ಷೇರು ಮಾರುಕಟ್ಟೆಯಲ್ಲಿ ಧೈರ್ಯವಿದ್ರೆ ಮಾತ್ರ ಗೆಲುವು; 20-25 ಸಾವಿರ ಹೂಡಿಕೆ 1 ಕೋಟಿಗೂ ಅಧಿಕ ಆಯ್ತು
ಒಂದು ಪೆನ್ನಿ ಸ್ಟಾಕ್ ತನ್ನ ಹೂಡಿಕೆದಾರರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡುವ ಮೂಲಕ ಬಹು-ಬ್ಯಾಗರ್ ರಿಟರ್ನ್ಸ್ ನೀಡಿದೆ. ಎರಡೂವರೆ ರೂಪಾಯಿಗಳ ಷೇರಿನಲ್ಲಿ 20-25 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದವರ ಪೋರ್ಟ್‌ಫೋಲಿಯೋ ಇಂದು ಕೋಟಿಗಳಷ್ಟಾಗಿದೆ.
ಮುಂಬೈ: ಷೇರು ಮಾರುಕಟ್ಟೆಯಲ್ಲಿ ಧೈರ್ಯವಾಗಿ ಹೂಡಿಕೆ ಮಾಡಿದ್ರೆ ಮಾತ್ರ ಹೆಚ್ಚು ಲಾಭ ಗಳಿಸಲು ಸಾಧ್ಯವಾಗುತ್ತದೆ. ಕೆಲ ಷೇರುಗಳು ದೀರ್ಘಾವಧಿಯಲ್ಲಿ ನೂರಾರು ಪಟ್ಟು ಲಾಭ ನೀಡುತ್ತವೆ. ಷೇರು ಮಾರುಕಟ್ಟೆಯಲ್ಲಿ (Share Market) ಅನೇಕ ಬಾರಿ 2-3 ರೂಪಾಯಿಗಳ ಸ್ಟಾಕ್‌ಗಳು ಕೂಡ ಹೂಡಿಕೆದಾರರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡುತ್ತವೆ. ಕೆಲ ವರ್ಷಗಳ ಹಿಂದೆ ಈ ಷೇರುಗಳಲ್ಲಿ 20-25 ಸಾವಿರ ರೂ. ಹೂಡಿಕೆ ಮಾಡಿದ್ದರೆ ಇಂದು 1 ಕೋಟಿ ರೂ.ವರೆಗೂ ಕ್ಯಾಪಿಟಲ್ ಹೊಂದಿರುತ್ತಾರೆ. ಆದ್ರೆ ಇಂತಹ ಮಲ್ಟಿಬ್ಯಾಗರ್ ಸ್ಟಾಕ್‌ಗಳ ಬಗ್ಗೆ ತಿಳಿದುಕೊಂಡು ಹೂಡಿಕೆ ಮಾಡೋದು ಸಹ ಒಂದು ಕಲೆಯಾಗಿದೆ. ಇದಕ್ಕಾಗಿ ಸತತ ಮಾರುಕಟ್ಟೆ ಅಧ್ಯಯನದ ಅಗತ್ಯವಿರುತ್ತದೆ.
ಇಂದು ನಾವು ನಿಮಗೆ ಒಳ್ಳೆಯ ರಿಟರ್ನ್ ನೀಡುವ ಪೆನ್ನಿ ಸ್ಟಾಕ್ (Penny Stock) ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ಸ್ಟಾಕ್ ಬೆಲೆ ಕೇವಲ 2.5 ರೂಪಾಯಿ ಇತ್ತು. ಈ ಬೆಲೆಯಲ್ಲಿ ಹೂಡಿಕೆದಾರರು ಧೈರ್ಯದಿಂದ ಅಂದು 20 ರಿಂದ 25 ಸಾವಿರ ರೂಪಾಯಿ ಹೂಡಿಕೆ ಮಾಡಿದ್ರೆ, ಇಂದು ಆ ಹಣ 1 ಕೋಟಿ ರೂ.ಗೂ ಅಧಿಕವಾಗಿರುತ್ತಿತ್ತು.
ಅದೃಷ್ಟ ತಂದ ಎರಡೂವರೆ ರೂ. ಷೇರು
ಈ ಷೇರಿನ ಹೆಸರು ಎಂಕೆ ವೆಂಚರ್ಸ್ ಕ್ಯಾಪಿಟಲ್ ಲಿಮಿಟೆಡ್ (MK Ventures Capital Ltd). 20 ವರ್ಷಗಳ ಹಿಂದೆ ಎಂಕೆ ವೆಂಚರ್ಸ್ ಕ್ಯಾಪಿಟಲ್ ಲಿಮಿಟೆಡ್ ಷೇರಿನ ಬೆಲೆ ಕೇವಲ ಒಂದಂಕಿ ಮಾತ್ರ ಆಗಿತ್ತು. 2024ರಲ್ಲಿ ಎಂಕೆ ವೆಂಚರ್ಸ್ ಕ್ಯಾಪಿಟಲ್ ಲಿಮಿಟೆಡ್ ಒಂದು ಷೇರು 2.5 ರೂಪಾಯಿಗೆ ಮಾರಾಟವಾಗುತ್ತಿತ್ತು. ಆದರೆ ನವೆಂಬರ್ 11ರಂದು 1,720 ರೂಪಾಯಿಗೆ ಮುಕ್ತಾಯವಾಗಿದೆ. 2004ರಲ್ಲಿ ಈ ಷೇರುಗಳಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ 5 ರಿಂದ 10 ಕೋಟಿಗಳವರೆಗೆ ಏರಿಕೆಯಾಗುತ್ತಿತ್ತು. ಅಂದರೆ ಕೇವಲ 20-25 ಸಾವಿರ ಹೂಡಿಕೆ ಮಾಡಿದವರು ಸಹ ಕೋಟ್ಯಧಿಪತಿಗಳಾಗುತ್ತಿದ್ದರು.
