5 ರೂ.ಯಿಂದ 1700ರವರೆಗಿನ ಪಯಣದಲ್ಲಿ ಹೂಡಿಕೆದಾರರಿಗೆ 300ಪಟ್ಟು ಲಾಭ ಕೊಟ್ಟ ಷೇರು
ನಿಬೆ ಲಿಮಿಟೆಡ್‌ನ ಷೇರುಗಳು ಹೂಡಿಕೆದಾರರಿಗೆ ಒಳ್ಳೆಯ ರಿಟರ್ನ್ ನೀಡಿದೆ. ಈ ಷೇರು ತನ್ನ ಕನಿಷ್ಠ ಮಟ್ಟ ₹5 ರಿಂದ ₹1700 ಕ್ಕಿಂತ ಹೆಚ್ಚು ಮೌಲ್ಯವನ್ನು ತಲುಪಿದೆ. ಕೆಲವೇ ವರ್ಷಗಳಲ್ಲಿ ಹೂಡಿಕೆದಾರರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಿದೆ.
ಮುಂಬೈ: ಒಂದು ಕಾಲದಲ್ಲಿ ಒಂದಂಕಿ ಮೂಲಬೆಲೆಯನ್ನು ಹೊಂದಿದ್ದ ಷೇರುಗಳು ಇಂದು ಹೂಡಿಕೆದಾರರಿಗೆ 300ಪಟ್ಟುಗಳಷ್ಟು ಲಾಭವನ್ನು ನೀಡಿವೆ. ಒಂದಂಕಿ ಬೆಲೆಯಲ್ಲಿ ಖರೀದಿಸಿದ್ದ ಷೇರುಗಳು ನಾಲ್ಕಂಕಿಗೆ ತಲುಪಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆಯ ಸ್ಟಾಕ್‌ಗಳಾಗಿವೆ. ರಕ್ಷಣಾ ವಲಯಕ್ಕೆ ಸಂಬಂಧಿಸಿದ ಈ ಕಂಪನಿಯ ಷೇರಿನ ಬೆಲೆ ಒಂದು ಕಾಲದಲ್ಲಿ ಕೇವಲ ₹5.85 ಆಗಿತ್ತು. ಆದರೆ, ಇಂದು ಈ ಷೇರು ₹1792 ರ ಸಮೀಪದಲ್ಲಿ ವಹಿವಾಟು ನಡೆಸುತ್ತಿದೆ. 5 ರೂಪಾಯಿಯ ಆಸುಪಾಸಿನಲ್ಲಿ ಲಕ್ಷದವರೆಗೆ ಹೂಡಿಕೆ ಮಾಡಿದವರು ಇಂದು ಕೈ ತುಂಬಾ ಹಣ ಸಂಪಾದಿಸುತ್ತಿದ್ದಾರೆ.
ನಿಬೆ ಲಿಮಿಟೆಡ್‌ನ ಷೇರಿನಲ್ಲಿ ಕನಿಷ್ಠ ಮಟ್ಟ ₹5.85 ಇದ್ದಾಗ ₹1 ಲಕ್ಷ ಹೂಡಿಕೆ ಮಾಡಿದ್ದರೆ, ಇಂದು ಅವರ ಹಣ ₹3 ಕೋಟಿಗಿಂತ ಹೆಚ್ಚಾಗಿರುತ್ತಿತ್ತು. ನಿಬೆ ಲಿಮಿಟೆಡ್ ಷೇರುಗಳು ಗರಿಷ್ಠ 2,200 ರೂ.ವರೆಗೂ ತಲುಪಿತ್ತು. ನಂತರ ಮಾರುಕಟ್ಟೆಯಲ್ಲಿ ಬದಲಾವಣೆಗಳಿಂದ ಇಂದು 1,792 ರೂಪಾಯಿ ಆಗುತ್ತದೆ. ಷೇರಿನ ಮುಖಬೆಲೆ ಗರಿಷ್ಠ ಮಟ್ಟಕ್ಕೆ ತಲುಪಿದಾಗ 1 ಲಕ್ಷ ಹಣಕ್ಕೆ 3.66 ಕೋಟಿ ರೂಪಾಯಿ ಸಿಗುತ್ತಿತ್ತು.
4 ವರ್ಷಗಳ ಹಿಂದೆ ಅಂದರೆ ನವೆಂಬರ್ 2020 ರಲ್ಲಿ ನಿಬೆ ಲಿಮಿಟೆಡ್‌ನ ಷೇರಿನ ಬೆಲೆ ಕೇವಲ ₹12.57 ರಷ್ಟಿತ್ತು. ಆ ಸಮಯದಲ್ಲಿ ಯಾರಾದರೂ ಈ ಷೇರಿನಲ್ಲಿ ₹1 ಲಕ್ಷ ಹೂಡಿಕೆ ಮಾಡಿ, ಆ ಹೂಡಿಕೆಯನ್ನು ಮುಂದುವರಿಸಿದ್ದರೆ, ಈಗ ಅವರ ಹಣ ₹1.42 ಕೋಟಿಗಿಂತ ಹೆಚ್ಚಾಗಿರುತ್ತಿತ್ತು.
