Asianet Suvarna News Asianet Suvarna News

ಚಾಕೋಲೇಟ್‌ ತಿಂದರೆ ಕಾಮಾಸಕ್ತಿ ಹೆಚ್ಚಾಗೋದು ನಿಜವಾ?

ಚಾಕೋಲೇಟ್‌ ಎಲ್ಲರಿಗೂ ಪ್ರಿಯವಾಧ ಆಹಾರ. ಚಾಕೋಲೇಟ್‌ ಸತತವಾಗಿ ತಿಂದರೆ ಏನಾಗುತ್ತೆ ಅನ್ನೋದು ನಿಮಗೆ ಗೊತ್ತಾ?

 

Does dark chocolate boosts sex drive
Author
Bengaluru, First Published Feb 18, 2020, 3:45 PM IST

ಚಾಕೋಲೇಟ್‌ ಅಂದ್ರೆ ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ರಿಗೂ ಆಸೆ. ಮೈ ಜುಂ ಅನ್ನಿಸುವ ರುಚಿ ಅದರ ಜೀವಾಳ. ಆ ಹುಡುಗಿ ಚಾಕಲೇಟಿನ ಹಾಗಿದ್ದಾಳೆ ಎಂದರೆ ಸಾಕು, ಹೇಗಿದ್ದಾಳೆ ಅಂತ ಮತ್ತೆ ವರ್ಣಿಸೋ ಅವಶ್ಯಕತೆ ಇಲ್ಲ. ಚಾಕಲೇಟ್‌ಗೆ ನಾನಾ ಗುಣ ಇರುತ್ವೆ. ನೀವು ಯಾವುದನ್ನು, ಹೇಗೆ ತಿನ್ನುತ್ತೀರೋ ಅದರ ಮೇಲೆ, ನಿಮ್ಮ ದೇಹ ಸ್ವಭಾವದ ಮೇಲೂ ಅದರ ಪರಿಣಾಮ ನಿರ್ಧಾರ ಆಗುತ್ತೆ.

- ಚಾಕೊಲೇಟ್‌ ತಿನ್ನೋದು ಅಫ್ರೋಡಿಸಿಯಾಕ್‌ ಅರ್ಥಾತ್‌ ಕಾಮಪ್ರಚೋದಕ. ಇದರಲ್ಲಿರೋ ಡೋಪಮೈನ್‌ ಕಂಟೆಂಟು, ನಿಮ್ಮ ದೇಹದಲ್ಲಿ ಕಾಮದ ಬಯಕೆಗಳನ್ನು ಬಡಿದೆಬ್ಬಿಸುತ್ತದೆ. ಹುಡುಗಿಯರಿಗೆ ಚಾಕಲೇಟ್‌ ಅಂದ್ರೆ ಜೀವ ಅಂತ ನಿಮಗೂ ಗೊತ್ತು ತಾನೆ. ಯಾಕೆ ನೀವಿ ಇಂದು ರಾತ್ರಿ ಕೊಟ್ಟು ನಿಮ್ಮ ಪ್ರೇಯಸಿಯನ್ನು ಒಲಿಸಿಕೊಳ್ಳಬಾರದು?

- ಡೈಲಿ ಒಂದು ಚಾಕಲೇಟ್‌ ತಿನ್ನುವುದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಹೃದಯಾಘಾತ, ಹೃದಯ ಕಾಯಿಲೆಗಳ ಆತಂಕ ಸುಮಾರು ಶೇ ೩೦ರಷ್ಟು ಕಮ್ಮಿಯಾಗುತ್ತದೆ ಅಂತ ಜರ್ಮನಿಯ ವೈದ್ಯ ವಿಜ್ಞಾನಿಗಳು ಒಂದು ಅಧ್ಯಯನದ ಮೂಲಕ ಖಚಿತಪಡಿಸಿದ್ದಾರೆ.

