48 ವರ್ಷಗಳ ಹಿಂದಿನ ತಮ್ಮ ರೆಸ್ಯುಮ್ ಶೇರ್ ಮಾಡಿದ ಬಿಲ್ ಗೇಟ್ಸ್!
ಬಿಲ್ ಗೇಟ್ಸ್ ಅಂದಾಜು ಐದು ದಶಕಗಳ ಹಿಂದಿನ ತಮ್ಮ ರೆಸ್ಯೂಮ್‌ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ತಮ್ಮ ಲಿಂಕ್ಡಿನ್ ಪುಟದಲ್ಲಿ 48 ವರ್ಷಗಳ ಹಿಂದಿನ ರೆಸ್ಯೂಮ್ ಅನ್ನು ಶೇರ್ ಮಾಡಿಕೊಂಡಿದ್ದು, ಇದನ್ನು ನೋಡಿರುವ ಬಳಕೆದಾರರು ಬಿಲ್ ಗೇಟ್ಸ್‌ಗೆ ಥ್ಯಾಂಕ್ಸ್ ಎಂದಿದ್ದಾರೆ. ಕೆಲವರಂತೂ, 48 ವರ್ಷಗಳ ಹಿಂದಿನ ನಿಮ್ಮ ರೆಸ್ಯೂಮ್ ಪರ್ಫೆಕ್ಟ್ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಾಷಿಂಗ್ಟನ್ (ಜುಲೈ 5): ಬಿಲ್ ಗೇಟ್ಸ್ (Bill Gates) ಎನ್ನುವ ಹೆಸರಿನಿಂದಲೇ ಜಗತ್ತಿಗೆ ಚಿರಪರಿಚಿತರಾದ ವಿಲಿಯಂ ಹೆನ್ರಿ ಗೇಟ್ಸ್ III ಅವರು ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ಕೆಲ ಕಾಲ ಸಂಚಲನವನ್ನು ಸೃಷ್ಟಿಸಿದ್ದರು. ತಮ್ಮ ಲಿಂಕ್ಡಿನ್ (Linkedin) ಪುಟದಲ್ಲಿ ಅವರು ಅಂದಾಜು 5 ದಶಕಗಳ ಹಿಂದೆ ಸಿದ್ಧ ಮಾಡಿದ್ದ ರೆಸ್ಯೂಮ್ (Resume) ಅನ್ನು ಹಂಚಿಕೊಂಡಿದ್ದರು.
ವಿಶ್ವದ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರಾಗಿರುವ 66 ವರ್ಷದ ಬಿಲ್ ಗೇಟ್ಸ್, ಈ ರೆಸ್ಯೂಮ್‌ಅನ್ನು ಸಿದ್ಧಪಡಿಸುವ ವೇಳೆ ಹಾರ್ವರ್ಡ್ ವಿಶ್ವ ವಿದ್ಯಾಲಯದಲ್ಲಿ ಮೊದಲ ವರ್ಷದಲ್ಲಿ ಓದುತ್ತಿದ್ದರು. ಅವರ ಒಂದು ಪುಟದ ರೆಸ್ಯೂಮ್ ಸಾಕಷ್ಟು ಸಾಧನೆಗಳಿಂದ ಕೂಡಿದ್ದರೂ, ಇದನ್ನು ಶೇರ್ ಮಾಡಿಕೊಳ್ಳುವ ವೇಳೆ ಅವರು, ಬೇರೆಯದೇ ರೀತಿಯಲ್ಲಿ ಭಾವಿಸಿ ಪೋಸ್ಟ್ ಮಾಡಿದ್ದಾರೆ. "ಹಾಗೇನಾದರೂ ನೀವು ಇತ್ತೀಚೆಗೆ ಪದವಿ ಪಡೆದು ಹೊರಬಂದಿದ್ದಲ್ಲಿ ಅಥವಾ ಕಾಲೇಜು ಡ್ರಾಪ್ ಔಟ್ ಆಗಿದ್ದಲ್ಲಿ, ನಿಮ್ಮ ರೆಸ್ಯೂಮ್, 48 ವರ್ಷದ ಹಿಂದೆ ನಾನು ಸಿದ್ಧ ಮಾಡಿದ ರೆಸ್ಯೂಮ್‌ಗಿಂತ ಉತ್ತಮವಾಗಿರಲಿದೆ ಎನ್ನುವ ಖಾತ್ರಿಯಿದೆ' ಎಂದು ಬರೆದುಕೊಂಡಿದ್ದಾರೆ. ಅದರೊಂದಿಗೆ ತಮ್ಮ ಒಂದು ಪುಟದ ರೆಸ್ಯೂಮ್‌ಅನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಪ್ರಥರ್ಮ ವರ್ಷದ ವಿದ್ಯಾರ್ಥಿಗಳು ತಮ್ಮ ರೆಸ್ಯೂಮ್ ಸಿದ್ಧಪಡಿಸಿದರೆ, ಅದರಲ್ಲಿ ಅವರ ಅನುಭವವನ್ನು ಸೇರಿಸಲು ಸಾಧ್ಯವಾಗೋದಿಲ್ಲ. ಆದರೆ, ಬಿಲ್ ಗೇಟ್ಸ್ ರೆಸ್ಯೂಮ್ ಇದಕ್ಕೆ ತದ್ವಿರುದ್ಧವಾಗಿದೆ.
