Money Basics : ಹಣಕಾಸಿನ ಸಮಸ್ಯೆಗೆ ನಿಮ್ಮಲ್ಲೇ ಇದೆ ಪರಿಹಾರ!

ಹಣಕ್ಕಿರುವ ಬೆಲೆ ಈಗ ಜನಕ್ಕಿಲ್ಲ. ಶ್ರೀಮಂತರಾಗ್ಬೇಕೆಂದು ಹಗಲುಗನಸು ಕಾಣುವವರ ಸಂಖ್ಯೆ ಸಾಕಷ್ಟಿದೆ. ಆದ್ರೆ ವಾಸ್ತವಕ್ಕೆ ಬಂದಾಗ ಕೈ ಬರಿದಾಗಿರುತ್ತದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ರೆ ಹಣದ ಭಾರ ಕಡಿಮೆಯಾಗುತ್ತದೆ. 
 

Money Basics Financial Problem Solving Strategies and how to apply it to the most common  problems

Business Desk: ಹಣಕಾಸಿ(Finance)ನ ಸಮಸ್ಯೆ ಕಾಡದವರಿಲ್ಲ. ದುಡಿಮೆ ದೊಡ್ಡ ಪ್ರಮಾಣದಲ್ಲಿದ್ದರೆ ಖರ್ಚು (Expense) ಹೆಚ್ಚಿರುತ್ತದೆ. ಹಾಗೆ ಸಣ್ಣ ಪ್ರಮಾಣದಲ್ಲಿ ದುಡಿಯುವವರ ಖರ್ಚೂ ಹೆಚ್ಚಿರುತ್ತದೆ. ಹೇಗೆ ಉಳಿತಾಯ (Savings) ಮಾಡಬೇಕು ಅಥವಾ ಇನ್ನೊಂದು ಹೂಡಿಕೆ ಹೇಗೆ ಶುರು ಮಾಡ್ಬೇಕೆಂಬ ಗೊಂದಲ್ಲ ಅನೇಕರಲ್ಲಿರುತ್ತದೆ. ಆರ್ಥಿಕ ಸಮಸ್ಯೆಯಿಂದ ಹೊರ ಬರಲು ಬಯಸುವ ಜನರು ಮೊದಲು ಕೆಲವೊಂದು ಪ್ಲಾನ್ ಮಾಡಬೇಕು. ನಂತ್ರ ಅದನ್ನು ಅಚ್ಚುಕಟ್ಟಾಗಿ ಪಾಲನೆ ಮಾಡಬೇಕು. ಹಾಗೆ ಆದಲ್ಲಿ ಮಾತ್ರ ಹಣಕಾಸು ಸಮಸ್ಯೆಯ ಸುಳಿಯಿಂದ ಅಲ್ಪಮಟ್ಟಿಗೆ ಹೊರಗೆ ಬರಲು ಸಾಧ್ಯವಾಗುತ್ತದೆ. ಇಂದು ಇದ್ರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡ್ತೆವೆ.

ಹಣಕಾಸಿನ ಸಮಸ್ಯೆ ಪರಿಹರಿಸುವ ಪ್ರಕ್ರಿಯೆ:  ಕೇವಲ ಹಣಕಾಸಿನ ಸಮಸ್ಯೆ ಮಾತ್ರವಲ್ಲ ಯಾವುದೇ ಸಮಸ್ಯೆ ಕಾಡಿದ್ರೂ ಈ ಕೆಳಗಿನ ರೂಲ್ಸ್ ಫಾಲೋ ಮಾಡಿದ್ರೆ ನೀವು ಸುಲಭವಾಗಿ ಅದ್ರಿಂದ ಹೊರ ಬರಬಹುದು.