 

ಬೇಸಿಗೆ ಹತ್ರ ಬಂತು, ಈ ಸ್ಮೂಧಿಗಳನ್ನು ಟ್ರೈ ಮಾಡಿ

 

- ದಿನಾ ಒಂದು ಔನ್ಸ್‌ನಷ್ಟು ಚಾಕಲೇಟ್‌ ತಿನ್ನುವುದು ಮನಸ್ಸನ್ನು ಪ್ರಶಾಂತವಾಗಿಡುತ್ತದೆ. ಕಚೇರಿ ಹಾಗೂ ಮನೆಯ ಕೆಲಸಗಳಿಂದಾಗಿ ತುಂಬಾ ಒತ್ತಡವಾಗಿದ್ದರೆ, ಆ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಚಾಕಲೇಟ್‌ ತಿನ್ನುವುದು ಒಂದು ದಾರಿ. ಚಾಕಲೇಟ್‌ ಐಸ್‌ಕ್ರೀಮ್‌ ಅನ್ನು ಕೂಡ ತಿಂದು ಹಗುರಾಗಬಹುದು.

 

- ದೇಹ ತುಂಬಾ ದಪ್ಪಗಿರುವವರು ತೆಳ್ಳಗಾಗಲು ಬಯಸಿದ್ದರೆ, ದಿನದ ಒಂದು ಹೊತ್ತಿನಲ್ಲಿ, ಸೀಮಿತ ಪ್ರಮಾಣದ ಚಾಕಲೇಟನ್ನು ಸೇವಿಸಬಹುದು. ಹೆಚ್ಚು ಸೇವಿಸಬಾರದು. ಇದನ್ನು ಆಹಾರ ಸೇವಿಸುವ ಮೊದಲು ತಿನ್ನುವುದು ಉತ್ತಮ. ಆಗ ಅದು ನಿಮ್ಮ ಆಹಾರದ ಇನ್‌ಟೇಕ್‌ ಅನ್ನು ಕಡಿಮೆ ಮಾಡಿ, ತೆಳ್ಳಗಾಗಲು ಸಹಾಯ ಮಾಡುತ್ತದೆ.

 

- ಬೆಳಗ್ಗೆ ಏನೂ ತಿಂದಿಲ್ಲ, ಮಧ್ಯಾಹ್ನದ ಊಟವೂ ಇಲ್ಲ. ಹತ್ತಿರದಲ್ಲೆಲ್ಲೂ ಫುಡ್‌ ಇಲ್ಲ ಅಂದುಕೊಳ್ಳಿ. ಕೈಕಾಲು ನಿಶ್ಶಕ್ತಿ ನಿತ್ರಾಣದಿಂದ ಕುಸಿಯುತ್ತಿದೆ. ಇನ್ನೇನು ಬಿದ್ದೇ ಬಿಡುವ ಹಾಗೆ ಆಗುತ್ತಿದೆ. ಇಂಥ ಸಂದರ್ಭದಲ್ಲಿ ನಿಮ್ಮನ್ನು ಕಾಪಾಡುವುದು ಚಾಕಲೇಟ್‌. ಇದರಲ್ಲಿ ಇರುವ ಕೋಕೋ ಹಾಗೂ ಶುಗರ್‌ ಕಂಟೆಂಟ್‌ಗಳು ನಿಮ್ಮ ಮೈಗೆ ಅಪಾರವಾದ ಎನರ್ಜಿಯ ಪ್ರವಾಹವನ್ನೇ ಹರಿಸಿ, ನೀವು ಚೇತರಿಸಿಕೊಳ್ಳುವಂತೆ ಮಾಡುತ್ತದೆ. ಮೊದಲು ವಿಯೆಟ್ನಾಂ, ಅಂಡಮಾನ್‌ ಮುಂತಾದ ಕಡೆ ಬಂದಿಯಾದ ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡು ಕಾಡಿನಲ್ಲಿ ಓಡಿಹೋಗುವಾಗ ಕೋಕೋ ಎಲೆಗಳನ್ನೇ ದಿನಗಟ್ಟಲೆ ಸೇವಿಸಿ ಬದುಕುಳಿಯುತ್ತಿದ್ದರಂತೆ.