ಬಿಲ್ ಗೇಟ್ಸ್ ಅವರ ಈ ಪೋಸ್ಟ್‌ಗೆ ಸ್ವತಃ ಲಿಂಕ್ಡಿನ್ ಕೂಡ ಪ್ರತಿಕ್ರಿಯೆ ನೀಡಿದೆ. 'ಎಲ್ಲರ ಪ್ರಯಾಣ ಎಲ್ಲೋ ಆರಂಭವಾಗಿರುತ್ತದೆ' ಎಂದು ಬರೆದಿದೆ. ಟೆಕ್ ದೈತ್ಯ ಮೈಕ್ರೋಸಾಫ್ಟ್ ಅನ್ನು ಸಹ-ಸ್ಥಾಪಿಸಿದ ಗೇಟ್ಸ್ ಮತ್ತು ಲಾಭರಹಿತ - ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್‌ಅನ್ನೂ ಸ್ಥಾಪನೆ ಮಾಡಿದ್ದಾರೆ. ವೃತ್ತಿಪರರೇ ತುಂಬಿರುವ ಲಿಂಕ್ಡಿನ್ ನೆಟ್‌ವರ್ಕಿಂಗ್ ಸೈಟ್‌ನಲ್ಲಿ 35 ಮಿಲಿಯನ್‌ಗಿಂತಲೂ ಅಧಿಕ ಜನ ಇವರನ್ನು ಫಾಲೋ ಮಾಡುತ್ತಿದ್ದಾರೆ.
ಬಿಲ್ ಗೇಟ್ಸ್ ಅವರ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದವಾದರೂ, ಅದರಲ್ಲಿ ಒಂದು ಕಾಮೆಂಟ್ ಹೆಚ್ಚು ಗಮನಸೆಳೆದಿದೆ. "ಆತ್ಮೀಯ ವಿಲಿಯಂ. ಹೆಚ್. ಗೇಟ್ಸ್, ಮೈಕ್ರೋಸಾಫ್ಟ್‌ನೊಂದಿಗೆ ಸ್ಥಾನವನ್ನು ಪರಿಗಣಿಸಲು ಸಮಯ ತೆಗೆದುಕೊಂಡಿದ್ದಕ್ಕಾಗಿ ಧನ್ಯವಾದಗಳು. ನಾವು ನಿಮ್ಮ ಸಾಧನೆಗಳನ್ನು ಗೌರವಿಸುತ್ತೇವೆ ಮತ್ತು ನಿಮ್ಮ ಆಸಕ್ತಿಯನ್ನು ಪ್ರಶಂಸಿಸುತ್ತೇವೆ. ಸಾಕಷ್ಟು ಎಚ್ಚರಿಕೆಯಿಂದ ಪರಿಗಣಿಸಿದ ನಂತರ ನಾವು ಇತರ ಅಭ್ಯರ್ಥಿಗಳೊಂದಿಗೆ ಮುಂದುವರಿಯಲು ನಿರ್ಧರಿಸಿದ್ದೇವೆ. ನಿಮ್ಮ ಎಲ್ಲಾ ಮಾಹಿತಿಯನ್ನು ನಾವು ಫೈಲ್‌ನಲ್ಲಿ ಇರಿಸುತ್ತೇವೆ; ಸಂದರ್ಭಗಳು ಬದಲಾದರೆ ನಾವು ಲಭ್ಯವಿರುವ ಯಾವುದೇ ಸೂಕ್ತ ಸ್ಥಾನಗಳಿಗೆ ನಿಮ್ಮನ್ನು ಪರಿಗಣಿಸಬಹುದು. ನಿಮ್ಮ ವೃತ್ತಿಜೀವನದಲ್ಲಿ ನಾವು ಯಶಸ್ಸನ್ನು ಬಯಸುತ್ತೇವೆ." ಇದು ಸಾಮಾನ್ಯ ಮಾನವ ಸಂಪನ್ಮೂಲ ಪ್ರತಿಕ್ರಿಯೆಯಾಗಿದ್ದು, ಈ ಪ್ರತಿಕ್ರಿಯೆ ಸಾಮಾನ್ಯವಾಗಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯನ್ನುಂಟು ಮಾಡುತ್ತದೆ.