ಸಮಸ್ಯೆಗೆ ಕಾರಣ: ಸಮಸ್ಯೆ ಪರಿಹರಿಸುವ ಮೊದಲು ಸಮಸ್ಯೆಯನ್ನು ಗುರುತಿಸಿ. ಯಾವುದರ ಮೇಲೆ ನಿಯಂತ್ರಣ ಹೇರುವ ಅವಶ್ಯಕತೆಯಿದೆ ಎಂಬುದನ್ನು ಮೊದಲು ನೀವು ತಿಳಿಯಬೇಕು. ಸಾಮಾನ್ಯವಾಗಿ ಆದಾಯದ ನಷ್ಟ ಅಥವಾ ಉದ್ಯೋಗ ಕಳೆದುಕೊಳ್ಳುವುದು,ಅನಿರೀಕ್ಷಿತ ವೆಚ್ಚಗಳು,ಅತಿಯಾದ ಸಾಲ, ಆರ್ಥಿಕ ಸ್ವಾತಂತ್ರ್ಯದ ಅವಶ್ಯಕತೆ,ಮಿತಿಮೀರಿದ ಅಥವಾ ಬಜೆಟ್ ನಿರ್ಬಂಧಗಳು,ಕೆಟ್ಟ ಕ್ರೆಡಿಟ್, ಉಳಿತಾಯದ ಕೊರತೆ ಇವೆಲ್ಲವೂ ಕಾರಣವಾಗಿರುತ್ತದೆ. ಇದ್ರಲ್ಲಿ ನಿಮ್ಮ ಹಣಕಾಸಿನ ಸಮಸ್ಯೆಗೆ ಕಾರಣವೇನು ಎಂಬುದನ್ನು ಪತ್ತೆ ಮಾಡಿ.

ಯೋಜನೆ ರೂಪಿಸಿ : ಸಮಸ್ಯೆ ಎಲ್ಲಿದೆ ಎಂಬುದು ಗೊತ್ತಾದಾಗ ಯೋಜನೆ ರೂಪಿಸುವುದು ಸ್ವಲ್ಪ ಮಟ್ಟಿಗೆ ಸುಲಭವಾಗುತ್ತದೆ.  ಆದ್ರೆ ಅನೇಕರಿಗೆ ಹೇಗೆ ಯೋಜನೆ ರೂಪಿಸಬೇಕೆಂಬುದು ಗೊತ್ತಿರುವುದಿಲ್ಲ.

 ಇದನ್ನೂ ಓದಿ:  TAX REDUCTION ಎಲಾನ್ ಮಸ್ಕ್ ಮನವಿ ತಿರಸ್ಕರಿಸಿದ ಕೇಂದ್ರ ಸರ್ಕಾರ, ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ಸದ್ಯಕ್ಕಿಲ್ಲ!

ವಿಧಾನ 1: ಕೆಲಸವನ್ನು ಕಳೆದುಕೊಂಡಿದ್ದರೆ, ಅನಿರೀಕ್ಷಿತ ವೆಚ್ಚ ಹೆಚ್ಚಾಗಿದ್ದರೆ ಅಥವಾ ಇನ್ನಾವುದೋ ಕಾರಣಕ್ಕೆ ಹಣಕಾಸಿನ ಸಮಸ್ಯೆ ಕಾಡುತ್ತಿದ್ದರೆ ಅದನ್ನು ಪರಿಹರಿಸಲು ನೀವು ಹೆಚ್ಚುವರಿ ಕೆಲಸದ ಹುಡುಕಾಟ ನಡೆಸುತ್ತೀರಿ. ಆಗ ಉತ್ತಮ ಸಂಬಳ ಬರುವ ಕೆಲಸ ಹುಡುಕುವುದು ಮುಖ್ಯ. ಅದಕ್ಕಾಗಿ ಮೊದಲು ರೆಸ್ಯೂಮ್ ಮತ್ತು ಕವರ್ ಲೆಟರ್ ನವೀಕರಿಸಬೇಕು. ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಿ. ಅವುಗಳು ಅಚ್ಚುಕಟ್ಟಾಗಿ ಮುಗಿಸಿ. ಸುಲಭವಾದ ಹಣ ಗಳಿಸಬಹುದು ಎಂಬ ಯಾವುದೇ ಜಾಹೀರಾತುಗಳು ಅಥವಾ ಉದ್ಯೋಗಗಳ ಬಗ್ಗೆ ಹೆಚ್ಚಿನ ಎಚ್ಚರಿಕೆವಹಿಸಿ.  

ವಿಧಾನ 2: ಸಾಲ ದೊಡ್ಡ ಹೊರೆ. ಸಾಲದವನ್ನು ಮೊದಲು ತೀರಿಸಿ. ಮೂರ್ನಾಲ್ಕು ಕಡೆ ಸಾಲ ಮಾಡಿದ್ದರೆ ಹೆಚ್ಚು ಬಡ್ಡಿಯಿರುವ ಸಾಲವನ್ನು ಮೊದಲು ತೀರಿಸಿ. ಒಂದು ಸಾಲ ತೀರಿಸಲು ಇನ್ನೊಂದು ಸಾಲ ಮಾಡುವ ಕೆಲಸಕ್ಕೆ ಕೈ ಹಾಕಬೇಡಿ.

