರರಲ್ಲಿ ಒಬ್ಬ ಮರಣ ಹೊಂದಿರೋದನ್ನು ಖಚಿತಪಡಿಸಿಕೊಂಡ ಬಳಿಕ ಆ ಖಾತೆಯಲ್ಲಿನ ಹಣವನ್ನು ಜೀವಂತವಿರೋ ವ್ಯಕ್ತಿಯ ಖಾತೆಗೆ ವರ್ಗಾಯಿಸುತ್ತಾರೆ. 

Post Office Scheme:ಈ ಯೋಜನೆಯಲ್ಲಿ ದಿನಕ್ಕೆ ಕೇವಲ 50ರೂ. ಹೂಡಿಕೆ ಮಾಡಿ 35ಲಕ್ಷ ರೂ. ಗಳಿಸಿ!

ನಾಮಿಗೆ(nominee) ಹಣ ಪಡೆಯೋ ಅವಕಾಶ
ವ್ಯಕ್ತಿ ಬ್ಯಾಂಕ್ ಖಾತೆ ತೆರೆಯೋ ಸಂದರ್ಭದಲ್ಲಿ ಯಾರನ್ನಾದ್ರೂ ನಾಮನಿರ್ದೇಶನ(nominee) ಮಾಡಿದ್ರೆ ಅವರಿಗೆ ಆ ಹಣ ಪಡೆಯೋ ಅಧಿಕಾರವಿರುತ್ತದೆ. ನಾಮಿನಿ(nominee) ಮಾಡಿರೋ ವ್ಯಕ್ತಿ ಬ್ಯಾಂಕ್ ಗೆ Claim form ಭರ್ತಿ ಮಾಡಿ ನೀಡಬೇಕು. ಅದರ ಜೊತೆಗೆ ಮೃತವ್ಯಕ್ತಿಯ ಬ್ಯಾಂಕ್ ಪಾಸ್ ಪುಸ್ತಕ, ಚೆಕ್ ಬುಕ್, ಎಟಿಎಂ ಕಾರ್ಡ್, ನಾಮಿನಿ ಅರ್ಜಿ ಹಾಗೂ ಮರಣಪ್ರಮಾಣ ಪತ್ರ  ಸಲ್ಲಿಸಬೇಕು. ಇದರ ಜೊತೆಗೆ ನಾಮಿನಿ ಫೋಟೋ ಕೂಡ ನೀಡಬೇಕು. ಈ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಹಣವನ್ನು ಮೃತ ವ್ಯಕ್ತಿಯ ಖಾತೆಯಿಂದ ನಾಮಿನಿ ಖಾತೆಗೆ ವರ್ಗಾಯಿಸಲಾಗುತ್ತದೆ. ಆದ್ರೆ ಬ್ಯಾಂಕ್ ಅಧಿಕಾರಿಗಳಿಗೆ ನಾಮಿನಿ ಸಲ್ಲಿಸಿರೋ ದಾಖಲೆಗಳಲ್ಲಿ ಅನುಮಾನವಿದ್ರೆ ಹಣ ವರ್ಗಾವಣೆಯನ್ನು ತಡೆಹಿಡಿಯೋ ಸಾಧ್ಯತೆಯಿದೆ. ಅಲ್ಲದೆ, ಇದಕ್ಕೆ ಇಬ್ಬರು ವ್ಯಕ್ತಿಗಳು ಸಾಕ್ಷಿಯಾಗಿ ಸಹಿ ಮಾಡಬೇಕು.

ನಾಮಿನಿ(nominee) ಇಲ್ಲದ ಸಮಯದಲ್ಲಿ
ಒಂದು ವೇಳೆ ಮೃತ ವ್ಯಕ್ತಿಯ ಖಾತೆಗೆ ಯಾರೂ ನಾಮಿನಿ ಇಲ್ಲದಿದ್ರೆ ಅಂ ಸಂದರ್ಭಗಳಲ್ಲಿ ಕುಟುಂಬ ಸದಸ್ಯರು ಖಾತೆಯಿಂದ ಹಣ ಪಡೆಯಲು ಸಾಕಷ್ಟು ಹೆಣಗಾಡಬೇಕಾಗುತ್ತದೆ. ಈ ಪ್ರಕ್ರಿಯೆಗೆ ಸಾಕಷ್ಟು ಸಮಯ ಕೂಡ ಹಿಡಿಯುತ್ತದೆ, 

Bank Holidays: ಜನವರಿಯಲ್ಲಿ 16 ದಿನ ಬ್ಯಾಂಕಿಗೆ ರಜೆ; ಇಲ್ಲಿದೆ RBI ಹಾಲಿಡೇ ಕ್ಯಾಲೆಂಡರ್

ನಾಮಿನಿ (nominee)ಮಾಡೋದು ಅಗತ್ಯ
ಬ್ಯಾಂಕ್ ಖಾತೆ ತೆರೆಯೋ ಸಂದರ್ಭದಲ್ಲಿ ಅರ್ಜಿ ಭರ್ತಿ ಮಾಡೋವಾಗ ಅದ್ರಲ್ಲಿ ಕಡ್ಡಾಯವಾಗಿ ನಾಮಿನಿ ಹೆಸರನ್ನು ನಮೂದಿಸುವಂತೆ ತಿಳಿಸಿರುತ್ತಾರೆ. ಆದ್ರೆ ಆ ಸಮಯದಲ್ಲಿ ನಮಗೆ ಅದು ಮುಖ್ಯ ಎಂದು ಅನಿಸೋದಿಲ್ಲ. ಆದ್ರೆ ನಾವು ನಾಮಿನಿ ಹೆಸರನ್ನು ನಮೂದಿಸೋದು ಮರೆತರೆ ಮುಂದೆ ನಮ್ಮ ಕುಟುಂಬ ಸದಸ್ಯರು ತೊಂದರೆ ಅನುಭವಿಸಬೇಕಾಗುತ್ತದೆ.  ಇನ್ನು ಕೆಲವರು ನಾಮಿನಿ ಮಾಡಿರೋ ವ್ಯಕ್ತಿ ಮರಣ ಹೊಂದಿದ್ರೆ ತಕ್ಷಣ ಬೇರೆ ಹೆಸರನ್ನು ಸೇರಿಸೋ ಕೆಲಸ ಮಾಡೋದಿಲ್ಲ. ಉದಾಹರಣೆಗೆ ಕೆಲವರು ತಂದೆ ಅಥವಾ ತಾಯಿಯನ್ನು ತಮ್ಮ ಖಾತೆಗೆ ನಾಮಿನಿ ಮಾಡಿರುತ್ತಾರೆ. ಅವರು ಮರಣ ಹೊಂದಿದ ತಕ್ಷಣ ಕುಟುಂಬದ ಬೇರೆ ಸದಸ್ಯರನ್ನು ನಾಮಿನಿ ಮಾಡೋದು ಅಗತ್ಯ. ಇಲ್ಲವಾದ್ರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ, 

Follow Us:
Download App:
  • android
  • ios