ನವದೆಹಲಿ(ನ.15): ಖಾಸಗಿ ಟೆಲಿಕಾಂ ಸಂಸ್ಥೆಗಳಾದ ವೋಡಾಫೋನ್ ಐಡಿಯಾ ಹಾಗೂ ಏರ್‌ಟೆಲ್, ಎರಡನೇ ತ್ರೈಮಾಸಿಕದಲ್ಲಿ ಭಾರೀ ನಷ್ಟವನ್ನು ಅನುಭವಿಸಿದ್ದು, ಸಂಸ್ಥೆಗಳ ಆದಾಯದಲ್ಲಿ ತೀವ್ರ ಕುಸಿತ ದಾಖಲಾಗಿದೆ. 

ವೊಡಾಫೋನ್ ಐಡಿಯಾ ನೀಡಿರುವ ಮಾಹಿತಿ ಪ್ರಕಾರ, ಎರಡನೇ ತ್ರೈಮಾಸಿಕದಲ್ಲಿ ಒಟ್ಟಾರೆ 50,922 ಕೋಟಿ ರೂ. ನಷ್ಟ ಎದುರಿಸಿದೆ. ಇನ್ನು ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾಗಿರುವ ಏರ್‌ಟೆಲ್ 23,044.9 ಕೋಟಿ ರೂ.ಗಳ ನಿವ್ವಳ ನಷ್ಟ ಎದುರಿಸಿದೆ.

ಸರ್ಕಾರ ನೆರವಿಗೆ ಬರದಿದ್ರೆ ಭಾರತದಲ್ಲಿ ನಮ್ಮ ಅಸ್ತಿತ್ವ ಅನುಮಾನ:ವೊಡಾಫೋನ್

ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಕುರಿತ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ವೊಡಾಫೋನ್ ಐಡಿಯಾ ಹಾಗೂ ಏರ್‌ಟೆಲ್ ಸಂಸ್ಥೆಗಳು ಒಟ್ಟಾರೆ 92,000 ಕೋಟಿ ರೂ. ಬಾಕಿ ಮೊತ್ತ ಹಾಗೂ ಕಳೆದ ತಿಂಗಳ ಬಡ್ಡಿ ಸೇರಿದ ಹಣವನ್ನು ಸರ್ಕಾರಕ್ಕೆ ಪಾವತಿಸಬೇಕಿತ್ತು.

ಇದರಲ್ಲಿ  ಏರ್‌ಟೆಲ್ ಸಂಸ್ಥೆಯೊಂದೇ  34,260 ಕೋಟಿ ರೂ. ಬಾಕಿ ನೀಡಬೇಕಿತ್ತು. ಇದೀಗ ನಷ್ಟದಲ್ಲಿರುವ ಎರಡೂ ಟೆಲಿಕಾಂ ಸಂಸ್ಥೆಗಳು ವ್ಯಾಪಾರವನ್ನು ಸರಿದೂಗಿಸುವ ಇಕ್ಕಿಟ್ಟಿಗ ಸಿಲುಕಿವೆ.

ಅಚ್ಚರಿಯ ಗುಮಾನಿ: ಏರ್‌ಟೆಲ್, ವೋಡಾಫೋನ್'ಗೆ ಏನ್ಮಾಡ್ಬೇಕು ಅಂತಾ ಹೇಳಿದ ಅಂಬಾನಿ!