ಟ್ವಿಟರ್‌ಗೆ ಸೆಡ್ಡುಹೊಡೆದ ಬೆಂಗಳೂರು ಮೂಲದ ಕೂ ಆ್ಯಪ್ ಸ್ಥಗಿತ, ಕಾರಣ ಬಿಚ್ಚಿಟ್ಟ ಸಂಸ್ಥಾಪಕ!
ಸ್ವದೇಶಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಆ್ಯಪ್ ಸ್ಥಗಿತಗೊಂಡಿದೆ. ಟ್ವಿಟರ್‌ಗೆ ಪ್ರತಿಸ್ಪರ್ಧಿಯಾಗಿ ಆರಂಭಗೊಂಡ ಕೂ ಭಾರತ ಹಾಗೂ ವಿದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಆದರೆ 4 ವರ್ಷದ ಬಳಿಕ ಸ್ಥಗಿತಗೊಂಡಿದೆ.
ಬೆಂಗಳೂರು(ಜು.03) ಮೈಕ್ರೋಬ್ಲಾಗಿಂಗ್ ದೈತ್ಯ ಟ್ವಿಟರ್‌ಗೆ ಸೆಡ್ಡುಹೊಡೆದು ಆರಂಭಗೊಂಡ ಕೂ ಆ್ಯಪ್ ಭಾರತ ಸೇರಿದಂತೆ ವಿದೇಶಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಕಳೆದ ನಾಲ್ಕು ವರ್ಷಗಳಿಂದ ಒಂದೊಂದೆ ದೇಶಗಳಲ್ಲಿ ವಿಸ್ತರಣೆಯಾಗುತ್ತ ಕ್ಷಿಪ್ರಗತಿಯಲ್ಲಿ ಬೆಳೆದ ಕೂ ಆ್ಯಪ್ ಇದೀಗ ಸ್ಥಗಿತಗೊಂಡಿದೆ. ಬೆಂಗಳೂರು ಮೂಲದ ಕೂ ಆ್ಯಪ್ ಭಾರತ ಹಾಗೂ ಹಲವು ದೇಶಗಲ್ಲಿ ಅಸ್ತಿತ್ವಕಂಡುಕೊಂಡಿತ್ತು. ಕೂ ಆ್ಯಪ್ ಉಳಿಸಲು ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲಗೊಂಡಿದೆ. ಇದೀಗ ಕೂ ಆ್ಯಪ್ ಸಂಪೂರ್ಣ ಸ್ಥಗಿತಗೊಂಡಿದೆ.
ಆತ್ಮನಿರ್ಭರ್ ಪರಿಕಲ್ಪನೆ ಭಾರತದಲ್ಲಿ ಕ್ರಾಂತಿ ಸೃಷ್ಟಿಸುತ್ತಿದ್ದಂತೆ ಬೆಂಗಳೂರು ಮೂಲಕ ಕಂಪನಿ ಟ್ವಿಟರ್ ರೀತಿಯ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಆ್ಯಪ್ ಆರಂಭಿಸಿತ್ತು. ದೇಶಾದ್ಯಂತ ವಿಸ್ತರಣೆಗೊಂಡು ಈ ಆ್ಯಪ್, ವಿದೇಶಗಳಲ್ಲೂ ಮೋಡಿ ಮಾಡಿತ್ತು. ಕಳೆದ ವರ್ಷ ಬ್ರೆಜಿಲ್‌ನಲ್ಲೂ ಕೂ ಆ್ಯಪ್ ಲಾಂಚ್ ಮಾಡಲಾಗಿತ್ತು. ಕಳೆದ ನಾಲ್ಕು ವರ್ಷದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಸ್ಪರ್ಧೆ ಎದುರಿಸಿದ ಕೂ ಆ್ಯಪ್ ಕೊನೆಗೂ ಸ್ಥಗಿತಗೊಂಡಿದೆ. ಪ್ರತಿಸ್ಪರ್ಧೆ, ಆರ್ಟಿಫೀಶಿಯಲ್ ಇಂಟಲಿಜೆನ್ಸ್, ಗ್ಲೋಬಲ್ ಮಾರ್ಕೆಟ್ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿದ ಕೂ ಆ್ಯಪ್ ಪ್ರತಿಸ್ಪರ್ಧೆ ಒಡ್ಡಲು ಸಾಧ್ಯವಾಗದೆ ಸ್ಥಗಿತಗೊಂಡಿದೆ.
