ಜಗತ್ತಿನೆಲ್ಲೆಡೆ ಹಠಾತ್ ಆಫ್ ಆದ ಮೈಕ್ರೋಸಾಫ್ಟ್ ವಿಂಡೋ ಸಿಸ್ಟಂ: ವಿಮಾನಯಾನ, ಬ್ಯಾಂಕ್ ಸೇವೆಗಳಿಗೆ ತೀವ್ರ ಅಡ್ಡಿ
ಮೈಕ್ರೋಸಾಫ್ಟ್ ವಿಂಡೋಸ್ ಸಿಸ್ಟಂ ಬಳಸುತ್ತಿರುವ ಜಗತ್ತಿನ್ನೆಲ್ಲೆಡೆಯ ಜನ ಇಂದು ಸಿಸ್ಟಂ ಸಡನ್ ಆಗಿ ಶಡೌನ್ ಆಗಿದ್ದರಿಂದ ಹಲವು ಸಮಸ್ಯೆಗಳನ್ನು ಎದುರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಮೈಕ್ರೋಸಾಫ್ಟ್ ವಿಂಡೋಸ್ ಸಿಸ್ಟಂ ಬಳಸುತ್ತಿರುವ ಜಗತ್ತಿನ್ನೆಲ್ಲೆಡೆಯ ಜನ ಇಂದು ಸಿಸ್ಟಂ ಸಡನ್ ಆಗಿ ಶಡೌನ್ ಆಗಿದ್ದರಿಂದ ಹಲವು ಸಮಸ್ಯೆಗಳನ್ನು ಎದುರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲಸ ಮಾಡುತ್ತಿರುವಾಗಲೇ ನೀಲಿ ಬಣ್ಣಕ್ಕೆ ತಿರುಗುವ ಸ್ಕ್ರೀನ್, ನಿಮ್ಮ ಡಿವೈಸ್‌ನಲ್ಲಿ ಸಮಸ್ಯೆ ಇದೆ. ರಿಸ್ಟಾರ್ಟ್ ಮಾಡುವ ಅಗತ್ಯವಿದೆ. ಸಮಸ್ಯೆ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿಕೊಂಡು ನಿಮಗಾಗಿ ಸಿಸ್ಟಂ ರಿಸ್ಟಾರ್ಟ್ ಮಾಡುತ್ತೇವೆ ಎಂಬ ಬರಹವನ್ನು ಸ್ಕ್ರೀನ್ ಮೇಲೆ ತೋರಿಸುತ್ತಿದೆ. ಹೀಗೆ ಸಡನ್ ಆಗಿ ಸಿಸ್ಟಂ ಆಫ್ ಆಗ್ತಿರೋದ್ರಿಂದ ಮಾಡಿದ ಕೆಲಸಗಳೆಲ್ಲವೂ ಅರ್ಧದಲ್ಲೇ ಅಳಿಸಿ ಹೋಗುತ್ತಿದ್ದು, ಇದರಿಂದ ಜಗತ್ತಿನಾದ್ಯಂತ ಸಿಸ್ಟಂನಲ್ಲಿ ಕೆಲಸ ಮಾಡುವ ಲಕ್ಷಾಂತರ ಜನ ತೊಂದರೆ ಅನುಭವಿಸಿದ್ದು, ಸಾಮಾಜಿಕ ಜಾಲತಾಣದಲ್ಲಿಈ ಬಗ್ಗೆ ಹೇಳಿಕೊಂಡು ಆಕ್ರೋಶ ಹೊರ ಹಾಕಿದ್ದಾರೆ.
