Changes in Banks Charges: ಫೆಬ್ರವರಿಯಲ್ಲಿ ಬ್ಯಾಂಕುಗಳ ಶುಲ್ಕ, ನೀತಿಗಳಲ್ಲಾದ ಈ ಬದಲಾವಣೆ ಬಗ್ಗೆ ನಿಮಗೆ ತಿಳಿದಿದೆಯಾ?
*IMPS ವಹಿವಾಟುಗಳ ಮೇಲಿನ ಸೇವಾ ಶುಲ್ಕದಲ್ಲಿ ಬದಲಾವಣೆ ಮಾಡಿದ SBI
*ಕ್ರೆಡಿಟ್ ಕಾರ್ಡ್ ಶುಲ್ಕ ಹೆಚ್ಚಳ ಮಾಡಿದ ಐಸಿಐಸಿಐ ಬ್ಯಾಂಕ್
*ಅಟೋ ಡೆಬಿಟ್ ಶುಲ್ಕ ಹೆಚ್ಚಿಸಿದ ಪಂಜಾಬ್ ನ್ಯಾಷನಲ್ ಬ್ಯಾಂಕ್
Business Desk:ಬ್ಯಾಂಕುಗಳು ಆಗಾಗ ವಿವಿಧ ಸೇವಾ ಶುಲ್ಕಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡುತ್ತಲೇ ಇರುತ್ತವೆ. ಅದೇರೀತಿ ಫೆಬ್ರವರಿ ತಿಂಗಳಲ್ಲಿ ಹಲವು ಬ್ಯಾಂಕುಗಳು ಸೇವಾ ಶುಲ್ಕ ಹಾಗೂ ಹಣ ವರ್ಗಾವಣೆಗೆ ಸಂಬಂಧಿಸಿ ಹೊಸ ನಿಯಮಗಳನ್ನು ಜಾರಿಗೆ ತಂದಿವೆ. ಯಾವೆಲ್ಲ ಬ್ಯಾಂಕುಗಳಲ್ಲಿ ಏನೆಲ್ಲ ಬದಲಾವಣೆಗಳಾಗಿವೆ ಎಂಬ ಮಾಹಿತಿ ಇಲ್ಲಿದೆ.
ಎಸ್ ಬಿಐ ಐಎಂಪಿಎಸ್ (IMPS) ವಹಿವಾಟುಗಳ ಶುಲ್ಕ ಬದಲಾವಣೆ
ಎಸ್ ಬಿಐ (SBI) ಶಾಖೆಗಳಲ್ಲಿ ಐಎಂಪಿಎಸ್ (IMPS) ಮೂಲಕ ಹಣ ವರ್ಗಾವಣೆ ಮೇಲಿನ ಸೇವಾ ಶುಲ್ಕದಲ್ಲಿ ಫೆಬ್ರವರಿ 1, 2022 ರಿಂದ ಹೆಚ್ಚಳವಾಗಿದೆ. ಐಎಂಪಿಎಸ್ (IMPS) ವಹಿವಾಟುಗಳಿಗೆ, ಸೇವಾ ಶುಲ್ಕವನ್ನು ವಿಧಿಸಲು 2 ಲಕ್ಷದಿಂದ 5 ಲಕ್ಷದವರೆಗೆ ಹೊಸ ಸ್ಲ್ಯಾಬ್ ಸೇರ್ಪಡೆ ಮಾಡಲಾಗಿದೆ. ಈ ಸ್ಲ್ಯಾಬ್ ಗೆ ಸೇವಾ ಶುಲ್ಕ 20 ರೂ .+ ಜಿಎಸ್‌ಟಿ. ಎಸ್ ಬಿಐ ಬ್ಯಾಂಕಿನಲ್ಲಿ ನೆಟ್ ಬ್ಯಾಂಕಿಂಗ್ (Net Banking)ಅಥವಾ ಮೊಬೈಲ್ ಬ್ಯಾಂಕಿಂಗ್ (Mobile Banking) ಮೂಲಕ ಮಾಡಲಾಗುವ 5 ಲಕ್ಷದವರೆಗಿನ ಇಮ್ಮಿಡಿಯೇಟ್ ಪೇಮೆಂಟ್ ಸರ್ವೀಸ್ ಗೆ (ಐಎಂಪಿಎಸ್) ಯಾವುದೇ ಶುಲ್ಕ ಇರುವುದಿಲ್ಲ. ಈ ಹಿಂದೆ 2 ಲಕ್ಷದವರೆಗಿನ ಆನ್ ಲೈನ್ ಐಎಂಪಿಎಸ್ (Online IMPS)ವಹಿವಾಟಿಗೆ ಬ್ಯಾಂಕ್ ಯಾವುದೇ ಚಾರ್ಜ್ ವಿಧಿಸುತ್ತಿರಲಿಲ್ಲ. ಡಿಜಿಟಲ್ ಬ್ಯಾಂಕಿಂಗ್ ಪ್ರೋತ್ಸಾಹಿಸೋ ಉದ್ದೇಶನಿಂದ ನೆಟ್ ಬ್ಯಾಂಕಿಂಗ್/ ಮೊಬೈಲ್ ಬ್ಯಾಂಕಿಂಗ್ ಮೂಲಕ ಮಾಡೋ ಐಎಂಪಿಎಸ್ ಗೆ ಮಾತ್ರ ಶುಲ್ಕ ವಿನಾಯ್ತಿ ನೀಡಲಾಗಿದೆ.
