ಕೇವಲ ಒಂದು ಟೆಕ್ನಿಕ್‌ ಬಳಸಿ ಷೇರು ಮಾರುಕಟ್ಟೆಯಿಂದ 2 ಕೋಟಿ ಗಳಿಸಿದ ಹಳ್ಳಿ ಹುಡುಗಿ

ಹಳ್ಳಿಯಿಂದ ಬಂದ ಕವಿತಾ ಆರಂಭದಲ್ಲಿ ಐಟಿ ಕೆಲಸದ ಜೊತೆ ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸಲು ಆರಂಭಿಸಿದರು. ಇಂದು 2 ಕೋಟಿ ಬಂಡವಾಳದ ಒಡತಿಯಾಗಿದ್ದಾರೆ ಕವಿತಾ. 

IT Professional Earns 2 Crores From Stock Market Trading mrq

ಮುಂಬೈ: ಷೇರು ಮಾರುಕಟ್ಟೆಯಲ್ಲಿ ಪುರುಷರು ಮಾತ್ರ ವ್ಯವಹರಿಸಲ್ಲ. ಇಂದು ಮಹಿಳೆಯರು ಸಹ ಷೇರು ಮಾರುಕಟ್ಟೆಯತ್ತ ವ್ಯವಹರಿಸುತ್ತಿದ್ದು, ಇದನ್ನೇ ಉದ್ಯೋಗವನ್ನಾಗಿಯೂ ಮಾಡಿಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಮಹಿಳಾ ಹೂಡಿಕೆದಾರರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಸೆಬಿಯ ವರದಿಯ ಪ್ರಕಾರ, 2023-24ರಲ್ಲಿ ಫ್ಯೂಚರ್ ಮತ್ತು ಆಪ್ಷನ್ ವ್ಯಾಪಾರದಲ್ಲಿ (F&O) 91.9% ಪುರುಷರು ನಷ್ಟ ಅನುಭವಿಸಿದ್ರೆ, ಕೇವಲ 86.3% ಮಹಿಳೆಯರು ಮಾತ್ರ ನಷ್ಟದಲ್ಲಿದ್ದಾರೆ. ಅಂದರೆ 8.1% ಪುರುಷರು ಮತ್ತು ಸುಮಾರು 14% ಮಹಿಳೆಯರು ವ್ಯಾಪಾರದಿಂದ ಹಣ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಹ ಮಹಿಳೆಯರಲ್ಲಿ ಒಬ್ಬರು ಈ ಹಳ್ಳಿ ಹುಡುಗಿ. 11 ವರ್ಷಗಳಲ್ಲಿ 2 ಕೋಟಿ ರೂಪಾಯಿ ಬಂಡವಾಳ ಸೃಷ್ಟಿಸಿಕೊಂಡಿದ್ದಾರೆ. ಮಹಿಳೆಯ ಜಾಣತಣದ ಹೂಡಿಕೆಯ ತಂತ್ರದಿಂದ ಕೋಟಿಯ ಒಡತಿಯಾಗಿದ್ದಾರೆ.

ಪಶ್ಚಿಮ ಬಂಗಾಳದ ಬರ್ಧಮಾನ್‌ನ ಮೂಲದ ಕವಿತಾ ಎಂಬವರೇ 2 ಕೋಟಿ ಗಳಿಸಿದವರು. ಆಸ್ಟ್ರೇಲಿಯಾ ಮೂಲದ ಕಂಪನಿಯಲ್ಲಿ ಐಟಿ ಉದ್ಯೋಗಿಯಾಗಿರುವ ಕವಿತಾ, ಕೆಲಸದ ಜೊತೆ ಷೇರು ಮಾರುಕಟ್ಟೆಯಲ್ಲಿಯೂ ವ್ಯವಹರಿಸುತ್ತಾರೆ. ಫ್ಯೂಚರ್ ಆಂಡ್ ಆಪ್ಷನ್‌ನಲ್ಲಿ ವಹಿವಾಟು ನಡೆಸುವ ಮೂಲಕ ಕೋಟಿಗಟ್ಟಲೆಯ ಬಂಡವಾಳವನ್ನು ಕವಿತಾ ನಿರ್ಮಿಸಿದ್ದಾರೆ. 

ಕವಿತಾ ಬಾಲ್ಯದಿಂದಲೂ ಓದಿನಲ್ಲಿ ಜಾಣೆ. ತಮ್ಮ 14ನೇ ವಯಸ್ಸಿನಲ್ಲಿಯೇ ಮಕ್ಕಳಿಗೆ ಪಾಠ ಮಾಡಿ ಶಿಕ್ಷಣದ ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದರು. ಸಂದರ್ಶನದಲ್ಲಿ ಕವಿತಾ ಅವರೇ ಹೇಳಿರುವ ಪ್ರಕಾರ, ಚಿಕ್ಕವರಿದ್ದಾಗ ಮನೆಗೆ ಅಜ್ಜ-ಅಜ್ಜಿ, ಸಂಬಂಧಿಕರು ಬಂದಾಗ ನೀಡುತ್ತಿದ್ದ ಹಣವನ್ನು ಅಮ್ಮನಿಗೆ ಕೊಡುತ್ತಿದ್ದರು. ನಂತರ ಆ ಹಣಕ್ಕೆ ಅಮ್ಮನಿಂದ ಬಡ್ಡಿ ಪಡೆಯುತ್ತಿದ್ದರು. ಸ್ವಂತ ವಾಹನ ಖರೀದಿಸಿದ್ರೆ ದಿನನಿತ್ಯದ ವೆಚ್ಚ ಹೆಚ್ಚಾಗುತ್ತೆ ಎಂದು ಪ್ರತಿನಿತ್ಯ 3 ಗಂಟೆ ಬಸ್‌ನಲ್ಲಿ ಪ್ರಯಾಣಿಸಿ ಕಾಲೇಜಿಗೆ ಕವಿತಾ ತೆರಳುತ್ತಿದ್ದರು. 

