ನವದೆಹಲಿ(ನ.21): ತೀವ್ರ ಆರ್ಥಿಕ ಸಂಕಷ್ಟ ಎದುರಿಸುತಿರುವ ಟೆಲಿಕಾಂ ವಲಯದ ನೆರವಿಗೆ ಮೋದಿ ಸರ್ಕಾರ ಧಾವಿಸಿದೆ.

ಟೆಲಿಕಾಂ ವಲಯದ ಸರಾಗ ವ್ಯವಹಾರಕ್ಕೆ ಕೇಂದ್ರ ಸರ್ಕಾರ ಬಹುದೊಡ್ಡ ಉಪಕ್ರಮಕ್ಕೆ ಮುಂದಾಗಿದ್ದು, ಬಾಕಿ ಮೊತ್ತದ ಪಾವತಿಗೆ ಎರಡು ವರ್ಷ ಕಾಲಾವಕಾಶ ನೀಡಲು ಸಮ್ಮತಿ ಸೂಚಿಸಿದೆ.

ಟೆಲಿಕಾಂ ತಲ್ಲಣ,  ವೋಡಾಪೋನ್, ಏರ್‌ಟೆಲ್ ಷೇರು ಭಾರೀ ಏರಿಕೆ

ದೂರಸಂಪರ್ಕ ಸೇವಾ ಸಂಸ್ಥೆಗಳಾದ ಭಾರ್ತಿ ಏರ್ ಟೆಲ್, ರಿಲಯನ್ಸ್ ಜಿಯೋ, ವೊಡಾಪೋನ್ ಐಡಿಯಾ ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ಸ್ಪೆಕ್ಟ್ರಮ್ ಬಾಕಿ ಮೊತ್ತ ಪಾವತಿಗೆ ಎರಡು ವರ್ಷಗಳ ಕಾಲಾವಕಾಶ ನೀಡಿದೆ.

ಪ್ರಮುಖ ಟೆಲಿಕಾಂ ಸಂಸ್ಥೆಗಳು ತರಂಗಗುಚ್ಚದ ಬಾಕಿ ಮೊತ್ತ 42 ಸಾವಿರ ಕೋಟಿ ರೂ. ಅನ್ನು ಸರ್ಕಾರಕ್ಕೆ ಸಲ್ಲಿಸಬೇಕಿದ್ದು, ಇದೀಗ ಎರಡು ವರ್ಷಗಳ ರಿಯಾಯ್ತಿ ನೀಡಲಾಗಿದೆ.

ವೊಡಾಫೋನ್, ಏರ್‌ಟೆಲ್ ಸಂಕಷ್ಟದಲ್ಲಿ: ನರಳುತ್ತಿವೆ ಭಾರೀ ನಷ್ಟದಲ್ಲಿ!

ದೂರಸಂಪರ್ಕ ಸೇವಾ ಸಂಸ್ಥೆಗಳು ಆರ್ಥಿಕ ಸಂಕಷ್ಟದಲ್ಲಿದ್ದ ಕಾರಣ ಈ ನೆರವು ಒದಗಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಸಿಒಎಐ) ಡಿಜಿ ರಾಜನ್ ಮ್ಯಾಥ್ಯೂಸ್, ಮೊಬೈಲ್ ಕರೆ ಮತ್ತು ಡೇಟಾ ದರಗಳಲ್ಲಿ ಪ್ರಸ್ತಾವಿತ ಸುಂಕ ಹೆಚ್ಚಳದ ಒತ್ತಡವನ್ನು ಕಡಿಮೆ ಮಾಡಲು ಇದು ಸಹಾಯವಾಗಲಿದೆ ಎಂದು ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ.

ಸರ್ಕಾರ ನೆರವಿಗೆ ಬರದಿದ್ರೆ ಭಾರತದಲ್ಲಿ ನಮ್ಮ ಅಸ್ತಿತ್ವ ಅನುಮಾನ:ವೊಡಾಫೋನ್

ಆದರೆ...

ಅ.24ರಂದು ಸುಪ್ರೀಂ ಕೋರ್ಟ್ ನೀಡಿದ್ದ ತಿರ್ಪಿನನ್ವಯ 1.47 ಲಕ್ಷ ಕೋಟಿ ರೂ. ಒಟ್ಟು ಆದಾಯದಲ್ಲಿ ಯಾವ ರಿಯಾಯ್ತಿ ನೀಡಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ರಿಯಾಯ್ತಿ ನೀಡಲು ಸುಪ್ರೀಂಕೋರ್ಟ್’ಗೆ ಮಾತ್ರವೇ ಅವಕಾಶವಿದೆ.

ಅಚ್ಚರಿಯ ಗುಮಾನಿ: ಏರ್‌ಟೆಲ್, ವೋಡಾಫೋನ್'ಗೆ ಏನ್ಮಾಡ್ಬೇಕು ಅಂತಾ ಹೇಳಿದ ಅಂಬಾನಿ!