 

ಮನೇಲೇ ಮಾಡಿ ನೋಡಿ ಸಿಂಪಲ್ಲಾಗೊಂದು ವೆಜ್ ಕಟ್ಲೇಟ್

 

- ಯಾವುದೋ ಕಾರಣಕ್ಕೆ ರಾತ್ರಿ ನಿದ್ರೆ ಕೆಡಬೇಕಾಗಿದೆ ಎಂದುಕೊಳ್ಳಿ. ಯಾವುದೋ ತುರ್ತು ಕೆಲಸವಿದೆ. ಆದರೆ ನಿದ್ರೆಯ ಒತ್ತಡದಿಂದಾಗಿ ಮಾಡಲು ಆಗುತ್ತಿಲ್ಲವೇ. ಹಾಗಾದರೆ ನೀವೊಂದು ಚಾಕಲೇಟ್‌ ತಿಂದು ನೋಡಿ. ನಿದ್ರೆ ಗಾಯಬ್‌ ಆಗಿಬಿಡುತ್ತದೆ. ಮೈಯಲ್ಲಿ ಚೈತನ್ಯ ಪ್ರವಹಿಸಲು ಆರಂಭಿಸುತ್ತದೆ. ಕೆಲಸ ಸಲೀಸು.

 

- ದಿನಕ್ಕೊಂದು ಡಾರ್ಕ್‌ ಚಾಕಲೇಟ್‌ ಕಾಫಿ ಕುಡಿಯುವವರಿಗೆ ಸನ್‌ಬರ್ನ್‌ ಅಥವಾ ಚಮದ ಮೇಲಿನ ಸೆಕೆಬೊಕ್ಕೆಗಳು ಏಳುವುದಿಲ್ಲ. ಇದು ವೈಜ್ಞಾನಿಕ ಅಧ್ಯಯನದಿಂದ ಗೊತ್ತಾದ ವಿಷಯ.  ಚಾಕಲೇಟ್‌ನಲ್ಲಿ ಸಾಕಷ್ಟು ಫ್ಲೇವೋನಾಯ್ಡ್‌ಗಳು, ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳು ಇವೆ. ಇವು ನಿಮ್ ಮೆದುಳು ಚುರುಕಾಗುವಂತೆ ಮಾಡುತ್ತವೆ. ಒಂದು ಕೆಲಸ ಮಾಡಿ

 

- ನಿಮ್ಮ ಪರಿಚಿತರಲ್ಲಿ ಗಣಿತದಲ್ಲಿ ತುಂಬಾ ಚುರುಕಾಗಿರುವವರನ್ನು, ಅವರಿಗೆ ಚಾಕಲೇಟ್‌ ತಿನ್ನುವ ಅಭ್ಯಾಸವಿದೆಯಾ ಎಂದು ಕೇಳಿನೋಡಿ. ಅವರು ಚಾಕಲೇಟ್‌ ತಿನ್ನುವವರೇ ಆಗಿರ್ತಾರೆ ಎಂದು ಬೇರೆ ಹೇಳಬೇಕಿಲ್ಲ. ಚಾಕಲೇಟ್‌ ನಿಮ್ಮ ಮೆದುಳಿನ ಗಣಿತದ ಶಕ್ತಿಯನ್ನು ಹೆಚ್ಚಿಸುತ್ತದೆ.  ನಿಮ್ಮ ದೇಹಕ್ಕೆ ಲಕ್ವ ಹೊಡೆಯುವ ಸಾಧ್ಯತೆಯನ್ನು ಚಾಕಲೇಟ್‌ ಕಡಿಮೆಯಾಗಿಸುತ್ತದೆ. ಅಂದರೆ ನಿಮ್ಮ ದೇಹದ ನರಗಳ ಸಾಮಥ್ರ್ಯ ಹೆಚ್ಚುತ್ತದೆ ಎಂದರ್ಥ.

 

ಪೇಪರ್‌ನಷ್ಟು ತೆಳ್ಳಗಿರೋ ರುಚಿರುಚಿ ನೀರುದೋಸೆ ಮಾಡೋದು ಹೇಗೆ?

 

- ರಕ್ತನಾಳಗಳಲ್ಲಿ ರಕ್ತದ ಬಿಂದುಗಳು ಘನೀಕರಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ, ಬ್ಲಡ್‌ ಕ್ಲಾಟ್‌ ಆಗುವುದಿಲ್ಲ.

 

- ಕ್ಯಾನ್ಸರ್‌ ಬರುವ ಸಾಧ್ಯತೆ ಅತಿ ಕಡಿಮೆ. ಚಾಕಲೇಟ್‌ನಲ್ಲಿ ರೋಗನಿರೋಧಕ ಅಂಶಗಳು ಸಾಕಷ್ಟಿವೆ.

Follow Us:
Download App:
  • android
  • ios