Asianet Suvarna News Asianet Suvarna News

ಹಸನಾದ ಬದುಕಿಗೆ ಆಧಾರವಾದ ಹಲಸು: ಈ ಚಾಕ್ಲೇಟ್ ರುಚಿ ನೋಡಿ ಬಾಸು!

ರುಚಿಕರವಾದ ಹಲಸಿನ ಹಣ್ಣಿನ ಜಾಕ್ ಬಾರ್

ಹಸನದ ಬದುಕಿಗೆ ಆಧಾರವಾದ ಹಲಸು

ಒಂದು ವರ್ಷವಾದರೂ ಕೆಡದ ಜಾಕ್ ಬಾರ್

ಶಿರಸಿಯ ವಿನುತಾ ಹೆಗಡೆ ಆವಿಷ್ಕಾರ

5 ವರ್ಷದಲ್ಲಿ 3 ಟನ್ ಚಾಕಲೇಟ್ ಮಾರಾಟ

ರಾಜ್ಯ. ಹೊರ ರಾಜ್ಯಗಳಲ್ಲೂ ಈ ಚಾಕಲೇಟ್ ಫೇಮಸ್

Meet the Housewife who prepares Chocolate with Jack fruit
Author
Bengaluru, First Published Jul 13, 2018, 3:43 PM IST

ರಾಘವೇಂದ್ರ ಅಗ್ನಿಹೋತ್ರಿ

ಶಿರಸಿ(ಜು.13): ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಳ್ಳಿಯೊಂದರ ವಿನುತಾ ಹೆಗಡೆ ತಮ್ಮ ಮನೆಯ ತೋಟದಲ್ಲೇ ಬೆಳೆದ ಹಲಸಿನ ಹಣ್ಣನ್ನು ಬಳಿಸಿ ಅದ್ಭುತವಾದ ಚಾಕಲೇಟ್ ತಯಾರಿಸುತ್ತಾರೆ. ಅದಕ್ಕೆ ಜಾಕ್ ಬಾರ್ ಎಂದು ಹೆಸರನ್ನೂ ಇಟ್ಟಿದ್ದಾರೆ. ವಿನುತಾ ಅವರ ಆವಿಷ್ಕಾರವಾದ ಈ ಜಾಕ್ ಬಾರ್ ಅವರ ಊರಲ್ಲಷ್ಟೇ ಅಲ್ಲ, ರಾಜ್ಯ ಹಾಗೂ ಹೊರ ರಾಜ್ಯಗಳಲ್ಲೂ ತುಂಬ ಫೇಮಸ್ಸು.

ತಮ್ಮ ಮೆನಯ ತೋಟದಲ್ಲಿ ಬೆಳೆದ ಸುಮಾರು 15 ವಿವಿಧ ಜಾತಿಯ ಹಲಸಿನ ಮರಗಳನ್ನೇ ವಿನುತಾ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ. ವಿನುತಾ ತಯಾರಿಸುವ ಜಾಕ್ ಬಾರ್ ಚಾಕಲೇಟ್ ಒಂದು ವರ್ಷ ಇಟ್ಟರೂ ಕೆಡುವುದಿಲ್ಲ ಎಂಬುದು ವಿಶೇಷ. ಆರಂಭದ ದಿನಗಳಲ್ಲಿ ಹಲಸಿನ ಹಪ್ಪಳ, ಹಲಸಿನ ಬೀಜದ ಪೌಡರ್ ಇತ್ಯಾದಿ ಗೃಹೋತ್ಪನ್ನ ತಯಾರಿಸುತ್ತಿದ್ದ ವಿನುತಾ, ಇದೀಗ ಜಾಕ್ ಬಾರ್ ಎಂಬ ಚಾಕಲೇಟ್ ತಯಾರಿಸುವ ಬಗೆಯನ್ನು ಆವಿಷ್ಕರಿಸಿದ್ದಾರೆ.

ತುಮಕೂರಿನ ಪ್ರಸಿದ್ಧ ಸಿದ್ಧು ಹಲಸಿಗೆ ಕರಾವಳಿಯಲ್ಲಿ ಕಸಿ

ಐದು ವರ್ಷಗಳಲ್ಲಿ ಮೂರು ಟನ್:
2009ರಿಂದ ವಿನುತಾ ಹಲಸಿನ ಮೌಲ್ಯವರ್ಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಮನೆಯಲ್ಲೇ ವಿವಿಧ ಜಾತಿಯ 15 ಹಲಸಿನ ಮರವಿದ್ದು, ಅದನ್ನು ಬಳಸಿ ಹಲಸಿನ ವಿವಿಧ ಖಾದ್ಯ ತಯಾರಿಸುತ್ತಿದ್ದರು. ಈಗ ಸುಮಾರು 70 ಕ್ವಿಂಟಾಲ್ ನಷ್ಟು ಹಲಸನ್ನು ಬೇರೆಡೆಯಿಂದ ತರಿಸಿಕೊಂಡು ಜಾಕ್ ಬಾರ್ ಚಾಕಲೇಟ್ ತಯಾರಿಸುತ್ತಾರೆ ವಿನುತಾ. ಕಳೆದ ಐದು ವರ್ಷಗಳಲ್ಲಿ ವಿನುತಾ ಮೂರು ಟನ್ ಜಾಕ್ ಬಾರ್ ಉತ್ಪಾದಿಸಿ ಮಾರಾಟ ಮಾಡಿದ್ದಾರೆ ಎಂದರೆ ನಂಬಲಸಾಧ್ಯ.