ಜಗತ್ತು ಮತ್ತೊಂದು ಸಾಂಕ್ರಾಮಿಕ ರೋಗಕ್ಕೆ ಸಾಕ್ಷಿಯಾಗಲಿದೆ: ಬಿಲಿಯನೇರ್ ಬಿಲ್ ಗೇಟ್ಸ್ ಎಚ್ಚರಿಕೆ!
ಕೆಲವು ಬಳಕೆದಾರರು ಬಿಲ್ ಗೇಟ್ಸ್ ಅವರ ರೆಸ್ಯೂಮ್‌ನಲ್ಲಿರುವ ಅವರ ಎತ್ತರರ ಹಾಗೂ ತೂಕದ ಮಾಹಿತಿ ಕಂಡು ಅಚ್ಚರಿ ಪಟ್ಟಿದ್ದಾರೆ. "ಎಲ್ಲಾ ಒಕೆ, ಹಾರ್ವರ್ಡ್ ವಿದ್ಯಾರ್ಥಿ! ವಿವಿಧ ಕಂಪ್ಯೂಟರ್ ವಿಷಯಗಳಲ್ಲಿ ಅಗ್ರ ದರ್ಜೆಯೊಂದಿಗೆ ಮತ್ತು ಸಣ್ಣ (ಸಣ್ಣ?) ಯಶಸ್ವಿ ಅನುಭವಗಳು ನಿಮ್ಮದಾಗಿವೆ. ಆದರೆ, ಎತ್ತರ ಹಾಗೂ ತೂಕದ ಉಲ್ಲೇಖವು ನನ್ನನ್ನು ನಗಿಸುತ್ತದೆ...ಇಲ್ಲಿ ಇಟಲಿಯಲ್ಲಿ ಇಂಥ ಸ್ಪಷ್ಟವಾದ ಮಾಹಿತಿಯನ್ನು ರೆಸ್ಯೂಮ್‌ನಲ್ಲಿ ಹಾಕೋದಿಲ್ಲ. ಎಲ್ಲಾ ನಂತರ, ವರ್ಚುವಲ್ ವೃತ್ತಿಪರ ನೆಟ್ವರ್ಕ್ಗಳು ಕೆಲವು ಉದ್ದೇಶಗಳನ್ನು ಪೂರೈಸಬೇಕು ... ಇಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
Hilal-e-Pakistan: ಪೋಲಿಯೊ ನಿರ್ಮೂಲನೆಗೆ ಶ್ರಮಿಸಿದ ಬಿಲ್ ಗೇಟ್ಸ್‌ಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವ!
ಮೈಕ್ರೋಸಾಫ್ಟ್ ಆರಂಭಿಸಿದ ವ್ಯಕ್ತಿ: ಬಿಲ್ ಗೇಟ್ಸ್ ಬಿಲ್ ಗೇಟ್ಸ್ ಮತ್ತು ಪಾಲ್ ಅಲೆನ್ 1975 ರಲ್ಲಿ ಮೈಕ್ರೋಸಾಫ್ಟ್ ಅನ್ನು ಪ್ರಾರಂಭಿಸಿದರು. ದೀರ್ಘಕಾಲದವರೆಗೆ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು. ಅವರ ನಿವ್ವಳ ಮೌಲ್ಯ ಸುಮಾರು $124.9 ಬಿಲಿಯನ್ ಆಗಿದೆ. ಇಂದು ಟಾಪ್ 5 ಶ್ರೀಮಂತರಲ್ಲಿ ಬಿಲ್ ಗೇಟ್ಸ್ ಹೆಸರು ಸೇರಿದೆ. 2000 ರಲ್ಲಿ, ಬಿಲ್ ಗೇಟ್ಸ್ ಕಂಪನಿಯ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದರು. 2008ರಲ್ಲಿಯೇ ಕೆಲಸ ಬಿಟ್ಟರೂ 2020ರವರೆಗೆ ಆಡಳಿತ ಮಂಡಳಿಯ ಸದಸ್ಯರಾಗಿದ್ದರು.ಇದಾದ ಬಳಿಕ ಸಮಾಜ ಸೇವಾ ಕ್ಷೇತ್ರದಲ್ಲಿ ಮಗ್ನರಾದರು. ಇದಕ್ಕಾಗಿ ಅವರು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಅನ್ನು ಪ್ರಾರಂಭಿಸಿದರು. ಅವರನ್ನು ವಿಶ್ವದ ಅಗ್ರ 10 ದಾನಿಗಳಲ್ಲಿ ಒಬ್ಬರು ಎಂದು ಕರೆಯಲಾಗುತ್ತದೆ.