ಇದನ್ನೂ ಓದಿ: 1 ಲಕ್ಷ ಹೂಡಿಕೆ ಆಯ್ತು 3 ಕೋಟಿ ರೂಪಾಯಿ; ಷೇರುದಾರರಿಗೆ 28300% ಲಾಭ ಕೊಟ್ಟ ಕಂಪನಿ

ಶಿಕ್ಷಣ ಬಳಿಕ ಪುಣೆಯ ಐಟಿ ಕಂಪನಿಯಲ್ಲಿ ಕವಿತಾ ಅವರಿಗೆ ಕೆಲಸ ಸಿಗುತ್ತದೆ. ಅಲ್ಲಿ ಕೆಲವು ಸಹೋದ್ಯೋಗಿಗಳು ಷೇರು ಮಾರುಕಟ್ಟೆಯಲ್ಲಿ  ವ್ಯಾಪಾರ ಮಾಡುವುದನ್ನು ನೋಡಿ ಕವಿತಾ ಅವರಿಗೂ ಆಸಕ್ತಿ ಹೆಚ್ಚಾಯ್ತು. ಅಲ್ಲಿಂದ ಷೇರು ಮಾರುಕಟ್ಟೆಯಲ್ಲಿ ಹೇಗೆ ಹೂಡಿಕೆ ಮಾಡಬೇಕು ಎಂಬುದನ್ನು ಕಲಿಯಲು ಆರಂಭಿಸಿದರು. ಆರಂಭದಲ್ಲಿ ಸಂಬಳದ ಜೊತೆ ಹೆಚ್ಚುವರಿ ಆದಾಯ ಇರಲಿ ಎಂದು ವಹಿವಾಟು ನಡೆಸಲು ಶುರು ಮಾಡಿದರು. ನಂತರ ಷೇರು ಮಾರುಕಟ್ಟೆಯಲ್ಲಿ ಕೋಟಿಗಟ್ಟಲೇ ಹಣ ಗಳಿಸಬಹುದು ಎಂದು ತಿಳಿದಾಗ ಪೂರ್ಣ ಪ್ರಮಾಣದಲ್ಲಿ ಅದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡರು. 

ಷೇರು ಮಾರುಕಟ್ಟೆಯ ಪ್ರತಿಯೊಂದು ಸೂಕ್ಷ್ಮತೆಯ ಬಗ್ಗೆ ತಿಳಿದಾಗ, ಕವಿತಾ ಅವರು ಇಂಟ್ರಾಡೇ ವ್ಯಾಪಾರವನ್ನು ಪ್ರಾರಂಭಿಸಿದರು. ಆರಂಭದಲ್ಲಿ ಅವರಿಗೆ 400-500 ರೂ. ಲಾಭವಾಯಿತು. ನಂತರ ಅವರು ಬ್ಯಾಂಕಿನಿಂದ 3 ಲಕ್ಷ ರೂ. ಸಾಲ ಪಡೆದು ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಆರಂಭಿಸಿದರು. ಇದಾದ ಬಳಿಕ ಕೆಲವೇ ಸಮಯದಲ್ಲಿ ಅವರ ಬಂಡವಾಳ 20 ಲಕ್ಷ ರೂ. ಆಯಿತು. ಇದಾದ ಬಳಿಕ ಆಯ್ಕೆ ವ್ಯಾಪಾರವನ್ನು ಕಲಿತು ಬಂಡವಾಳವನ್ನು 2 ಕೋಟಿಗೆ ಹೆಚ್ಚಿಸಿಕೊಂಡರು. ಇಂದು ಅವರು ತಮ್ಮನ್ನು ಸ್ಥಾನಿಕ ವ್ಯಾಪಾರಿ ಎಂದು ಕರೆಯುತ್ತಾರೆ. ವಾರಕ್ಕೊಮ್ಮೆ ಅಥವಾ ಮಾಸಿಕ ಆಯ್ಕೆ ವ್ಯಾಪಾರ ಮಾಡುತ್ತಾರೆ.

ಗಮನಿಸಿ- ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಹೂಡಿಕೆ ಮಾಡುವ ಮೊದಲು ನಿಮ್ಮ ಮಾರುಕಟ್ಟೆ ತಜ್ಞರನ್ನು ಸಂಪರ್ಕಿಸಿ.

ಇದನ್ನೂ ಓದಿ: 5 ವರ್ಷದಲ್ಲಿ 7 ರೂಪಾಯಿ ಆಗಿದ್ದು 2175 ರೂಪಾಯಿ; ಕೋಟಿ ಕೋಟಿ ಲಾಭ ಕೊಟ್ಟ ಷೇರು ಯಾವುದು?

Latest Videos
Follow Us:
Download App:
  • android
  • ios