ಜಾಕ್ ಬಾರ್ ಹೇಗೆ ತಯಾರಾಗುತ್ತೆ?:
ವಿನುತಾ ಅವರ ಹಲಸಿನ ಚಾಕಲೇಟ್ ಹಿಂದೆ ಒಂದು ರೋಚಕ ಕತೆಯೇ ಇದೆ. ಮನೆಯಲ್ಲಿ ಮಾಡಿದ್ದ ಹಲಸಿನ ಸಿಹಿ ತಿಮಡಿ ಸ್ವಲ್ಪ ಹೆಚ್ಚಾಗಿ ಉಳಿದ ಪರಿಣಾಮ, ಹಪ್ಪಳ ತಯಾರಿಸುವ ಡ್ರೈಯರ್ ನಲ್ಲಿ ಇದನ್ನು ಹಾಕಿ ನೋಡಿದಾಗ ತುಂಬ ರುಚಿಕರ ಚಾಕಲೇಟ್ ಸಿದ್ಧವಾಗಿದೆ. ವಿನುತಾ ತಮ್ಮ ಹೊಸ ಆವಿಷ್ಕಾರವನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುವ ನಿರ್ಧಾರ ಮಾಡಿ ಇಂದು ಜಾಕ್ ಬಾರ್ ನಿಂದಲೇ ಫೇಮಸ್ ಆಗಿದ್ದಾರೆ.

ಸರಿಯಾಗಿ ಬಲಿತ ಹಲಸಿನ ಹಣ್ಣನ್ನು ಸೊಳೆ ಬಿಡಿಸಿ ಮಿಕ್ಸಿಯಲ್ಲಿ ಹಾಕಿ ಅಥವಾ ಇಡೀ ಹಣ್ಣನ್ನು ಬಾಣೆಲೆಯಲ್ಲಿ ಚೆನ್ನಾಗಿ ಕಾಯಿಸಿ ಅದಕ್ಕೆ ಸ್ವಲ್ಪ ಸಕ್ಕರೆ ಬೆರೆಸಿ ಗಟ್ಟಿಯಾದ ಬಳಿಕ ಡ್ರೈಯರ್ ನಲ್ಲಿ ಒಣಗಿಸುತ್ತಾರೆ, ನಂತರ ಅದನ್ನು ಪ್ಯಾಕ್ ಮಾಡಿ ಶಿರಸಿಯ ಕದಂಬ ಮಾರ್ಕೆಟ್ ಅವರಿಗೆ ಮಾರಾಟ ಮಾಡುತ್ತಾರೆ ವಿನುತಾ. ಇದಕ್ಕೆ ಯಾವುದೇ ರಾಸಾಯನಿಕ ಅಥವಾ ಪ್ರಿಸರ್ವೆಟಿವ್ ಬಳುಸತ್ತಿಲ್ಲ ಎಂಬುದು ವಿಶೇಷ. ಉತ್ತಮವಾಗಿ ಕಾಯಿಸುವುದರಿಂದ ವರ್ಷಗಟ್ಟಲೇ ಇಟ್ಟರೂ ಕೆಡುವುದಿಲ್ಲ ಈ ಜಾಕ್ ಬಾರ್.

ಚಾಕೋಲೇಟ್ ತಿಂದರೆ ಕಾಮಾಸಕ್ತಿ ಹೆಚ್ಚಾಗೋದು ನಿಜವೇ?

ಜಾಕ್ ಬಾರ್ ದರ ಎಷ್ಟು?:

ವಿಮುತಾ ಅವರ ಇಡೀ ಕುಟುಂಬ ಜಾಕ್ ಬಾರ್ ತಯಾರಿಸುವಲ್ಲಿ ನಿರತವಾಗಿದೆ. ಪ್ರತಿ ಕಿಲೋ ಜಾಕ್ ಬಾರ್ ಗೆ 300 ರೂ.ನಂತೆ ಮಾರಾಟ ಮಾಡಲಾಗುತ್ತದೆ. ಇದರಿಂದ ಮಾರ್ಕೆಟಿಂಗ್ ಸಮಸ್ಯೆ ಕೂಡ ಇಲ್ಲ ಎನ್ನುತ್ತಾರೆ ವಿನುತಾ. ಇದರಿಂದ ಆದಾಯ ಕೂಡ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರೂ ಮನೆಯಲ್ಲಿ ಹಲಸಿನ ಮೌಲ್ಯವರ್ಧನೆ ಮಾಡಿದರೆ ಉದ್ಯೋಗ, ಆದಾಯಕ್ಕೆ ಕೊರತೆಯಾಗುವುದಿಲ್ಲ ಎನ್ನುವ ವಿನುತಾ, ತಮ್ಮ ಬದುಕಿನಲ್ಲಿ ವರವಾಗಿ ಬಂದಿದೆ ಎಂದು ಮುಗುಳ್ನಗುತ್ತಾರೆ

ವಿನುತಾ ಪರಮೇಶ್ವರ್ ಹೆಗಡೆ ಅವರೊಂದಿಗೆ ಮಾತನಾಡಲು-9480447859 ಗೆ ಕರೆ ಮಾಡಿ.

Follow Us:
Download App:
  • android
  • ios