10 ತಿಂಗಳಲ್ಲಿ 180% ಕ್ಕಿಂತ ಹೆಚ್ಚು ಲಾಭ
ಜನವರಿ 2024 ರಿಂದ ಇಲ್ಲಿಯವರೆಗೆ ಅಂದರೆ ಕಳೆದ 10 ತಿಂಗಳಲ್ಲಿ ನಿಬೆ ಲಿಮಿಟೆಡ್‌ನ ಷೇರು 180% ಕ್ಕಿಂತ ಹೆಚ್ಚು ಲಾಭವನ್ನು ನೀಡಿದೆ. ಷೇರಿನ 52 ವಾರಗಳ ಕನಿಷ್ಠ ಮಟ್ಟ ₹525 ಮತ್ತು 52 ವಾರಗಳ ಗರಿಷ್ಠ ಮಟ್ಟ ₹2245.40 ಆಗಿದೆ. ಪ್ರಸ್ತುತ ಕಂಪನಿಯ ಮಾರುಕಟ್ಟೆ ಬಂಡವಾಳ ₹2125 ಕೋಟಿ ಆಗಿದೆ. ಒಂದು ಷೇರಿ ಮುಖಬೆಲೆ ₹10 ಆಗಿದೆ.
ಇದನ್ನೂ ಓದಿ: 1 ಲಕ್ಷ ಹೂಡಿಕೆ ಆಯ್ತು 3 ಕೋಟಿ ರೂಪಾಯಿ; ಷೇರುದಾರರಿಗೆ 28300% ಲಾಭ ಕೊಟ್ಟ ಕಂಪನಿ
₹1875 ಮಟ್ಟವನ್ನು ತಲುಪಿತ್ತು ನಿಬೆ ಷೇರು
ನವೆಂಬರ್ 11, 2024 ರಂದು ನಿಬೆ ಲಿಮಿಟೆಡ್‌ನ ಷೇರು ದಿನದ ವಹಿವಾಟಿನಲ್ಲಿ ₹1875 ರ ಗರಿಷ್ಠ ಮಟ್ಟವನ್ನು ತಲುಪಿತ್ತು. ಆದರೆ, ನಂತರ ಈ ಷೇರಿನಲ್ಲಿ ಲಾಭ ಗಳಿಕೆ ಕಂಡುಬಂದಿದ್ದು, ಷೇರು ₹1792 ರ ಮಟ್ಟದಲ್ಲಿ ಕೆಂಪು ಗುರುತಿನೊಂದಿಗೆ ಮುಕ್ತಾಯವಾಯಿತು. ನವೆಂಬರ್ 13 ರಂದು ಕಂಪನಿ ತನ್ನ ಹಣಕಾಸು ಫಲಿತಾಂಶಗಳನ್ನು ಬಿಡುಗಡೆ ಮಾಡಲಿದೆ. ಫಲಿತಾಂಶದ ನಂತರ ಷೇರಿನಲ್ಲಿ ಏರಿಳಿತ ಕಂಡುಬರಬಹುದು.
ನಿಬೆ ಲಿಮಿಟೆಡ್ ಏನು ಮಾಡುತ್ತದೆ?
ನಿಬೆ ಲಿಮಿಟೆಡ್ ಒಂದು ಏರೋಸ್ಪೇಸ್ ಮತ್ತು ರಕ್ಷಣಾ ವಲಯದ ಕಂಪನಿ. ಈ ಕಂಪನಿ 2005 ರಲ್ಲಿ ಪ್ರಾರಂಭವಾಯಿತು. ಇದು ಕಡಿಮೆ ಮತ್ತು ಮಧ್ಯಮ ವೋಲ್ಟೇಜ್ ಮಾರ್ಗಗಳ ವಿನ್ಯಾಸ, ಪೂರೈಕೆ ಮತ್ತು ಉತ್ಪಾದನೆಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸುತ್ತದೆ. ಇದಲ್ಲದೆ, ಕಂಪನಿಯು ಸಾಫ್ಟ್‌ವೇರ್ ಅಭಿವೃದ್ಧಿ, ರಕ್ಷಣಾ, ವಿದ್ಯುತ್ ವಾಹನಗಳಿಗೆ ಅಗತ್ಯವಾದ ಘಟಕಗಳ ತಯಾರಿಕೆಯ ಕೆಲಸವನ್ನೂ ಮಾಡುತ್ತದೆ.
ಇದನ್ನೂ ಓದಿ: 71 ಪೈಸೆಯ ಷೇರು ₹174, 1 ಲಕ್ಷ ಈಗ 2.5 ಕೋಟಿ ರೂಪಾಯಿ ಆಯ್ತು; ಝಣ ಝಣ ಕಾಂಚಾಣ