ಮೆಕ್ರೋಸಾಫ್ಟ್‌ನ 365ಕ್ಕೂ ಹೆಚ್ಚು ಆಪ್‌ಗಳಿದ್ದು, ಇದೆಲ್ಲವುಗಳು ಸಮಸ್ಯೆ ತೋರಿಸುತ್ತಿದ್ದು, ಬಳಕೆದಾರರು ತೊಂದರೆ ಅನುಭವಿಸಿದ್ದಾರೆ. ಇತ್ತೀಚಿನ ಜಾಗತಿಕ ಸೈಬರ್ ಭದ್ರತಾ ಸಂಸ್ಥೆ ಕ್ರೌಡ್‌ಸ್ಟ್ರೈಕ್‌ನಲ್ಲಿ ಮಾಡಿದ ಹೊಸ ಅಪ್‌ಡೇಟ್‌ನ ನಂತರ ಈ ಸಮಸ್ಯೆ ಎದುರಾಗಿದೆ. ಇಂದು ಮುಂಜಾನೆಯಿಂದ ಈ ಸಮಸ್ಯೆ ಆರಂಭವಾಗಿದ್ದು, ಇದು ಜಾಗತಿಕ ಮಟ್ಟದ ಹಲವು ಕಂಪನಿಗಳ ಕೆಲಸದ ಮೇಲೆ ತೀವ್ರ ಪರಿಣಾಮ ಬೀರಿದೆ. ಭಾರತ, ಅಮೆರಿಕಾ, ಆಸ್ಟ್ರೇಲಿಯಾದ ಎಲ್ಲಾ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ವಿಮಾನಯಾನ ಸಂಸ್ಥೆಗಳು ಸೇರಿದಂತೆ ಎಲ್ಲಾ ಸಂಸ್ಥೆಗಳಿಗೆ ತೊಂದರೆ ಆಗಿದ್ದು, ಅನೇಕರು ಈ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
50ರ ಇಳಿ ಸಂಜೆಯಲ್ಲಿ ಒಂಟಿಯಾಗುವೆ ಎಂದು ಊಹೆಯೂ ಮಾಡಿರಲಿಲ್ಲ: ಮಿಲಿಂದಾ ಗೇಟ್ಸ್
ಹೀಗೆ ಸಮಸ್ಯೆಗೊಳಗಾಗಿ ಸಿಸ್ಟಂಗಳು, 'ವಿಂಡೋಸ್ ಸದ್ಯಕ್ಕೆ ಲೋಡ್ ಆದಂತೆ ಕಾಣಿಸುತ್ತಿಲ್ಲ, ನೀವು ರಿಸ್ಟಾರ್ಟ್ ಮಾಡಲು ಬಯಸಿದ್ದರೆ ಮತ್ತೆ ಪ್ರಯತ್ನಿಸಿ ಮೈ ಪಿಸಿ ಕೆಳಗಿರುವ ರಿಸ್ಟಾರ್ಟ್ ಬಟನ್ ಅನ್ನು ಆಯ್ಕೆ ಮಾಡಿ' ಎಂದು ತೋರಿಸುತ್ತಿದೆ ಎಂದು ಗ್ರಾಹಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮೈಕ್ರೋಸಾಫ್ಟ್ ಸಂಸ್ಥೆ ಪ್ರತಿಕ್ರಿಯಿಸಿದ್ದು, ನಾವು ಈ ಸಮಸ್ಯೆಗೆ ಕ್ರಮ ಕೈಗೊಳ್ಳುತ್ತಿರುವುದನ್ನು ಮುಂದುವರಿಸುತ್ತಿರುವಾಗಲೇ ನಮ್ಮ ಸೇವೆಗಳು ಇನ್ನೂ ನಿರಂತರ ಸುಧಾರಣೆಯನ್ನು ಕಾಣುತ್ತಿವೆ. ನೀಲಿ ಸ್ಕ್ರೀನ್ ಸಮಸ್ಯೆ ಅಥವಾ ಕೆಲವೊಮ್ಮೆ ಕಪ್ಪು ಸ್ಕ್ರೀನ್ ಸಮಸ್ಯೆ ಅಥವಾ ಸ್ಟಾಪ್ ಕೋಡ್ ಸಮಸ್ಯೆಗಳು ಎಂದು ಎಂದು ಕರೆಯಲ್ಪಡುವ ಈ ಗಂಭೀರ ಸಮಸ್ಯೆಯೂ ವಿಂಡೋಸ್‌ನ್ನು ಅನಿರೀಕ್ಷಿತವಾಗಿ ಸ್ಥಗಿತಗೊಳಿಸಲು ಅಥವಾ ಮರು ಪ್ರಾರಂಭಿಸಲು (ರಿಸ್ಟಾರ್ಟ್) ಕಾರಣವಾಗುತ್ತದೆ. ಇದಕ್ಕೆ ಕಾನ್‌ಫಿಗರೇಷನ್‌ನಲ್ಲಿನ ಬದಲಾವಣೆ ಮೂಲ ಕಾರಣ ಎಂದು ಮೈಕ್ರೋಸಾಫ್ಟ್ ಸಂಸ್ಥೆ ಹೇಳಿದೆ.
ಟ್ವಿಟರ್‌ಗೆ ಸೆಡ್ಡುಹೊಡೆದ ಬೆಂಗಳೂರು ಮೂಲದ ಕೂ ಆ್ಯಪ್ ಸ್ಥಗಿತ, ಕಾರಣ ಬಿಚ್ಚಿಟ್ಟ ಸಂಸ್ಥಾಪಕ!