ಬಿಲ್ ಗೇಟ್ಸ್ ಜೊತೆ ವಿಚ್ಛೇದನದ ಮೂರು ವರ್ಷಗಳ ಬಳಿಕ ಗೇಟ್ಸ್ ಫೌಂಡೇಶನ್‌ಗೂ ಮಿಲಿಂದಾ ಗೇಟ್ಸ್ ರಾಜೀನಾಮೆ
ಐಟಿ ದೈತ್ಯ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಮಾಜಿ ಪತ್ನಿ ಮಿಲಿಂದಾ ಫ್ರೆಂಚ್ ಗೇಟ್ಸ್, ಪತಿಯೊಂದಿಗಿನ ವಿಚ್ಛೇದನ ನಡೆದು ಹಲವು ವರ್ಷಗಳ ನಂತರ ಈಗ ಗೇಟ್ಸ್ ಫೌಂಡೇಶನ್‌ಗೂ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
ನ್ಯೂಯಾರ್ಕ್: ಐಟಿ ದೈತ್ಯ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಮಾಜಿ ಪತ್ನಿ ಮಿಲಿಂದಾ ಫ್ರೆಂಚ್ ಗೇಟ್ಸ್, ಪತಿಯೊಂದಿಗಿನ ವಿಚ್ಛೇದನ ನಡೆದು ಹಲವು ವರ್ಷಗಳ ನಂತರ ಈಗ ಗೇಟ್ಸ್ ಫೌಂಡೇಶನ್‌ಗೂ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
ಮಿಲಿಂದಾ ಗೇಟ್ಸ್ ಅವರು ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಸಹ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಅವರು ಈ ಹುದ್ದೆಗೆ ರಾಜೀನಾಮ ನೀಡಲು ಮುಂದಾಗಿರುವುದಾಗಿ ನಿನ್ನೆ ಘೋಷಣೆ ಮಾಡಿದ್ದಾರೆ. ಗೇಟ್ಸ್ ಫೌಂಡೇಶನ್ ವಿಶ್ವದ ಅತ್ಯಂತ ಪ್ರಭಾವಶಾಲಿ ಸಂಸ್ಥೆಯಾಗಿದ್ದು, ಪ್ರಪಂಚದ ವಿವಿಧೆಡೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಕೋಟ್ಯಾಂತರ ರೂ ಹಣವನ್ನು ದಾನ ಮಾಡುತ್ತಿದೆ. ಇಂತಹ ಸಂಸ್ಥೆಗೆ ರಾಜೀನಾಮೆ ನೀಡಿರುವ ಮಿಲಿಂದಾ ಗೇಟ್ಸ್ ಈ ಫೌಂಡೇಶನ್‌ನಲ್ಲಿ ಜೂನ್ 7 ತನ್ನ ಕೊನೆದಿನವಾಗಿದೆ ಎಂದು ಎಂದು ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.
ಅಲ್ಲದೇ ಇದು ತಾನು ಸುಲಭವಾಗಿ ತೆಗೆದುಕೊಂಡ ನಿರ್ಧಾರವಲ್ಲ ಎಂದು ಅವರು ಹೇಳಿದ್ದು,ನನ್ನ ಪರೋಪಕಾರದ ಸೇವೆಯ ಮುಂದಿನ ಅಧ್ಯಾಯಕ್ಕೆ ಮುಂದುವರಿಯಲು ನನಗೆ ಈ ಸಮಯ ಸೂಕ್ತವಾಗಿದೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಬಿಲ್ ಗೇಟ್ಸ್ ಜೊತೆಗಿನ ನನ್ನ ಒಪ್ಪಂದದ ನಿಯಮಗಳ ಅಡಿಯಲ್ಲಿ, ಈ ಗೇಟ್ಸ್ ಪ್ರತಿಷ್ಠಾನವನ್ನು ತೊರೆಯುವಾಗ, ಮಹಿಳೆಯರು ಮತ್ತು ಕುಟುಂಬಗಳ ಪರವಾಗಿ ನನ್ನ ಕೆಲಸಕ್ಕೆ ಬದ್ಧರಾಗಲು ನಾನು ಹೆಚ್ಚುವರಿ 12.5 ಬಿಲಿಯನ್ ಡಾಲರ್ ಅನ್ನು ನನ್ನ ಬಳಿ ಇಟ್ಟುಕೊಂಡಿದ್ದೇನೆ. ಹಾಗೂ ಭವಿಷ್ಯದಲ್ಲಿ ತನ್ನ ಇತರ ದತ್ತಿ (ದಾನ ಕೊಡುಗೆ) ಯೋಜನೆಗಳ ಬಗ್ಗೆ ಹೇಳಿಕೊಳ್ಳುವುದಾಗಿ ಬರೆದುಕೊಂಡಿದ್ದಾರೆ. ಬಿಲ್ ಗೇಟ್ಸ್ ಅವರ ಹಿರಿಯ ಪರಂಪರ ಹಾಗೂ ಮೆಲಿಂಡಾ ಅವರ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಗೇಟ್ಸ್ ಫೌಂಡೇಶನ್‌ನ ಹೆಸರನ್ನು ಬದಲಾಯಿಸಲಾಗುವುದು ಹಾಗೂ ಬಿಲ್ ಗೇಟ್ಸ್ ಅವರು ಪ್ರತಿಷ್ಠಾನದ ಏಕೈಕ ಅಧ್ಯಕ್ಷರಾಗುತ್ತಾರೆ ಎಂದು ಪ್ರತಿಷ್ಠಾನದ ಸಿಇಒ ಮಾರ್ಕ್ ಸುಜ್ಮಾನ್ ಹೇಳಿದ್ದಾರೆ.