Top Billionaires: ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ ಗೌತಮ್ ಅದಾನಿ ಈಗ ಏಷ್ಯಾದ ಶ್ರೀಮಂತ ವ್ಯಕ್ತಿ!
ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಶುಲ್ಕ ಹೆಚ್ಚಳ
ಕ್ರೆಡಿಟ್ ಕಾರ್ಡ್ ಬಿಲ್ ವಿಳಂಬ ಪಾವತಿ ಮೇಲಿನ ದಂಡ ಶುಲ್ಕ ಸೇರಿದಂತೆ ಕ್ರೆಡಿಟ್ ಕಾರ್ಡ್ ಸೇವೆಗಳಿಗೆ ಸಂಬಂಧಿಸಿದ ಅನೇಕ ಶುಲ್ಕಗಳಲ್ಲಿ ಹೆಚ್ಚಳ ಮಾಡಿರೋದಾಗಿ ಐಸಿಐಸಿಐ ಬ್ಯಾಂಕ್ (ICICI Bank) ತನ್ನ ಗ್ರಾಹಕರಿಗೆ (Customers)ಇತ್ತೀಚೆಗೆ ಮೆಸೇಜ್ ಮೂಲಕ ಮಾಹಿತಿ ನೀಡಿದೆ. ಫೆ.10ರಿಂದ ಹೊಸ ಶುಲ್ಕ ನೀತಿ ಅನುಷ್ಠಾನಗೊಳ್ಳಲಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಟೋ ಡೆಬಿಟ್ ಶುಲ್ಕ ಹೆಚ್ಚಳ
ಪಂಜಾಬ್ ನ್ಯಾಷನ್ ಬ್ಯಾಂಕ್ (PNB)ಫೆ.1ರಿಂದ ಅಟೋ ಡೆಬಿಟ್ ( auto-debit)ಶುಲ್ಕದಲ್ಲಿ ಹೆಚ್ಚಳ ಮಾಡಿದೆ. ಈ ಬಗ್ಗೆ ಪಿಎನ್ ಬಿ ಬ್ಯಾಂಕ್ ತನ್ನ ವೆಬ್ ಸೈಟ್ನಲ್ಲಿ ಮಾಹಿತಿ ಪ್ರಕಟಿಸಿದೆ. ಸಾಲ ಅಥವಾ ಹೂಡಿಕೆಗೆ ಲಿಂಕ್ ಆಗಿರೋ ನಿಮ್ಮ ಡೆಬಿಟ್ ಖಾತೆಯಲ್ಲಿ ಹಣದ ಕೊರತೆಯಿಂದ ವಹಿವಾಟು ವಿಫಲವಾದ್ರೆ ಅಧಿಕ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಹಿಂದೆ ವಿಫಲವಾದ ವಹಿವಾಟಿನ ಮೇಲೆ ವಿಧಿಸುತ್ತಿದ್ದ ಶುಲ್ಕ 100ರೂ. ಆಗಿದ್ದು, ಈಗ 250ರೂ.ಗೆ ಹೆಚ್ಚಿಸಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಜನವರಿ 15ರಿಂದ ಸಾಮಾನ್ಯ ಬ್ಯಾಂಕಿಂಗ್ ಸೇವೆಗಳ ಮೇಲಿನ ಶುಲ್ಕ ಹೆಚ್ಚಳ ಮಾಡಿದೆ.
Facebook: ಒಂದೇ ದಿನ ಫೇಸ್‌ಬುಕ್‌ಗೆ 16 ಲಕ್ಷ ಕೋಟಿ ನಷ್ಟ
ಪಾಸಿಟಿವ್ ಪೇ ವ್ಯವಸ್ಥೆ ಕಡ್ಡಾಯವೆಂದ ಬ್ಯಾಂಕ್ ಆಫ್ ಬರೋಡ
10ಲಕ್ಷ ರೂ. ಹಾಗೂ ಅದಕ್ಕಿಂತ ಮೇಲಿನ ಚೆಕ್ ಗಳಿಗೆ ಆರ್ ಬಿಐ ನಿರ್ದೇಶನಗಳ ಅನ್ವಯ ಪಾಸಿಟಿವ್ ಪೇ ವ್ಯವಸ್ಥೆ ಕಡ್ಡಾಯ ಎಂದು ಬ್ಯಾಂಕ್ ಆಫ್ ಬರೋಡ ಗ್ರಾಹಕರಿಗೆ ಮೆಸೇಜ್ ಕಳುಹಿಸಿದೆ. ಪಾಸಿಟಿವ್ ಪೇ ವ್ಯವಸ್ಥೆ ಅಧಿಕ ಮೌಲ್ಯದ ಚೆಕ್ ಗಳಲ್ಲಿನ ಪ್ರಮುಖ ಅಂಶಗಳನ್ನು ಎರಡೆರಡು ಬಾರಿ ಪರಿಶೀಲಿಸೋ ವಿಧಾನವಾಗಿದೆ. ಚೆಕ್ ವಂಚನೆ ಪ್ರಕರಣಗಳ ತಡೆಗೆ ಪಾಸಿಟಿವ್ ಪೇ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕುಗಳಿಗೆ ಸಲಹೆ ನೀಡಿತ್ತು. 2021ರ ಜನವರಿ 1ರಿಂದಲೇ ಈ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಆರ್ ಬಿಐ ನಿರ್ದೇಶನ ನೀಡಿದ್ದು, ಕೆಲವು ಬ್ಯಾಂಕುಗಳು ಈಗಾಗಲೇ ಇದನ್ನು ಅಳವಡಿಸಿಕೊಂಡಿವೆ.