ಎಂಕೆ ವೆಂಚರ್ಸ್ ಕ್ಯಾಪಿಟಲ್‌ನ ಷೇರುಗಳು ಮಲ್ಟಿ-ಬ್ಯಾಗರ್ ರಿಟರ್ನ್ಸ್ (MK Ventures Capital Share Return) ನೀಡಿವೆ. ಒಂದು ವರ್ಷದೊಳಗೆ ಈ ಷೇರು ಸುಮಾರು 53% ರಷ್ಟು ಏರಿಕೆಯಾಗಿದೆ. ಮೂರು ವರ್ಷಗಳಲ್ಲಿ ಇದು 228.66% ಮತ್ತು ಐದು ವರ್ಷಗಳಲ್ಲಿ 144.67% ರಷ್ಟು ರಿಟರ್ನ್ಸ್ ನೀಡಿದೆ. ಅಂದರೆ 5 ವರ್ಷಗಳಲ್ಲಿ ಹೂಡಿಕೆದಾರರ ಹಣ ಒಂದೂವರೆ ಪಟ್ಟು ಹೆಚ್ಚಾಗಿದೆ. ಕಳೆದ 6 ತಿಂಗಳಲ್ಲಿ ಎಂಕೆ ವೆಂಚರ್ಸ್‌ನ ಷೇರುಗಳಲ್ಲಿ 20.78% ರಷ್ಟು ಕುಸಿತ ಕಂಡುಬಂದಿತ್ತು. ಇದೀಗ ಮಾರುಕಟ್ಟೆಯಲ್ಲಿ ಮತ್ತೆ ಚೇತರಿಕೆ ಕಂಡು ಬಂದಿರುವ ಷೇರುಗಳ ಬೆಲೆಯಲ್ಲಿ ಏರಿಕೆಯಾಗಿದೆ.
ಇದನ್ನೂ ಓದಿ: ಕೇವಲ ಒಂದು ಟೆಕ್ನಿಕ್ ಬಳಸಿ ಷೇರು ಮಾರುಕಟ್ಟೆಯಿಂದ 2 ಕೋಟಿ ಗಳಿಸಿದ ಹಳ್ಳಿ ಹುಡುಗಿ
ಎಂಕೆ ವೆಂಚರ್ಸ್ ಕ್ಯಾಪಿಟಲ್‌ನ ಮಾರುಕಟ್ಟೆ ಬಂಡವಾಳ
ಎಂಕೆ ವೆಂಚರ್ಸ್ ಕ್ಯಾಪಿಟಲ್ ಲಿಮಿಟೆಡ್‌ನ ಮಾರುಕಟ್ಟೆ ಬಂಡವಾಳ (MK Ventures Capital Market Capitalization) ಸುಮಾರು 664 ಕೋಟಿ ರೂಪಾಯಿಗಳು. ಕಂಪನಿಯು ಮೊದಲು ಇಕಾಬ್ ಸೆಕ್ಯುರಿಟೀಸ್ ಮತ್ತು ಇನ್ವೆಸ್ಟ್‌ಮೆಂಟ್ ಲಿಮಿಟೆಡ್ ಎಂಬ ಹೆಸರಿನಿಂದ ಪರಿಚಿತವಾಗಿತ್ತು. 1991ರಲ್ಲಿ ಪ್ರಾರಂಭವಾದ ಬ್ಯಾಂಕೇತರ ಹಣಕಾಸು ಕಂಪನಿ, ಹಣಕಾಸು ಸೇವೆಗಳನ್ನು ನೀಡುತ್ತಿದೆ. ಷೇರು, ಸೆಕ್ಯೂರಿಟಿಸ್, ಹೂಡಿಕೆ ಮತ್ತು ಬ್ರೋಕರೇಜ್ ವ್ಯವಹಾರ ಮಾಡುತ್ತದೆ. ಮುಂಬೈನಲ್ಲಿ ಎಂಕೆ ವೆಂಚರ್ಸ್ ಕ್ಯಾಪಿಟಲ್ ಲಿಮಿಟೆಡ್‌ನ ಪ್ರಧಾನಿ ಕಚೇರಿ ಇದೆ.
ಗಮನಿಸಿ- ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಹೂಡಿಕೆ ಮಾಡುವ ಮೊದಲು ನಿಮ್ಮ ಮಾರುಕಟ್ಟೆ ತಜ್ಞರ ಸಲಹೆಯನ್ನು ಪಡೆಯಿರಿ.
ಇದನ್ನೂ ಓದಿ:5 ರೂ.ಯಿಂದ 1700ರವರೆಗಿನ ಪಯಣದಲ್ಲಿ ಹೂಡಿಕೆದಾರರಿಗೆ 300ಪಟ್ಟು ಲಾಭ ಕೊಟ್ಟ ಷೇರು