ವಿಧಾನ 3 : ನೀವು ಖರ್ಚು ಮಾಡುವ ವಿಧಾನವನ್ನು ಬದಲಾಯಿಸಿಕೊಳ್ಳಿ. ಅತಿಯಾದ ಖರ್ಚು,ಹಣಕಾಸಿನ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಖರ್ಚು ಕಡಿಮೆ ಮಾಡಿ ಉಳಿತಾಯಕ್ಕೆ ಆದ್ಯತೆ ನೀಡಿ. ಬಜೆಟ್ ರಚನೆ ಮಾಡಿಕೊಂಡು ಅದರಂತೆ ನಡೆಯಲು ಪ್ರಯತ್ನಿಸಿ.  

 ಇದನ್ನೂ ಓದಿ: Changes in Banks Charges: ಫೆಬ್ರವರಿಯಲ್ಲಿ ಬ್ಯಾಂಕುಗಳ ಶುಲ್ಕ, ನೀತಿಗಳಲ್ಲಾದ ಈ ಬದಲಾವಣೆ ಬಗ್ಗೆ ನಿಮಗೆ ತಿಳಿದಿದೆಯಾ?

ಯೋಜನೆಯ ಅನುಷ್ಠಾನ : ಇದು ಅತ್ಯಂತ ಕಠಿಣವಾದ ಭಾಗ. ಅದಕ್ಕೆ ಸ್ವಯಂ ಶಿಸ್ತು ಮತ್ತು ಪರಿಶ್ರಮ ಬೇಕು. ಮಧ್ಯದಲ್ಲಿ ಪ್ಲಾನ್ ಪ್ರಕಾರ ನಡೆಯಲಾಗಿಲ್ಲವೆಂದ್ರೆ ಚಿಂತಿಸುವ ಅಗತ್ಯವಿಲ್ಲ. ಮತ್ತೆ ಪ್ರಯತ್ನ ಶುರು ಮಾಡಬಹುದು. ಹಣಕಾಸಿನ ಅಡೆತಡೆಗಳನ್ನು ನಿವಾರಿಸಲು ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಯ ಅಗತ್ಯವಿರುತ್ತದೆ. ಅದು ರಾತ್ರೋರಾತ್ರಿ ಸಾಧ್ಯವಿಲ್ಲ. ಆತ್ಮವಿಶ್ವಾಸದಿಂದ ಮುನ್ನಡೆದರೆ ಎಲ್ಲವೂ ಸಾಧ್ಯವಾಗುತ್ತದೆ.

ಯೋಜನೆಯ ಮೌಲ್ಯಮಾಪನ : ಯೋಜನೆಯನ್ನು ನೀವು ಕಾರ್ಯಗತಗೊಳಿಸುವಾಗ, ಅದನ್ನು ನಿರಂತರವಾಗಿ ಮೌಲ್ಯಮಾಪನ ಮಾಡಬೇಕಾಗುತ್ತದೆ. ಕೆಲವೊಮ್ಮೆ ಮೂಲ ಯೋಜನೆಯನ್ನು ಬದಲಿಸುವ ಅನಿವಾರ್ಯತೆ ಎದುರಾಗುತ್ತದೆ. ಆಗ ಅದನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಯೋಜನೆ ಅನುಷ್ಠಾನಕ್ಕೆ ಬಂದ ನಂತ್ರ ಮರುಮೌಲ್ಯಮಾಪನ ಮಾಡುವುದು ಯಾವಾಗಲೂ ಒಳ್ಳೆಯದು.  

ಮೌಲ್ಯಮಾಪನದ ವೇಳೆ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ : ನಿಮ್ಮ ಸಮಸ್ಯೆಯನ್ನು ಪರಿಹರಿಸಲಾಗಿದೆಯೇ? ಯಾವುದೇ ಹೊಸ ಸಮಸ್ಯೆಗಳು ಉದ್ಭವಿಸಿವೆಯೇ? ಯಾವುದು ಸರಿಯಾಗಿದೆ?ಯಾವುದು ತಪ್ಪಾಗಿದೆ? ಯೋಜನೆಯನ್ನು ಕಾರ್ಯಗತಗೊಳಿಸಲು ಯಾವುದು ಸುಲಭವಾಗಿದೆ ಎಂಬ ಪ್ರಶ್ನೆ ಕೇಳಿಕೊಂಡಾಗ ನಿಮಗೆ ಯಶಸ್ಸು ಸುಲಭವಾಗುತ್ತದೆ.

Latest Videos
Follow Us:
Download App:
  • android
  • ios