Koo App FY21: ಜಾಹೀರಾತುಗಳಿಗಾಗಿ ರೂ. 7 ಕೋಟಿ ಖರ್ಚು ಮಾಡಿದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್!
ಕೂ ಆ್ಯಪ್‌ನ್ನು ಇತರ ಕಂಪನಿಗಳ ಜೊತೆ ವಿಲೀನ ಮಾಡಲು ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಸತತ ಹೋರಾಟ ನಡೆಸಿದ್ದರು. ಹಲವು ಕೆಂಪನಿಗಳ ಜೊತೆ ಮಾತುಕತೆ ನಡೆಸಿದ್ದರು. ಆದರೆ ಈ ಎಲ್ಲಾ ಮಾತುಕತೆಗಳು ವಿಫಲಗೊಂಡಿತ್ತು. ಹೀಗಾಗಿ ಕೂ ಆ್ಯಪ್ ಸ್ಥಗಿತಗೊಂಡಿದೆ. ಈ ಕುರಿತು ಅಪ್ರೇಮಯ ರಾಧಾಕೃಷ್ಣನ್ ಹಾಗೂ ಸಹ ಸಂಸ್ಥಾಪಕ ಮಯಾಂಕ್ ಬೈದವಟ್ಕ ಜಂಟಿ ಸುದ್ದಿಗೋಷ್ಠಿ ನಡೆಸಿ ಆ್ಯಪ್ ಸ್ಥಗಿತ ಮಾಹಿತಿ ನೀಡಿದ್ದಾರೆ.
ಗ್ಲೋಬಲ್ ಮಾರ್ಕೆಟ್ ಪೈಪೋಟಿ, ಎಕ್ಸ್ ಸೇರಿದಂತೆ ಇತರ ದೈತ್ಯ ಪ್ರತಿಸ್ಪರ್ಧಿಗಳ ವಿರುದ್ದ ಸಕ್ರಿಯವಾಗಿ ಮುಂದುವರಿಯಲು ಹೆಚ್ಚಿನ ಬಂಡವಾಳದ ಅಗತ್ಯವಿದೆ. ಲಾಂಚ್ ಮಾಡಿದ ಆರಂಭಿಕ 2 ವರ್ಷ ಬಂಡವಾಳ ಹೂಡಿಕೆ ಮಾಡಬೇಕಾಯಿತು. ಬಳಿಕ ಮುಂದುವರಿಸಲು ಮತ್ತಷ್ಟು ಬಂಡವಾಳ ಹೂಡಿಕೆಯ ಅಗತ್ಯತೆ ಆರಂಭಗೊಂಡಿತು. ಸ್ವದೇಶಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಆ್ಯಪ್ ಅತ್ಯಂತ ಪ್ರೀತಿಯಿಂದ ಆರಂಭಿಸಿದ್ದೇವು. ಆದರೆ ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಪ್ರಮೇಯ ಹೇಳಿದ್ದಾರೆ.
Koo app:ಏಷ್ಯಾ ಪೆಸಿಫಿಕ್ ಹಾಟೆಸ್ಟ್ ಎಮರ್ಜಿಂಗ್ ಡಿಜಿಟಲ್ ಬ್ರಾಂಡ್‌ನಲ್ಲಿ ಸ್ಥಾನ ಪಡೆದ ಬೆಂಗಳೂರಿನ ಕೂ ಆ್ಯಪ್!
ಕಳೆದ ವರ್ಷದ ಅಂತ್ಯದಲ್ಲಿ 66 ಮಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಹರಿದುಬಂದಿತ್ತು. ಈ ಮೂಲಕ ಕೂ ಆ್ಯಪ್ 274 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯ ಪಡೆದುಕೊಂಡಿತ್ತು.