ಅಜ್ಜನಾದ ಬಿಲ್ ಗೇಟ್ಸ್: ಮೊದಲ ಮಗುವಿಗೆ ಜನ್ಮ ನೀಡಿದ ಪುತ್ರಿ ಜೆನ್ನಿಫರ್ ಗೇಟ್ಸ್
ಮಿಲಿಂದಾ ಫ್ರೆಂಚ್ ಗೇಟ್ಸ್ ಅವರು ತಮ್ಮ ಸಮಾಜಮುಖಿ ದಾನ ಕಾರ್ಯಗಳ ಮುಂದಿನ ಅಧ್ಯಾಯವನ್ನು ಹೇಗೆ ಕಳೆಯಲು ಬಯಸುತ್ತಾರೆ ಎಂಬುದರ ಆಧಾರದ ಮೇಲೆ ಗಣನೀಯವಾಗಿ ಅವಲೋಕನ ಮಾಡಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಸುಜ್ಲಾನ್ ಹೇಳಿದ್ದಾರೆ. ಅಮೆರಿಕಾ ಹಾಗೂ ಪ್ರಪಂಚದೆಲ್ಲೆಡೆ ಇರುವ ಮಹಿಳೆಯರು ಹಾಗೂ ಕುಟುಂಬಗಳ ಜೀವನ ಸುಧಾರಿಸುವಲ್ಲಿ ಮೆಲಿಂದಾ ಹೊಸ ಆಲೋಚನೆಗಳನ್ನು ಹೊಂದಿದ್ದಾರೆ. ಜೊತೆಗೆ ಕೆಲವು ವರ್ಷಗಳಲ್ಲಿ ಪ್ರಪಂಚದಾದ್ಯಂತ ಮಹಿಳಾ ಹಕ್ಕುಗಳು ಮರಳುವುದನ್ನು ನೋಡಲು ಬಯಸುತ್ತಾರೆ. ಇದಕ್ಕಾಗಿ ನಿರ್ದಿಷ್ಟವಾದ ಗಮನ ಹರಿಸಲು ಅವರು ಗೇಟ್ಸ್ ಫೌಂಡೇಶನ್‌ಗೆ ರಾಜೀನಾಮೆ ನೀಡಿದ್ದಾರೆ ಎಂದು ಸುಜ್ಲಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೊಂದು ಬೇಸರದ ವಿಚಾರ, ವಿಶೇಷವಾಗಿ ಲಿಂಗ ಸಮಾನತೆ ಹಾಗೂ ನಮ್ಮ ಕೆಲಸವನ್ನು ಜನರೊಂದಿಗೆ ಸಂಪರ್ಕಿಸುವ ಅವರ ಸಾಮರ್ಥದಿಂದಾಗಿ ಮಿಲಿಂದಾ ಫ್ರೆಂಚ್ ಗೇಟ್ಸ್ ಅವರ ಜಾಗತಿಕ ನಾಯಕತ್ವದಿಂದಾಗಿ ಅನೇಕರು ಈ ಗೇಟ್ಸ್ ಫೌಂಢೇಶನ್‌ನತ್ತ ಆಕರ್ಷಿತರಾಗಿದ್ದರು ಎಂದು ಸುಜ್ಲಾನ್ ಹೇಳಿದ್ದಾರೆ. ನಿಮ್ಮೆಲ್ಲರಂತೆ ನಮಗೂ ಈ ವಿಚಾರ ಬಹಳ ಬೇಸರ ತಂದಿದೆ. ನಾನು ನಿಜವಾಗಿಯೂ ಮಿಲಿಂದಾ ಅವರನ್ನು ಇಷ್ಟಪಡುತ್ತೇನೆ, ಅವರೊಂದಿಗೆ ಕೆಲಸ ಮಾಡುವ ಹಾಗೂ ಅವರಿಂದ ಕಲಿಯುವುದನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಗೇಟ್ಸ್ ಫೌಂಡೇಶನ್‌ನ ಸಿಇಒ ಸುಜ್ಲಾನ್ ಹೇಳಿದ್ದಾರೆ.
48 ವರ್ಷಗಳ ಹಿಂದಿನ ತಮ್ಮ ರೆಸ್ಯುಮ್ ಶೇರ್ ಮಾಡಿದ ಬಿಲ್ ಗೇಟ್ಸ್!